IT for Change
ಕಥೆ ಖಜಾನೆ - ಕನ್ನಡದ
2023-24ರ ಅವಧಿಯಲ್ಲಿ ಕರ್ನಾಟಕ ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆ (ಡಿಎಸ್‌ಇಆರ್‌ಟಿ), ಐಟಿ ಫಾರ್ ಚೇಂಜ್ ಸಹಯೋಗದೊಂದಿಗೆ ಪ್ರಾಯೋಗಿಕವಾಗಿ ನಡೆಸಿದ 'ಭಾಷಾ ಶಿಕ್ಷಣದಲ್ಲಿ ಡಿಜಿಟಲ್ ಕಥೆ-ಆಧಾರಿತ ಬೋಧನ ವಿಧಾನದ ಅಳವಡಿಕೆ' ಕರ್ಯಕ್ರಮದ ಅಡಿಯಲ್ಲಿ ನಡೆಸಿದ ಕಾರ್ಯಾಗಾರಗಳ ಭಾಗವಾಗಿ ಈ ಆಡಿಯೋ ಕಥೆಗಳನ್ನು ಕರ್ನಾಟಕದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಶಿಕ್ಷಕರು ತಯಾರಿಸಿದ್ದಾರೆ. ಕಥೆ ಹೇಳುವಿಕೆಯ ಶಕ್ತಿಯ ಜೊತೆಗೆ ಡಿಜಿಟಲ್ ಮಾಧ್ಯಮವು ನೀಡುವ ಹೊಸ ಸಾಧ್ಯತೆಗಳ ಮೂಲಕ ಮಕ್ಕಳ ಭಾಷಾ ಕಲಿಕೆಯನ್ನು ಉತ್ತೇಜಿಸುವುದು ಈ ಕಾರ್ಯಕ್ರಮದ ಗುರಿಯಾಗಿದೆ. ಎಲ್ಲಾ ಕಥೆಗಳು ಮುಕ್ತ ಶೈಕ್ಷಣಿಕ ಸಂಪನ್ಮೂಲಗಳಾಗಿದ್ದು (OER) ಮುಕ್ತವಾಗಿ ಬಳಸಬಹುದು ಮತ್ತು ಹಂಚಿಕೊಳ್ಳಬಹುದು.
Koniecznie odwiedź stronę podcastu i wesprzyj twórcę: kathe-khajane.teacher-network.in
Autor
IT for Change
Kategoria
Strona podcastu
Ostatni odcinek
10 wrz 2025
Gdzie słuchać?
Podcasty w aplikacji Replaio Radio Już wkrótcePodcasty trafią do aplikacji już wkrótce. Zainstaluj teraz i jako pierwszy zobacz nowe podejście do podcastów
Odcinki
ಹ್ಯಾಗೋಸನ ಆಸ್ತಿ (ಕರಿಯಜ್ಜನ ಆಸ್ತಿ) 10.09.2025 4:04
Writer : ಆಂಗೆಸಮ್ ಅಬಾದಿ Narrator : ಅಂಬರೀಶ್. ಎ Editor : ಬ್ರಿಜೇಶ್ ಕುಮಾರ್ ಜಿ ವಿ ತನ್ನ ಮಕ್ಕಳ ಪ್ರತಿಭೆಯನ್ನು ಸರಿಯಾಗಿ ಗುರುತಿಸಿದ್ದ ತಂದೆಯೊಬ್ಬ ಅವರವರ ಯಶಸ್ಸಿಗೆ ಅನುಕೂಲವಾಗುವಂತೆ ತನ್ನ ಆಸ್ತಿಯನ್ನು ಹಂಚಿಕೊಟ್ಟ ಕಥೆ. ೧. ತಂದೆಯ ಬಗ್ಗೆ ಒಂದು ಪ್ರಬಂಧ ಬರೆಯಿರಿ. ೨. ತಂದೆ ಮತ್ತು ಮಕ್ಕಳ ಬಾಂಧವ್ಯವನ್ನು ಹಂಚಿಕೊಳ್ಳಿ. ಇವರಿಗೆ ಸೂಕ್ತ : ಪ್ರಾಥಮಿಕ ಹಂತ ಕಥಾವಸ್ತು : ಜೀವನ ಕೌಶಲ್ಯ ಗುರುತು ಪಟ್ಟಿ : ತರಗತಿ ೧,ತರಗತಿ ೨,ತರಗತಿ ೩,ತರ...
ಹಸ್ತ ರೇಖೆ ಬದಲಿಸಿದ ಬಾಲಕ 10.09.2025 5:25
Writer : ಡಿಎಸ್‌ಇಆರ್‌ಟಿ ಪಠ್ಯಪುಸ್ತಕ Narrator : ಶಾಂತಕುಮಾರ ಎಚ್ ಎನ್ Editor : ಬಾಲಾಜಿ ಎಚ್ ಕೆ ಹಿಂದಿನ ಕಾಲದಲ್ಲಿ ಕಾಡಿನ ಗುರುಕುಲದಲ್ಲಿ ವಿದ್ಯಾಭ್ಯಾಸ ನಡೆಯುತ್ತಿತ್ತು. ತಕ್ಷಶಿಲೆಯು ಪ್ರಾಚೀನ ಭಾರತದ ಅತೀ ದೊಡ್ಡ ಗುರುಕುಲವಾಗಿತ್ತು. ಒಬ್ಬ ದಕ್ಷಿ ಎನ್ನುವ ತಾಯಿ ತನ್ನ ಮಗನನ್ನ ಗುರುಕುಲಕ್ಕೆ ಸೇರಿಸುವಳು. ಆದರೆ ಆತನಿಗೆ ಹಸ್ತ ರೇಖೆ ಇಲ್ಲದಿರುವುದನ್ನು ಗಮನಿಸಿ ಗುರುಗಳು ವಿದ್ಯೆ ಕಲಿಸಲು ಹಿಂಜರಿಯುವರು. ವಿದ್ಯಾಭ್ಯಾಸ ಮಾಡಬೇಕೆಂಬ ಆಸಕ್ತಿ ಆ ಬಾಲಕನಲ್ಲಿತ್ತು. ಅದಕ್ಕಾಗಿ ಆತ ಏನು...
