Satish Hosanagara

SatisHFactionKannada Podcast from the US

Society KN ↓ Επεισόδια: 95

The NRI Kannada Podcast, recorded from New Jersey, USA, captures personal reflections, cherished memories, and everyday experiences—all shared in the rich vibrancy of Kannada. This podcast celebrates the culture and spirit of Kannadigas, fostering a sense of global connection and community.#NRI, #ಕನ್ನಡ ಪಾಡ್‌ಕ್ಯಾಸ್ಟ್, #The NRI Kannada Podcast from the USA.

Μην παραλείψεις να επισκεφτείς τη σελίδα του podcast και να στηρίξεις τον δημιουργό: open.spotify.com

Δημιουργός

Satish Hosanagara

Κατηγορία

Society

Ιστοσελίδα του podcast

open.spotify.com

Τελευταίο επεισόδιο

10 Σεπ 2026

Πού να ακούσεις;

Podcast στην εφαρμογή Replaio Radio Έρχεται σύντομα

Τα podcast έρχονται σύντομα στην εφαρμογή. Εγκατάστησέ την τώρα και δες πρώτος μια εντελώς νέα προσέγγιση στα podcast

Κατέβασέ το από το Google Play Δωρεάν εγκατάσταση Android σχεδόν 10 εκατ. λήψεις · βαθμολογία 4,8 iOS σύντομα

Επεισόδια

ನಮಗೆ ಕನ್ನಡ (ಏಕೆ) ಬೇಕು (edited) 10.09.2026

ನಮಗೆ ಕನ್ನಡ (ಏಕೆ) ಬೇಕು ಕರ್ನಾಟಕದಿಂದ ಬಹುದೂರ, ದೇಶ-ಭಾಷೆ-ವೇಷವನ್ನು ಬಿಟ್ಟು ಬಂದ ನಮಗೆ ಉತ್ತರ ಅಮೇರಿಕದಲ್ಲಿ ನಡೆಯುವ ಕನ್ನಡ ಕಲರವಗಳು ಬಹಳ ಅಪ್ಯಾಯಮಾನವಾಗಿರುತ್ತವೆ. ನಮಗೆ ಕನ್ನಡ ಬೇಕು, ಅದು ನಮ್ಮ ದೈನಂದಿನ ಅಗತ್ಯಗಳಲ್ಲೊಂದು. ನಾವು ಕನ್ನಡದ ಮೂಲಕ ಮಾತನಾಡುವುದಷ್ಟೇ ಅಲ್ಲ, ಅದರ ಮೂಲಕ ಉಸಿರಾಡುತ್ತೇವೆ ಕೂಡ!

ನಮಗೆ ಕನ್ನಡ (ಏಕೆ) ಬೇಕು 10.09.2026

ನಮಗೆ ಕನ್ನಡ (ಏಕೆ) ಬೇಕು ಕರ್ನಾಟಕದಿಂದ ಬಹುದೂರ, ದೇಶ-ಭಾಷೆ-ವೇಷವನ್ನು ಬಿಟ್ಟು ಬಂದ ನಮಗೆ ಉತ್ತರ ಅಮೇರಿಕದಲ್ಲಿ ನಡೆಯುವ ಕನ್ನಡ ಕಲರವಗಳು ಬಹಳ ಅಪ್ಯಾಯಮಾನವಾಗಿರುತ್ತವೆ. ನಮಗೆ ಕನ್ನಡ ಬೇಕು, ಅದು ನಮ್ಮ ದೈನಂದಿನ ಅಗತ್ಯಗಳಲ್ಲೊಂದು. ನಾವು ಕನ್ನಡದ ಮೂಲಕ ಮಾತನಾಡುವುದಷ್ಟೇ ಅಲ್ಲ, ಅದರ ಮೂಲಕ ಉಸಿರಾಡುತ್ತೇವೆ ಕೂಡ!

ಸ್ವದೇಶ - ವಿದೇಶ 22.04.2026

ಯಾವಾಗಲೂ ಒಂದು ದೇಶದಿಂದ ಮತ್ತೊಂದು ದೇಶಕ್ಕೆ ಬಂದು ಅಲ್ಲಿನ ಪೌರತ್ವವನ್ನು ಪಡೆದು ಅಲ್ಲಿಯವರಾಗಿ ಹೋಗೋದು, ಒಂದು ರೀತಿಯ ಕಹಿ-ಸಿಹಿ ಅನುಭವ ಅನ್ನಬಹುದು. ನಾವು ತೊಂಬತ್ತರ ದಶಕದ ಕೊನೆಯಲ್ಲಿ ಬಂದಂತಹ ಟೆಕ್ನಿಕಲ್ ಕೂಸುಗಳು. ಆಗ, ನಾವು ಬಂದ ಹೊಸದರಲ್ಲಿ, ಯಾವುದಾದರೂ ಕನ್ನಡ ಸಂಘದ ಸಮಾರಂಭಕ್ಕೆ ಹೋದಾಗಲೆಲ್ಲ, ಅಲ್ಲಿ ಮಾತಿಗೆ ಸಿಗುತ್ತಿದ್ದ ಹಿರಿಯರು, "ನಾವು ಬಂದು ೨೫ ವರ್ಷಗಳ ಮೇಲಾಯ್ತು..." ಎಂದು ಹೇಳಿದಾಗಲೆಲ್ಲ, ನಮಗೆಲ್ಲ ಆಶ್ಚರ್ಯ, ವಿಸ್ಮಯ, ಜೊತೆಗೆ ಒಂದು ರೀತಿಯ ಗೊಂದಲ ಕೂಡ ಆಗ...

