Shwetha Initiative

ಸಿರಿದನಿ SIRIdani

SIRIdani, A passion broadcast channel, set up by equal minded team In Bangalore. Channel addresses education, culture, social issues and youth Designs in depth subject discussion with the experts of relevant area. Light entertainment, talk shows also focusing area. Subjects we choose non controversy and factual issues and which is out of regular platforms. Files Uploaded once in 15 days. and will come online with special episodes too.

Určitě navštivte web podcastu a podpořte jeho tvůrce: www.shwethainitiative.com

Autor

Shwetha Initiative

Kategorie

Business

Nejnovější epizoda

21. čvc 2024

Kde poslouchat?

Podcasty v aplikaci Replaio Radio Už brzy

Podcasty míří do aplikace už brzy. Nainstaluj si ji teď a jako první uvidíš úplně nový pohled na podcasty

Stáhnout z Google Play Nainstaluj zdarma Android téměř 10 mil. stažení · hodnocení 4,8 iOS už brzy

Epizody

ಸರಿಕನ್ನಡ ಸಲ್ಲಾಪ– ವಾಣಿ ರಾಜ್‌, ರಾಜ್‌ ಗೋಪಾಲ್‌ 31.10.2021

ಕನ್ನಡ ಆಡುನುಡಿಯಲ್ಲಾಗುವ ಸಣ್ಣ ಸಣ್ಣ ಅರ್ಥ ವ್ಯತ್ಯಾಸಗಳು ಮತ್ತು ಅದರಿಂದ ನಡೆದ ಸ್ವಾರಸ್ಯಕರ ಸಂದರ್ಭಗಳನ್ನು ತೆರೆದಿಟ್ಟಿದ್ದಾರೆ ವಾಣಿರಾಜ್‌– ರಾಜ್‌ ಗೋಪಾಲ್‌ ದಂಪತಿ. ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಸರಿಗನ್ನಡದ ಝಲಕ್‌ ಕೇಳಿ. ಸಂಚಿಕೆ ನಿರೂಪಣೆ: ದೀಪಾ ಪಾವಂಜೆ ಪ್ರತಿಕ್ರಿಯಿಸಿ: siridanipodcast@gmail.com

ಜನಕಥಾ ಕೀರ್ತನೆ – ಶಿವಕುಮಾರ ದರ್ಶನ – ಡಾ.ಲಕ್ಷ್ಮಣದಾಸ 31.10.2021

ಶಿವಕುಮಾರ ದರ್ಶನ ಜನಕಥಾ ಕೀರ್ತನೆ ಪ್ರಸ್ತುತಪಡಿಸಿದ್ದಾರೆ ಡಾ.ಲಕ್ಷ್ಮಣದಾಸ ರಂಗಭೂಮಿ, ಹರಿಕಥಾ ಕಲಾವಿದ ಡಾ.ಲಕ್ಷ್ಮಣದಾಸ ಅವರ ವಿಶೇಷತೆ ಏನೆಂದರೆ ಎಲ್ಲರೂ ಪುರಾಣದ ಕಥೆಗಳ ಹರಿಕಥೆ ಹೇಳುತ್ತಾರೆ. ಆದರೆ, ಇವರು ಅದೇ ಕಥೆಗಳನ್ನು ವರ್ತಮಾನಕ್ಕೆ ಅನ್ವಯಿಸಿ ಜನಕಥಾ ಕೀರ್ತನೆ ಎಂಬ ಪರಿಕಲ್ಪನೆಯನ್ನು ಅಳವಡಿಸಿ ಎಲ್ಲ ಕಡೆ ಪ್ರದರ್ಶನ ನೀಡುತ್ತಿದ್ದಾರೆ. ವೃತ್ತಿರಂಗಭೂಮಿ ಕ್ಷೇತ್ರದಲ್ಲಿ ಸಾಕಷ್ಟು ಅನುಭವ ಹೊಂದಿದವರು. ನೂರಾರು ನಾಟಕಗಳಲ್ಲಿ ಭಾಗವಹಿಸಿ ಅಲ್ಲಿನ ಒಳಹೊರಗುಗಳನ್ನು ಬಲ್ಲವರು. ವಿಶೇಷವಾಗಿ ರ...

