IT for Change

ಕಥೆ ಖಜಾನೆ - ಕನ್ನಡದ

2023-24ರ ಅವಧಿಯಲ್ಲಿ ಕರ್ನಾಟಕ ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆ (ಡಿಎಸ್‌ಇಆರ್‌ಟಿ), ಐಟಿ ಫಾರ್ ಚೇಂಜ್ ಸಹಯೋಗದೊಂದಿಗೆ ಪ್ರಾಯೋಗಿಕವಾಗಿ ನಡೆಸಿದ 'ಭಾಷಾ ಶಿಕ್ಷಣದಲ್ಲಿ ಡಿಜಿಟಲ್ ಕಥೆ-ಆಧಾರಿತ ಬೋಧನ ವಿಧಾನದ ಅಳವಡಿಕೆ' ಕರ್ಯಕ್ರಮದ ಅಡಿಯಲ್ಲಿ ನಡೆಸಿದ ಕಾರ್ಯಾಗಾರಗಳ ಭಾಗವಾಗಿ ಈ ಆಡಿಯೋ ಕಥೆಗಳನ್ನು ಕರ್ನಾಟಕದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಶಿಕ್ಷಕರು ತಯಾರಿಸಿದ್ದಾರೆ. ಕಥೆ ಹೇಳುವಿಕೆಯ ಶಕ್ತಿಯ ಜೊತೆಗೆ ಡಿಜಿಟಲ್ ಮಾಧ್ಯಮವು ನೀಡುವ ಹೊಸ ಸಾಧ್ಯತೆಗಳ ಮೂಲಕ ಮಕ್ಕಳ ಭಾಷಾ ಕಲಿಕೆಯನ್ನು ಉತ್ತೇಜಿಸುವುದು ಈ ಕಾರ್ಯಕ್ರಮದ ಗುರಿಯಾಗಿದೆ. ಎಲ್ಲಾ ಕಥೆಗಳು ಮುಕ್ತ ಶೈಕ್ಷಣಿಕ ಸಂಪನ್ಮೂಲಗಳಾಗಿದ್ದು (OER) ಮುಕ್ತವಾಗಿ ಬಳಸಬಹುದು ಮತ್ತು ಹಂಚಿಕೊಳ್ಳಬಹುದು.

Koniecznie odwiedź stronę podcastu i wesprzyj twórcę: kathe-khajane.teacher-network.in

Autor

IT for Change

Kategoria

Uncategorized

Ostatni odcinek

10 wrz 2025

Gdzie słuchać?

Podcasty w aplikacji Replaio Radio Już wkrótce

Podcasty trafią do aplikacji już wkrótce. Zainstaluj teraz i jako pierwszy zobacz nowe podejście do podcastów

Pobierz z Google Play Zainstaluj za darmo Android prawie 10 mln pobrań · ocena 4,8 iOS niedługo

Odcinki

ನೀಮ ಇವತ್ತು ಏನು ತಿನ್ನುತ್ತಾಳೆ 15.07.2024

ಲೇಖಕರು : ಸ್ಟೋರಿವೀವರ್ರಿಗಾಗಿ ಬಿಜಲ್ ವಚ್ಚರಜಾನಿ ನಿರೂಪಕರು : ಬಸವರಾಜಪ್ಪ ಸಂಪಾದಕರು : ಬಸವರಾಜಪ್ಪ ತಿನ್ನುವುದನ್ನು ಇಷ್ಟಪಡುವ ನೀಮಾಳನ್ನು ಭೇಟಿ ಮಾಡಿ. ಜಾರುವ ಲಿಚಿ, ಮೆತ್ತಗಿನ ನೇರಳೆ ಹಣ್ಣು, ಹುಳಿಯಾದ ಹುಣಸೆ, ಹೊಳೆಯುವ ಪಾಲಕ್ – ಅವಳಿಗೆ ಎಲ್ಲವೂ ಇಷ್ಟ!! ತಿನ್ನುತ್ತ, ಅಗಿಯುತ್ತ ವರ್ಷವಿಡಿ ಕಳೆಯುವ ನೀಮಾ ಜೊತೆ ನೀವೂ ಸೇರಿಕೊಳ್ಳಿ.. ಈ ಕಥೆಯ ಮೂಲಕ ಮಕ್ಕಳಿಗೆ ಋತುಗಳು ಹಾಗೂ ಅದರ ಗುಣಲಕ್ಷಣಗಳನ್ನು ತಿಳಿಸಿಕೊಡಬಹುದಲ್ಲದೇ ನಿರ್ದಿಷ್ಟ ಋತುಗಳಲ್ಲಿ ದೊರೆಯಬಹುದಾದ ವಿವಿಧ ತರಕಾರಿ ಮತ್ತು...

ನಸುನಗೆ ಬೀರಿ 15.07.2024

ಲೇಖಕರು : ಸ್ಟೋರಿವೀವರ್ರಿಗಾಗಿ ಸಂಜೀವ್ ಜೈಸ್ವಾಲ್ ನಿರೂಪಕರು : ಮಧು ಹೆಚ್.ಸಿ ಸಂಪಾದಕರು : ನೂರ್ ಫಾತೀಮಾ ಗೆಳೆಯರ ಜೊತೆ ಓಟದಲ್ಲಿ ಎಲ್ಲರಿಗಿಂತ ಮುಂದೆ ಓಡುತ್ತಿದ್ದ ಜಿಂಕೆಗೆ ಇದ್ದಕ್ಕಿದ್ದಂತೆ ಏನಾಯ್ತು ನೋಡಿ? ಈ ಕಥೆಯ ಮೂಲಕ ಮಕ್ಕಳಿಗೆ ಹೊಸ ಪದಗಳ ಪರಿಚಯ, ಸರಳ ವಾಕ್ಯ ರಚನೆ ಹಾಗೂ ವಿವಿಧ ರೀತಿಯ ಪ್ರಾಣಿಗಳ ಪರಿಚಯವನ್ನು ಮಾಡಿಕೊಡಬಹುದು. ಕಥೆಗೆ ಸಂಬಂದಿಸಿದಂತೆ ಮಾಡಬಹುದಾದ ಕೆಲವು ತರಗತಿಯ ಚಟುವಟಿಕೆಗಳು : ಮಕ್ಕಳು ಸ್ನೇಹಿತರೊಂದಿಗೆ ಯಾವೆಲ್ಲಾ ಆಟ ಆಡುತ್ತಾರೆ ಹಾಗೂ ಅದರ ಅನುಭವ ಕುರಿತು ಮ...

