Satish Hosanagara

SatisHFactionKannada Podcast from the US

Society KN ↓ Επεισόδια: 95

The NRI Kannada Podcast, recorded from New Jersey, USA, captures personal reflections, cherished memories, and everyday experiences—all shared in the rich vibrancy of Kannada. This podcast celebrates the culture and spirit of Kannadigas, fostering a sense of global connection and community.#NRI, #ಕನ್ನಡ ಪಾಡ್‌ಕ್ಯಾಸ್ಟ್, #The NRI Kannada Podcast from the USA.

Μην παραλείψεις να επισκεφτείς τη σελίδα του podcast και να στηρίξεις τον δημιουργό: open.spotify.com

Δημιουργός

Satish Hosanagara

Κατηγορία

Society

Ιστοσελίδα του podcast

open.spotify.com

Τελευταίο επεισόδιο

10 Σεπ 2026

Πού να ακούσεις;

Podcast στην εφαρμογή Replaio Radio Έρχεται σύντομα

Τα podcast έρχονται σύντομα στην εφαρμογή. Εγκατάστησέ την τώρα και δες πρώτος μια εντελώς νέα προσέγγιση στα podcast

Κατέβασέ το από το Google Play Δωρεάν εγκατάσταση Android σχεδόν 10 εκατ. λήψεις · βαθμολογία 4,8 iOS σύντομα

Επεισόδια

Negative thoughts? ಯಾಕ್ ಹೇಳಿ?! 24.07.2025

Negative thoughts? ಯಾಕ್ ಹೇಳಿ?! ಜೀವನ ಅಂದ್ರೆ ಕಷ್ಟಗಳು ಇರೋದು, ಬರೋದು ಸಹಜವೇ. ಅದಕ್ಕೋಸ್ಕರ negativity ಗೆ ಕಟ್ಟು ಬಿದ್ರೆ ಹೇಗೆ ಹೇಳಿ? ಸಾಲದು ಅನ್ನೋದು ಬೇಕು ಅನ್ನೋದು ತಾಯಿ ಇದ್ದ ಹಾಗೆ ಅಂತೆ. ಹಾಗೆಯೇ, ನಮಗೆ ಒದಗಿ ಬರೋ ಕಷ್ಟ-ಕಾರ್ಪಣ್ಯಗಳನ್ನ ನಾವು ಒಂದು ಸವಾಲಾಗಿ ಸ್ವೀಕರಿಸಿ ಅದರಿಂದ ಒಂದಿಷ್ಟು ಕಲಿತರೆ ಒಳ್ಳೆಯದೇ ಅಲ್ವಾ? ಈ ಪ್ರಪಂಚದಲ್ಲಿ ಬೇಕಾದಷ್ಟು ಕೆಟ್ಟ ನ್ಯೂಸ್‌ಗಳು ಬರ್ತಾನೇ ಇರುತ್ತೆ. ನಮ್ಮ ಸುತ್ತಮುತ್ತಲಿನಲ್ಲಿರೋ ಒಳ್ಳೆಯ ವಿಚಾರಗಳನ್ನ ನಾವು ನೋಡೋದಿಲ್ಲ. ಭೂಮಿ ತಾ...

Shall I Compare Thee To A Summer's Day? (70) 20.07.2025

Shall I Compare Thee To A Summer's Day? ಯಾಕೆ ಹೀಗೆ Shakespear ಬರೆದ ಅಂತ ಯೋಚನೆ ಮಾಡಿದ್ರೆ, ಆಗಿನ ಕಾಲದ ಲಂಡನ್ ನಲ್ಲಿ (ಮತ್ತೆ ಈಗೂ ಕೂಡಾ), ಬೇಸಿಗೆ ದಿನಗಳಿಗೆ ಒಂದು ರೀತಿಯ ವಿಶೇಷ ಸ್ಥಾನಮಾನ ಅಂತಾನೇ ಹೇಳ್ಬೇಕು. ಬೇಸಿಗೆ ಬಗ್ಗೆ ಒಂದು ಹರಟೆ (ಅಥವಾ ತಲೆ ಹರಟೆ) ಯನ್ನ ಇಲ್ಲಿ ಹಂಚಿಕೊಳ್ತಾ ಇದ್ದೀನಿ! *** Sonnet 18: Shall I compare thee to a summer’s day? By William Shakespeare Shall I compare thee to a summer’s day? Thou art more lovely an...

Fishing and the Gen-Z 18.07.2025

Fishing and the Gen-Z ನೀವೆಲ್ಲ ಅಂದುಕೊಂಡಿರಬಹುದು, ಈ ಗಾಳ ಹಾಕಿ ಮೀನು ಹಿಡಿಯೋ ಪ್ರಕ್ರಿಯೆಯಲ್ಲಿ ಅಂಥಾ ಏನು ವಿಶೇಷ ಅಂತ. ಒಂದು ಕಾಲದಲ್ಲಿ only old grumpy men used to go for fishing ಅಂತ ನಾನು ಅಂದುಕೊಂಡಿದ್ದೆ... ಆದರೆ, ಅದಕ್ಕೆ ತದ್ವಿರುದ್ಧವಾಗಿ, ಇವತ್ತಿನ ಈ social media rich generation ನಲ್ಲಿ ಹುಟ್ಟಿ ಬೆಳೆದಿರೋ ಮಕ್ಕಳಿಗೆ ಈ fishing a ಅನ್ನೋ ಹವ್ಯಾಸದ ಮೇಲೆ ಏಕೆ ಒಲವು ಬಂತು ಅಂದುಕೊಂಡ್ರೆ, ನಿಮಗೆ ಬಹಳಷ್ಟು ಆಶ್ಚರ್ಯ ಕಾದಿದೆ. What do you share with yo...