ಮಂಗಳ ಮೂರುತಿ– ಸಿರಿದನಿಯಲ್ಲೊಂದು ಭಕ್ತಿ ಲಹರಿ– ತಾರೇಂದ್ರ ಪಿ. ಶೆಟ್ಟಿಗಾರ್‌ 16.10.2021

ಮಂಗಳ ಮೂರುತಿ ಕುವೈಟ್'ನ ಲೇಖಕ ತಾರೇಂದ್ರ ಪಿ. ಶೆಟ್ಟಿಗಾರ್ ಅವರ ಸಾಹಿತ್ಯ ಹಾಗೂ ನಿರ್ಮಾಣದ ಕನ್ನಡ ಭಕ್ತಿಗೀತೆಗಳ ಧ್ವನಿಸಾಂದ್ರಿಕೆ ಇತ್ತೀಚೆಗೆ ಬಿಡುಗಡೆಗೊಂಡಿದೆ. ಅದರ ಭಕ್ತಿಲಹರಿ ಸಿರಿದನಿಯಲ್ಲಿ ಕೇಳಿ. ಜೊತೆಗೆ ಗೀತೆರಚನೆಕಾರ ತಾರೇಂದ್ರ ಪಿ. ಶೆಟ್ಟಿಗಾರ್‌ ಅವರು ವಿದೇಶದಲ್ಲಿದ್ದು ತಮ್ಮ ನೆನಪಿನ ಭಾವಗಳನ್ನು ಇಲ್ಲಿ ತೆರೆದಿಟ್ಟಿದ್ದಾರೆ. ಅವರದೇ ಮಾತುಗಳಲ್ಲಿ ಕೇಳಿ. ಈ ಮಂಗಳ ಮೂರುತಿ ಧ್ವನಿ ಸಾಂದ್ರಿಕೆಯನ್ನು ಉಡುಪಿಯ ಪರ್ಯಾಯ ಅದಮಾರು ಮಠದ  ಪರಮ ಪೂಜ್ಯ ಶ್ರೀ ಶ್ರೀ ಈಶಪ್ರಿಯ ತೀರ್ಥ...

ತಾರಸಿಯಲ್ಲೊಂದು ತಾವರೆ ಸ್ನೇಹ– ಸ್ನೇಹಾ ಆರ್‌. ಭಟ್‌ 14.10.2021

ಮನೆಯ ತಾರಸಿಯಲ್ಲಿ ಸುಮಾರು 90ಕ್ಕೂ ಅಧಿಕ ಬಗೆಯ ವೈವಿಧ್ಯಮಯ ತಾವರೆ ಹೂಗಳನ್ನು ಬೆಳೆದು ಕರ್ನಾಟಕದ ಗಮನ ಸೆಳೆದಿದ್ದಾರೆ ಮಂಗಳೂರಿನ ಉಪನ್ಯಾಸಕಿ ಸ್ನೇಹಾ ರವೀಶ್‌ ಭಟ್‌. ಅವರು ತರಕಾರಿ ಕೈತೋಟದ ಜೊತೆಗೆ ತಾವರೆ ತೋಟವನ್ನು ರೂಪಿಸಿದ ಯಶೋಗಾಥೆ ಈ ಸಂಚಿಕೆಯಲ್ಲಿದೆ. ಕೇಳಿ. ಪ್ರತಿಕ್ರಿಯಿಸಿ: siridanipodcast@gmail.com BACKGROUND MUSIC USED WITH THANKS ಮುದುಡಿದ ತಾವರೆ ಅರಳಿತು https://www.youtube.com/watch?v=vK_Vt0LTemk  ತಾವರೆ ಓ ತಾವರೆ.. https://www.youtube.c...