ನರಿಯ ಸೋಲು 15.07.2024

ಲೇಖಕರು : ಸ್ಟೋರಿವೀವರ್ರಿಗಾಗಿ ಸೌರ ವ್ರೈಟರ್ಸ್ ಗ್ರೂಪ್ ನಿರೂಪಕರು : ಸುಂದರ್ ರಾಜ್ ಸಂಪಾದಕರು : ಸೌಮ್ಯ ಕೆ.ಎನ್ ಒಂದು ಬುದ್ಧಿವಂತ ಮೊಲ ತನ್ನ ಸ್ನೇಹಿತ ಆಮೆಗೆ ಸಹಾಯ ಮಾಡುತ್ತದೆ. ಅವೆರಡೂ ನರಿಯನ್ನು ಹೇಗೆ ಮೋಸಗೊಳಿಸಿದವು ಎಂಬುದನ್ನು ತಿಳಿಯಿರಿ. ಆಹಾರಕ್ಕಾಗಿ ಒಂದು ಪ್ರಾಣಿ ಮತ್ತೊಂದು ಪ್ರಾಣಿಯನ್ನ ಅವಲಂಬಿಸಿರುವ ಆಹಾರ ಸರಪಳಿಯ ಕುರಿತು ಮಕ್ಕಳಿಗೆ ಈ ಕಥೆಯ ಮೂಲಕ ತಿಳಿಸಿಕೊಡಬಹುದು. ಅಲ್ಲದೇ, ಕಾಡಿನಲ್ಲಿ ಕಾಡುಪ್ರಾಣಿಗಳ ಜೀವನ ಶೈಲಿ ಹೇಗಿರುತ್ತದೆ ಎಂಬುದನ್ನ ಮನವರಿಕೆ ಮಾಡಿ ಕೊಡಬಹುದು. ಬ...

ನಮ್ಮ ಅದ್ಭುತ ಜಗತ್ತು 15.07.2024

ಲೇಖಕರು : ಸ್ಟೋರಿವೀವರ್ರಿಗಾಗಿ ಹರ್ಮಿಂಧರ್ ಒಹ್ರಿ ನಿರೂಪಕರು : ವಸಂತ್ ಕುಮಾರ್ ಸಂಪಾದಕರು : ಚಂದ್ರಶೇಖರ್ ಕಥೆಯ ಮೂಲಕ ಮಕ್ಕಳಿಗೆ ಪರಿಸರ ಸಂರಕ್ಷಣೆ ನಮ್ಮೆಲ್ಲರ ಹೊಣೆ ಎಂಬುದನ್ನ ತಿಳಿಸಿಕೊಡಬಹುದಲ್ಲದೇ ವಿವಿಧ ಪ್ರಾಣಿಗಳು ಮತ್ತು ಅದರ ಗುಣಲಕ್ಷಣ, ಮನುಷ್ಯನ ದೈಹಿಕ ವೈವಿಧ್ಯತೆ ಕುರಿತು ಮಕ್ಕಳಿಗೆ ತಿಳಿಸಿಕೊಡಬಹುದು. ಕಥೆಗೆ ಸಂಬಂಧಿಸಿದಂತೆ ಕೆಲವು ತರಗತಿ ಚಟುವಟಿಕೆಗಳು. ಮಕ್ಕಳನ್ನು ಮೂರು ತಂಡಗಳಾಗಿ ವಿಭಾಗಿಸಿ ಮೂರು ತಂಡಕ್ಕೆ ಒಂದರಂತೆ ಪ್ರಾಣಿಗಳು, ಪಕ್ಷಿಗಳು ಮತ್ತು ಜಲಚರಗಳು ಹಾಗೂ ಅವುಗಳ...

ನನ್ನಯ ಕುದುರೆ 15.07.2024

ಲೇಖಕರು : ಸ್ಟೋರಿವೀವರ್ರಿಗಾಗಿ ಡಾ ಸಿದ್ದಯ್ಯ ಪುರಾಣಿಕ್ ನಿರೂಪಕರು : ಕೃಷ್ಣಮೂರ್ತಿ ಸಂಪಾದಕರು : ಮನಿಷ್ ಇದು ಬರಿ ಕೋಲು ಅಂತ ಹೇಳಿದ್ದು ಯಾರು? ಇದು ಕುದುರೆಯೇ. ಬೇಕೆಂದ ಕಡೆ ಅದು ಪ್ರಯಾಣಿ ಸಬಲ್ಲುದು. ಕಲ್ಪನೆಯಂತೆ ಅದು ಎಷ್ಟೊಂದು ಜಾಗಗಳಿಗೆ ಕರೆದುಕೊಂಡೂ ಹೋಗಬಹುದು. ಡಾ.ಸಿದ್ಧಯ್ಯ ಪುರಾಣಿಕ ಅವರ ನನ್ನ ಕುದುರೆ ಕವನ ಮಕ್ಕಳ ಜನಪ್ರಿಯ ಸಾಹಿತ್ಯ ಗುಚ್ಛದ ಭಾಗವಾಗಿದೆ. ಈ ಕಥೆಯ ಮೂಲಕ ಮಕ್ಕಳಿಗೆ ಪ್ರಾಸಪದ ಎಂದರೇನು ಎಂಬ ವ್ಯಾಕರಣಾಂಶ ಪರಿಚಯಿಸಿ ಪಠ್ಯದಲ್ಲಿ ಬರುವಂತಹ ಪ್ರಾಸಪದಗಳನ್ನು ಗುರುತಿ...