ಅನಿವಾಸಿಗಳ ಮುಖ್ಯವಾದ ತೊಳಲಾಟ...(68) 15.07.2025

ಅನಿವಾಸಿಗಳ ಮುಖ್ಯವಾದ ತೊಳಲಾಟ... ಅನಿವಾಸಿಗಳ ಮುಖ್ಯವಾದ ತೊಳಲಾಟ... ಅಂದ್ರೆ, ನಾವು ದೂರದ ಭಾರತದಲ್ಲಿನ ಸಾವು-ನೋವುಗಳಿಗೆ ಹೇಗೆ ಸ್ಪಂದಿಸುತ್ತೇವೆ ಅನ್ನೋದು. ಅಲ್ಲಿನವರ ಕಷ್ಟ-ಸುಖಗಳಿಗೆ ನಾವು (ಸರಿಯಾದ ಸಮಯಕ್ಕೆ) ಆಗದೇ ಇದ್ದಾಗ, ನಾವು ಇದ್ದರೆಷ್ಟು ಬಿಟ್ಟರೆಷ್ಟು ಎಂದು ಹುಟ್ಟುವ ಆಲೋಚನೆಗಳು ನಮ್ಮ ಅಸ್ಮಿತೆಯನ್ನೇ ಪ್ರಶ್ನಿಸಬಹುದು. ಇಲ್ಲಿದ್ದರೂ, ಅಲ್ಲಿನವರ ಕಷ್ಟ-ಸುಖಗಳಿಗೆ ನಾವು ಅದು ಹೇಗೆ ಆಗಿ ಬರಬಹುದು? ಎಲ್ಲಿಯವರೆಗೆ ಈ ಒಂದು ದ್ವಂದ್ವವನ್ನು ಮುಂದುವರೆಸಿಕೊಂಡು ಹೋಗಬಹುದು ಎನ್ನುವುದ...

Online Shopping: A Boon or A Bane? 09.07.2025

Online shopping: boon or bane? ಆನ್‌ಲೈನ್ ಶಾಪ್ಪಿಂಗ್ ಅನ್ನೋದು ವರವೋ ಶಾಪವೋ ಈ ಎಪಿಸೋಡ್‌ನಲ್ಲಿ ಆನ್‌ಲೈನ್ ಶಾಪ್ಪಿಂಗ್‌ನ ಸಾಧ್ಯತೆ-ಬಾಧ್ಯತೆಗಳ ಬಗ್ಗೆ ಚರ್ಚೆ, ಜೊತೆಗೆ ಈ ದೊಡ್ಡ ದೊಡ್ಡ ವೇರ್‌ಹೌಸ್‌ಗಳು ಒಂದು ಊರಿನಲ್ಲಿ ಬರೋದರಿಂದ ಜನರಿಗೆ ಯಾವ ರೀತಿಯಲ್ಲಿ ಅನುಕೂಲ-ಅನಾನುಕೂಲ ಆಗುತ್ತೆ ಅನ್ನೋದರ ಬಗ್ಗೆ ಒಂದಿಷ್ಟು ಕಾಳಜಿಯನ್ನ ಇಲ್ಲಿ ಹಂಚಿಕೊಳ್ತಾ ಇದ್ದೀನಿ.

Tiny annoyances! (67) 04.07.2025

Daily Life’s Tiny Frictions: These are the everyday micro-irritations that add up, slow us down, or just make us sigh. Bottles and jars Twisty lids that refuse to budge Shrink-wrapped blister packs with industrial-strength seals Tiny, squint-inducing labels Nutrition facts in unreadable fonts “Peel here” tabs that tear wrong Prescription and pill bottles Child-proof caps require forearm strength t...