ನಾನೇಕೆ ಓದುತ್ತೇನೆ? 01.04.2026

ಎಲ್ಲರೂ ನಾನೇಕೆ ಬರೆಯುತ್ತೇನೆ ಅನ್ನೋ ಸ್ವವಿಮರ್ಶೆಯಲ್ಲಿ ತೊಡಗಿರುವಾಗ, ನನಗೇಕೆ ಈ ರೀತಿಯ ಆಲೋಚನೆ ಬಂತು ಅಂತ ಯೋಚಿಸಿಕೊಳ್ಳುತ್ತಾ ಹೋದ ಹಾಗೆ, ಅನೇಕ ಗಹನವಾದ ವಿಷಯಗಳು ಹೊರಬಂದವು. ಅದನ್ನು, ನಿಮ್ಮೆಲ್ಲರ ಜೊತೆಯಲ್ಲಿ ಹಂಚಿಕೊಂಡರೆ ಹೇಗೆ ಎನ್ನಿಸಿದ್ದರಿಂದ ಈ ಲೇಖನವನ್ನು ಬರೆಯುತ್ತಿದ್ದೇನೆ. ಯಾವುದೇ ಒಂದು ಸಮಾಜದಲ್ಲಿ, ನೂರಕ್ಕೆ ಎಷ್ಟು ಜನ ಕ್ರಿಯೇಟಿವ್ ಆಗಿ ಯೋಚಿಸುತ್ತಾರೆ, ಎಷ್ಟು ಜನ ನಿಜವಾಗಿಯೂ ಬರೆಯುತ್ತಾರೆ, ಎಷ್ಟು ಜನ ಅವುಗಳನ್ನು ಓದುತ್ತಾರೆ ಎಂದುಕೊಂಡರೆ ನಿಮಗೆ ಆಶ್ಚರ್ಯವಾಗುತ್ತದೆ...

AI Agents are here! Now What?! 25.02.2026

AI Agents are here! Now What?! ಆರ್ಟಿಫ಼ಿಷಿಯಲ್ ಇನ್ಟೆಲಿಜೆನ್ಸ್ ಬಂದ್ರೆ, ನಮ್ ಕಥೆ ಏನು? ಈ ಕೃತಕ ಬುದ್ಧಿಮತ್ತೆಯ ಏಜೆಂಟುಗಳಿಂದ ಮುಂದೆ ನಮಗೆಲ್ಲ ಏನೇನು ಕಾದಿದೆ ಎಂದು ಊಹಿಸಿಕೊಳ್ಳುವ ಚಿತ್ರಣ.

ಪ್ರವೀಣ ಅವರ ಪರಿಕ್ರಮ ಮತ್ತು ಪರಾಕ್ರಮ! 28.01.2026

ಪ್ರವೀಣ ಅವರ ಪರಿಕ್ರಮ ಮತ್ತು ಪರಾಕ್ರಮ! ನನ್ನ ಸಹೋದ್ಯೋಗಿ, ಸ್ನೇಹಿತ ಮತ್ತು ಕನ್ನಡಿಗ ಪ್ರವೀಣ್ ವೆಂಕಟರಾಮು ಅವರ ಜೊತೆ ಒಂದು ಸಂಭಾಷಣೆ. ಅವರು ೨೦೨೫ರ ಬೇಸಿಗೆಯಲ್ಲಿ ಕೈಲಾಸ ಪರ್ವತ ಮತ್ತು ಮಾನಸ ಸರೋವರಗಳ ಪರಿಕ್ರಮವನ್ನು ಯಶಸ್ವಿಯಾಗಿ ಮುಗಿಸಿ ಬಂದವರು. ಈ ಎಪಿಸೋಡ್‌ನಲ್ಲಿ, ಅವರ ಪರಿಕ್ರಮದ ತಯಾರಿ, ಅವರು ತಮ್ಮ ಗುರಿ ಸಾಧನೆಯಲ್ಲಿ ಅನುಭವಿಸಿದ ರೋಚಕತೆಯನ್ನ ಈ ಮೂಲಕ ಕೇಳೋಣ. ಸ್ಯಾಟಿಸ್‌ಫ಼್ಯಾಕ್ಷನ್, ಸೀಜ಼ನ್ ೨, ಎಪಿಸೋಡ್ ೧