ನಡೆದಾಡುವ ಪರ್ವತ 15.07.2024

ಲೇಖಕರು : ಸ್ಟೋರಿವೀವರ್ರಿಗಾಗಿ ಮನೋಹರ್ ಚಾಮೋಲಿ ನಿರೂಪಕರು : ಹಾಲೇಶ್ ಕೆ.ಜಿ ಸಂಪಾದಕರು : ಚಂದ್ರಶೇಖರ್ ಒಂದು ದಿನ, ಒಂಟೆಯೊಂದು ಮರಳಿನ ಬಿರುಗಾಳಿಯಲ್ಲಿ ಹೂತು ಹೋಗುತ್ತದೆ. ಅದರ ಡುಬ್ಬ ಮಾತ್ರ ಹೊರಗೆ ಕಾಣುತ್ತಿರುತ್ತದೆ. ಎರಡು ಆಮೆಗಳು ಒಂಟೆಯ ಡುಬ್ಬವನ್ನು ಪರ್ವತ ಎಂದು ಭಾವಿಸಿ ಮೇಲೆ ಏರುತ್ತವೆ. ಆದರೆ ‘ಪರ್ವತ’ ನಡೆಯಲು ಆರಂಭಿಸಿದಾಗ ಆಮೆಗಳು ‘ನಡೆದಾಡುವ ಪರ್ವತ’ ಎನ್ನುತ್ತವೆ! ಹೀಗೆ ಎಲ್ಲರೂ ತನ್ನ ಡುಬ್ಬವನ್ನು ಪರ್ವತ ಎನ್ನುವುದು ಕೇಳಿ ಕೇಳಿ ಒಂಟೆ ನಿಜವಾದ ಪರ್ವತವನ್ನು ಹುಡುಕಲು ಹೊರಡ...

ದೋಣಿ ವಿಹಾರ 15.07.2024

ಲೇಖಕರು : ಸ್ಟೋರಿವೀವರ್ರಿಗಾಗಿ ಜಯಶ್ರೀ ದೇಶಪಾಂಡೆ ನಿರೂಪಕರು : ದಿನೇಶ್ & ರೇಷ್ಮ ಸಂಪಾದಕರು : ದಿನೇಶ್ ಹಳ್ಳಿಯಲ್ಲಿರುವ ಅಜ್ಜನ ಮನೆಗೆ ಹೋಗುವುದೆಂದರೆ ನಗರದಲ್ಲಿ ಬೆಳೆದ ಬಾಲಕ ರಾಜುವಿಗೆ ಬಹಳ ಖುಷಿ. ಈ ಬಾರಿಯ ಆತನ ರಜಾದ ಮಜಾ ವಿವರ ತಿಳಿಯಲು ದೋಣಿ ವಿಹಾರ ಓದಿ ಈ ಕಥೆಯ ಮೂಲಕ ಮಕ್ಕಳಿಗೆ ಹೊಸ ಪದಗಳ ಪರಿಚಯ ಹಾಗೂ ಸರಳ ವಾಕ್ಯ ರಚನೆಯ ಬಗ್ಗೆ ತಿಳಿಸಿಕೊಡಬಹುದಲ್ಲದೇ ಈಜಿನ ಪ್ರಾಮುಖ್ಯತೆ ಹಾಗೂ ನೀರಿರುವ ಬಳಿ ಅನುಸರಿಸಬೇಕಾದ ಸುರಕ್ಷತಾ ಕ್ರಮಗಳ ಬಗ್ಗೆ ಮಕ್ಕಳಿಗೆ ತಿಳಿಸಿಕೊಡುವುದು. ಕಥೆಗೆ...

ದುರಾಸೆಯ ಇಲಿ 15.07.2024

ಲೇಖಕರು : ಸ್ಟೋರಿವೀವರ್ರಿಗಾಗಿ ಹರ್ಮೀಂಧರ್ ಓಹ್ರೀ ನಿರೂಪಕರು : ಕೆ.ಜಿ ಬಸವರಾಜ್ ಸಂಪಾದಕರು : ಬಾಲಾಜಿ ಇಲಿ ದೊಡ್ಡ ತಿಂಡಿಯನ್ನು ಬಿಲದೊಳಗೆ ತೆಗೆದುಕೊಂಡು ಹೋಗಲು ನೋಡುತ್ತದೆ. ದುರಾಸೆಯಿಂದ ಲಾಭವಿಲ್ಲ ಎಂದು ಕಲಿಯುತ್ತದೆ. ಮಕ್ಕಳಿಗೆ ಅತಿ ಆಸೆಯೇ ದುಖಃಕ್ಕೆ ಮೂಲ ಎಂಬುದನ್ನ ತಿಳಿಸಿಕೊಡಬಹುದಲ್ಲದೇ ಆರೋಗ್ಯ ಮತ್ತು ಸ್ವಛ್ಛತೆಯ ಬಗ್ಗೆ ಮಕ್ಕಳಿಗೆ ಅರಿವುಮೂಡಿಸುವುದು. ಕಥೆಗೆ ಸಂಬಂದಿಸಿದಂತೆ ಮಾಡಬಹುದಾದ ಕೆಲವು ತರಗತಿಯ ಚಟುವಟಿಕೆಗಳು : ಮನೆಯಲ್ಲಿನ ತಿಂಡಿ ತಿನಿಸುಗಳನ್ನು ಹುಡುಕಿ ತಿನ್ನಲು ಬರು...