ಕನ್ನಡತಿಯ ಕತೆ ಡಬ್ಬಿ– ರಂಜನಿ ರಾಘವನ್‌ 14.10.2021

ರಂಜನಿ ರಾಘವನ್‌ ಕನ್ನಡದ ಖ್ಯಾತ ಕಿರುತೆರೆ, ಚಲನಚಿತ್ರ ನಟಿ ಹಾಗೂ ಕಥೆಗಾರ್ತಿ. ನಟನೆಯಾಚೆಗಿನ ಕನಸುಗಳನ್ನು ಸಿರಿದನಿಯಲ್ಲಿ ತೆರೆದಿಟ್ಟಿದ್ದಾರೆ.  ಕೇಳಿ ಪ್ರತಿಕ್ರಿಯಿಸಿ: siridanipodcast@gmail.com ಸಿರಿದನಿ ಕೇಳಲು www.shwethainitiative.comಗೆ ಭೇಟಿ ನೀಡಿ

ಗಾಂಧಿಯೊಂದಿಗೆ ಅನುಸಂಧಾನ– ಡಾ.ವೂಡೆ ಪಿ. ಕೃಷ್ಣ ಅವರೊಂದಿಗೆ ಮಾತುಕತೆ 30.09.2021

ಗಾಂಧಿಯೊಂದಿಗೆ ಅನುಸಂಧಾನ ಡಾ.ವೂಡೆ ಪಿ.ಕೃಷ್ಣ, ಅಧ್ಯಕ್ಷರು, ಕರ್ನಾಟಕ ಗಾಂಧಿ ಭವನ ಟ್ರಸ್ಟ್‌ ಬೆಂಗಳೂರು ಪ್ರತಿಕ್ರಿಯಿಸಿ: siridanipodcast@gmail.com Music used with Thanks: https://www.youtube.com/watch?v=4MkKAtXntNw&t=101s

ರಾಗದ ಹಿಂದಿನ ಭಾವ: ಯುವ ಯಕ್ಷಗಾನ ಭಾಗವತರಾದ ಚಿಂತನಾ ಹೆಗಡೆ ಮಾಳ್ಕೋಡು ಸಂದರ್ಶನ 30.09.2021

ಯುವ ಯಕ್ಷಗಾನ ಭಾಗವತರಾದ ಚಿಂತನಾ ಹೆಗಡೆ ಮಾಳ್ಕೋಡು ಸಂದರ್ಶನ ಸಂದರ್ಶಕರು: ಮಧುರಾ ಲಕ್ಷ್ಮೀಶ ಭಟ್‌  ಪ್ರತಿಕ್ರಿಯಿಸಿ: siridanipodcast@gmail.com

ರಾಗದ ಹಿಂದಿನ ಭಾವ–ಮುನ್ನೋಟ: ಯುವ ಯಕ್ಷಗಾನ ಭಾಗವತರಾದ ಚಿಂತನಾ ಹೆಗಡೆ ಮಾಳ್ಕೋಡು 28.09.2021

ರಾಗದ ಹಿಂದಿನ ಭಾವ– ಚಿಂತನಾ ಹೆಗಡೆ ಮಾಳ್ಕೋಡು– ಮುನ್ನೋಟ ಪ್ರತಿಕ್ರಿಯಿಸಿ: siridanipodcast@gmail.com

ಗಾಂಧಿಯೊಂದಿಗೆ ಅನುಸಂಧಾನ– ಡಾ.ವೂಡೆ ಪಿ. ಕೃಷ್ಣ: ಮುನ್ನೋಟ 28.09.2021

ಗಾಂಧಿಯೊಂದಿಗೆ ಅನುಸಂಧಾನ  ಗಾಂಧಿ ಕುರಿತ ಮುಕ್ತ ಭಾವ ಹಂಚಿಕೊಂಡವರು ಕರ್ನಾಟಕ ಗಾಂಧಿ ಸ್ಮಾರಕ ನಿಧಿಯ ಅಧ್ಯಕ್ಷ  ಡಾ.ವೂಡೆ ಪಿ. ಕೃಷ್ಣ. ಪೂರ್ಣ ಮಾತುಕತೆ ಪ್ರಸಾರ ಅಕ್ಟೋಬರ್‌ 1ರಂದು ಸಿರಿದನಿ ಪಾಡ್‌ಕಾಸ್ಟ್‌ನಲ್ಲಿ. ಪ್ರತಿಕ್ರಿಯಿಸಿ: siridanipodcast@gmail.com Music used with Thanks: https://www.youtube.com/watch?v=4MkKAtXntNw&t=101s