ಹರ್ಧ ಹಣೆ ಕೋಟಿ ರೂಪಾಯಿಯಾಗಿನ ಹೆಚ್ಚದು 10.09.2025 3:20
Writer : ಡಿಎಸ್‌ಇಆರ್‌ಟಿ ಪಠ್ಯಪುಸ್ತಕ Narrator : ನಳಿನಾಕ್ಷಿ ಜಿಎಂ Editor : ನಳಿನಾಕ್ಷಿ ಜಿಎಂ ಕಥೆಯ ಚಟುವಟಿಕೆ ಪುಟಕ್ಕೆ ಇಲ್ಲಿ ಕ್ಲಿಕ್ಕಿಸಿ
ಹಣತೆ 10.09.2025 2:39
Writer : ಚಂದ್ರಕಲಾ ವೀರಭದ್ರಪ್ಪ Narrator : ಚಂದ್ರಕಲಾ ವೀರಭದ್ರಪ್ಪ, ರಾಘವೇಂದ್ರ ಕುಲಕರ್ಣಿ, ಪರ್ವಿನ್ ಸುಲ್ತಾನ, ಮಾಯಾದೇವಿ ತುರಂಗ Editor : ಅಕ್ಷಯ್ ಖೇಡಗಿಕರ್ ಪ್ರಕೃತಿಯು ಸಭೆಯನ್ನು ಕರೆಯಿತು. ಬೆಳಕಿನ ಪ್ರತಿನಿಧಿ ಬಿರುದನ್ನು ನೀಡಲು ನಿರ್ಧರಿಸಿ, ಸಭೆಯಲ್ಲಿ ಭಾಗವಹಿಸಲು ಸೂಚಿಸಿತು. ಈ ಸಭೆಯಲ್ಲಿ ಯಾರೆಲ್ಲಾ ಭಾಗವಹಿಸಿದ್ದರು? ಮತ್ತು ಬೆಳಕಿನ ಪ್ರತಿನಿಧಿ ಬಿರುದನ್ನು ಪಡೆದವರಾರು? ಎಂದು ತಿಳಿಯಲು ಈ ಕಥೆಯನ್ನು ಕೇಳಿ. ೧. ಸೂರ್ಯ, ಚಂದ್ರ,ನಕ್ಷತ್ರಗಳ ಚಿತ್ರವನ್ನು ಬಿಡಿಸಲು ಹೇಳುವುದ...
ಸುಳ್ಳು ಹೇಳಬಾರದು 10.09.2025 8:16
Writer : ಡಿಎಸ್‌ಇಆರ್‌ಟಿ ಪಠ್ಯಪುಸ್ತಕ Narrator : ಭಾರತಿ ಟಿ Editor : ಹೇಮಂತ್ ಕುಮಾರ್ ಬಿ ಜೆ ಮಹಾತ್ಮಾಗಾಂಧೀಜಿಯವರ ಜೀವನದಲ್ಲಿ ನಡೆದಿರುವ ಒಂದು ಘಟನೆ. ಮಹಾತ್ಮಾಗಾಂಧೀಜಿಯವರು ಮಗುವಾಗಿದ್ದ ಸಮಯದಲ್ಲಿ ಅವರನ್ನು ಮೋನು ಪಾಪು ಎಂದು ಕರೆಯುತ್ತಿದ್ದರು. ಅವರ ಅಮ್ಮನ ಹೆಸರು ಪುತಲೀಬಾಯಿ. ಪ್ರತೀ ವರ್ಷವೂ ಮಳೆಗಾಲದ ನಂತರ ಬರುವ ಚಾತುರ್ಮಾಸದಲ್ಲಿ ಅವಳು ಉಪವಾಸ ವ್ರತವನ್ನು ಮಾಡುತ್ತಿದ್ದಳು. ಬೆಳಗಿನ ಸೂರ್ಯೋದಯದ ಸಮಯದಲ್ಲಿ ಸೂರ್ಯನನ್ನು ನೋಡದೆ ಊಟ ಮಾಡುತ್ತಿರಲಿಲ್ಲ. ಅಂಥಹ ವ್ರತದ ಸಮಯದಲ್ಲಿ...