ತೂಕಡಿಸುವ ಭೀಮ 15.07.2024

ಲೇಖಕರು : ಸ್ಟೋರಿವೀವರ್ರಿಗಾಗಿ ಕಿರಣ್ ಕಸ್ತೂರಿಯ ನಿರೂಪಕರು : ಬಸವರಾಜ್ ಟಿ.ಡಿ ಸಂಪಾದಕರು : ನಾಗವೇಣಿ ಪ್ರತಿ ಬೆಳಿಗ್ಗೆ, ನಮ್ಮಲ್ಲಿ ಹಲವಾರು ಮಂದಿ ಅನುಭವಿಸುವ ಕಷ್ಟವನ್ನು ಭೀಮ ಕೂಡ ಅನುಭವಿಸುತ್ತಾನೆ. ಸಮಯಕ್ಕೆ ಸರಿಯಾಗಿ ಅವನಿಂದ ಏಳಲು, ಸಾಧ್ಯವಾಗುತ್ತಿರಲಿಲ್ಲ. ಅವನ ಒಬ್ಬ ಚಿಕ್ಕ ಸ್ನೇಹಿತ ಅವನಿಗೆ ಸಹಾಯ ಮಾಡುತ್ತಾನೆ. ಅದು ಹೇಗೆ ಎಂದು ಕೇಳಿ ತಿಳಿದುಕೊಳ್ಳಿ . ಈ ಕಥೆಯ ಮೂಲಕ ಮಕ್ಕಳಿಗೆ ಹೊಸಪದಗಳ ಪರಿಚಯ ಮಾಡಿಕೊಡಬಹುದಲ್ಲದೇ ದೈನಂದಿನ ಉತ್ತಮ ಅಭ್ಯಾಸಗಳನ್ನು ತಿಳಿಸಿಕೊಡಬಹುದು ಹಾಗೂ ಕಥೆ...

ತಾರಾಳ ನೇರಳೆ ವಿಮಾನ 15.07.2024

ಲೇಖಕರು : ಸ್ಟೋರಿವೀವರ್ರಿಗಾಗಿ ಸಂಗೀತ ವೆಲೆಗಾರ್ ನಿರೂಪಕರು : ಮಧು ಹೆಚ್.ಸಿ ಸಂಪಾದಕರು : ಸೌಮ್ಯ ಎಸ್ ನಗುವ ಎಲೆಗಳು, ಉರುಳಾಡುವ ಅಳಿಲುಗಳ ಕೀ... ಕೀ... ನಡುವೆ ಮರ ಹತ್ತಿ, ನೇರಳೆ ವಿಮಾನ ಏರಿದ ತಾರಾ ಮಾಡಿದ್ದೇನು? ಕಥೆಯ ಮೂಲಕ ಮಕ್ಕಳಿಗೆ ಹೊಸ ಪದಗಳು, ವಾಕ್ಯರಚನೆಯ ಜೊತೆಗೆ ಮಾತನಾಡುವ ಕೌಶಲ್ಯವನ್ನು ಮೂಡಿಸಬಹುದು. ಕಥೆಗೆ ಸಂಬಂದಿಸಿದಂತೆ ಕೆಲವು ತರಗತಿಯ ಚಟುವಟಿಕೆಗಳು: ಮಕ್ಕಳು ಕಥೆಯನ್ನು ಕೇಳಿದ ನಂತರ ಅವರದ್ದೇ ಆದ ಸ್ವಂತ ಮಾತುಗಳಲ್ಲಿ ಕಥೆಯನ್ನು ಹೇಳುವಂತೆ ತಿಳಿಸುವುದು. ಒಂದು ಜಾದು ಸ...

ತಂದೆಯ ಪಾಠ 15.07.2024

ಲೇಖಕರು : ಸ್ಟೋರಿವೀವರ್ರಿಗಾಗಿ ಅಬ್ರಹಾಂ ಬೆರೆಕೆಟ್, ಹರ್ಡಿಡೊ ತೆಮೆಸ್ಜೆನ್, ಯೋಹನ್ಸ್ ಫೈರ್ವ್ಯೂ. ನಿರೂಪಕರು : ಕುಮಾರ್ ಸಂಪಾದಕರು : ಪ್ರದೀಪ್ ಮಗ ತಪ್ಪು ದಾರಿ ಹಿಡಿದಿರುವುದನ್ನು ತಿಳಿದ ಅಪ್ಪ ಏನು ಉಪಾಯ ಮಾಡಿದರು ಗೊತ್ತೇ? ಕಥೆಯ ಮೂಲಕ ಮಕ್ಕಳಿಗೆ ಕಳ್ಳತನ ಮಾಡುವುದು ತಪ್ಪು ಎಂಬುದನ್ನು ತಿಳಿಸುವುದಲ್ಲದೇ ಪುಸ್ತಕಗಳ ಮಹತ್ವವನ್ನು ತಿಳಿಸುವುದು. ಕಥೆಗೆ ಸಂಬಂಧಿಸಿದಂತೆ ಕೆಲವು ತರಗತಿ ಚಟುವಟಿಕೆಗಳು. ಕಥೆಯನ್ನು ತಮ್ಮದೇ ಮಾತುಗಳಲ್ಲಿ ಹೇಳುವಂತೆ ಮಕ್ಕಳಿಗೆ ತಿಳಿಸುವುದು. ನೀವು ಮಾಡಿದ ಯಾವು...

ಚೂಟಿ ಸೋನ 15.07.2024

ಲೇಖಕರು : ಸ್ಟೋರಿವೀವರ್ರಿಗಾಗಿ ವಿನಿತ ಕೃಷ್ಣ ನಿರೂಪಕರು : ಪರಶುರಾಮ್ ಸಂಪಾದಕರು : ಪ್ರಸಾದ್ ಕೆ.ವಿ ಸೋನಾಳಿಗೆ ಅವಳ ಅಮ್ಮನ ಕೆಲಸ ಸ್ವಾರಸ್ಯಕರವಾಗಿ ತೋರುತ್ತದೆ! ಅಮ್ಮನಿಗೆ ಹೇಗೆ ಸಹಾಯ ಮಾಡುತ್ತಾಳೆ ಎಂದು ಕೇಳಿ ತಿಳಿಯಿರಿ. ಮಕ್ಕಳಿಗೆ ಸೂಕ್ಷ್ಮವಾಗಿ ಗಮನಿಸುವುದರ ಪ್ರಾಮುಖ್ಯತೆಯನ್ನ ತಿಳಿಸಿ ಸೂಕ್ಷ್ಮವಾಗಿ ಗಮನಿಸುವ ಕೌಶಲ್ಯ ಮಕ್ಕಳಲ್ಲಿ ಮೂಡುವಂತೆ ಪ್ರೇರೇಪಿಸುವುದು. ತಾಯಿ ಮತ್ತು ಮಕ್ಕಳ ಭಾಂಧವ್ಯದ ಬಗ್ಗೆ ಮಕ್ಕಳಿಗೆ ತಿಳಿಸಿಕೊಡುವುದು. ಕಥೆಗೆ ಸಂಬಂಧಿಸಿದಂತೆ ಕೆಲವು ತರಗತಿಯ ಚಟುವಟಿಕೆಗಳ...

