Parameshwarappa Kudari

ಎಂಥಾ ಮೋಜಿನ ಕುದರಿ.......!! By ಪರಮೇಶ್ವರಪ್ಪ ಕುದರಿ

Comedy KN ↓ Odcinki: 165

ಜೀವನಕ್ಕಿಂತ ಜೀವನಾನುಭವ ದೊಡ್ಡದು.ಜೀವನದಲ್ಲಿ ಬಂದು ಹೋಗುವ ಕೆಲವು ಪಾತ್ರಗಳು ಸದಾ ನೆನಪಿನಲ್ಲಿ ಉಳಿದು, ಕಾಡುತ್ತವೆ....ಮಾತಾಗಿ,ಹಾಡಾಗಿ ಹೊಮ್ಮುತ್ತವೆ!!

Koniecznie odwiedź stronę podcastu i wesprzyj twórcę: youtube.com

Autor

Parameshwarappa Kudari

Kategoria

Comedy

Strona podcastu

youtube.com

Ostatni odcinek

20 gru 2023

Gdzie słuchać?

Podcasty w aplikacji Replaio Radio Już wkrótce

Podcasty trafią do aplikacji już wkrótce. Zainstaluj teraz i jako pierwszy zobacz nowe podejście do podcastów

Pobierz z Google Play Zainstaluj za darmo Android 5 mln+ pobrań · ocena 4,8 iOS niedługo

Odcinki

ಕಲಿತ ವಿದ್ಯೆಯ ಸದುಪಯೋಗ 09.11.2021

ನಾವು ಕಲಿತ ವಿದ್ಯೆಯನ್ನು ಲೋಕೋದ್ಧಾರಕ್ಕಾಗಿ ಬಳಸಬೇಕೇ ಹೊರತು, ಲೋಕದ ನಾಶಕ್ಕೆ, ವೈಯಕ್ತಿಕ ಲಾಭಕ್ಕಾಗಿ ಬಳಸಬಾರದು. ಈ ಬಗ್ಗೆ ಒಂದು ಪುಟ್ಟ ಕತೆ ಇದೆ ಆಲಿಸಿ. # ಪರಮೇಶ್ವರಪ್ಪ ಕುದರಿ , ಚಿತ್ರದುರ್ಗ

ಕೆಲವರನ್ನು ಕ್ಷಮಿಸಿ ಬಿಡೋಣ...!! 03.11.2021

ಜೀವನದಲ್ಲಿ ಅನೇಕ ರೀತಿಯ, ಸ್ವಭಾವದ ಜನರು ನಮಗೆ ಸಿಗುತ್ತಾರೆ. ಕೆಲವರು ಹೀಗೆ ಬಂದು ಹಾಗೆ ಹೋಗುತ್ತಾರೆ. ಕೆಲವರು ಜೊತೆಯಲ್ಲೇ ಇರುತ್ತಾರೆ.ಕೆಲವರು ಸಂತಸ ನೀಡುತ್ತಾರೆ, ಕೆಲವರು ನೋವನ್ನು!! ಹಾಗಾದರೆ ಈ ಪೊಡ್ ಕ್ಯಾಸ್ಟ್ ಕೇಳಿ. # ಪರಮೇಶ್ವರಪ್ಪ ಕುದರಿ , ಚಿತ್ರದುರ್ಗ

ಹಾಲಿನ ವ್ಯಥೆ - ಕಥೆ...!! 01.11.2021

ಜೀವನದಲ್ಲಿ ಬರುವ ಕಷ್ಟಗಳು ನಮ್ಮನ್ನು ಗಟ್ಟಿಗೊಳಿಸುತ್ತವೆ. ಬರುವ ಕಷ್ಟ - ನಷ್ಟಗಳನ್ನು ಬಂದ ಹಾಗೆಯೇ ಸ್ವೀಕರಿಸಿ ಎದುರಿಸಬೇಕು.ಈ. ಬಗ್ಗೆ ಇಲ್ಲೊಂದು, ಹಾಲಿನ ಕಥೆ ಇದೆ ಆಲಿಸಿ. # ಪರಮೇಶ್ವರಪ್ಪ ಕುದರಿ , ಚಿತ್ರದುರ್ಗ