ಸುಂದರ ಕಾಡು 10.09.2025 2:31
Writer : ಶಿವರಾಜ್ ಸಿ Narrator : ರಾಘವೇಂದ್ರ ಕುಲಕರ್ಣಿ, ಲಕ್ಷ್ಮಿ, ಲಲಿತಾ Editor : ಬಸವರಾಜ ಪಾವಲೆ ಒಂದು ದಟ್ಟವಾದ ಕಾಡು ಇತ್ತು. ಆ ಕಾಡಿನಲ್ಲಿ, ಪ್ರಾಣಿಪಕ್ಷಿಗಳು, ಗಿಡಮರಗಳು ಇದ್ದವು. ಅಲ್ಲಿ ಘೋರವಾದ ಸಿಂಹವು ಕಾಡಿನ ರಾಜನಾಗಿತ್ತು. ಹಸಿವನ್ನು ನೀಗಿಸಲು ಬೇರೆ ಪ್ರಾಣಿಗಳನ್ನು ಬೇಟೆಯಾಡಿ ಕೊಂದು ತಿನ್ನುತ್ತಿತ್ತು. ಇದನ್ನು ತಪ್ಪಿಸಲು ನರಿಯು ಏನು ಉಪಾಯ ಮಾಡಿರಬಹುದು ಎಂದು ಈ ಕಥೆಯ ಮೂಲಕ ತಿಳಿಯೋಣ ಬನ್ನಿ. ನೀತಿ ಕತೆಗಳು ೧. ಪ್ರಾಣಿ ಮತ್ತು ಪಕ್ಷಿಗಳ ಶಬ್ದವನ್ನು ಕೇಳಿಸಿ ಗುರ...
ಸೀನಸೆಟ್ಟರು ನಮ್ಮ ಟೀಚರ್ 10.09.2025 5:51
Writer : ಡಿಎಸ್‌ಇಆರ್‌ಟಿ ಪಠ್ಯಪುಸ್ತಕ Narrator : ನೀಲರಾಜ್ ಎನ್ Editor : ಶಿವರಾಜ ವಿ ಎ ಮಳೆಗಾಲ ತೀವ್ರಗೊಳ್ಳುತ್ತಿದ್ದ ದಿನ ಮಾಂಡವಿ ಹೊಸ ಟೀಚರ್ ನ್ನು ಮಕ್ಕಳಿಗೆ ಪರಿಚಯಿಸಿದರು. ತುಂಗ ಅವರನ್ನ ಸರಿಯಾಗಿ ನೋಡಿದಳು. ಮೊದಲನೆಯದಾಗಿ ವೇಷಭೂಷಣವೆಲ್ಲವೂ ಹಳೆಯದಾಗಿತ್ತು. ಮಕ್ಕಳಿಗೆಲ್ಲಾ ಇವರೆಂಥಾ ಟೀಚರ್ ಎಂಬಂತಿತ್ತು. ತುಂಗಾಗೆ ಆ ಟೀಚರ್ ನ್ನು ಎಲ್ಲೋ ನೋಡಿದಂತಿತ್ತು. ಆಕೆಗೆ ನೆನಪಾಯಿತೇ? ಹಾಗಿದ್ದರೆ ಆ ಟೀಚರ್ ಯಾರಿರಬಹುದು! ಮತ್ತು ಶಾಲಾ ಶಿಕ್ಷಣದ ಮಹತ್ವವೇನು? ಶೀನ ಶೆಟ್ಟರು ಮಕ್...
ಸಿಹಿ ತಿಂಡಿಗಳ ಜಾತ್ರೆ 10.09.2025 6:08
Writer : ಡಿಎಸ್‌ಇಆರ್‌ಟಿ ಪಠ್ಯಪುಸ್ತಕ Narrator : ಶಿವಕುಮಾರಯ್ಯ ಎಂ Editor : ಬಾಲಾಜಿ ಎಚ್ ಕೆ ಊರಿಗೆ ಊರೇ ಹೊಸತನದಿಂದ ಕಂಗೊಳಿಸುತ್ತಿದೆ. ಜಾತ್ರೆಗೆ ಬೇರೆ ಬೇರೆ ಸಿಹಿ ತಿಂಡಿಗಳು ಬಂದವು. ಸಿಹಿ ತಿಂಡಿಗಳ ಸಭೆಯು ನಡೆಯಿತು. ಸಿಹಿತಿಂಡಿಗಳ ಜಾತ್ರೆ ಹೇಗಿತ್ತು ತಿಳಿಯೋಣ ಬನ್ನಿ. ೧. ಮಕ್ಕಳು ವಿವಿಧ ಸಿಹಿತಿಂಡಿಗಳ ಪಾತ್ರ ವಹಿಸಿ, ಪ್ರತಿಯೊಂದು ತಿಂಡಿ ತನ್ನ ವೈಶಿಷ್ಟ್ಯತೆ ಹೇಳಲಿ.( ಉದಾ: ಮೈಸೂರ್ ಪಾಕ್- "ನಾನು ಮೈಸೂರಿನಿಂದ ಬಂದ ಮೈಸೂರು ಪಾಕ್". ೨....
ಸಾವಿತ್ರಿ ಎಂಬ ಸಿಡಿಲ ಮೊಗ್ಗು 10.09.2025 3:27
Writer : ಪರ್ವಿನ್ ಸುಲ್ತಾನಾ Narrator : ಪರ್ವಿನ್ ಸುಲ್ತಾನಾ Editor : ಪರ್ವಿನ್ ಸುಲ್ತಾನಾ ನಮ್ಮ ದೇಶದ ಪ್ರಥಮ ಶಿಕ್ಷಕಿ ಸಾವಿತ್ರಿಬಾಯಿ ಫುಲೆ ಅವರ ಜನ್ಮದಿನ. ಕವನ ಶೀರ್ಷಿಕೆ:ಸಾವಿತ್ರಿ ಎಂಬ ಸಿಡಿಲ ಮೊಗ್ಗು. ಕೇಳಿ ಅರಿತುಕೊಳ್ಳಿ. ೧. ಸಾವಿತ್ರಿಬಾಯಿ ಫುಲೆ ಅವರ ಚಿತ್ರವನ್ನು ಚಾರ್ಟ್ ನಲ್ಲಿ ಅಂಟಿಸಿ, ಅವರ ಬಗ್ಗೆ ವಿಚಾರ ಸಂಗ್ರಹಣೆ ಮಾಡಿ ಬರೆಯುವುದು. ಇವರಿಗೆ ಸೂಕ್ತ : ಹಿರಿಯ ಪ್ರಾಥಮಿಕ ಹಂತ ಕಥಾವಸ್ತು : ಇತಿಹಾಸ,ಕವನ ಮತ್ತು ಪದ್ಯ,ಜೀವನ ಕೌಶಲ್ಯ ಗುರುತು ಪಟ್ಟಿ : ತರಗತಿ ೫,ತರಗತಿ ೬...