ಚುಲುಬುಲವಿನ ಬಾಲ 15.07.2024

ಲೇಖಕರು : ಸ್ಟೋರಿವೀವರ್ರಿಗಾಗಿ ಸಾವಿತ್ರಿ ಸಿಂಗ್  ನಿರೂಪಕರು : ನಟೇಶ್ ಕುಮಾರ್ ಆರ್.ಜಿ ಸಂಪಾದಕರು : ನಟೇಶ್ ಕುಮಾರ್ ಆರ್.ಜಿ ತುಂಟ ಅಳಿಲಿಗೆ ತನ್ನ ಬಾಲ ಇಷ್ಟವಾಗುವುದಿಲ್ಲ. ಹಾಗಾದರೆ, ಇತರರ ಬಾಲ ಅಂಟಿಸಿಕೊಂಡರೆ ಸಮಸ್ಯೆ ಬಗೆಹರಿಯುವುದೆ? ಈ ತುಂಟ ಚುಲುಬುಲುವಿನ ಮುದ್ದಾದ ಕಥೆಯನ್ನು ಓದಿರಿ. ಕಥೆಯ ಮೂಲಕ ಮಕ್ಕಳಿಗೆ ಹೊಸ ಪದಗಳು ಮತ್ತು ಸರಳ ವಾಕ್ಯ ರಚನೆ ಮಾಡುವುದನ್ನು ತಿಳಿಸಿಕೊಡಬಹುದಲ್ಲದೇ ಅತಿ ಆಸೆ ಗತಿ ಕೇಡು ಎಂಬ ನೀತಿಯ ಕುರಿತಾಗಿ ತಿಳಿಸಿಕೊಡಬಹುದು. ಕಥೆಗೆ ಸಂಬಂಧಿಸಿದಂತೆ ಕೆಲವ...

ಘಮ ಘಮ ಪಕೋಡ 15.07.2024

ಲೇಖಕರು : ಸ್ಟೋರಿವೀವರ್ರಿಗಾಗಿ ಮಾಲಾ ಕುಮಾರ್, ಮನಿಶಾ ಚೌಧರಿ  ನಿರೂಪಕರು : ಪ್ರದೀಪ್ ಸಂಪಾದಕರು : ಬಾಲಾಜಿ ಇಂಪಾದ ಕಜರಿ ಆಲಿಸುವುದರಿಂದ ಹಿಡಿದು, ಪುಟಾಣಿ ಜಲಪಾತಗಳನ್ನು ವೀಕ್ಷಿಸುವವರೆಗೆ ಹಾಗೂ ಮಣ್ಣಿನ ಸುವಾಸನೆಯಿಂದ ಹಿಡಿದು, ಅಮ್ಮನ ಪಕೋಡದ ಪರಿಮಳದವರೆಗೆ, ಮಳೆಗಾಲದ ಪ್ರತಿಯೊಂದು ಸಣ್ಣ ಪುಟ್ಟ ಸಂಗತಿಗಳನ್ನು ಕೂಡ ಮೀನು ಪ್ರೀತಿಸುತ್ತಾಳೆ. ಈ ಕಥೆಯ ಮೂಲಕ ಮಕ್ಕಳಿಗೆ ಮಳೆಗಾಲದ ಗುಣಲಕ್ಷಣಗಳು, ಮಳೆನೀರು ಶೇಖರಣೆ ಕುರಿತು ತಿಳಿಸಿಕೊಡಬಹುದಲ್ಲದೇ ಮಕ್ಕಳಿಗೆ ಅನುಭವ ಹಂಚಿಕೊಳ್ಳಲು ತಿಳಿಸ...

ಗುಬ್ಬಿ ಮತ್ತು ಹಣ್ಣು 15.07.2024

ಲೇಖಕರು : ಸ್ಟೋರಿವೀವರ್ರಿಗಾಗಿ ವೆಂಕಟರಮಣ ಗೌಡ ನಿರೂಪಕರು : ಬಸವರಾಜು ಟಿ.ಡಿ ಸಂಪಾದಕರು : ಸಿದ್ದರಾಮೇಶ್ವರ ಮುಳ್ಳುಹಿಂಡಿನಲ್ಲಿ ಬಿದ್ದ ಹಣ್ಣು ಎತ್ತಿಕೊಳ್ಳಲು ಏನೇನೋ ಸಾಹಸ ಮಾಡಿದ ಗುಬ್ಬಿಗೆ ಕೊನೆಯಲ್ಲಿ ಏನಾಯಿತು? “ಗುಬ್ಬಿ ಮತ್ತು ಹಣ್ಣು” ಪ್ರಕೃತಿ ನ್ಯಾಯದ ನಿಯಮ ಬಿಚ್ಚಿಡುವ ಕಥೆ. ಈ ಕಥೆಯ ಮೂಲಕ ಮಕ್ಕಳಿಗೆ ವಾಕ್ಯಗಳನ್ನು ಸಂಯೋಜಿಸಿ ಕಥೆಯನ್ನು ರಚಿಸುವ ಕೌಶಲ್ಯವನ್ನು ತಿಳಿಸಿಕೊಡಬಹುದು. ಇಟ್ಟ ಗುರಿಯನ್ನು ಮೆಟ್ಟಿ ನಿಲ್ಲುವವರೆಗೂ ನಿಲ್ಲಬಾರದೆಂಬ ನೀತಿಯನ್ನ ಹಾಗೂ ನಮ್ಮ ಕಾರ್ಯಕ್ಕಾಗಿ ಇನ...