ಭಾವರಂಗ– ಮಂಜುಳಾ ಜನಾರ್ದನ್‌ ಸಂದರ್ಶನ 14.09.2021

ಮಂಜುಳಾ ಜನಾರ್ದನ್‌ ರಂಗಭೂಮಿ, ಚಲನಚಿತ್ರ, ಬಾನುಲಿ, ಶಿಕ್ಷಣ ಕ್ಷೇತ್ರದಲ್ಲಿ ಸಕ್ರಿಯರಾಗಿರುವ ಬಹುಮುಖ ಪ್ರತಿಭೆ. ನೂರಾರು ರಂಗ ಪ್ರಯೋಗಗಳಲ್ಲಿ ಕರಾವಳಿಯ ಮನೆಮಾತಾಗಿದ್ದ ಮಂಜುಳಾ ಈಗ ಶಿಕ್ಷಕಿ. ಅವರ ಬದುಕು ಭಾವ ಅರಿಯುವ ಪ್ರಯತ್ನ ಸಿರಿದನಿಯದ್ದು. ಕೇಳಿ ಪ್ರತಿಕ್ರಿಯಿಸಿ ಇಮೇಲ್‌: siridanipodcast@gmail.com ಸಂಗೀತ, ಧ್ವನಿ ತುಣುಕುಗಳ ಕೃಪೆ: ಚಾಪರ್ಕ ಕಲಾತಂಡದ ನಾಟಕಗಳ ವಿವಿಧ ಧ್ವನಿಸುರುಳಿಗಳು, ಮಂಜುಳಾ ಜನಾರ್ದನ್‌ ಅವರ ವಿಡಿಯೋ ಹಾಡುಗಳು.

ಕಾಡಿನ ಮಕ್ಕಳಿಗಾಗಿ ವನಚೇತನ– ದಿನೇಶ್‌ ಹೊಳ್ಳ ಸಂದರ್ಶನ 14.09.2021

ಕಾಡಿನ ಮಕ್ಕಳ ಶಿಕ್ಷಣ, ಬದುಕಿಗಾಗಿ ವನಚೇತನ ಪರಿಕಲ್ಪನೆಯನ್ನು ಉತ್ತರ ಕನ್ನಡ ಜಿಲ್ಲೆಯಲ್ಲಿ ಅನುಷ್ಠಾನಕ್ಕೆ ತಂದು, ಅದರಲ್ಲೇ ತೊಡಗಿಕೊಂಡಿದ್ದಾರೆ ಕಲಾವಿದ, ಪರಿಸರ ಪ್ರೇಮಿ ದಿನೇಶ್‌ ಹೊಳ್ಳ.  ವನಚೇತನ ಜೊತೆಗೆ ಕಾಡು, ಪರಿಸರ, ನದಿ, ಬದುಕಿನ ಕುರಿತ ಪ್ರಕೃತಿ ಮಾತುಕತೆ ಸಿರಿದನಿಯಲ್ಲಿ.... ಸಂದರ್ಶನ: ಸ್ಮಿತಾ ಶೆಣೈ ಮಂಗಳೂರು ಪ್ರತಿಕ್ರಿಯಿಸಿ: siridanipodcast@gmail.com

ಭಾವರಂಗ– ಮಂಜುಳಾ ಜನಾರ್ದನ್‌ ಸಂದರ್ಶನ– ಮುನ್ನೋಟ 13.09.2021

ರಂಗಭೂಮಿ, ಯಕ್ಷಗಾನ, ಶಿಕ್ಷಣ, ಬಾನುಲಿ ಹೀಗೆ ಹಲವಾರು ಕ್ಷೇತ್ರಗಳಲ್ಲಿ ತೊಡಗಿಕೊಂಡ ಬಹುಮುಖಿ ಪ್ರತಿಭೆ ಮಂಜುಳಾ ಜನಾರ್ದನ್‌ ಅವರ ಸಂದರ್ಶನ ಸೆಪ್ಟೆಂಬರ್‌ 15, 2021ರಂದು ಸಿರಿದನಿಯಲ್ಲಿ ಪ್ರಸಾರ