ಸಹಬಾಳ್ವೆ 10.09.2025 5:26
Writer : ಡಿಎಸ್‌ಇಆರ್‌ಟಿ ಪಠ್ಯಪುಸ್ತಕ Narrator : ನಳಿನಾಕ್ಷಿ ಜಿಎಂ Editor : ಬ್ರಿಜೇಶ್ ಕುಮಾರ್ ಜಿ ವಿ ಒಂದು ದಟ್ಟವಾದ ಕಾಡಿನಲ್ಲಿ ಒಂದು ದೊಡ್ಡದಾದ ಮರವಿತ್ತು. ಅಲ್ಲೊಬ್ಬ ಅಜ್ಜಿ ಒಣ ಕಟ್ಟಿಗೆ ಆರಿಸುತ್ತಾ ಮರದ ಕೆಳಗೆ ಬಂದಳು. ಆಗ ಊಟದ ಸಮಯ. ಅಜ್ಜಿಯು ಮರದ ಕೆಳಗೆ ಕುಳಿತು ಊಟದ ಬುತ್ತಿಯನ್ನು ತೆಗೆದಳು. ಅಳಿಲು, ಕಾಗೆ, ಗುಬ್ಬಚ್ಚಿ ಎಂದಿನಂತೆ ಅಜ್ಜಿಯ ಬಳಿಗೆ ಬಂದರು. ಪ್ರಾಣಿಪಕ್ಷಿಗಳ ಮತ್ತು ಅಜ್ಜಿಯ ನಡುವಿನ ಸಹಬಾಳ್ವೆ ಹೇಗಿತ್ತು ಎಂದು ತಿಳಿಯಲು, ಈ ಕಥೆಯನ್ನು ಕೇಳಿರಿ.  ...
ಸತ್ಯವಂತ ಬಾಲಕ 10.09.2025 3:20
Writer : ಡಿಎಸ್‌ಇಆರ್‌ಟಿ ಪಠ್ಯಪುಸ್ತಕ Narrator : ಕೌಸರ್ ಬಾನು ಆರ್ Editor : ವೀರೇಶ್ ಎಂ.ಬಿ ಗುರುಗಳು ತರಗತಿಗೆ ಬರುವುದನ್ನುಮಕ್ಕಳು ಕಾಣುವರು. ಕೂಡಲೇ ಮಕ್ಕಳು ಎದ್ದು ನಿಂತು ಕುಳಿತರು. ಮತ್ತೆ ಎದ್ದು ನಿಂತು ಗುರುಗಳಿಗೆ ವಂದಿಸಿದರು. ತರಗತಿಯಲ್ಲಿ ಗುರುಗಳಿಗೆ ಯಾರ ಮೇಲೆ ಮೆಚ್ಚುಗೆಯಾಯಿತು? ಆತ ಯಾರಿರಬಹುದು! ಸತ್ಯವನ್ನು ಹೇಳುವ ಗುಣವನ್ನು ಸದಾಕಾಲ ಉಳಿಸಿಕೊಳ್ಳಬೇಕೆಂಬ ಸಂದೇಶವನ್ನುಈ ಕಥೆಯು ಹೇಳುತ್ತದೆ. ೧. ಸತ್ಯ ಮತ್ತು ಸುಳ್ಳು ಇದರ ಬಗ್ಗೆ ಚರ್ಚಿಸಿ,...
ಸಂಕ್ರಾಂತಿಯ ಸುಖ ದುಃಖ 10.09.2025 4:16
Writer : ಡಿಎಸ್‌ಇಆರ್‌ಟಿ ಪಠ್ಯಪುಸ್ತಕ Narrator : ಮಂಜುನಾಥ್ ಪಿ Editor : ಸಿದ್ದರಾಮೇಶ್ವರ ಎಂ ಎಲ್ಲರಿಗೂ ಹಬ್ಬ ಎಂದರೆ ಬಲು ನೆಚ್ಚು. ಸಂಕ್ರಾಂತಿ ಹಬ್ಬದ ದಿನ ಎಲ್ಲರೂ ದನ ಕರುಗಳನ್ನು ಸಿಂಗಾರಗೊಳಿಸುವುದು,ಅಂಗಳವನ್ನು ರಂಗೋಲಿಯಿಂದ ಅಲಂಕಾರಗೊಳಿಸುವುದು, ತಳಿರು ತೋರಣ ಕಟ್ಟುವುದರಲ್ಲಿ ನಿರತರಾಗಿದ್ದರು. ಆದರೆ ನಮಿತ ಮಾತ್ರ ಯಾವ ಕೆಲಸದಲ್ಲಿಯೂ ತೊಡಗಿರಲಿಲ್ಲ. ಆಗ ಅಜ್ಜಿ ಸಂಕ್ರಾಂತಿ ಹಬ್ಬದ ಸುಖ ದುಃಖ ಎಂಬ ಕಥೆಯನ್ನು ಕೇಳೋಣ ಬನ್ನಿ. ೧. ನಾವು ಆಚರಿಸುವ ಹಬ್...