ಹೃದಯಾಘಾತ ; ಮುನ್ಸೂಚನೆ ನೀಡುತ್ತದೆ!! 30.10.2021

ಹೌದು, ಹೃದಯಾಘಾತವು ಮುನ್ಸೂಚನೆ ನೀಡಿಯೇ ಆಗುತ್ತದೆ ಎಂದು ವೈದ್ಯ ಶಾಸ್ತ್ರವು ಹೇಳುತ್ತದೆ. ಅದೆಂದೂ ಒಮ್ಮೆಲೇ ದಿಢೀರೆಂದು ಆಗುವುದಿಲ್ಲವಂತೆ!! # ಪರಮೇಶ್ವರಪ್ಪ ಕುದರಿ , ಚಿತ್ರದುರ್ಗ

ಬದುಕಿನಲ್ಲಿ ಪ್ರಾಮಾಣಿಕತೆ.....!?!? 27.10.2021

ಬದುಕಿನಲ್ಲಿ ನಾವು ಅಳವಡಿಸಿಕೊಳ್ಳ ಬಹುದಾದ ಹತ್ತಾರು ಮೌಲ್ಯಗಳಲ್ಲಿ ಪ್ರಾಮಾಣಿಕತೆಯು ಮಹತ್ತರವಾದುದು. ಈ ಬಗ್ಗೆ ಒಂದು ಕಿರುಗತೆ ಇಲ್ಲಿದೆ ಆಲಿಸಿ.... ಪಾಲಿಸಿ!! # ಪರಮೇಶ್ವರಪ್ಪ ಕುದರಿ , ಚಿತ್ರದುರ್ಗ

ಅವಸರ ಬೇಡ .....!! 24.10.2021

ತಾಳ್ಮೆ ಕಹಿಯಾದರೂ ಅದರ ಫಲ ಸಿಹಿಯಾಗೇ ಇರುತ್ತದೆ. ಅಪಘಾತಕ್ಕೆ ಅವಸರವೇ ಕಾರಣ ಎಂಬುದು ತಿಳಿದಿದ್ದರೂ, ನಾವು ಎಲ್ಲೆಡೆ ಅವಸರ ಮಾಡುತ್ತಲೇ ಇರುತ್ತೇವೆ. ಆದರೆ ಅವಸರದ ಫಲ? ನಿಮಗೆ ಗೊತ್ತೇ ಇದೆ. # ಪರಮೇಶ್ವರಪ್ಪ ಕುದರಿ ,ಚಿತ್ರದುರ್ಗ

ಎಲ್ಲರಿಗೂ ವಿದ್ಯೆ ಬೇಕೇ ಬೇಕು!! 22.10.2021

ವಿದ್ಯೆ ಎಲ್ಲರ ಬದುಕಲ್ಲಿಯೂ ಬಹು ಮುಖ್ಯವಾದ ಪಾತ್ರವನ್ನು ವಹಿಸುತ್ತದೆ. ವಿದ್ಯೆ ಕೊಡಿಸದಾ ತಂದೆ...ಬುದ್ದಿ ಹೇಳದಾ ಗುರುವು, ಬಿದ್ದಿರಲು ಬಂದು ನೋಡದಾ ತಾಯಿ ಈ ಮೂರೂ ಶುದ್ಧ ವೈರಿಗಳು ಎನ್ನುತ್ತಾರೆ ಸರ್ವಜ್ಞ ಕವಿ. # ಪರಮೇಶ್ವರಪ್ಪ ಕುದರಿ, ಚಿತ್ರದುರ್ಗ

ಪತ್ರಗಳು : ಆತ್ಮೀಯತೆಯ ಜೀವ ಸೆಲೆಗಳು!! 18.10.2021

ಊರಿಗೆ ಹೋದ ಕೂಡ್ಲೇ ಪತ್ರ ಬರಿ ಎಂದು ಹೇಳುತ್ತಿದ್ದ ಕಾಲವೊಂದಿತ್ತು. ಅಂಚೆಯ ಅಣ್ಣನ ಬಗ್ಗೆ ಕವಿತೆಗಳೇ ಬರೆಯಲ್ಪಟ್ಟಿದ್ದವು! ಹೌದು ಪತ್ರಗಳ ಬರವಣಿಗೆ, ಓದುಗಾರಿಕೆ ಖುಷಿ ಕೊಡುತ್ತದೆ. ಹಾಗಾದರೆ ಈ ಪೋಡ್ ಕ್ಯಾಸ್ಟ್ ಕೇಳಿ. # ಪರಮೇಶ್ವರಪ್ಪ ಕುದರಿ, ಚಿತ್ರದುರ್ಗ