ನ್ಯೂಸ್ ಪೇಪರುಗಳ ಪಾತ್ರ ಏನು? 03.07.2025

ನಮ್ಮ ಸಮಾಜದಲ್ಲಿ ನ್ಯೂಸ್ ಪೇಪರುಗಳ ಪಾತ್ರ ಏನು? ನಾವೆಲ್ಲ ಪ್ರತಿದಿನ ಒಂದಲ್ಲ ಒಂದು ರೀತಿಯಲ್ಲಿ ನ್ಯೂಸ್ ಅಂದ್ರೆ ಸುದ್ದಿಗಳನ್ನ consume ಮಾಡ್ತೀವಿ. ಅಲ್ವಾ? ಹೀಗೆ ಪ್ರತಿ ದಿನ ಸುದ್ದಿಗಳನ್ನ ಓದೋದರಿಂದ ಬಿಡೋದರಿಂದ, ನಿಮಗೆ ಮಹತ್ವದ ವಿಷಯಗಳು ತಿಳಿತಾವೋ ಇಲ್ವೋ, ಆದರೆ ಅದರಿಂದ ನಿಮ್ಮ ಬ್ಲಡ್ ಪ್ರೆಶರ್ ಹೆಚ್ಚೋದಂತೂ ಗ್ಯಾರಂಟಿ! ನಾನು ದಿನಪ್ರಂತಿ ಓದೋ ನ್ಯೂಸ್ ಪೇಪರುಗಳಲ್ಲಿ, ನಮ್ಮ ನೆಚ್ಚಿನ ಪ್ರಜಾವಾಣಿ ಜೊತೆಗೆ, ವಾಲ್ ಸ್ಟ್ರೀಟ್ ಜರ್ನಲ್, ಇವರೆಡನ್ನ ಹೆಚ್ಚೂ ಕಡಿಮೆ ರೆಗ್ಯುಲರ್ ಆಗಿ ಓದಿದ...

ನಾವು ಕನ್ನಡಿಗರು ಇರೋದೇ ಹೀಗೆ... (65) 01.07.2025

ನಾವು ಕನ್ನಡಿಗರು ಇರೋದೇ ಹೀಗೆ... ಹೀಗಂತ ಅನ್ನಿಸಿದ್ದು ಇತ್ತೀಚೆಗೆ, ನಮ್ಮ ಆಫ಼ೀಸಿನಲ್ಲಿ ಒಂದಿಷ್ಟು ಸಹೋದ್ಯೋಗಿಗಳ ಚಲನವಲನಗಳನ್ನ ಬಹಳ ಹತ್ತಿರದಿಂದ ಗಮನಿಸಿಕೊಂಡಾಗ. ಒಂದು ದಿನ ಆಫ಼ೀಸಿನಲ್ಲಿ, ನಾನು ಮತ್ತೊಬ್ಬ colleage (ದಕ್ಷಿಣ ಭಾರತೀಯ) ಇಬ್ಬರೂ ಇಂಗ್ಲೀಷಿನಲ್ಲಿ ಆಫ಼ೀಸಿಗೆ ಸಂಬಂಧಿಸಿರದ ವಿಷಯಗಳನ್ನ ಮಾತನಾಡಿಕೊಂಡಿದ್ದೆವು. ಈಗಂತೂ ಬೇಕಾದಷ್ಟು ವಿಷಯಗಳಿವೆ ಮಾತನಾಡಲು. ಆಗ ನಮ್ಮ ನಡುವೆ ಮತ್ತೊಬ್ಬ ದಕ್ಷಿಣ ಭಾರತೀಯನ ಆಗಮನವಾಯಿತು. ಒಂದೆರಡು ಕುಶಲೋಪರಿಗಳ ತರುವಾಯ, ಅವರಿಬ್ಬರೂ, ನಾನಿರುವ...

Leading Change (How to handle change?) 27.06.2025

How do you handle change? ಈ ಬದಲಾವಣೆ ಅನ್ನೋದು ಬಹಳ ಸ್ಪೆಷಲ್ ಅಂತ ಅನ್ನಿಸಿದ್ದು, ಇತ್ತೀಚೆಗೆ ಒಂದು ರಿಪೋರ್ಟ್ ಓದಿದ ಮೇಲೆ. Forbes: It’s one of the top four traits for senior executives. Data from over one million respondents shows that 32 percent of top-management leaders rank “leading change” among their four most critical competencies (out of a list of 19), compared with just 14 percent of front-line superviso...

Good for you... (63) 23.06.2025

Good for you... ಆಮೇರಿಕನ್ ಇಂಗ್ಲೀಷ್‌ನಲ್ಲಿ "Good for you", ಅನ್ನೋ phrase ಇದೆ. ನಾನು Good for you, Good for him, ಎಂದು ಬಳಕೆಯಲ್ಲಿ ಕೇಳಿದಾಗಲೆಲ್ಲ ಅದರ ಬಗ್ಗೆ ಬಹಳ ಸೋಜಿಗವಾಗುತ್ತೆ ಮತ್ತು ಸಂತೋಷವೂ ಆಗುತ್ತೆ. ನಾವೆಲ್ಲ ಜೀವನ ಪರ್ಯಂತ ಒಂದನ್ನೊಂದು ಕಂಪೇರ್ ಮಾಡಿಕೊಂಡೇ ಬದುಕೋ ಜಾಯಮಾನದವರು ಅಂತ ಹೇಳಿದ್ರೆ ತಪ್ಪೇನೂ ಇಲ್ಲ. ಭಾರತದಲ್ಲಿ ಮಧ್ಯಮ ವರ್ಗದ ಕುಟುಂಬದಲ್ಲಿ ಆ ಕಾಲದಲ್ಲಿ ಹುಟ್ಟಿ ಬಂದವರೆದ್ದೆಲ್ಲ ಒಂದೇ ಪರಿಸ್ಥಿತಿ. ಅವರು ಮಕ್ಕಳು ಹೀಗಿದ್ದಾರೆ, ಅವರ ಮನ...