ಶ್ರವಣ ಕುಮಾರ್ 10.09.2025 4:44
Writer : ಡಿಎಸ್‌ಇಆರ್‌ಟಿ ಪಠ್ಯಪುಸ್ತಕ Narrator : ವೇಮಣ್ಣ ಟಿ Editor : ದಿನೇಶ ಎಲ್ ಗಿಡ,ಮರ,ಬಳ್ಳಿಗಳಿಂದ ಕಂಗೊಳಿಸುತ್ತಿರುವ ಕಾಡಿನ ಮಧ್ಯೆ ಒಂದು ಪುಟ್ಟ ಕುಟೀರವಿತ್ತು. ಅಲ್ಲಿ ತಾಂಡವ ಋಷಿ ತನ್ನ ಪತ್ನಿಯೊಂದಿಗೆ ವಾಸಿಸುತ್ತಿದ್ದನು. ಅವರಿಗೆ ಒಬ್ಬನೇ ಒಬ್ಬ ಮಗನಿದ್ದನು. ಅವನೇ ಶ್ರವಣಕುಮಾರ. ಅವರಿಗೆ ತೀರ್ಥಯಾತ್ರೆ ಮಾಡಬೇಕೆಂಬ ಆಸೆಯಿತ್ತು. ಆದರೆ ಅವರಿಗೆ ಕಣ್ಣು ಕಾಣಿಸುತ್ತಿರಲಿಲ್ಲ. ಶ್ರವಣಕುಮಾರ ತನ್ನ ತಂದೆ ತಾಯಿಗೆ ನೀಡುತ್ತಿದ್ದ ಗೌರವ ಅಪಾರ. ತೀರ್ಥಯಾತ್ರೆಗೆ ತೆರಳುತ್ತಿದ್...
ರಿಯಾ ನೆಟ್ಟ ಬೀಜ ಗಿಡವಾಯಿತು 10.09.2025 2:35
Writer : ಜಯಸುಧಾ ಭಾಸ್ಕರನ್ Narrator : ನೇತ್ರಾವತಿ ರಾಂಪುರ Editor : ನೇತ್ರಾವತಿ ರಾಂಪುರ ಕುಂಡದಲ್ಲಿ ಗಿಡವೊಂದನ್ನು ಬೆಳೆಸುವ ತನ್ನ ಮೊದಲ ಪ್ರಯತ್ನದಲ್ಲಿ ವಿಫಲಳಾದ ರಿಯಾ ತನ್ನ ತಾಯಿಯ ಸಹಾಯದಿಂದ ಗಿಡ ಬೆಳೆಸುವುದು ಹೇಗೆ ಎಂಬುದನ್ನು ತಿಳಿದುಕೊಂಡಳು. ೧. ಯಾವುದಾದರೂ ಒಂದು ಗಿಡವನ್ನುನೆಟ್ಟು ಬೆಳೆಸುವುದು.ಮತ್ತು ಅದರ ಪ್ರತಿಫಲವನ್ನು ಗಮನಿಸುವುದು. ೨. ಬೀಜಗಳನ್ನು ಸಂಗ್ರಹಿಸಿ ಅದರ ಸಸ್ಯಗಳ ಜೊತೆ ಹೊಂದಿಸುವುದು. ಮತ್ತು ಗುರುತಿಸುವುದು. ಇವರಿಗೆ ಸೂಕ...
ಯಾನ ಕುರಿತೊಂದು ಪತ್ರ 10.09.2025 4:46
Writer : ಡಿಎಸ್‌ಇಆರ್‌ಟಿ ಪಠ್ಯಪುಸ್ತಕ Narrator : ಅಜಯ್ ಕುಮಾರ್ ಕೆ ಜಿ Editor : ಸೋಮಶೇಖರ ಎಸ್ ಒಂದು ವಿಶೇಷ ಪತ್ರವನ್ನುತಿಳಿಯಲು ಮಕ್ಕಳೆಲ್ಲ ಕಂಪ್ಯೂಟರ್ ಕೊಠಡಿಗೆ ತೆರಳುವರು. ರಾಜು ತನ್ನ ಗೆಳೆಯ ಸಲೀಮನಿಗೆ ಪತ್ರದ ಮೂಲಕ ಯಾನದ ಪರಿಚಯವನ್ನು ಮಾಡಿಕೊಟ್ಟಿದ್ದಾನೆ. ಯಾನ ಹೇಗಿದೆ ಎನ್ನುವುದನ್ನು ನಾವು ಕಥೆಯ ಮೂಲಕ ತಿಳಿಯೋಣ ಬನ್ನಿ. ೧. ಕಂಪ್ಯೂಟರ್ ನಲ್ಲಿ ಸಂದೇಶವನ್ನು ಕಳುಹಿಸಲು ಮಾರ್ಗದರ್ಶನ ನೀಡುವುದು. ೨. ಕಂಪ್ಯೂಟರ್ ನ ಮೂಲ ಅಭ್ಯಾಸಗಳನ್ನು ಮಾಡ...