ಓಲ್ಡ್ ಈಸ್ ಗೋಲ್ಡ್ : ಏನಂತೀರಿ...?? 15.10.2021

" ಎಂಥ ಸೊಗಸು ಆ ನಮ್ಮ ಕಾಲವು..... ಬಾರದು ಬಯಸಲು.......... " ಹೌದು, ಓಲ್ಡ್ ಈಸ್ ಗೋಲ್ಡ್...... ಈ Podcast ಕೇಳಿ...! # ಪರಮೇಶ್ವರಪ್ಪ ಕುದರಿ, ಚಿತ್ರದುರ್ಗ

Love Your Eyes ...!! ನಿಮ್ಮ ಕಣ್ಣುಗಳನ್ನು ಪ್ರೀತಿಸಿ....!! 14.10.2021

ಸೃಷ್ಟಿ ನೋಡಲು ದೃಷ್ಟಿ ಬೇಕು!! ನಯನ, ಅಕ್ಷಿ, ನೇತ್ರ , ಚಕ್ಷು ಎಂದೆಲ್ಲ ಕರೆಸಿಕೊಳ್ಳುವ ಕಣ್ಣುಗಳು ನಮ್ಮ ದೇಹದ ಪ್ರಮುಖ ಅಂಗಗಳು. ಆದರೆ ದೃಷ್ಟಿಹೀನರ ಬದುಕನ್ನೊಮ್ಮೆ ನೋಡಿ ಆಗ ನಮ್ಮ ಕಣ್ಣುಗಳ ಬೆಲೆ ಅರ್ಥವಾಗುತ್ತದೆ. ದಯವಿಟ್ಟು ನಿಮ್ಮ ಕಣ್ಣುಗಳನ್ನು....ಪ್ರೀತಿಸಲು ಈ ಪೊಡ್ ಕ್ಯಾಸ್ಟ್ ಕೇಳಿ. # ಪರಮೇಶ್ವರಪ್ಪ ಕುದರಿ

ಬದಲಾಗ ಬೇಕಿರೋದು ಮಕ್ಕಳಲ್ಲ : ಪಾಲಕರು - ಪೋಷಕರು...!! 12.10.2021

ಇಂದಿನ ಮಕ್ಕಳ ಬಗ್ಗೆ ಮೆಚ್ಚುಗೆಗಿಂತ ಬೈಗುಳಗಳೇ ಹೆಚ್ಚು ಕೇಳಿಬರೋದು! ಆದರೆ ನಿಜವಾಗಿ ಅವರು ಅಪರಾಧಿಗಳಲ್ಲ! ಬದಲಾಗ ಬೇಕಿರೋದು ಮಕ್ಕಳಲ್ಲ ; ಪಾಲಕರು - ಪೋಷಕರು! ಹೌದು, ಈ ಪೋಡ್ ಕ್ಯಾಸ್ಟ್ ಕೇಳಿ. # ಪರಮೇಶ್ವರಪ್ಪ ಕುದರಿ, ಚಿತ್ರದುರ್ಗ

ಊಟ ಮಾಡುವಾಗ ಅನುಸರಿಸಬೇಕಾದ ನಿಯಮಗಳು...!! 11.10.2021

ಊಟ ಮಾಡೋದು ಕೂಡ ಒಂದು ಕಲೆ ! ಅಲ್ಲಿಯೂ ನಾವು ಅನುಸರಿಸಬೇಕಾದ ಕೆಲವು ಮುಖ್ಯವಾದ ನಿಯಮಗಳಿವೆ. ಬನ್ನಿ......ಆಲಿಸಿ...ಪಾಲಿಸಿ!! # ಪರಮೇಶ್ವರಪ್ಪ ಕುದರಿ , ಚಿತ್ರದುರ್ಗ

ಒಂದು ವಿಲ್ ಮತ್ತು ಒಂದು ಜೊತೆ ಹಳೆಯ ಚಪ್ಪಲಿ..!! 09.10.2021

ಈ ಬದುಕು ಕ್ಷಣಿಕ ಎಂಬುದು ಗೊತ್ತಿದ್ದರೂ, ನಮ್ಮ ಆಸೆ, ಕನಸುಗಳಿಗೆ ಬರವಿಲ್ಲ! ಬದುಕಿನ ಸಾರ್ಥಕತೆ ಸಾರುವ ಒಂದು ಘಟನೆ ಆಲಿಸಿ. ಕೃಪೆ : ವಾಟ್ಸಪ್ # ಪರಮೇಶ್ವರಪ್ಪ ಕುದರಿ, ಚಿತ್ರದುರ್ಗ