ಕೆಂಪು ರೈನ್ ಕೋಟ್ 15.07.2024

ಲೇಖಕರು : ಸ್ಟೋರಿವೀವರ್ರಿಗಾಗಿ ಕಿರಣ್ ಕಸ್ತೂರಿಯಾ ನಿರೂಪಕರು : ಮಂಗಳ ಗೌರಿ ಸಂಪಾದಕರು : ದಿನೇಶ್ ಎಲ್ ಮನುಗೆ ಅಪ್ಪ, ಅಮ್ಮ ಮಳೆಗಾಲದ ಹೊಸ ಮೇಲಂಗಿ ಕೊಡಿಸಿದ್ದಾರೆ. ಅದನ್ನು ಹಾಕಿಕೊಳಲು ಮನುಗೆ ಆತುರವೊ ಆತುರ. ಆದರೆ ಮಳೆ ಬರದೆ ಸತಾಯಿಸುತ್ತಿದೆ. ಅವನೀಗ ಮಳೆಗಾಗಿ ಕಾದು ಕುಳಿತಿದ್ದಾನೆ. ಮಕ್ಕಳಿಗೆ ವಿವಿಧ ಕಾಲಮಾನಗಳು ಹಾಗೂ ಅದರ ಲಕ್ಷಣಗಳ ಕುರಿತು ತಿಳಿಸಬಹುದಲ್ಲದೇ ಕಾಲಮಾನಕ್ಕೆ ತಕ್ಕಂತೆ ಅನುಸರಿಸಬೇಕಾದ ಆರೋಗ್ಯ ಕ್ರಮಗಳ ಬಗ್ಗೆ ತಿಳಿಸಿಕೊಡುವುದು. ಕಥೆಗೆ ಸಂಬಂಧಿಸಿದಂತೆ ಕೆಲವು ತರಗತಿ ಚಟು...

ಕಸದ ರಾಶಿ 15.07.2024

ಲೇಖಕರು : ಸ್ಟೋರಿವೀವರ್ರಿಗಾಗಿ ಕರಣ್ಜೀತ್ ಕೌರ್   ನಿರೂಪಕರು : ದಿನೇಶ್ ಮತ್ತು ರೇಷ್ಮ ಸಂಪಾದಕರು : ದಿನೇಶ್ ಎಲ್ ಕಸದ ರಾಶಿಯ ಮೋಡ ಚೀಕುವಿನ ತಲೆಯ ಮೇಲೆ ತೇಲುತ್ತಿದೆ. ಇದು ಅವಳನ್ನು ಜಗತ್ತಿನ ಅತಿ ದುಃಖಿತ ಹುಡುಗಿಯನ್ನಾಗಿ ಮಾಡಿದೆ. ಆ ಕಸದ ರಾಶಿ ಚೀಕುವಿನ ತಲೆ ಮೇಲೆ ಏಕೆ ತೇಲುತ್ತಿದೆ ಅದರಿಂದ ಚೀಕು ಹೇಗೆ ಮುಕ್ತಗೊಂಡಳು ಎಂಬುದನ್ನ ತಿಳಿಯಿರಿ. ಮಕ್ಕಳಿಗೆ ಸ್ವಚ್ಛತೆ ಹಾಗೂ ಆರೋಗ್ಯದ ಬಗ್ಗೆ ಅರಿವು ಮೂಡಿಸಿ ತಮ್ಮ ಸುತ್ತಲೂ ಸದಾ ಸ್ವಚ್ಛತೆಯನ್ನು ಕಾಪಾಡಿಕೊಂಡು ಹೋಗುವಂತೆ ಪ್ರೇರೇಪಿಸಬ...

ಒಂದು ಮೂರು ಐದು ಎಣಿಸು ಜೀರುಂಡೆ 15.07.2024

ಲೇಖಕರು : ಸ್ಟೋರಿವೀವರ್ರಿಗಾಗಿ ಕುಜಾಲಿ ಮಣಿಕಾವೆಲ್ ನಿರೂಪಕರು : ಪ್ರಸಾದ್ ಕೆ.ವಿ ಸಂಪಾದಕರು : ವೀರಭದ್ರಯ್ಯ ಎಂಬಿ ಒಂದು ಜೀರುಂಡೆ ಇತ್ತು. ಅದಕ್ಕೆ ಎಣಿಸುವುದು ಎಂದರೆ ಬಹಳ ಇಷ್ಟ. ಅದಕ್ಕೆ ಸಮಸಂಖ್ಯೆ ಬೆಸಸಂಖ್ಯೆಗಳನ್ನು ಗುರುತಿಸುವುದು ಎಂದರೆ ಬಹಳ ಖುಷಿ. ಒಂದು ದಿನ ಜೀರುಂಡೆ ಬೆನ್ನ ಮೇಲೆ ಅಂಗಾತ ಉರುಳಿಕೊಂಡು ಬಿಟ್ಟಿತು. ಎಷ್ಟು ಜನ ಗೆಳೆಯರು ಜೀರುಂಡೆಗೆ ಸಹಾಯ ಮಾಡಲು ಬಂದರು? ಸಮಸಂಖ್ಯೆಯ ಗೆಳೆಯರಾ ಅಥವಾ ಬೆಸಸಂಖ್ಯೆಯ ಗೆಳೆಯರಾ? ಮಕ್ಕಳಿಗೆ ಸರಿ ಸಂಖ್ಯೆಗಳು ಮತ್ತು ಬೆಸ ಸಂಖ್ಯೆಗಳ ನಡುವಿ...

ಇದನ್ನೆಲ್ಲ ತಿಂದವರು ಯಾರು 15.07.2024

ಲೇಖಕರು : ಸ್ಟೋರಿವೀವರ್ರಿಗಾಗಿ ಸೇಜಲ್ ಮೆಹ್ತ ನಿರೂಪಕರು : ಪ್ರದೀಪ್ ಸಂಪಾದಕರು :  ಕಾಡು ಇಷ್ಟು ಶುಚಿಯಾಗಿರುವುದು ಹೇಗೆ? ಕಾಡಲ್ಲಿ ಕಸವೇ ಕಾಣುವುದಿಲ್ಲ ಏಕೆ? ಈ ಕಥೆಯ ಮೂಲಕ ಮಕ್ಕಳಿಗೆ ವಿವಿಧ ಪ್ರಾಣಿಗಳ ಪರಿಚಯ, ಅವುಗಳ ಗುಣಲಕ್ಷಣ ಮತ್ತು ಆಹಾರ ಚಕ್ರದ ಕುರಿತು ತಿಳಿಸಿಕೊಡಬಹುದು. ಕಥೆಗೆ ಸಂಬಂಧಿಸಿದಂತೆ ಕೆಲವು ತರಗತಿಯ ಚಟುವಟಿಕೆಗಳು.  ಕಾಡಿನ ಪ್ರಾಣಿಗಳು ನಾಡಿನ ಪ್ರಾಣಿಗಳು ಹಾಗೂ ಅವುಗಳ ಆಹಾರವನ್ನು ಕುರಿತು ಗುಂಪಿನಲ್ಲಿ ಚರ್ಚಿಸುವುದು.  ಕಾಡು ಹಾಗೂ ಕಾಡು ಪ್ರಾಣಿಗಳ...