ಒಂದು ಬಿಂದುವಿನಿಂದ ಸಿಂಧುವಿನೆಡೆಗೆ... 20.06.2025

ಒಂದು ಬಿಂದುವಿನಿಂದ ಸಿಂಧುವಿನೆಡೆಗೆ... ಬಿಂದು ಎಂದರೆ, ಹನಿ... ಅದೇ ಸಣ್ಣದು, ಗಾತ್ರದಲ್ಲಿ ಚಿಕ್ಕದಾದದ್ದು, ಸೂಕ್ಷ್ಮವಾದದ್ದು. ಆಕಾರದಲ್ಲಿ ಚಿಕ್ಕದಾಗಿದ್ದರೂ ದೊಡ್ಡ ಆಶೋತ್ತರಗಳನ್ನು ಹೊತ್ತಿಕೊಂಡಿರುವಂಥದು! ಈ ಅರಿವು ಮೂಡಿದ್ದು ಇತ್ತೀಚೆಗೆ, ನಾನು ಸಮುದ್ರದ ತಟದಲ್ಲಿ ನಿರಂತರವಾಗಿ ಕಾಲಿಗೆ ಬಂದು ರಾಚುತ್ತಿದ್ದ ಅಲೆಗಳ ಮಡಿಲಿನಿಂದ, ಬೊಗಸೆಯಲ್ಲಿ ನೀರನ್ನು ಮೊಗೆದು, ಸೂರ್ಯನಿಗಭಿಮುಖವಾಗಿ ವಿಸರ್ಜಿಸುತ್ತಿರುವಾಗ, ಕೊನೆಯಲ್ಲಿ ಉಳಿದ ಹನಿಗಳು ತಮ್ಮೊಳಗಿನ ಹೊಸದೊಂದು ಪ್ರಪಂಚವನ್ನೇ ತೋಡಿಕೊಂಡವ...

ಯಾರ್ ಒದ್ತಾರ್ ಬಿಡಿ?! (61) 16.06.2025

ಯಾರ್ ಒದ್ತಾರ್ ಬಿಡಿ?! ನಮ್ಮ ಸ್ನೇಹಿತರ ಜೊತೆ ಮಾತಾಡ್ತಾ ಇರಬೇಕಾದ್ರೆ ಈ ಮಾತು ಅವಾಗಾವಾಗ ಬರ್ತಾ ಇರತ್ತೆ: "ಬರೆದಿದ್ದನ್ನಲ್ಲ ಓದೋರು ಯಾರು?" ಅಂತ. ಈಗಿನ ಸೂಪರ್ ಹೈವೆಯಲ್ಲಿ ಓಡೋ ಸೋಶಿಯಲ್ ಮೀಡಿಯಾ ಚಾನೆಲ್ಲುಗಳು ಕೊಡೋ input ಗಳ ಮುಂದೆ, ಬರಹದಲ್ಲಿ ಬರೆದಿದ್ದು, ಅದೂ ಆರ್ಟಿಕಲ್ ಅಥವಾ ಪುಸ್ತಕದ ರೂಪದಲ್ಲಿ ಸಿಗೋದಾದ್ರೆ, ಅದನ್ನ consume ಮಾಡೋರು ಯಾರು? ಜನಗಳ consumption ನಲ್ಲಿ ಅದೇನೇನು ಬದಲಾವಣೆಗಳಾಗಿವೆ ಅನ್ನೋದನ್ನ ನೋಡ್ತಾ ಹೋದ್ರೆ ಅನೇಕ ರೋಚಕತೆಗಳು ಕಾಣುತ್ವೆ. ಇತ್ತೀ...

ಕೊನೆಗೂ RCB ಗೆಲ್ತಂತೆ?! 12.06.2025

ಕೊನೆಗೂ RCB ಗೆಲ್ತಂತೆ?! ನನ್ನ ಸ್ನೇಹಿತ ಸುಬ್ಬು ಜೊತೆ, RCB ಗೆದ್ದ ಸಂಭ್ರಮದ ಬಗ್ಗೆ ಮಾತಾಡೋಣ ಅಂತ ಫ಼ೋನ್ ಮಾಡಿದ್ರೆ, ಅವನ ರಿಯಾಕ್ಷನ್ ನೋಡಿ ಆಶ್ಚರ್ಯ ಆಯ್ತು! 18 ವರ್ಷಗಳ ನಂತರ ತಂಡ ಗೆದ್ದಿದ್ದನ್ನ ನೋಡಿ ಸಂಭ್ರಮ ಪಡ್ತಾನೆ ಅಂತ ಅಂದ್ರೆ, ಈ ಕೆಳಗಿನ ಪ್ರಶ್ನೆಗಳನ್ನ ಕೇಳ್ತಾನೆ ನೋಡಿ: 1) Private team ಅವರವರ ದುಡ್ಡು ಹಾಕಿ ಸೆಲೆಬ್ರೇಟ್ ಮಾಡೋದು ಬಿಟ್ಟು ಕರ್ನಾಟಕದ ಜನರ ದುಡ್ಡು ಬಳಸೋದು ಯಾಕೆ? 2) ಇವರ ಸಂಭ್ರಮಾಚರಣೆ ಸೂತಕ ಆಯ್ತಲ್ಲ, ಇದರಿಂದ ಕರ್ನಾಟಕಕ್ಕೆ ಕೆಟ್ಟ ಹೆಸರು ಬಂತು, ಅದಕ...