ಶಂಕರನಾಗ್ ಜೊತೆ : ಕಾಲ್ಪನಿಕ - ವಿನೋದ ಸಂದರ್ಶನ..!! 07.10.2021

ದಿ.ಶಂಕರನಾಗ್ ಸರ್ ನಟಿಸಿದ ಚಿತ್ರಗಳ ಹೆಸರನ್ನೇ ಬಳಸಿಕೊಂಡು ಈ ಕಾಲ್ಪನಿಕ - ವಿನೋದ ಸಂದರ್ಶನ ರಚಿಸಲಾಗಿದೆ.ಇದೊಂದು ವಿನೂತನ ಪ್ರಯೋಗ! ಹೇಗನ್ನಿಸಿತು? ತಿಳಿಸಿ ಸ್ನೇಹಿತರೆ. # ಪರಮೇಶ್ವರಪ್ಪ ಕುದರಿ , ಚಿತ್ರದುರ್ಗ

ಸಣ್ಣ ಕತೆ : ಕರಿಬಸವ........!! 06.10.2021

ಹದಿ ಹರೆಯ ಒಂದು ಕುತೂಹಲ ಘಟ್ಟ. ಆಗ ಕಣ್ಣಿಗೆ ಕಂಡದ್ದೆಲ್ಲ ಬೇಕೆನ್ನುವ ಕಾಲ. ಇಲ್ಲಿನ ಕಥಾ ನಾಯಕನೂ ಹಾಗೇ.....ಏನೆಲ್ಲ ಬಯಸಿ...ಏನೆಲ್ಲ ಆಗಿ ಹೋಗ್ತಾನೆ!! ಕತೆ ಕೇಳಿ....ಅಭಿಪ್ರಾಯ ತಿಳಿಸಿ. # ಪರಮೇಶ್ವರಪ್ಪ ಕುದರಿ, ಚಿತ್ರದುರ್ಗ

ನನಗೆ ಪೂರ್ಣ ತೃಪ್ತಿಯಾಗಿಲ್ಲ : ನಟ ಸುಂದರರಾಜ್ !! 03.10.2021

ತಮ್ಮದೇ ಆದ ವಿಭಿನ್ನ ಶೈಲಿಯಿಂದ ಕನ್ನಡ ಚಿತ್ರರಂಗದಲ್ಲಿ ಹೆಸರು ಮಾಡಿದ ನಟ ಸುಂದರರಾಜ್, ಸಂದರ್ಶನಕ್ಕೆ ಸಂತಸದಿಂದ ಒಪ್ಪಿಕೊಂಡರು. ಈ ಸಂದರ್ಶನವು ಜನವರಿ 1987 ರ " ಚಿತ್ರಲತಾ" ಮಾಸಿಕದಲ್ಲಿ ಪ್ರಕಟವಾಗಿತ್ತು! ಅದೇ ಈಗ ನಿಮ್ಮ ಮುಂದೆ Podcast ಆಗಿ ರೂಪುಗೊಂಡಿದೆ. ಆಲಿಸಿ.... # ಪರಮೇಶ್ವರಪ್ಪ ಕುದರಿ , ಚಿತ್ರದುರ್ಗ

ನಟ ಶಂಕರ್ ಅಶ್ವಥ್ ಜೊತೆ : ಫೋನ್ ಸಂಭಾಷಣೆ 29.09.2021

ಇಂದು ನಾನು, ನಟ ಶಂಕರ್ ಅಶ್ವಥ್ ಜೊತೆ ಫೋನ್ ನಲ್ಲಿ ಮಾತನಾಡಿದೆ. ಅರ್ಥಪೂರ್ಣ ಸಂಭಾಷಣೆಗಳು ಎನ್ನಿಸಿದ್ದರಿಂದ ಇಲ್ಲಿ ಶೇರ್ ಮಾಡಿರುವೆ! ಆಲಿಸಿ..... # ಪರಮೇಶ್ವರಪ್ಪ ಕುದರಿ , ಚಿತ್ರದುರ್ಗ