ಇಂದು ನಗುವಿರಲಿಲ್ಲ 15.07.2024

ಲೇಖಕರು : ಸ್ಟೋರಿವೀವರ್ರಿಗಾಗಿ ಚೆರ್ಲಿಲ್ ರಾವ್ ನಿರೂಪಕರು : ದಿನೇಶ್ ಎಲ್ ಸಂಪಾದಕರು : ದಿನೇಶ್ ಎಲ್ ಶಾಂತಿ ತುಂಬಾ ಚೂಟಿ. ಅವಳು ಸುಮ್ಮನೆ ಕುಳಿತದ್ದಾಗಲಿ, ಮಾತಾಡದೇ ಇದ್ದುದನ್ನಾಗಲೀ ಯಾರೂ ನೋಡಿರಲಿಲ್ಲ. ಆದರೆ ಒಂದು ದಿನ ಅವಳು ಇದ್ದಕ್ಕಿದ್ದಂತೆ ತನ್ನ ಸ್ನೇಹಿತರೊಂದಿಗೆ ಮಾತು ನಿಲ್ಲಿಸಿದ್ದಳು. ಶಾಂತಿಗೆ ಏನಾಗಿತ್ತು? ಮಕ್ಕಳಿಗೆ ತಮ್ಮ ಅನುಭವಗಳನ್ನು ಹಂಚಿಕೊಳ್ಳಲು ಅವಕಾಶ ಮಾಡಿಕೊಡುವ ಮೂಲಕ ಮಾತನಾಡುವ ಕೌಶಲ್ಯವನ್ನು ಮೂಡಿಸುವುದು, ಕಥೆಗೆ ಸಂಭಂದಿಸಿದಂತೆ ಕೆಲವು ತರಗತಿ ಚಟುವಟಿಕೆಗಳು. ಮಕ...

ಆಮೆ ಮತ್ತು ಮೊಲ 15.07.2024

ಲೇಖಕರು : ಸ್ಟೋರಿವೀವರ್ರಿಗಾಗಿ ವೆಂಕಟರಮಣ ಗೌಡ ನಿರೂಪಕರು : ಶಿವ ಕುಮಾರ್ ಸಂಪಾದಕರು : ಸೌಮ್ಯ ಕೆ.ಆರ್ ಮೊಲ ಮತ್ತು ಆಮೆ ನಡುವೆ ಓಟದ ಪಂದ್ಯದ ಹಳೆಯ ಕಥೆ ನೆನಪಿದೆಯಾ? ಇದು ಅಂತಹುದೇ ಪಂದ್ಯದ ಹೊಸ ಕಥೆ. ಪೈಪೋಟಿಯಲ್ಲ, ಸಹಯೋಗದ ಸ್ಪರ್ಧೆ ಏನಾಯಿತೆಂದು ಮೊಲ ಮತ್ತು ಆಮೆ ಕತೆ ಓದಿ ತಿಳಿಯಿರಿ. ಕಥೆಯ ಮೂಲಕ ಹೊಸ ಪದಗಳ ಪರಿಚಯ, ಸರಳ ವಾಕ್ಯಗಳ ರಚನೆ ಮತ್ತು ಪರಸ್ಪರ ಸಹಾಯ ಮಾಡಬೇಕೆಂಬ ನೀತಿಯನ್ನ ತಿಳಿಸಿಕೊಡಬಹುದು. ಕಥೆಗೆ ಸಂಬಂಧಿಸಿದಂತೆ ಕೆಲವು ತರಗತಿ ಚಟುವಟಿಕೆಗಳು. ಕಥೆಯನ್ನು ತಮ್ಮದೇ ಮಾತುಗಳಲ್ಲ...

ಅವನಿ ಮತ್ತು ಬಟಾಣಿ ಗಿಡ 15.07.2024

ಲೇಖಕರು : ಸ್ಟೋರಿವೀವರ್ರಿಗಾಗಿ ಶ್ರುತಿ ರಾವ್ ನಿರೂಪಕರು : ಬಸವರಾಜಪ್ಪ ಎನ್ ಸಂಪಾದಕರು : ಬಸವರಾಜಪ್ಪ ಎನ್ ಈ ಕೆಲಸ ಮಾಡಿದ್ದು ಯಾರು? ಅವನಿ ಮತ್ತು ಅವಳ ತಾಯಿಗೆ ಗೊತ್ತಿಲ್ಲ. ಬಟಾಣಿ ಗಿಡದ ಕಥೆಯನ್ನು ಓದಿದಾಗ ಈ ಕೆಲಸ ಮಾಡಿದ್ದು ಯಾರೆಂದು ನಿಮಗೆ ತಿಳಿಯುತ್ತದೆ. ಈ ಕಥೆಯ ಮೂಲಕ ಮಕ್ಕಳಿಗೆ ಕಾಳು ಗಿಡವಾಗುವ ಪ್ರಕ್ರಿಯೆ, ಗಿಡದ ಬೆಳವಣಿಗೆ ಹಾಗೂ ಅದರ ಬೆಳವಣಿಗೆಗೆ ಅವಶ್ಯಕವಿರುವ ಅಂಶಗಳನ್ನು ಮಕ್ಕಳಿಗೆ ತಿಳಿಸಿಕೊಡಬಹುದು. ಕಥೆಗೆ ಸಂಬಂಧಿಸಿದಂತೆ ಕೆಲವು ತರಗತಿ ಚಟುವಟಿಕೆಗಳು. ಮಕ್ಕಳಿಗೆ ಕಥೆಯನ್...