Copy & Paste: ಒಂದು ದಿನದ ಮಟ್ಟಿಗೆ ಇಲ್ಲದಿದ್ರೆ ಹೇಗೆ? (59) 11.06.2025

Copy & Paste functionality ನ ಒಂದು ದಿನದ ಮಟ್ಟಿಗೆ ತೆಗದ್ರೆ ಹೇಗೆ? What happens if the Copy & Paste functionality is removed in the world for just one day! One of my supervisors used to say, "Copy shamelessly!". "Only 2% of the content created in the world is real, everything is else copied & pasted in some way shape or form". ನಾವು ದಿನಾ ಕಾಪಿ-ಪೇಸ್ಟ್ ಪ್ರಕ್ರಿಯೆ ಎಷ್ಟು ಜೋರಾಗಿ...

Boston Train ಪ್ರಸಂಗ (ಯಾರದ್ದೂ ತಪ್ಪಲ್ಲ ಬಿಡಿ...) 06.06.2025

ಯಾರದ್ದೂ ತಪ್ಪಲ್ಲ ಬಿಡಿ... ಇದು ಯಾರದ್ದೂ ತಪ್ಪಲ್ಲ ಬಿಡಿ, ಅಂತ ಅನ್ನಿಸಿದ್ದು ನಿನ್ನೆ. ಇದ್ದಕ್ಕಿದ್ದ ಹಾಗೆ ನಾನು ಬಾಸ್ಟನ್ ಇಂದ ನ್ಯೂ ಜೆರ್ಸಿ ಕಡೆಗೆ ಬರೋ Amtrak ಟ್ರೈನ್ ಕಂಡಕ್ಟರ್ ಒಂದು annoucement ಮಾಡಿದ. "ನಾವು New Heaven, Connecticut ಬಿಟ್ಟು ಮುಂದೆ ಹೋಗೋ ಹಾಗಿಲ್ಲ. ಮಾರ್ಗದ ಮಧ್ಯೆ ಒಂದು ಕಡೆ ಪವರ್ ಲೈನ್ ತುಂಡಾಗಿ ಬಿದ್ದಿದೆ (10ಕೆ ವೋಲ್ಟ್), ಅದು ರಿಪೇರಿ ಆಗುವ ವರೆಗೂ ಎಲ್ಲ ಟ್ರೇನುಗಳೂ ಇಲ್ಲಿಯೇ ನಿಲ್ಲುತ್ತವೆ, ಪ್ರಯಾಣಿಕರು ತಮ್ಮ ತಮ್ಮ ಅನುಕೂಲವನ್ನು ನೋಡಿಕೊಳ್ಳಬೇ...

ಕನ್ನಡ ಭಾಷೆ ಎಲ್ಲಿಂದ ಹುಟ್ಟಿತು (57) 30.05.2025

ಕನ್ನಡ ಭಾಷೆ ಎಲ್ಲಿಂದ ಹುಟ್ಟಿತು ಕನ್ನಡ ಭಾಷೆ ಎಲ್ಲಿಂದ ಹುಟ್ಟಿತು, ಅದರ ಅಪ್ಪ ಯಾರು, ಅಮ್ಮ ಯಾರು ಅಂತ ತಿಳಿಯೋಣ, ಇನ್ನೇನು ಆಗ್ತಾ ಇದೆ ಕರ್ನಾಟಕದಲ್ಲಿ ನೋಡೋಣ ಅಂತ ನನ್ನ ಖಾಸಾ ದೋಸ್ತ, ಸುಬ್ಬನಿಗೆ ಫ಼ೋನ್ ಮಾಡ್ದೆ. ಆ ಕಡೆಯಿಂದ, "ಹಲೋ, ಸಾವಕಾರ್ರೆ, ಆರಾಮೇನ್ರಿ?" ಅಂತ ಉತ್ತರ ಬಂತೋ... "ಏನೋ ಸುಬ್ಬು, ಪಕ್ಕಾ ಮಲೆನಾಡಿನ ವ್ಯಕ್ತಿ ನೀನು, ಇವತ್ತೇನು, ಬಯಲ್ ಸೀಮೆ ಭಾಷೆ ಮಾತಾಡ್ತಾ ಇದೀಯಲ್ಲ, ಏನ್ ಕತೆ?" ಎಂದಾಗ, ಅವನು, "ಹಂಗೇನಿಲ್ರಿ, ಇಲ್ಲೇ ಬಿಸಿನೆಸ್ ಸಲವಾ...