ಚಾಲಕನ ಸೀಟೂ ಮಹಿಳೆಗೆ ಮೀಸಲು– ಪ್ರೇಮಾ ರಾಮಪ್ಪ ನಡಬಟ್ಟಿ ಸಂದರ್ಶನ 31.08.2021

ಪ್ರೇಮಾ ರಾಮಪ್ಪ ನಡಬಟ್ಟಿ  ಬಿಎಂಟಿಸಿಯ ಮೊದಲ ಮಹಿಳಾ ಬಸ್‌ ಚಾಲಕಿ ಪ್ರೇಮಾ ರಾಮಪ್ಪ ನಡಬಟ್ಟಿ. ಬೆಳಗಾವಿಯಿಂದ ಬೆಂಗಳೂರಿಗೆ ಬಂದು ಬಸ್‌ ಚಾಲನೆ ಮಾಡಿ ಬದುಕು ಕಟ್ಟಿಕೊಂಡ ಅವರ ಬದುಕಿನ ಕಥೆ ಸಿರಿದನಿಯಲ್ಲಿ. ಸಂದರ್ಶನ ಮತ್ತು ಕಾರ್ಯಕ್ರಮ ನಿರ್ಮಾಣ: ಜ್ಯೋತಿ ಸಾಲಿಗ್ರಾಮ ಪ್ರತಿಕ್ರಿಯಿಸಿ: siridanipodcast@gmail.com

ವಚನ ಚಿಂತನ: ಶಿವನಕೆರೆ ಬಸವಲಿಂಗಪ್ಪ 31.08.2021

ಶಿವನಕೆರೆ ಬಸವಲಿಂಗಪ್ಪ ಕಾರ್ಯದರ್ಶಿ, ಕರುಣಾ ಜೀವ ಕಲ್ಯಾಣ ಟ್ರಸ್ಟ್‌ ದಾವಣಗೆರೆ ಬಸವಲಿಂಗಪ್ಪ ಅವರು ಶಿಕ್ಷಣ, ಆರೋಗ್ಯ ಮತ್ತು ಪರಿಸರ ಕ್ಷೇತ್ರದಲ್ಲಿ ಸಾಕಷ್ಟು ಸಮಾಜಮುಖಿ ಕಾರ್ಯಗಳನ್ನು ಮಾಡುತ್ತಾ ಗುರುತಿಸಿಕೊಂಡವರು. ಬದುಕಿನಲ್ಲಿ ನೈತಿಕ ಮತ್ತು ಅಧ್ಯಾತ್ಮ ಮೌಲ್ಯಗಳನ್ನು ಅಳವಡಿಸಿಕೊಂಡವರು ಮತ್ತು ಅಂಥ ಚಿಂತನೆಗಳನ್ನು ಸಮಾಜದಲ್ಲಿ ಪಸರಿಸುವವರು. ಈ ಬಾರಿಯ ಸಿರಿದನಿಯಲ್ಲಿ ಅವರಿಂದ ವಚನ ಚಿಂತನ ಕಾರ್ಯಕ್ರಮ ನಿರ್ಮಾಣ: ಜ್ಯೋತಿ ಸಾಲಿಗ್ರಾಮ ಪ್ರತಿಕ್ರಿಯಿಸಿ: siridanipodcast@gmail.com ವಚನ...

ಕಿರಿವಯಸ್ಸಿನ ಕವಿಮನಸ್ಸು– ಅಮನ ಬೆಂಗಳೂರು 31.08.2021

ಅಮನ ಬೆಂಗಳೂರಿನ ಬಿಷಪ್‌ ಕಾಟನ್‌ ಶಾಲೆಯ 8ನೇ ತರಗತಿಯ ವಿದ್ಯಾರ್ಥಿನಿ. ಚಿಕ್ಕ ವಯಸ್ಸಿನಲ್ಲೇ ಏಷ್ಯಾ ಬುಕ್‌ ಆಫ್‌ ರೆಕಾರ್ಡ್ಸ್‌ನಲ್ಲಿ ಕಿರಿಯ ವಯಸ್ಸಿನ ಕವಯಿತ್ರಿ ಎಂದು ಗುರುತಿಸಿಕೊಂಡವಳು. ಇಂಡಿಯಾ ಬುಕ್‌ ಆಫ್‌ ರೆಕಾರ್ಡ್ಸ್‌ನಲ್ಲಿಯೂ ಸ್ಥಾನ ಪಡೆದವಳು. ಅವಳ ಸಾಧನೆಯ ಹಾದಿ ಹೇಗಿತ್ತು. ಕಿರಿ ವಯಸ್ಸಿನ ಕವಿಭಾವವನ್ನು ಅರಿಯುವ ಪುಟ್ಟ ಪ್ರಯತ್ನ ಇಲ್ಲಿನದು. ಸಂದರ್ಶನ ಮತ್ತು ಸಂಚಿಕೆ ನಿರ್ಮಾಣ: ದೀಪಾ ಪಾವಂಜೆ ಪ್ರತಿಕ್ರಿಯಿಸಿ: siridanipodcast@gmail.com