Season 1 Final Episode (88) 30.12.2025

Season 1 Final Episode (88) ಸ್ಯಾಟಿಸ್‌ಫ಼್ಯಾಕ್ಷನ್‌ನಿಂದ ನಾನು ಕಲಿತ ಪಾಠ! ಯಾವುದೋ ಒಂದು ಕಾಲದಲ್ಲಿ ಶುರು ಮಾಡಬೇಕಾಗಿದ್ದ ಪಾಡ್‌ಕ್ಯಾಸ್ಟ್ ಅನ್ನು ನಾನು ಶುರು ಮಾಡಿದ್ದು, 2025 ರ ಜನವರಿಯಲ್ಲಿ. ಈ ಪಾಡ್‌ಕ್ಯಾಸ್ಟ್ ಅಂದ್ರೆ ಅದು ಒಂದು ಥರದ expression ಅಷ್ಟೇನೆ. ನಮ್ಮ ನಮ್ಮ ಸಂತೋಷವನ್ನು ಅರಿಸಿ ಹೇಗೆ ನಾವು content ಹುಡುಕಿಕೊಂಡು ಹೋಗ್ತೀವಲ್ಲ. ಹಾಗೇ! ಇದೂ ಕೂಡ ನಮ್ಮ ನಮ್ಮ ದೈನಂದಿನ ಅಗತ್ಯಗಳಲ್ಲಿ ಒಂದು ಅನ್ನಬೇಕು ಅಷ್ಟೇ. Total episodes 88. Ordent fans (listeners) a...

Getting used to AI Agents! 17.12.2025

Getting used to AI Agents! ಇದ್ದಕ್ಕಿದ್ದ ಹಾಗೆ ನಮ್ಮ ಮನೆ ಮಾರ್ಗೇಜ್ ಕಂಪನಿಯವರಿಂದ ಒಂದು ಇ-ಮೇಲ್ ಬಂತು. ಅದರಲ್ಲಿ, ಈಗ ನೀವು home insurance ಕೊಡ್ತಾ ಇರೋದು ಬಹಳ ಹೆಚ್ಚಿದೆ. ನಾವು ಒಬ್ಬ ಪಾರ್ಟ್‌ನರ್ ಜೊತೆಗೆ ಸೇರಿ ಅದನ್ನ ಕಡಿಮೆ ಮಾಡಿಸ್ತಾ ಇದ್ದೇವೆ. ಇಲ್ಲಿ ಕ್ಲಿಕ್ ಮಾಡಿ ಅಂತ ಇತ್ತು. ಸ್ಪಾಮ್ ಅಲ್ಲ, ಫ಼ಿಶಿಂಗ್ ಅಲ್ಲ ಅಂತ ಕನ್‌ಫ಼ರ್ಮ್ ಮಾಡ್ಕೊಂಡು ನೋಡಿದ್ರೆ. ವೆರಿಫ಼ಿಕೇಶನ್‌ಗೆ ನಿಮ್ಮ ಫ಼ೋನ್ ನಂಬರ್ ಕೊಡಿ... ಅಂತ ಒಂದು ಗಾಳ ಇಟ್ಟಿದ್ದ್ರು. ಆಗ ನನಗೆ ಅನ್ನಿಸ್ತು, ಇದು ಎಲ್ಲ...

ಎಷ್ಟು ದುಡ್ಡು ಇದ್ರೆ ಒಳ್ಳೇದು? (86) 26.11.2025

ಎಷ್ಟು ದುಡ್ಡು ಇದ್ರೆ ಒಳ್ಳೇದು? ಈಗೆಲ್ಲ ಅಮೇರಿಕದಲ್ಲಿ ದೊಡ್ಡ ದೊಡ್ಡ ಕಂಪನಿಗಳು, ಕಾಸ್ಟ್ ಕಟ್ಟಿಂಗ್ ಅನ್ನೋ ಹೆಸರಿನಲ್ಲಿ ಸಾವಿರಾರು ಜನರನ್ನು ಮನೆಗೆ ಕಳಿಸೋದನ್ನ ನೋಡಿದ್ರೆ, ಅಮೇರಿಕದ ಎಂಪ್ಲಾಯ್‌ಮೆಂಟ್ ಸಿಚುವೇಶನ್ ಬದಲಾಗುತ್ತೋ ಇಲ್ಲವೋ ಅನ್ನೋ ಸಂಶಯ ಬರುತ್ತೆ. ನಮ್ಮ ಕಂಪನಿ ಒಂದರಲ್ಲೇ ಸುಮಾರು 13 ಸಾವಿರ ಜನರು ಒಂದೇ ಕಳೆದುಕೊಳ್ಳಬೇಕಾಗಿ ಬಂದಾಗ ಅವರನ್ನೆಲ್ಲ ನೆನೆದು ಒಂದು ಸರತಿ ಕರುಳು ಚುರುಕು ಅಂತು. ಮತ್ತೆ ಮರುಕ್ಷಣ, ಇದೆಲ್ಲ ಕ್ಯಾಪಿಟಲಿಸಮ್ಮಿನ ಲೀಲೆ. ಇಲ್ಲಿ ಯಾರೂ ಯಾವತ್ತೂ ಶಾಶ್ವ...