ಅರಸರಾಯನ ಹಲ್ಲು ನೋವು 15.07.2024

ಲೇಖಕರು : ಸ್ಟೋರಿವೀವರ್ರಿಗಾಗಿ ಸಂಜೀವ್ ಜೈಸ್ವಾಲ್ ನಿರೂಪಕರು : ಬಸವರಾಜು ಟಿ.ಡಿ ಸಂಪಾದಕರು : ಮನಿಷ್ ಕಾಡಿಗೆ ರಾಜನೇ ಆದರೂ ಸಿಂಹಕ್ಕೆ ಹಲ್ಲು ಉಜ್ಜುವುದು ತಪ್ಪಲಿಲ್ಲ. ಕಥೆ ಓದುವ ಮೂಲಕ ಸಿಂಹಕ್ಕೆ ಹಲ್ಲು ಉಜ್ಜುವುದನ್ನ ಹೇಳಿ ಕೊಟ್ಟವರು ಯಾರು ಹಾಗು ಏಕೆ ಎಂಬುದನ್ನ ತಿಳಿದುಕೊಳ್ಳಿ.. ಈ ಕಥೆಯ ಮೂಲಕ ಮಕ್ಕಳಲ್ಲಿ ಉತ್ತಮ ದೈನಂದಿನ ಅಭ್ಯಾಸಗಳನ್ನು ಮೂಡಿಸಬಹುದಲ್ಲದೇ ಮಾಂಸಾಹಾರಿ ಪ್ರಾಣಿಗಳು ಹಾಗೂ ಶಾಖಾಹಾರಿ ಪ್ರಾಣಿಗಳ ಬಗ್ಗೆ ತಿಳಿಸಬಹುದು. ಕಥೆಗೆ ಸಂಬಂಧಿಸಿದಂತೆ ಕೆಲವು ತರಗತಿಯ ಚಟುವಟಿಕೆಗಳು...

ಅಮ್ಮ ಬರೋದು ಯಾವಾಗ 15.07.2024

ಲೇಖಕರು : ಸ್ಟೋರಿವೀವರ್ರಿಗಾಗಿ ಪ್ರತಿಭಾ ಸ್ವಾಮಿನಾಥನ್ ನಿರೂಪಕರು : ಪ್ರಶಾಂತ್ ನಾಯ್ಕ್ ಸಂಪಾದಕರು : ಸೌಮ್ಯ ಎಸ್.ಹೆಚ್ ರೋಜಾಳ ಅಮ್ಮ ಬೆಳಗ್ಗೆಯೇ ಕೆಲಸಕ್ಕೆ ಹೋಗುತ್ತಾರೆ. ರಾತ್ರಿ ಮಲಗುವ ಮೊದಲೇ ಬರುತ್ತೇನೆ ಎಂದು ಮಾತು ಕೊಡುತ್ತಾರೆ. ಅಮ್ಮ ಇಲ್ಲದೇ ಇಡೀ ದಿನವನ್ನು ರೋಜಾ ಹೇಗೆ ಕಳೆಯುತ್ತಾಳೆ? ಈ ಕಥೆಯ ಮೂಲಕ ನೋಡೋಣ. ಈ ಕಥೆಯ ಮೂಲಕ ಮಕ್ಕಳಿಗೆ ಸಮಯ ಮತ್ತು ಗಡಿಯಾರದ ಬಗ್ಗೆ ಮಾಹಿತಿಯನ್ನು ನೀಡಬಹುದು. ವಿವಿಧ ಭಾವನೆಗಳ ಕುರಿತಾಗಿ ಮಕ್ಕಳಿಗೆ ಪರಿಚಯಿಸಬಹುದು. ಕಥೆಗೆ ಸಂಬಂಧಿಸಿದಂತೆ ಕೆಲವು ತರ...

ಅಕ್ಕ ತಮ್ಮನ ಅಂಕೆಗಳು 15.07.2024

ಲೇಖಕರು : ಸ್ಟೋರಿವೀವರ್ರಿಗಾಗಿ ರಾಧ ಮಾಂಧವ   ನಿರೂಪಕರು : ಮಧು ಹೆಚ್.ಸಿ & ರೇಷ್ಮ ಜಿ.ಎನ್ ಸಂಪಾದಕರು : ಸಿದ್ದರಾಮೇಶ್ವರ ಅಕ್ಕ,ತನ್ನ ತಮ್ಮ ರಾಮುವಿಗೆ ವಿಭಿನ್ನವಾಗಿ ಅಂಕಿಗಳನ್ನು ಕಲಿಸುತ್ತಾಳೆ. ಎಷ್ಟು ಚೆನ್ನಾಗಿ ಕಲಿಸಿತ್ತಾಳೆಂದು ಈ ಕಥೆಯಲ್ಲಿ ನೋಡಿ. ಕಥೆಯ ಮೂಲಕ ಮಕ್ಕಳಿಗೆ ನಮ್ಮ ಸುತ್ತ ಮುತ್ತಲು ಕಾಣಸಿಗುವ ಪರಿಸರದೊಂದಿಗೆ ಕಲಿಕಾ ವಿಷಯಗಳನ್ನು ಕಲಿತುಕೊಳ್ಳುವುದು ಹೇಗೆ ಎಂಬುದನ್ನು ತಿಳಿಸಿಕೊಡಬಹುದಲ್ಲದೇ ಸಾಮಾನ್ಯ ಅಂಕಿಗಳು, ಏಕವಚನ ಮತ್ತು ಬಹುವಚನಗಳ ಜೊತೆಗೆ ಹೊಸ ಪದಗಳನ್...

Słuchaj podcastu ಕಥೆ ಖಜಾನೆ - ಕನ್ನಡದ w Replaio

Radio i podcasty w jednej aplikacji - za darmo, bez zakładania konta. Zainstaluj już dziś i nie przegap premiery

Pobierz z Google Play

Replaio nie jest wydawcą podcastów; nazwy audycji, okładki i audio należą do ich autorów i są rozpowszechniane przez publiczne kanały RSS