ವಚನ ಚಿಂತನ: ಶಿವನಕೆರೆ ಬಸವಲಿಂಗಪ್ಪ – ಮುನ್ನೋಟ 30.08.2021

ವಚನ ಚಿಂತನ: ಶಿವನಕೆರೆ ಬಸವಲಿಂಗಪ್ಪ – ಮುನ್ನೋಟ

ಬಸ್‌ ಚಾಲಕನ ಸೀಟೂ ಮಹಿಳೆಗೆ... – ಮುನ್ನೋಟ 30.08.2021

ಬಸ್‌ ಚಾಲಕನ ಸೀಟೂ ಮಹಿಳೆಗೆ... – ಮುನ್ನೋಟ ಬಿಎಂಟಿಸಿಯ ಮೊದಲ ಮಹಿಳಾ ಚಾಲಕಿ ಪ್ರೇಮಾ ರಾಮಪ್ಪ ನಡಬಟ್ಟಿ ಅವರ ಸಂದರ್ಶನ. ಸೆ. 1ರಂದು ಪ್ರಸಾರ

ಹಸಿದಿದೆ ನದಿ– ಕವಿತೆ– ಲೀಲಾ ದಾಮೋದರ ಸುಳ್ಯ 14.08.2021

ಹಸಿದಿದೆ ನದಿ ಲೀಲಾ ದಾಮೋದರ ಅವರ ಕವಿತೆ. ಲೀಲಾ ಅವರು ನಿವೃತ್ತ ಉಪನ್ಯಾಸಕಿ. ಕಥೆ, ಕವನ ಸಾಹಿತ್ಯದ ಬರವಣಿಗೆ ಅವರ ಒಲವು. ವಿಶ್ರಾಂತ ಬದುಕಿನಲ್ಲಿ ಸೃಜನಶೀಲ ಸಾಹಿತ್ಯ ರಚನೆಯಲ್ಲಿ ಸಕ್ರಿಯರಾಗಿದ್ದಾರೆ.  ಪ್ರತಿಕ್ರಿಯಿಸಿ: siridanipodcast@gmail.com

ಕೋಳಿ ಜಗಳ– ಮಧುರಾ ಲಕ್ಷ್ಮೀಶ ಭಟ್‌ 14.08.2021

ಒಂದು ಪುಟ್ಟ ಲಘು ಕಥೆ – ಮಧುರಾ ಲಕ್ಷ್ಮೀಶ ಭಟ್‌ ಮಧುರಾ ಅವರು ಉಜಿರೆ ಎಸ್‌ಡಿಎಂ ಕಾಲೇಜಿನ ಪತ್ರಿಕೋದ್ಯಮ ವಿದ್ಯಾರ್ಥಿನಿ. ಕಥೆ, ಬರಹ, ಮಾತುಗಾರಿಕೆ ಅವರ ಆಸಕ್ತಿಯ ಕ್ಷೇತ್ರ. ಸೃಜನಶೀಲ ಮಾತುಗಾರಿಕೆಯ ಪ್ರಯತ್ನಗಳಲ್ಲಿ ‘ಒಂದಾಗಿ ಕೋಳಿ ಜಗಳ’ ಮೂಡಿಬಂದಿದೆ. ಕೇಳಿ ಪ್ರತಿಕ್ರಿಯಿಸಿ: siridanipodcast@gmail.com