ಕೆಲಸ: ಕ್ಯಾಪಿಟಲಿಸ್ಟಿಕ್ ಪ್ರಪಂಚದ ಭೂತ 18.11.2025

ಕೆಲಸ ಎಂಬ ಕ್ಯಾಪಿಟಲಿಸ್ಟಿಕ್ ಪ್ರಪಂಚದ ಭೂತ ನಮ್ಮ ಮನೆ ಹತ್ರ ಇರೋ ಒಬ್ಬ ಕಾರ್ ಮೆಕ್ಯಾನಿಕ್ ಹತ್ರ ಮಾತಾಡ್ತಾ ಇದ್ದೆ. ಪರಿಚಯ ಮಾಡಿಕೊಳ್ಳುತ್ತಾ ನೀನು ಎಲ್ಲಿ ಕೆಲ್ಸ ಮಾಡ್ತೀಯಾ, ಹೇಗೆ ಅಂತ ಕೇಳಿದ. ಅದಕ್ಕೆ ನಾನು ಟೆಕ್ನಾಲಜಿಯಲ್ಲಿ ಒಂದು ದೊಡ್ಡ ಕಂಪನಿಯಲ್ಲಿ ಕೆಲ್ಸ ಮಾಡ್ತೀನಿ ಅಂತ ಅಂದ್ರೆ. ಅವನು, ಇತ್ತೀಚೆಗೆ ಮಾಸ್ ಲೇ ಆಫ಼್ ಆಗಿರೋ ನ್ಯೂಸ್ ಅನ್ನು ಕೋಟ್ ಮಾಡಿ, ಅದು ಹೇಗೆ ಕೆಲ್ಸ ಮಾಡ್ತೀರೋ? ಅಂತ ಆಶ್ಚರ್ಯ ವ್ಯಕ್ತ ಪಡಿಸಿದ. ನನಗೆ ಆಗಲೇ ಅನ್ನಿಸಿದ್ದು, ಹೌದು, ನಮ್ಮ ಕೆಲಸ ಇದೆ/ಇಲ್ಲ ಎನ್ನ...

ನಮ್ಮ (ನಮ್ಮ) ಭಾಷೆ ನಮ್ಮದು! (86) 08.11.2025

Global Language Landscape Total living languages : 7,164 (Ethnologue, 2025) Languages with writing systems : 3,661 — These are considered “full-fledged” for reading, writing, and speaking. Languages without writing systems : 719 — These are oral languages used only in speech. Uncertain writing status : 2,586 — These may be partially documented or used in limited literacy contexts. This diversity r...

ಭಯ ಮತ್ತು ಸೈಕಾಲಜಿಕಲ್ ಸೇಫ಼್ಟಿ (Innovation) 29.10.2025

ಭಯ ಮತ್ತು ಸೈಕಾಲಜಿಕಲ್ ಸೇಫ಼್ಟಿ ಕಳೆದ ತಿಂಗಳು (ಸೆಪ್ಟೆಂಬರ್ 19) ಪ್ರೆಸಿಡೆಂಟ್ ಟ್ರಂಪ್ H1B ವೀಸಾಕ್ಕೆ ಸಂಬಂಧಿಸಿದ ರಿಸ್ಟ್ರಿಕ್ಷನ್‌ಗಳನ್ನು ಅಳವಡಿಸಿದಾಗ, ಮೈನ್‌ಸ್ಟ್ರೀಮ್ ಅಮೇರಿಕದ ವೃತ್ತಪತ್ರಿಕೆಗಳಲ್ಲಿ ಈ ನಿಲುವಿಗೆ ಪೂರಕವಾಗಿ ಅನೇಕ ದನಿಗಳು ಎದ್ದಿದ್ದವು. ಹಾಗೇ ಜನರ ಬೆಂಬಲ ಕೂಡ ವ್ಯಕ್ತವಾಗಿತ್ತು. ಹೀಗೆ, ವಾಲ್‌ಸ್ಟ್ರೀಟ್ ಜರ್ನಲ್‌ನಲ್ಲಿ ಓದಿಕೊಂಡು ಬಂದ ಒಂದು ಲೇಖನಕ್ಕೆ ಉತ್ತರವೆಂಬಂತೆ ಒಂದಿಷ್ಟು ಜನರು ಕಾಮೆಂಟ್ ಹಾಕಿದ್ದರು. ಅದರಲ್ಲೊಬ್ಬರು, ಭಾರತದಂತಹ ದೇಶಗಳು ಅಷ್ಟೊಂದು ಇಂಜಿ...