ಮನೆಯು ಚಿಕ್ಕದಾಗಿರಬೇಕು (56) 28.05.2025

ಮನೆಯು ಚಿಕ್ಕದಾಗಿರಬೇಕು ಇವತ್ತು ನಮ್ಮ ಆಫ಼ೀಸಿನಲ್ಲಿ ಕೆಲ್ಸ ಮಾಡೋ ಕಾಂಟ್ರಾಕ್ಟರ್ ಒಬ್ಬರು, ಇನ್ನೇನು ಈ ತಿಂಗಳ ಕೊನೆಯಲ್ಲಿ ನನ್ನ ಕಾಂಟ್ರಾಕ್ಟ್ ಮುಗಿತಾ ಬಂತು, ಇನ್ನೂ ಬೇರೆ ಕೆಲ್ಸ ಸಿಕ್ಕಿಲ್ಲ. ಸುಮಾರು ಮೂರು ತಿಂಗಳಿನಿಂದ ಹುಡುಕುತ್ತಿದ್ದೇನೆ... ಇದೇ ರೀತಿ ಕೆಲ್ಸ ಸಿಗದೇ ಹೋದರೆ, ಮನೆ ಸಾಲ, ಕಾರು ಸಾಲ ಎಲ್ಲ ಕಟ್ಟೋದು ಯಾವಾಗ ಎಂದು ಸಂಕಟ ಪಡುತ್ತಿದ್ದ. ಅಯ್ಯೋ ಎಂದು ಮರುಕಗೊಂಡು, ಅವನ ಸುಖ-ದುಃಖಗಳನ್ನು ವಿಚಾರಿಸಿಕೊಳ್ಳುತ್ತಿದ್ದಂತೆ, ಅವನ ಮನೆ ಸಾಲ ಮತ್ತು ಕಾರಿನ ಬಾಬ್ತು ಅವನ ಒಂದು ತಿ...

Are you an empty nester? What to do next? 23.05.2025

ಕೆಲವು ದಿನಗಳ ಮುಂಚೆ ನಾನು, Are you an empty nester? How do you feel? ಅನ್ನೋ ಒಂದು ಎಪಿಸೋಡ್ ಅನ್ನ ರಿಕಾರ್ಡ್ ಮಾಡಿದ್ದೆ. ಈ ಎಪಿಸೋಡನ್ನ ಅದರ ಒಂದು ಮುಂದುವರಿದ ಭಾಗ ಅನ್ನಬಹುದು. ಇವತ್ತಿನ ವಿಚಾರದಲ್ಲಿ, attachment, connection, relationship, communication, parenting ಅನ್ನೋ ಪದಗಳು ಹೆಚ್ಚಾಗಿ ಕೇಳಿ ಬರುತ್ತವೆ. But, at the same time, ನಾವು ಬದುಕಿನ ಒಂದು ಮುಂದುವರೆದ ಭಾಗದಲ್ಲಿ ಹೇಗೆ ಬದುಕಬಹುದು ಅನ್ನೋದರ ಬಗ್ಗೇನೂ ಒಂದಿಷ್ಟು ಅನಿಸಿಕೆಗಳನ್ನ ಹಂಚಿಕೊಳ್ಳುತ್ತೇ...

ನಾವೇಕೆ ಹೀಗೆ!? (54) 20.05.2025

ನಾವೇಕೆ ಹೀಗೆ!? In this episode I share my experience how Kannadigas behave in a group set up. How do they get together as friends/family - speaking the native tounge, etc. ಕನ್ನಡಿಗರಿಗೆ ಏನು ಇಷ್ಟ? ಪಾರಮಾರ್ಥದ ಮೇಲೆ ಹೆಚ್ಚಿನ ಪ್ರೀತಿ? ಸಾಹಿತ್ಯ, ಸಂಗೀತ, ಆಧ್ಯಾತ್ಮ, ಇತರ high value assets ಮೇಲೆ ನಮ್ಮ ಪ್ರೀತಿ. The demand for a unified Kannada-speaking state gained momentum in the early 20th century, with activists like...

ಹೇಳುವುದು ಮುಖ್ಯವೋ ಮಾಡುವುದು ಮುಖ್ಯವೋ? (53) 16.05.2025

ಹೇಳುವುದು ಮುಖ್ಯವೋ ಮಾಡುವುದು ಮುಖ್ಯವೋ? ಹೇಳುವುದು ಒಂದು ಮಾಡುವುದು ಇನ್ನೊಂದು ಅನ್ನೋ ಜನಪ್ರಿಯ ಹಾಡನ್ನ ಕೇಳಿರಬೇಕಲ್ವ? ಅದೇ ಥರ ಆಚಾರ ಹೇಳೋದು, ಬದನೇ ಕಾಯಿ ತಿನ್ನೋದು ಅಂತಲೂ ಇವೆ. ನಮ್ಮ ಆಫ಼ೀಸುಗಳಲ್ಲಿ, ಎಲ್ಲರೂ AI ವಿಚಾರಕ್ಕೆ ಬಂದರೆ ಹಾರಾಟ ಮಾಡುವವರೆ... ಹಂಗ್ ಮಾಡ್ತೀವಿ, ಹಿಂಗ್ ಮಾಡ್ತೀವಿ ಅಂತ ಎಗರಾಡ್ತಾನೇ ಇರ್ತಾರೆ. ಈಗಂತೂ ಯಾವ್ದೇ ಮೀಟೀಂಗ್ ತಗೊಳ್ಳಿ, ಅದು AI ಇಂದ ಆರಂಭವಾಗಿ AI ಇಂದ್ಲೇ ಕೊನೆ ಆಗುತ್ತೆ ಅಂತ ಹೇಳ್ಬೋದು. innovation: ಹೊಸ ಕಲ್ಪನೆ, ನಾವೀನ್ಯ, ಹೊಸಶೋಧ *** ಹ...