ನ್ಯಾನೋ ಕಥೆಗಳು–ಜಯಶ್ರೀ ಬಿ. ಕದ್ರಿ 14.08.2021

ಪುಟ್ಟ ಪುಟ್ಟ ಕಥೆಗಳ ಗುಚ್ಛವಿದು. ಒಂದೊಂದು ಗಟ್ಟಿ ತಿರುಳು ಹೊಂದಿದ ಕಥೆಗಳ ಕೊನೆಯಲ್ಲಿ ಹೇಳಲು ಹೊರಟ ಪಂಚ್‌ಲೈನ್‌ ತುಂಬಾ ಇಷ್ಟವಾಗುತ್ತದೆ.  ಕೆಲವು ಕಥೆಗಳು ನಿಜ ಬದುಕಿಗೆ ತುಂಬಾ ಹತ್ತಿರವಾಗಿವೆ. ಜಯಶ್ರೀ ಅವರು ಮಂಗಳೂರಿನ ಮಹಿಳಾ ಸರ್ಕಾರಿ ಪದವಿ ಕಾಲೇಜಿನಲ್ಲಿ ಇಂಗ್ಲಿಷ್‌ ಪ್ರಾಧ್ಯಾಪಕಿ. ಬರಹ, ಮಾತು ಅವರ ಆಸಕ್ತಿಯ ಕ್ಷೇತ್ರಗಳು. ಕೇಳಿ ಪ್ರತಿಕ್ರಿಯಿಸಿ: siridanipodcast@gmail.com

ಪುಟಾಣಿಗಳ ಬಾಯಲ್ಲಿ ಸೀತಾಪಹರಣ– ಶ್ರೀರಾಮ ಕೆ.ಎಸ್‌., ಗಣೇಶ್‌ ಭಟ್‌, ಸಮನ್ವಿ ಆರ್‌. ಭಟ್‌ 14.08.2021

ಪುಟಾಣಿಗಳ ಬಾಯಲ್ಲಿ ಸೀತಾಪಹರಣ ಪುಟ್ಟ ಕಥೆ ಕೇಳಿ ಪ್ರತಿಕ್ರಿಯಿಸಿ: siridanipodast@gmail.com

ಆಷಾಢ–ಶ್ರಾವಣದ ಲವ್‌ ಸ್ಟೋರಿ– ಸ್ಮಿತಾ ಶೆಣೈ ಮಂಗಳೂರು 14.08.2021

ಆಷಾಢ–ಶ್ರಾವಣದ ಲವ್‌ ಸ್ಟೋರಿ– ಸ್ಮಿತಾ ಶೆಣೈ ಮಂಗಳೂರು ಸ್ಜಿತಾ ಶೆಣೈ ಮಂಗಳೂರು ಮಂಗಳೂರಿನ ಬೆಸೆಂಟ್ ಕಾಲೇಜಿನ  ಪತ್ರಿಕೋದ್ಯಮ ಉಪನ್ಯಾಸಕಿ. ನಿರೂಪಣೆ, ಬರವಣಿಗೆ, ಮಾತುಗಾರಿಕೆ ಅವರ ಆಸಕ್ತಿಯ ಕ್ಷೇತ್ರಗಳು. ಆಷಾಢದ ವಿರಹ, ಶ್ರಾವಣದ ಮಿಲನ, ಜೀವನ ಪ್ರೀತಿ, ಪ್ರೀತಿಯ ವಿವಿಧ ಮಜಲುಗಳನ್ನು .... ಲವ್‌ಸ್ಟೋರಿಯಲ್ಲಿ ನವಿರಾಗಿ ಕಟ್ಟಿಕೊಟ್ಟಿದ್ದಾರೆ. ಕೇಳಿ ಪ್ರತಿಕ್ರಿಯಿಸಿ: siridanipodcast@gmail.com