ಮೊಳಕೆಯೊಡೆಯಲು ನಾನೊಲ್ಲೆ 10.09.2025 2:00
Writer : ನೇತ್ರಾವತಿ ರಾಂಪುರ Narrator : ನೇತ್ರಾವತಿ ರಾಂಪುರ Editor : ಶ್ರೀಮಂತ್ ಶೇಂಗಾ ಬೀಜವು ಮೊಳಕೆಯೊಡೆಯಲು ಚಡಪಡಿಸುತ್ತಿತ್ತು. ಉತ್ತಮ ಆಹಾರ ಹೇಗೆ ತಯಾರಿಸಲಿ ಎಂದು ಹೇಳುತ್ತಿತ್ತು. ಉಳಿದಂತೆ ಯಾರೆಲ್ಲಾ ಪರಿಸರದಲ್ಲಿ ಹೇಗೆ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಾರೆ ಮತ್ತು ಯಾಕೆ ಎಂಬುವುದನ್ನು ಈ ಕಥೆಯು ತಿಳಿಸುತ್ತದೆ. ೧. ಹೆಸರುಕಾಳನ್ನು ಉಪಯೋಗಿಸಿ, ಮೊಳಕೆ ಬರುವ ರೀತಿ ಮತ್ತು ಆರೋಗ್ಯದ ಬಗ್ಗೆ ಗಮನಹರಿಸುವಂತೆ ಪ್ರಾಯೊಗಿಕವಾಗಿ ಈ ಚಟುವಟಿಕೆಯನ್ನು ಮಾಡುವುದು. ಇವರಿಗೆ ಸೂಕ್ತ...
ಮೊದಲ ಸ್ಥಾನ 10.09.2025 4:20
Writer : ನ್ಗುಯೆನ್ ಫಾಮ್ ಟು ಟ್ರಿನ್ಹ್ Narrator : ರಂಗಪ್ಪ ಕೆ.ವಿ Editor : ಪ್ರದೀಪ್ ವಿ ಮೊಲ ಹೊಸ ಶಾಲೆಗೆ ಸೇರಿದೆ. ಹೊಸ ಸ್ನೇಹಿತರನ್ನ ಮಾಡಿಕೊಳ್ಳಲು ಪ್ರಯತ್ನಿಸುತ್ತಿದೆ. ಎಲ್ಲದರಲ್ಲೂ ಮೊದಲ ಸ್ಥಾನ ಪಡೆದರೆ ಎಲ್ಲರೂ ತನ್ನನ್ನು ಇಷ್ಟ ಪಡುತ್ತಾರೆ ಎಂದು ಅದು ಭಾವಿಸುತ್ತದೆ. ಮೊಲ ಅಂದುಕೊಂಡಂತೆ ಆಗತ್ತದೆಯೇ? ೧. ವೃತ್ತಾಕಾರದಲ್ಲಿ ಓಡುವ ಚಲನೆಯ ಆಟವನ್ನು ಆಡಿಸುವುದು. ೨.ಮೊಲದ ಚಿತ್ರ ಬಿಡಿಸಿ, ಬಣ್ಣ ಹಚ್ಚುವುದು. ಇವರಿಗೆ ಸೂಕ್ತ : ಪ್ರಾಥಮಿಕ ಹಂತ ಕಥಾವಸ್ತು : ಪ್ರಾಣಿ...
ಮೇಲು ಪ್ರಪಂಚ ಕೆಳ ಪ್ರಪಂಚ 10.09.2025 10:58
Writer : ಪದ್ಮಪರ್ಣ ಘೋಷ್ Narrator : ಮಲ್ಲಿಕಾರ್ಜುನಪ್ಪ. ಹೆಚ್.ಒ. Editor : ಬಾಲಾಜಿ ಎಚ್ ಕೆ ಭಾರತದ ಅರಣ್ಯವೊಂದರಲ್ಲಿ ಮೇಲಿನ ಪ್ರಪಂಚ ಮತ್ತು ಕೆಳಗಿನ ಪ್ರಪಂಚದವರು ಪರಸ್ಪರರನ್ನು ಸಂಶಯಿಸುತ್ತಿದ್ದರು. ಆದರೆ ಗೋಪಿ ಎಂಬ ಇಲಿ ಮತ್ತು ಫಾತಿಮಾ ಭೇಟಿ ನಂತರ ಎಲ್ಲವೂ ಬದಲಾಯಿತು. ಇದೊಂದು ಮೇಲ್ಚಾವಣಿ ಅರಣ್ಯದಲ್ಲಿರುವ ಜೀವವೈವಿಧ್ಯತೆ ಮತ್ತು ಅವುಗಳಲ್ಲಿನ ಗೆಳೆತನದ ಕುರಿತ ಕಥೆ. ೧. ಆಹಾರ ಸರಪಳಿ ಆಟವನ್ನು ಆಡಿಸುವುದು. ೨. ಜೀವಿಗಳು ಮತ್ತು ಅದರ ವಾಸಸ್ಥಳಗಳನ್ನು ಜೋಡಿಸುವುದು. ...