ನಮ್ಮ ದೀಪಾವಳಿಯ ಆಚರಣೆ (84) 22.10.2025

ನಮ್ಮ ದೀಪಾವಳಿಯ ಆಚರಣೆ ಒಂದು ಕಾಲದಲ್ಲಿ ನರಕಚತುರ್ದಶಿಯ ದಿನ ಬೆಳಗ್ಗೆ ಬೇಗ ಎದ್ದು, ಚುಮು ಚುಮು ಚಳಿಯಲ್ಲೇ ಕಾಸಿದ ಎಣ್ಣೆಯ ಲೇಪನದ ನಂತರ ಅಭ್ಯಂಜನ ಸ್ನಾನ ಮಾಡಿ, ನಂತರ ಆಟೋಟಗಳಲ್ಲಿ ಮೊದಲಾಗುತ್ತಿದ್ದ ದಿನಗಳು ಈಗಂತೂ ಇಲ್ಲ. ಆಗೆಲ್ಲ ಚಳಿಗೆ ಬೈದುಕೊಂಡಿದ್ದರ ದೆಸೆಯಿಂದಲೋ ಏನೋ ಇಂದು ಚಳಿದೇಶದಲ್ಲಿ ಬಂದು ನೆಲೆಸುವಂತಾಗಿದೆ. ಎಂತಹ ಗಮ್ಮತ್ತು ಇರ್ತಾ ಇತ್ತು ಆಗೆಲ್ಲ? ದೀಪಾವಳಿ ದಿನಗಳಲ್ಲಿ ಪುಂಡಿ ಕೋಲಿನ ಆಟ ಆಡ್ತಿದ್ವಿ. ಬೂರೆ ಕದಿಯೋದಕ್ಕೆ ಹೋಗ್ತಿದ್ವಿ. ಗೂಪೂಜೆ ಮಾಡುವುದರ ಜೊತೆಗೆ ದನಬೆದರಿಸ...

ನಮ್ಮ ಮತ್ತು ಕನ್ನಡ ಸಿನಿಮಾ ನಂಟು 09.10.2025

ನಮ್ಮ ಮತ್ತು ಕನ್ನಡ ಸಿನಿಮಾ ನಂಟು ನಮ್ಮ ಮತ್ತು ನಮ್ಮ ಕನ್ನಡ ಸಿನಿಮಾಗಳ ಬಾಂಧವ್ಯ ಹಲವಾರು ದಶಕಗಳ ವಿಸ್ತಾರವುಳ್ಳದ್ದು. ನಾವು ಒಂದು ಸಿನಿಮಾ ಅಥವಾ ಸೀರಿಯಲ್ ನೋಡ್ದಾಗ, ನಮಗೆ ಗೊತ್ತೋ ಗೊತ್ತಿಲ್ಲದೆಯೋ ಆಯಾ ಸಿನಿಮಾಗಳ ಕಲಾವಿದರ ನಡುವೆ ಒಂದು ಅವಿನಾಭಾವ ಸಂಬಂಧ ಬೆಳೆದುಕೊಳ್ಳುತ್ತೆ. ಈ ಒಂದು ಸಂಬಂಧ ಬಹಳ ವಿಶೇಷವಾದದ್ದು. ಆ ಕಾರಣದಿಂದ ನಮ್ಮ ಕನ್ನಡ (ನೇಟಿವ್) ಸಿನಿಮಾಗಳು ನಮಗೆ ಬಹಳ ಆಪ್ತವಾಗುತ್ತವೆ. ಈ ಕೆಳಗಿನ ಯಾವೊಬ್ಬ ಕಲಾವಿದರನ್ನು ನೀವು ನೆನಪಿಸಿಕೊಂಡರೂ ಸಾಕು ನಿಮಗೆ ಅವರ ಸಿನಿಮಾಗಳು, ಅ...

H1B ವೀಸಾ: ಕಥೆ ಮತ್ತು ವ್ಯಥೆ (82) 04.10.2025

H1B ವೀಸಾ: ಕಥೆ ಮತ್ತು ವ್ಯಥೆ ಇತ್ತೀಚೆಗೆ ವೀಸಾ ಫ಼ೀ ಹೆಚ್ಚು ಮಾಡಿರೋ ವಿಷಯ: H1B ವೀಸಾ ಹೆಸರಿನಲ್ಲಿ ಬೋಟ್‌ಲೋಡ್‌ಗಟ್ಟಳೆ ಕ್ಯಾಂಡಿಡೇಟುಗಳನ್ನ ತಂದು ಇಲ್ಲಿ ದುಡ್ಡು ಮಾಡಿ ಮೆರೀತಾ ಇದ್ರಲ್ಲ ಅವರಿಾಗೆ ಬುದ್ಧಿ ಕಲಿಸೋ ಉಪಾಯನೋ? ಅಥವಾ ಇದರ ಹಿಂದೆ ಇನ್ನೇನಾದ್ರೂ ಕಾರಣ ಇದೆಯಾ? What do the mainstream Americans say about this? What does the Indian community say and react to this? Was this visa misused? How People Took Advantage: Legally and Otherwise...