ಆಷಾಢದಲ್ಲೊಂದು ಲವ್‌ ಟಾನಿಕ್‌– ವಿಜಯ ಅಮೃತರಾಜ್‌ ಕೊಪ್ಪಳ 31.07.2021

ಆಷಾಢದಲ್ಲಿ ಆಗಾಗ ಸುರಿಯುವ ಮಳೆಯ ನಡುವೆ ಒಂದಿಷ್ಟು ಪ್ರೀತಿ ಗುಟುಕರಿಸಲು ಸಾಥ್‌ ನೀಡಿದ್ದಾರೆ. ವಕೀಲ, ಲೇಖಕ ವಿಜಯ ಅಮೃತರಾಜ್‌ ಕೊಪ್ಪಳ. ಕೇಳಿ. ಆಷಾಢದ ಪ್ರೀತಿಯ ಅನುಭೂತಿ ನಿಮ್ಮದಾಗಲಿ. ಅಂದಹಾಗೆ ಈ ಸಂಚಿಕೆ ಚೆಂದಗಾಣಿಸಲು ಹಲವು ಗೆಳೆಯರು ಹಾಡು, ಸಂಗೀತ ಒದಗಿಸಿ ನೆರವಾಗಿದ್ದಾರೆ. ಸಿರಿದನಿ ಅವರಿಗೆ ಕೃತಜ್ಞವಾಗಿದೆ. ಸಂಗೀತ ನೀಡಿದವರು youtube.com/watch?v=HSVrDxCdF_Y Suraagini ಸುರಾಗಿಣಿ ಸಂಗೀತ ಶಾಲೆ, ಸ್ಟುಡಿಯೋ ಬೆಂಗಳೂರು ಸಂಗೀತ: ಗಣೇಶ ದೇಸಾಯಿ ಗಾಯನ: ರಾಗಿಣಿ ಭಟ್‌ ಸಾಹಿತ್ಯ ಜ...

ಅತ್ತೆ ಕಥೆ– ವಾಣಿಶ್ರೀ ಕೊಂಚಾಡಿ 31.07.2021

ಸುಮ್ಮನೆ ಬರೆದ ಬರಹವೊಂದು ಗಂಡ ಹೆಂಡತಿಯ ನಡುವೆ ಹೇಗೆ ವಿರಸ ಹುಟ್ಟು ಹಾಕುತ್ತದೆ ಎಂಬುದನ್ನು ‘ಅತ್ತೆ ಕಥೆಯಲ್ಲಿ ಹೇಳಿದ್ದಾರೆ ವಾಣಿಶ್ರೀ ಕೊಂಚಾಡಿ. ವಾಣಿಶ್ರೀ ಅವರು ಲೇಖಕಿ, ಕಥೆಗಾರ್ತಿ ಮತ್ತು ಕವಯಿತ್ರಿ. ಮಂಗಳೂರಿನವರು. ಸರಳ ವಿಷಯವೊಂದನ್ನು ನವಿರಾಗಿ ವಿವರಿಸುವುದು ವಾಣಿಶ್ರೀ ಅವರ ಕಲೆಗಾರಿಕೆ. ಈ ಬಾರಿ ಅತ್ತೆ ಕಥೆಯ ಫಜೀತಿಯನ್ನು ಸಿರಿದನಿಯಲ್ಲಿ ತೆರೆದಿಟ್ಟಿದ್ದಾರೆ. ಪ್ರತಿಕ್ರಿಯಿಸಿ: siridanipodcast@gmail.com

ನಾವು ಬ್ಯಾಂಡ್‌ – ನಾದದೊಳಗಿನ ಭಾವ 14.07.2021

ನಾವು ಬ್ಯಾಂಡ್‌ ಹುಟ್ಟಿ ನಾದಾನುಭವ– ಅನುಭಾವ ಕೊಟ್ಟ ಕಥೆಯನ್ನು ಹಂಚಿಕೊಂಡಿದ್ದಾರೆ ಮೈಸೂರಿನ ನಾವು ಬ್ಯಾಂಡ್‌ ತಂಡದ ಮುನ್ನಾ (ಸುಂದರೇಶ್‌ ದೇವಪ್ರಿಯಂ) ಮತ್ತು ಗಾಯಕಿ ಶಾಲೋಮ್‌ ಸನ್ನುತಾ  ಸಂಗೀತ: ನಾವು ಬ್ಯಾಂಡ್‌ ತಂಡ ಪ್ರತಿಕ್ರಿಯಿಸಿ: siridanipodcast@gmail.com

Poslouchej podcast ಸಿರಿದನಿ SIRIdani v Replaio

Rádio a podcasty v jedné aplikaci - zdarma a bez registrace. Nainstaluj si ji ještě dnes a nepropásni premiéru

Stáhnout z Google Play

Replaio není vydavatelem podcastů; názvy pořadů, obálky a audio patří jejich autorům a šíří se přes veřejné RSS kanály