ಮೆದು ಮಾತು 10.09.2025 3:14
Writer : ಡಿಎಸ್‌ಇಆರ್‌ಟಿ ಪಠ್ಯಪುಸ್ತಕ Narrator : ಮಂಜುನಾಥ್ ಪಿ Editor : ಬಸವರಾಜಪ್ಪ ಎನ್ ವ್ಯಾಪಾರಿಯೊಬ್ಬ ಸಂತೆಗೆಂದು ಸಾಮಾನುಗಳನ್ನು ಟೆಂಪೋದಲ್ಲಿ ತುಂಬಿಕೊಂಡು ಹೊರಟಿದ್ದ. ಮಳೆ ಬಂದು ದಾರಿ ಕೆಟ್ಟು ಹೋಗಿತ್ತು. ದಾರಿ ಮಧ್ಯದಲ್ಲಿ ಟೆಂಪೋದ ಚಕ್ರ ಹೂತು ಹೋಯಿತು. ಸಹಾಯಕ್ಕಾಗಿ ಅಲ್ಲಿ ಹತ್ತಿರದಲ್ಲಿ ಇದ್ದ ಯುವಕನನ್ನು ಕರೆಯುವನು. ಮಾತಿನ ಶೈಲಿಯ ಪ್ರಾಮುಖ್ಯತೆಯನ್ನು ಈ ಕಥೆಯ ಮೂಲಕ ನೀವು ತಿಳಿಯಬಹುದು. ೧.ಮಕ್ಕಳಿಗೆ ಕೆಲವು ವಾಕ್ಯಗಳನ್ನು ನೀಡಿ ಮತ್ತು ಆ ವಾ...
ಮೂರು ಕಲ್ಲುಗಳು 10.09.2025 3:33
Writer : ಡಿಎಸ್‌ಇಆರ್‌ಟಿ ಪಠ್ಯಪುಸ್ತಕ Narrator : ಶಿವಕುಮಾರಯ್ಯ ಎಂ Editor : ಮನೀಶ್ ಕೆ ಒಬ್ಬ ಶಿಲ್ಪಿ ಸುಂದರವಾದ ಮೂರ್ತಿಯನ್ನು ಕೆತ್ತಲು ಮೂರು ಕಲ್ಲುಗಳನ್ನುತಂದನು. ಮೊದಲ ಕಲ್ಲನ್ನು ಉಳಿ ಮತ್ತು ಸುತ್ತಿಗೆಯಿಂದ ಕೆತ್ತಲು ಪ್ರಾರಂಭಿಸಿದನು. ಆಗ ಕಲ್ಲು ಏಟನ್ನು ತಾಳಲಾರದೆ ನೋವನ್ನುವ್ಯಕ್ತ ಪಡಿಸಿತು. ಇನ್ನುಳಿದ ಎರಡು ಕಲ್ಲುಗಳು ಏನು ಮಾಡಿದವು? ಯಾವ ಕಲ್ಲಿನಿಂದ ಸುಂದರವಾದ ಮೂರ್ತಿಯನ್ನಾಗಿ ಮಾಡಲು ಸಾಧ್ಯವಾಗಿರಬಹುದು..! ೧. ಕ್ಲೇ ಮಾಡೆಲಿಂಗ್ ಮೂಲಕ ಒಂದು...
ಮಿನಿ ಹಾಕಿದ ಮೊದಲ ವೋಟು 10.09.2025 8:18
Writer : ಶಬ್ನಮ್ ಮಿನ್ವಾಲಾ Narrator : ಸುಜಾತಾ ಎಸ್ ಎ Editor : ಅಕ್ಷಯ್ ಖೇಡಗಿಕರ್ ಆರನೇ ತರಗತಿಯಲ್ಲಿರುವ ಮಿನಿ, ಸ್ಕೂಲ್ ಕ್ಯಾಪ್ಟನ್ ಆಯ್ಕೆಗೆ ವೋಟು ಹಾಕಬೇಕಿದೆ. ಶಾಲೆಯಲ್ಲಿ ನಡೆಯುತ್ತಿರುವ ಚುನಾವಣೆಯಲ್ಲಿ ಅವಳು ಯಾರಿಗೆ ವೋಟು ಹಾಕಬಹುದು? ೧. ಚುನಾವಣಾ ವಿಧಾನವನ್ನು ತಿಳಿಹೇಳುವುದು ಮತ್ತು ಮಕ್ಕಳನ್ನು ಆ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುವಂತೆ ಮಾಡುವುದು. ೨. ತರಗತಿಯಲ್ಲಿ ನಾಯಕನ ಆಯ್ಕೆಯನ್ನು ವೋಟು ಹಾಕುವುದರ ಮೂಲಕ ನಡೆಸುವುದು. ಇವರಿಗೆ ಸೂಕ್ತ : ಹಿರಿಯ ಪ್ರಾಥಮಿಕ ಹಂತ ಕಥಾ...
ಮಾವಿನ ಮರದಲ್ಲಿ ಗಿಳಿಗಳು 10.09.2025 4:45
Writer : ಸುಜಾತಾ ಎಸ್ ಎ Narrator : ಸುಜಾತಾ ಎಸ್ ಎ Editor : ಶ್ರೀಮಂತ್ ಅದೊಂದು ಊರು. ಊರಿನ ಹೊರಗೆ ಇರುವ ವಿಶಾಲವಾದ ಬಯಲು. ಹಸಿರಿನಿಂದ ತುಂಬಿದ ಬಯಲಿನ ಬದಿಯಲ್ಲಿ ಒಂದು ನದಿ ಹರಿಯುತ್ತಿತ್ತು. ಅಲ್ಲೊಂದು ವಿಶಾಲವಾದ ಮಾವಿನ ಮರವಿತ್ತು. ಮರದ ತುಂಬೆಲ್ಲಾ ಫಲಭರಿತವಾದ ಹಣ್ಣುಗಳು. ಪ್ರತಿ ವರ್ಷವೂ ಸಾವಿರಾರು ಸಂಖ್ಯೆಯಲ್ಲಿ ಹಣ್ಣುಗಳನ್ನು ನೀಡುತ್ತಿತ್ತು. ಹಣ್ಣುಗಳನ್ನು ತಿನ್ನಲು ೧. ನದಿ, ನೀರು, ಮರ, ಹಣ್ಣುಗಳುಳ್ಳ ಒಂದು ಸುಂದರವಾದ ಚಿತ್ರವನ್ನು ಬಿಡಿಸುವುದು. ಇವರಿಗೆ ಸೂಕ...