ಝಣ ಝಣ ಕಾಂಚಾಣ (52) 15.05.2025

ಝಣ ಝಣ ಕಾಂಚಾಣ ಅಬ್ಬಾ, ಅದೇನು ದುಡ್ಡಿನ ಮಹಿಮೆ ಅಂತ ಅನ್ನಿಸಿದ್ದು... ನಿನ್ನೆ ಸ್ಟಾರ್‌ಬಕ್ಸ್‌ನಲ್ಲಿ ಒಂದು ಕಪ್ ಕಾಫ಼ಿ ತೆಗೆದುಕೊಂಡಾಗ. ಮೊದಲೆಲ್ಲ ಆದ್ರೆ, ಜೇಬಿನಿಂದ ಪರ್ಸು ತೆಗೆದು, ಅದರಲ್ಲಿರೋ ಹಣ ಎಣಿಸಿ ಕೊಡ್ತಿದ್ವಿ. ನಂತರ ಆ ಪ್ರಕ್ರಿಯೆ ಮುಂದುವರೆದು, ಅದೇ ಜೇಬು-ಪರ್ಸುಗಳಿಂದ ಕ್ರೆಡಿಟ್ ಕಾರ್ಡ್ ಕೊಡೊದಕ್ಕೆ ಶುರು ಮಾಡಿದ್ವಿ. ಈಗ ಎಲ್ಲಿ ಹೋದ್ರು ಎಲ್ಲ ಸೈಲೆಂಟಾಗಿ, ಎಲ್ಲವೂ ಫ಼ೋನ್‌ನಲ್ಲೇ ನಡೆದು ಹೋಗುತ್ತೆ. ಆದ್ರೆ, point of sale ನ ಚಂಗ್ ಚಿಂಗ್ ಸೌಂಡಿಗೆ ಬದಲಾಗಿ ಈಗ ಟಿನ್ ಅನ...

ಇಂಡಿಯಾ ಸೋತು ಹೋಯ್ತಂತೆ?! (51) 11.05.2025

ಈಗೆಲ್ಲ ಎಲ್ಲಿ ನೋಡಿದ್ರೂ, ಕೇಳಿದ್ರೂ ಇಂಡಿಯಾ-ಪಾಕಿಸ್ತಾನದ ಯುದ್ಧ, ಯುದ್ಧ ವಿರಾಮಗಳ ಬಗ್ಗೆಯೇ ಮಾತು? ಏಪ್ರಿಲ್ 22 ರಂದು ಹಿಂದೂ ಪ್ರವಾಸಿಗರ ವಿರುದ್ಧ ನಡೆದ ಭಯೋತ್ಪಾದಕ ಕೃತ್ಯಕ್ಕೆ ಭಾರತ ಮೇ 8 ರಂದು ಹಲವಾರು ಕ್ಷಿಪಣಿಗಳನ್ನು ಲಾಂಚ್ ಮಾಡಿ ಪಾಕಿಸ್ತಾನದ ಉಗ್ರರ ನೆಲೆಗಳನ್ನು ದ್ವಂಸ ಮಾಡಲಾಯಿತು. ಈ ಸಂಬಂಧ ಯಾವ ಮೀಡಿಯಾಗಳನ್ನು ನಂಬಬೇಕು, ಬಿಡಬೇಕು ಎಂದು ಗೊತ್ತಾಗುತ್ತಿಲ್ಲ... Al Zajeera, CNN, India, Pakistan news ಮೀಡಿಯಾಗಳನ್ನೆಲ್ಲ ನೋಡಿದರೆ ಎಲ್ಲ ಕಡೆಗೂ conflicts ಕೇಳಿ ಬರುತ...