ನಮ್ಮೊಳಗಿನ ಸೃಜನಶೀಲತೆ (Creativity) 19.09.2025

ನಮ್ಮೊಳಗಿನ ಸೃಜನಶೀಲತೆ (Creativity) ನಮ್ಮೊಳಗೆ ಹೇಗೆ ಒಂದೊಂದು creative idea ಗಳು ಹುಟ್ಟುತ್ವೆ? ಆ ಆಲೋಚನೆಗಳು ಹೇಗೆ ಹರಳು ಕಟ್ಟುತ್ವೆ? ಆ ಹರಳು ಮುಂದೆ ಹೇಗೆ ಬೆಳೆದು, ಒಂದು ಸ್ಫುಟವಾದ ರೂಪ ಪಡೆಯೋದು ಹೇಗೆ? ಒಂದು ಚಿಕ್ಕ ಐಡಿಯಾ ದೊಡ್ಡದಾಗಿ ಹೇಗೆ ಬೆಳೆಯೋದು? ಈ ಐಡಿಯಾಗಳಿಗೆ ಯಾವುದಾದರೂ catalysts (positive or negative) ಇವೆಯಾ? How does the creative mind filter through the idea? What lens is being used? Today's episode discusses the creative...

ಆಫ಼್ರಿಕಾದ ಬವಣೆ ಮತ್ತು ಬದಲಾವಣೆ (80) 06.09.2025

ಆಫ಼್ರಿಕಾದ ಬವಣೆ ಮತ್ತು ಬದಲಾವಣೆ ಒಂದಾನೊಂದು ಕಾಲದಲ್ಲಿ ಮಾನವತೆಯ ಮೂಲವಾಗಿ ಬಿಂಬಿತವಾಗಿದ್ದ ಆಫ಼್ರಿಕ ಎನ್ನೋ ಖಂಡ, ಇಂದು ಬಹಳ ಸಂಕಷ್ಟದಲ್ಲಿದೆ. ಸುಡಾನ್ ನಲ್ಲಿ ಆಗಸ್ಟ್ 31ರಂದು ಮಡ್‌ಸ್ಲೈಡ್ ಆದ ಕಾರಣದಿಂದ ಸುಮಾರು ಸಾವಿರ ಜನರು ಕಾಣೆಯಾದರು, ಆದರೆ ಅದು ಅಷ್ಟು ದೊಡ್ಡ ಸುದ್ದಿ ಮಾಡಲಿಲ್ಲ. ಆದರೆ, ಯುಕ್ರೇನ್‌ನಲ್ಲಿ ಹತ್ತು ಜನ ಸತ್ರೆ, ಅದು ಇಲ್ಲಿನ ಪತ್ರಿಕೆಗಳಲ್ಲಿ ದೊಡ್ಡ ಸುದ್ದಿ ಆಗುತ್ತೆ. ಹಾಗೇ, ಈ ವಾರದ ಅಫ಼ಘಾನಿಸ್ತಾನದ ಭೂಕಂಪದಲ್ಲಿ ಸಾವಿಗೀಡಾದ ನೂರಾರು ಜನರ ಬಗ್ಗೆ ಸುದ್ದಿ ಆಯ್ತು....

Artificial (Intelligence) Conversation 03.09.2025

Artificial (Intelligence) Conversation Please welcome Akash and Krupa - ಇವರಿಬ್ಬರೂ ಕನ್ನಡದಲ್ಲಿ ಮಾತನಾಡೋದನ್ನ ಕೇಳೋಣ! ಇವರಿಗೆ ಕೊಟ್ಟ ಸಲಹೆ, ಸೂಚನೆಗಳಿಗನುಸಾರವಾಗಿ ಹಾಗೂ ಅವರಿಗೆ ಕೊಟ್ಟ ರಿಸೋರ್ಸ್‌ಗಳನ್ನ ಅವಲಂಬಿಸಿ, ನಡೆಯೋ ಒಂದು ಚರ್ಚೆಯನ್ನ ಕೇಳಬಹುದು.