ಮಾಮ ಕಲಿಸಿದ ಇ-ಅಂಚೆ 10.09.2025 6:00
Writer : ಡಿಎಸ್‌ಇಆರ್‌ಟಿ ಪಠ್ಯಪುಸ್ತಕ Narrator : ಅಜಯ್ ಕುಮಾರ್ ಕೆ ಜಿ Editor : ಸೋಮಶೇಖರ ಎಸ್ ಮಕ್ಕಳೆಲ್ಲ ಗಲಾಟೆ ಮಾಡುತ್ತಿದ್ದರು. ರಾಜುವಿನ ತಂದೆ ಸುಂದರ್ ಕಂಪ್ಯೂಟರ್ ಕೊಠಡಿಗೆ ಕರೆದುಕೊಂಡು ಹೋಗಿ ಇ-ಅಂಚೆಯ ಬಗ್ಗೆ ಮಾಹಿತಿ ತಿಳಿಸುವರು. ೧.ಮಕ್ಕಳಿಗೆ ಇ-ಅಂಚೆ ಕಳುಹಿಸುವ ಪ್ರಕ್ರಿಯೆ ಪ್ರದರ್ಶಿಸಿ. ೨.ಮಕ್ಕಳಿಗೆ ಇ-ಅಂಚೆಯ ಮೂಲಭೂತ ಅಂಶಗಳನ್ನು ಪರಿಚಯಿಸಿ: ಇ-ಅಂಚೆ ಎಂದರೇನು? ಅದು ಹೇಗೆ ಕೆಲಸ ಮಾಡುತ್ತದೆ? ಇ-ಅಂಚೆಯ ಭಾಗಗಳನ್ನು ಹೆಸರಿಸಿ. ...
ಮರಿ ಸಿಪಿಲೆಯ ಖುಷಿ!. 10.09.2025 3:08
Writer : ರೀನಾ ಐ. ಪುರಿ Narrator : ಮಾಯಾದೇವಿ ತುರಂಗ Editor : ನೇತ್ರಾವತಿ ತಾಯಿ ಸಿಪಿಲೆ ಹಕ್ಕಿ ಚಿಂತೆಯಲ್ಲಿತ್ತು. ಮರಿ ಸಿಪಿಲೆಗೆ ಖುಷಿಯಾದರೂ ಸುಮ್ಮನೇ ಇರುತ್ತಿತ್ತು. ಇದು ತಾಯಿಯ ಚಿಂತೆಗೆ ಕಾರಣ. ಈ ಕತೆ ಓದಿ ಪ್ರಾಣಿ ಪಕ್ಷಿಗಳಿಗೆ ಸಂತೋಷವಾದಾಗ ಅವು ತಮ್ಮ ಖುಷಿಯನ್ನು ಹೇಗೆ ವ್ಯಕ್ತಪಡಿಸುತ್ತವೆ ಎನ್ನುವುದನ್ನು ತಿಳಿಯಿರಿ. ೧.ಪ್ರಾಣಿ ಮತ್ತು ಪಕ್ಷಿಗಳ ಹೆಸರುಗಳನ್ನು ಪಟ್ಟಿ ಮಾಡುವುದು ೨. ತಮಗೆ ಇಷ್ಟವಾದ ಪಕ್ಷಿ/ಪ್ರಾಣಿಯ ಬಗ್ಗೆ ಮಾತನಾಡಲು ಹೇಳುವುದು. ಇವರಿಗೆ ಸೂಕ್ತ : ಪ್ರಾಥಮಿಕ...
ಮರ ನನ್ನನ್ನು ಉಳಿಸಿ 10.09.2025 5:41
Writer : ಅನಿಶಾ ಬಜಾಜ್ Narrator : ಸಂಗರಡ್ಡಿ Editor : ನಾಗಿನಾ ಇದು ಒಂದು ಬೀಜದ ಕಥೆ- ವ್ಯಥೆ, ಅವನ ದ್ವನಿಯಲ್ಲೆ. ಹುಟ್ಟು- ಸಾವಿನ ನಡುವಿನ ಪಯಣ, ೧. ಮರ ಉಳಿಸಿ, ಭೂಮಿ ಉಳಿಸಿ ಎಂಬಂತೆ ಕೆಲವು ಸ್ಲೋಗನ್ ರಚಿಸುವುದು. ೨. ಮರದ ಚಿತ್ರ ಬಿಡಿಸಿ ಬಣ್ಣ ಹಚ್ಚುವುದು. ೩. ಮರದ ಬಗ್ಗೆ ಪ್ರಬಂಧ ಬರೆಯುವುದು. ಇವರಿಗೆ ಸೂಕ್ತ : ಹಿರಿಯ ಪ್ರಾಥಮಿಕ ಹಂತ ಗುರುತು ಪಟ್ಟಿ : ತರಗತಿ ೫,ತರಗತಿ ೬,ತರಗತಿ ೭ ಕಥೆಯ ಚಟುವಟಿಕೆ ಪುಟಕ್ಕೆ ಇಲ್ಲಿ ಕ್ಲಿಕ್ಕಿಸಿ
Podobne podcasty
Replaio nie jest wydawcą podcastów; nazwy audycji, okładki i audio należą do ich autorów i są rozpowszechniane przez publiczne kanały RSS