ಕತ್ತೆಗೇನು ಗೊತ್ತು ಕಸ್ತೂರಿಯ ಪರಿಮಳ (#50) Chat GPT, What do you know? 07.05.2025

ಕತ್ತೆಗೇನು ಗೊತ್ತು ಕಸ್ತೂರಿಯ ಪರಿಮಳ Chat GPT, What do you know? ಹೀಗಂತ ಅನ್ಸಿದ್ದು ಇತ್ತೀಚೆಗೆ ಎಲ್ಲ ಕಡೆಗೆ AI ಯ ಹಾವಳಿಯನ್ನು ನೋಡಿ. ನಮ್ಮ ಆಫ಼ೀಸುಗಳಲ್ಲೆಲ್ಲ AI ಯ ಹಾವಳಿಯ ಜೊತೆ ಜೊತೆಗೆ ಅನೇಕ ಅನಾಹುತ, ಅವಾಂತರಗಳೂ ಹೆಚ್ಚಾಗಿ ಕಾಣತೊಡಗಿವೆ. ಮೊದಮೊದಲು ನಿಧಾನವಾಗಿ ಚಾಟ್ GPT ಅಂತ ಶುರುವಾಗಿದ್ದು, ನಂತರ Copilot ಆಗಿ, ಮುಂದೆ Gemini ಆಗಿ, ಎಲ್ಲವೂ ಒಟ್ಟೊಟ್ಟಾಗೇ ಕಾಡತೊಡಗಿವೆ. ಅಲ್ಲ, ಈ AI engine ಗಳು ಮಾಡದ್ದೇನಾದರೂ ಇದೆಯೇ? ಕೇಳಿದ ಎಲ್ಲ ಪ್ರಶ್ನೆಗಳಿಗೂ ಬ್ರಹ್ಮಾಂಡದ ಎಲ...

ದುಡ್ಡೇ ಇಲ್ಲ! ದುಡ್ಡೇ ಎಲ್ಲ!! 02.05.2025

ದುಡ್ಡೇ ಇಲ್ಲ! ದುಡ್ಡೇ ಎಲ್ಲ!! (ಇಂದು ಶುಕ್ರವಾರ, ಇನ್ನೇನು ಲಕ್ಷ್ಮಿ ಮನೆ ಒಳಗೆ ಬರಬೇಕು ಅನ್ನೋ ಹೊತ್ತಿಗೆ ಇದೆಂಥಾ ಅಪಸ್ವರ??) ಎಲ್ಲರಿಗೂ ದುಡ್ಡು ಬೇಕು, ಆದ್ರೆ, ಯಾರ ಹತ್ರನೂ ದುಡ್ಡೇ ಇಲ್ಲ... ಅಂತ ಅನ್ನಿಸಿದ್ದು ಇತ್ತೀಚೆಗೆ. ಇನ್ನೂ ಏಪ್ರಿಲ್ ಮುಗಿದು ಮೇ ಶುರುವಾಯ್ತು ಅನ್ನೋದೇ ತಡ, ನಮ್ಮ ಆಫ಼ೀಸಿನಲ್ಲಿ ಎಲ್ಲರೂ ಒಂಥರಾ ಥಕಧಿಮಿ ಥಕಜಣು ಅಂತ ಕುಣಿಯೋಕೆ ಸ್ಟಾರ್ಟ್ ಮಾಡಿದ್ದಾರೆ. ಇನ್ನೂ ಎರಡೂ ತಿಂಗಳು ಬೇಕು ಈ ಕ್ವಾರ್ಟರ್ ಮುಗಿಯೋಕೆ, ಈಗಲೇ ಏಕೆ ಇವರಿಗೆ ಇಷ್ಟೊಂದು ಅವಸರ? ದುಡ್ಡಿಲ್ಲ ಅ...

#48: ನಿಮ್ಮ ನೆಚ್ಚಿನ ಲೀಡರ್ ಅಂದ್ರೆ ಯಾರು? 30.04.2025

ನಿಮ್ಮ ನೆಚ್ಚಿನ ಲೀಡರ್ ಅಂದ್ರೆ ಯಾರು? ಈ ಪ್ರಶ್ನೆ ಅಲ್ಲಿ ಸೇರಿದ್ದ ಉದಯೋನ್ಮುಖ ಲೀಡರುಗಳಿಗೆಲ್ಲ ಕೇಳುತ್ತಾ ಬಂದಾಗ, ಎಲ್ಲರೂ ಬಿಲ್ ಗೇಟ್ಸ್, ಸ್ಟೀವ್ ಜಾಬ್ಸ್, ಮಾರ್ಕ್ ಜುಕರ್‌ಬರ್ಗ್, ಎಂತೆಲ್ಲ ಹೆಸರುಗಳನ್ನು ಹೇಳುತ್ತಾ ಬಂದಾಗ, ನನ್ನ ಸರದಿ ಬಂತು! ನಾನೆಂದೆ My Mother! Excuse me... ಅಂದ, ಯೆಸ್, ಮೈ ಮದರ್ ಎಂದೆ. That's nice, we don't hear examples as often... but would you care to explain... ಎಂದ. ನಾನು ಅದಕ್ಕೆ, how much time do we have? ಎಂದೆ ನ...

Άκου το podcast SatisHFactionKannada Podcast from the US στο Replaio

Ραδιόφωνο και podcast σε μία εφαρμογή - δωρεάν, χωρίς εγγραφή. Εγκατάστησέ την σήμερα και μη χάσεις την πρεμιέρα

Κατέβασέ το από το Google Play

Το Replaio δεν είναι εκδότης podcast - τα ονόματα των εκπομπών, τα εξώφυλλα και ο ήχος ανήκουν στους δημιουργούς τους και διανέμονται μέσω δημόσιων ροών RSS