ಮಿಚ್ಚಾಮಿ ದುಃಖದಮ್ (78) 28.08.2025

ಮಿಚ್ಚಾಮಿ ದುಃಖದಮ್ ಈ ಒಂದು ಜೈನರ ಪರಂಪರೆಯ ಮಾತು, "ನನ್ನಿಂದ ಏನೇ ತಪ್ಪಾಗಿದ್ದರೂ ಕ್ಷಮಿಸಿ: ನಡೆ-ನುಡಿ, ಆಚಾರ-ವಿಚಾರ, ಮಾತು-ಕತೆ ಇವುಗಳನ್ನೆಲ್ಲ ಕೂಲಂಕಶವಾಗಿ ಪರಿಗಣಿಸಿ, ನನ್ನನ್ನು ಕ್ಷಮಿಸಿ!" ಎಷ್ಟು ಚೆನ್ನಾಗಿದೆ ಅಲ್ವಾ ಈ ಕಾನ್ಸೆಪ್ಟ್? The fact that so many traditions converge on forgiveness tells us something profound: humility is a universal language. It’s not weakness, it’s wisdom. It’s not erasure, it’s evolution. And i...

ಧರ್ಮ-ಅಧರ್ಮಗಳ ಹೋರಾಟ 24.08.2025

ಧರ್ಮ- ಅಧರ್ಮಗಳ ಹೋರಾಟ ಎಲ್ಲರೂ ಅಂದುಕೊಂಡಿರೋ ಹಾಗೆ ಇದು ಧರ್ಮದ ಜಯವಲ್ಲ... ನಿಜವಾಗಿಯೂ, ಸಾವಿರಾರು ವರ್ಷಗಳಿಂದ ಧರ್ಮವನ್ನು ನಂಬಿಕೊಂಡು ಬಂದ ನಾವುಗಳು, ನಮ್ಮನ್ನು ನಾವು ಕೇಳಿಕೊಳ್ಳಬೇಕಾದ ಪ್ರಶ್ನೆ ಮತ್ತು ಎಚ್ಚರಿಸಿಕೊಳ್ಳಬೇಕಾದ ಸಮಯ ಕೂಡ. ಇಲ್ಲಿ ಮೇಲ್ನೋಟಕ್ಕೆ ಒಂದು ಸಣ್ಣ ಪ್ರಮಾಣದ ಸಂಚು ಎಂದು ಗೋಚರಿಕೆಯಾದರೂ, ಇದರ ಅಂತರಾಳದಲ್ಲಿ ನಮ್ಮ ಎಲ್ಲರ ಗೊಂದಲ, ಒಗ್ಗಟ್ಟಿಲ್ಲದಿರುವಿಕೆ, ರಾಜಕೀಯ ಪ್ರೇರಿತ ಆಲೋಚನೆಗಳು ಎದ್ದು ಕಾಣುತ್ತವೆ. ಸತ್ತೋರು ಯಾರೋ? ಆದರೆ, ಸತ್ತವರ ಹೆಸರಿನಲ್ಲಿ ತಮ್ಮ ಬೇ...

ಕರುಣೆ ಇಲ್ಲದ Customer Service (76) 14.08.2025

ಕರುಣೆ ಇಲ್ಲದ Customer Service ಈ ಕ್ಯಾಪಿಟಲಿಸಮ್ಮಿನ ಅವಿಭಾಜ್ಯ ಅಂಗ - ಕಸ್ಟಮರ್ಸ್. ಅವರನ್ನ ಓಲೈಕೆ ಮಾಡೋದು: ಕಸ್ಟಮರ್ ಸರ್ವಿಸ್, ಅಥವಾ ಸಪೋರ್ಟ್. ಈಗಿನ ಕಾಲದ (ಕರುಣೆ ಇಲ್ಲದ) ಈ ಕಸ್ಟಮರ್ ಸರ್ವಿಸ್ ಯುಗದಲ್ಲಿ ನಮ್ಮ ಬೇಳೆ ಕಾಳುಗಳನ್ನು ಬೇಯಿಸಿಕೊಳ್ಳುವುದು ಹೇಗೆ? ಇದರಲ್ಲಿ ನಾನು ಶೇರ್ ಮಾಡಿರುವ ಒಂದು ರನ್ನಿಂಗ್ ಶೂ ಉದಾಹರಣೆಯಲ್ಲಿ, ನಾನು ಕಂಪ್ಲೇಟ್ ಮಾಡಿದ ಶೂ ಕಂಪನಿಯವರಿಗೆ, ಹಳೆಯ ಶೂ ಅನ್ನು ಕಳಿಸಿಕೊಡಿ, ಅದನ್ನು ನಾವು ಪರೀಕ್ಷಿಸುತ್ತೇವೆ ಅನ್ನೋ ವ್ಯವಧಾನವೂ ಇರಲಿಲ್ಲ. ನನ್ನ ಕಂಪ್...

ಪೌರತ್ವ (Citizenship) 12.08.2025

ಪೌರತ್ವ (Citizenship) What does it mean to “belong” — legally, emotionally, spiritually? Is citizenship a tool for freedom or a tether to obligation? Can one renounce a passport without renouncing a past? Are immigrants reshaping the meaning of nationality itself? ನಾವು ಭಾರತೀಯ ಮೂಲದ ವೃತ್ತಿ ಸಂಬಂಧಿ ವಲಸಿಗರು ಅಮೇರಿಕಕ್ಕೆ ಬಂದ ನಂತರ, ಇಲ್ಲಿನ ಪೌರತ್ವವನ್ನು ಪಡೆಯುವ ಬಗ್ಗೆ ಒಂದಿಷ್ಟು ಅನಿಸಿಕೆಗಳನ್ನ ಇಲ್ಲಿ ಹಂಚಿಕೊಂಡಿದ್ದೇನೆ....