ಯಾವ ಪಾತ್ರವಾದರೂ ನಟಿಸಬಲ್ಲೆ : ನಟ ಶಂಕರ್ ಅಶ್ವಥ್ 28.09.2021

ಅಶ್ವಥ್ ಎನ್ನುವ ಹೆಸರು ಕನ್ನಡ ಚಿತ್ರರಂಗದ ಅವಿಭಾಜ್ಯ ಅಂಗವಾಗಿದೆ. ಅವರ ಪುತ್ರರೇ ಶಂಕರ್ ಅಶ್ವಥ್ ! ಅವರ ಮೊದಲ ಸಂದರ್ಶನ ಮಾಡಿದ ಕೀರ್ತಿ ನನಗೆ! ಡಿಸೆಂಬರ್‌ - 1994 ದ. " ಮಂಗಳ" ಪತ್ರಿಕೆಯಲ್ಲಿ ಈ ಸಂದರ್ಶನ ಪ್ರಕಟವಾಗಿತ್ತು. ಅದೀಗ‌ನಿಮ್ಮ ಮುಂದೆ Podcast ರೂಪದಲ್ಲಿ. ಕೇಳಿ....... # ಪರಮೇಶ್ವರಪ್ಪ ಕುದರಿ, ಚಿತ್ರದುರ್ಗ

# ಡಾಟರ್ಸ್ ಡೇ : ಶುಭಾಶಯಗಳು 26.09.2021

ಮಗಳು , ಈ ಪದವೇ ಸ್ಫೂರ್ತಿ! ಮಗಳು ಮನೆ ತುಂಬಾ ಓಡಾಡುತ್ತಿದ್ದರೆ....ಆ ಕಾಲ್ಗೆಜ್ಜೆಯ ಸದ್ದು ಮನಸಿಗೆ ಮುದ ನೀಡುತ್ತದೆ. ಇಂದು ರಾಷ್ಟ್ರೀಯ ಪುತ್ರಿಯರ ದಿನ....ಒಂದಿಷ್ಟು ಮಾತುಗಳು.ಆಲಿಸಿ.... # ಪರಮೇಶ್ವರಪ್ಪ ಕುದರಿ , ಚಿತ್ರದುರ್ಗ

ವೃತ್ತಿ , ಜನರ ಪ್ರೀತಿಯನ್ನು ನೀಡಿದೆ: ನಟ ಕಲ್ಯಾಣಕುಮಾರ್ (ಸಂದರ್ಶನ) 24.09.2021

ಕನ್ನಡ ಚಿತ್ರರಂಗದ ಕುಮಾರ ತ್ರಯರಲ್ಲಿ ಕಲ್ಯಾಣಕುಮಾರ್ ಕೂಡ ಒಬ್ಬರು. ಅವರು ನಟ, ನಿರ್ಮಾಪಕ ಹಾಗೂ ನಿರ್ದೇಶಕರೂ ಆಗಿದ್ದರು.ಅವರನ್ನು ಸಂದರ್ಶನ ಮಾಡಿದ್ದ ನೆನಪನ್ನು ಇಲ್ಲಿ ತಮ್ಮೊಂದಿಗೆ ಹಂಚಿಕೊಂಡಿದ್ದೇನೆ. # ಪರಮೇಶ್ವರಪ್ಪ ಕುದರಿ, ಚಿತ್ರದುರ್ಗ

ಕನ್ನಡದ ಹೆಮ್ಮೆಯ ನಟ ಶಂಕರನಾಗ್: ಮಿಮಿಕ್ರಿ 23.09.2021

ಕನ್ನಡ ನಾಡು ಎಂದೂ ಮರೆಯದ ಮಾಣಿಕ್ಯ ನಟ- ನಿರ್ದೇಶಕ ಶಂಕರನಾಗ್ ಸರ್, ಅವರ ಮಿಮಿಕ್ರಿಯನ್ನು ಈ ಪೊಡ್ ಕ್ಯಾಸ್ಟಲ್ಲಿ ಮಾಡಿದ್ದೇನೆ. ಆಲಿಸಿ......ಅಭಿಪ್ರಾಯ ತಿಳಿಸಿ. # ಪರಮೇಶ್ವರಪ್ಪ ಕುದರಿ , ಚಿತ್ರದುರ್ಗ

ಕನ್ನಡದ ಆಸ್ತಿ : ಡಾ.ಮಾಸ್ತಿ 22.09.2021

ಸಣ್ಣ ಕತೆಗಳ ಜನಕ ಎಂದೇ ಪ್ರಸಿದ್ದಿಯಾಗಿದ್ದ ಡಾ.ಮಾಸ್ತಿ ವೆಂಕಟೇಶ ಅಯ್ಯಂಗಾರರು ಕನ್ನಡಕ್ಕೆ ನೀಡಿದ ಕೃತಿಗಳು ಅನನ್ಯವಾದವು. ಅವರ ಒಂದು ನೆನಪು ಇಲ್ಲಿದೆ. ಕೇಳಿ...... # ಪರಮೇಶ್ವರಪ್ಪ ಕುದರಿ, ಚಿತ್ರದುರ್ಗ

ಶಾಲೆಗಳು ಚೈತನ್ಯದ ಚಿಲುಮೆಗಳಾಗಲಿ!! 21.09.2021

ಶಾಲೆಗಳು ಮಕ್ಕಳ ಮಾನಸಿಕ ಬೆಳವಣಿಗೆಯಲ್ಲಿ ಮುಖ್ಯವಾದ ಪಾತ್ರವನ್ನು ವಹಿಸುತ್ತವೆ.ಆದ್ದರಿಂದ ನಾವು ಶಾಲೆಗಳನ್ನು ರಾಷ್ಟ್ರೀಯ ಸ್ಮಾರಕಗಳಂತೆ ರಕ್ಷಿಸಬೇಕಾಗಿದೆ. ನನ್ನ ಒಂದು ವಿಚಾರ ಆಲಿಸಿ. # ಪರಮೇಶ್ವರಪ್ಪ ಕುದರಿ, ಚಿತ್ರದುರ್ಗ

ನನ್ನ ಎರಡು : ಮಕ್ಕಳ ಕವಿತೆಗಳು. 18.09.2021

ಮಕ್ಕಳಿಗಾಗಿ ಬರೆಯುವುದು ನನ್ನ ಹವ್ಯಾಸ. ಕತೆ, ಕವನ,ಲೇಖನ ಬರೆಯುತ್ತ ಬಂದದ್ದೇನೆ.ಇಲ್ಲಿ ಮಕ್ಕಳಿಗಾಗಿ ಬರೆದ ಎರಡು ಕವಿತೆಗಳಿವೆ.ಎರಡೂ 2004 ರಲ್ಲಿ ಸಂಯುಕ್ತ ಕರ್ನಾಟಕ ಪತ್ರಿಕೆಯಲ್ಲಿ ಪ್ರಕಟವಾಗಿವೆ. ಆಲಿಸಿ.....ನಿಮ್ಮ ಮಕ್ಕಳಿಗೂ ಕಲಿಸಿ. # ಪರಮೇಶ್ವರಪ್ಪ ಕುದರಿ ,ಚಿತ್ರದುರ್ಗ

ಬಾಳಪ್ಪ ಹುಕ್ಕೇರಿ : ಒಂದು ನೆನಪು...!! 17.09.2021

ಸಾವಿರ ಹಾಡಿನ ಸರದಾರ ಎಂದೇ ಪ್ರಸಿದ್ದಿಯಾಗಿದ್ದ ಜಾನಪದ ಹಾಡುಗಾರ ದಿ.ಬಾಳಪ್ಪ ಹುಕ್ಕೇರಿಯವರನ್ನು ಒಂದು ದಿನ ಆಕಸ್ಮಿಕವಾಗಿ ಭೇಟಿಯಾದೆ. ಅದನ್ನು ನಿಮ್ಮೊಂದಿಗೆ ಹಂಚಿಕೊಂಡಿದ್ದೇನೆ. ಕೇಳಿ........... # ಪರಮೇಶ್ವರಪ್ಪ ಕುದರಿ, ಚಿತ್ರದುರ್ಗ

Słuchaj podcastu ಎಂಥಾ ಮೋಜಿನ ಕುದರಿ.......!! By ಪರಮೇಶ್ವರಪ್ಪ ಕುದರಿ w Replaio

Radio i podcasty w jednej aplikacji - za darmo, bez zakładania konta. Zainstaluj już dziś i nie przegap premiery

Pobierz z Google Play

Replaio nie jest wydawcą podcastów; nazwy audycji, okładki i audio należą do ich autorów i są rozpowszechniane przez publiczne kanały RSS