ಅಮೇರಿಕದಲ್ಲಿ ನಮ್ಮ ಜೀವನೋಪಾಯ (ಹೊಟ್ಟೆ ಪಾಡು) 07.08.2025

ಅಮೇರಿಕದಲ್ಲಿ ನಮ್ಮ ಜೀವನೋಪಾಯ (ಹೊಟ್ಟೆ ಪಾಡು) ಅಮೇರಿಕದ ಈಸ್ಟ್ ಕೋಸ್ಟ್ ಪ್ರಾಡಕ್ಟ್ ಬೇಸ್ಡ್ ಕಂಪನಿ ಹಾಗೂ ಸಿಲಿಕಾನ್ ವ್ಯಾಲಿ ಕಂಪನಿಗಳಲ್ಲಿ ಕೆಲಸ ಮಾಡೋದರಲ್ಲಿ ಏನು ವ್ಯತ್ಯಾಸ? ಎಲ್ಲಿ ಕೆಲಸ ಮಾಡಿದರೆ ಒಳ್ಳೆಯದು? ಅದರಿಂದ ಆಗೋ ಕಷ್ಟ-ನಷ್ಟಗಳೇನು? What are some of the considerations, both short & long term?

AI ಆಟಾಟೋಪ 04.08.2025

AI ಆಟಾಟೋಪ Artificial Intelligence ನಮ್ಮನ್ನೆಲ್ಲ ಕುಣಿಸ್ತಾ ಇದೆ. ಇದರಿಂದ ಏನೇನು ಆಗಬಹುದು? ಯಾಕೆ ಹೀಗೆ ಆಗ್ತಾ ಇದೆ? ನಾವು ಇದರಿಂದ ಹೇಗೆ ಅನುಕೂಲ ಪಡ್ಕೋಬಹುದು ಅಥವಾ ಇದರ ಗೊಂದಲಗಳಿಂದ ಹೇಗೆ ಬಚಾವಾಗಬಹುದು ಅನ್ನೋ ಚರ್ಚೆ.

ನಾವೂ... ನಮ್ಮ ವೆಕೆಷನ್ನೂ...(72) 29.07.2025

ನಾವೂ... ನಮ್ಮ ವೆಕೆಷನ್ನೂ... ಒಂದೇ ಕಂಪನಿಯಲ್ಲಿ ಹಲವಾರು ವರ್ಷಗಳಿಂದ ಕುರ್ಚಿ ಗಟ್ಟಿ ಹಿಡಿದುಕೊಂಡು ಕುಳಿತುಕೊಂಡವರಿಗೆ ಒಂದು ಹೇಳಲಾಗದ ಮತ್ತು ಹಂಚಲಾಗದ ಅಳಲಿರುತ್ತದೆ, ಅದೇನೆಂದರೆ, ಅವರವರು ಗಳಿಸಿಕೊಂಡ ವೆಕೇಷನ್ ದಿನಗಳನ್ನ ಹೇಗೆ ಕಳೆಯೋದು ಎನ್ನುವುದು! ಒಂದಾನೊಂದು ಕಾಲದಲ್ಲಿ, ಕಂಪನಿಗೆ ಸೇರಿದ ಮೊದಲ ದಿನಗಳಲ್ಲಿ, ನಮಗೆಲ್ಲ ಕೇವಲ ಎರಡೇ ಎರಡು ವಾರಗಳ ಕಾಲ ರಜೆ ಇರೋದು. ಆಗೆಲ್ಲ ಭಾರತಕ್ಕೆ ಹೋಗಿ ಬರಬೇಕೆಂದರೆ, ಕಷ್ಟ ಪಟ್ಟು ವರ್ಷವಿಡೀ ಕೂಡಿಟ್ಟ ಮೂರು ವಾರಗಳ ರಜೆ ದಿನಗಳು ಯಾವ ಮೂಲೆಗೂ ಸಾಕ...

Άκου το podcast SatisHFactionKannada Podcast from the US στο Replaio

Ραδιόφωνο και podcast σε μία εφαρμογή - δωρεάν, χωρίς εγγραφή. Εγκατάστησέ την σήμερα και μη χάσεις την πρεμιέρα

Κατέβασέ το από το Google Play

Το Replaio δεν είναι εκδότης podcast - τα ονόματα των εκπομπών, τα εξώφυλλα και ο ήχος ανήκουν στους δημιουργούς τους και διανέμονται μέσω δημόσιων ροών RSS