Udayavani
Sandhyavani | ಸಂಧ್ಯಾವಾಣಿ
A very unique podcast series comprising children stories, moral stories, lifestyle, human interest, health, wellbeing, excerpts & stories from the famous Ramayana by Dr. Sandhya S. Pai, Managing Editor of Taranga - Karnataka's favorite Kannada weekly lifestyle magazine.
Обов'язково відвідайте сайт подкасту та підтримайте його автора: www.udayavani.com
Де слухати?
Подкасти в застосунку Replaio Radio Уже незабаромПодкасти незабаром з'являться в застосунку. Встановіть уже зараз і першими побачте зовсім новий погляд на подкасти
Епізоди
S3 : EP - 67 : ದುರ್ಯೋಧನನ ಸಂದೇಶ | Message of Duryodhana 09.08.2024 15:33
S3 : EP - 67 : ದುರ್ಯೋಧನನ ಸಂದೇಶ | Message of Duryodhana ಇದು ಮನೋಹರ ಮಹಾಭಾರತ ಕಥಾ ಮಾಲಿಕೆಯ ಸುಂದರ ಕಥೆಗಳಲ್ಲಿ ಒಂದು. ಮಹಾಭಾರತ ಯುದ್ಧಕ್ಕೆ ತಯಾರಾಗಿದ್ದ ದುರ್ಯೋಧನ, ತನ್ನ ದೂತನನ್ನು ಕರೆದು ಪಾಂಡವರಿಗೆ ಒಂದು ಸಂದೇಶ ಕಳುಹಿಸಿದ. ಈ ಸಂದೇಶ ಮುಂದೆ ಯುದ್ಧದಲ್ಲಿ ದುರ್ಯೋಧನನ ಅಂತ್ಯಕ್ಕೆ ನಾಂದಿ ಹಾಡಿದಂತಿತ್ತು . ಅದೇನದು ಸಂದೇಶ ಎಂಬ
S1EP - 452: ಜಪಾನಿನ ಪುರಾಣ ಕಥೆ | Story of Japan Family 08.08.2024 7:43
ಇಝನಾಕಿ ಹಾಗು ಇಝನಾನಿ ಎಂಬ ದಂಪತಿಗಳ ಕಥೆ ಬರ್ತದೆ, ಜಪಾನ್ ದೇಶ ಒಂದು ದ್ವೀಪ ಸಮೂಹ, ಸಣ್ಣ ಸಣ್ಣ ದ್ವೀಪಗಳು ಸೇರಿ ದೇಶ ಆದದ್ದು. ಹಿಂದೆ ಇವೆಲ್ಲಾ ಸಮುದ್ರದಲ್ಲಿ ಮುಳುಗಿತ್ತಂತೆ ಇಝನಾಕಿ ಮತ್ತು ಇಝನಾನಿ ಎಂಬ ದೈವಾಂಶ ಸಂಭೂತ ದಂಪತಿಗಳು ಸಾಗರದಾಳದಿಂದ ಈ ದ್ವೀಪಗಳನ್ನು ಮೇಲೆತ್ತಿ ತಂದರಂತೆ.. ಆವಾಗ ಈ ದಂಪತಿಗಳಿಗೆ ನೂರಾರು ಮಕ್ಕಳಾದ್ರು ಆಗ.ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ. ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - sandhyavanipodcast@gmail...
S1EP - 451: ಭಕ್ತಿಯ ಪರಿಭಾಷೆ ಏನು ?| Shree Krishna and Sudhama 03.08.2024 6:24
ಕೃಷ್ಣ ಮತ್ತು ಸುಧಾಮರು ಬಾಲ್ಯದ ಗೆಳೆಯರು, ಸಾಂದೀಪನಿ ಮುನಿ ಆಶ್ರಮದಲ್ಲಿ ಒಟ್ಟಿಗೆ ಬೆಳೆದವರು ಒಂದು ದಿನ ಸಮಿತ್ತು ತರಲು ಹೋದವರಿಗೆ ಒಂದು ಮಾವಿನ ಮರ ಕಣ್ಣಿಗೆ ಬಿತ್ತಂತೆ.. ಮಾಗಿದ ಹಣ್ಣುಗಳಿಂದ ತುಂಬಿ ತೊನೆತಾ ಇದ್ದ ಆ ಮರ, ಹಣ್ಣುಗಳನ್ನ ನೋಡಿ ಇಬ್ರ ಬಾಯಲ್ಲೂ ನೀರು ಸುರಿಯಿತು.. ಆಮೇಲೇನಾಯ್ತು ? ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ. ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - sandhyavanipodcast@gmail.com
S3 : EP - 66 : ಭೀಷ್ಮರ ಆಶೀರ್ವಾದ | Bhishma's blessings 02.08.2024 15:35
ದುರ್ಯೋಧನ ತನ್ನ ಹನ್ನೊಂದು ಅಕ್ಷೋಹಿಣಿ ಸೈನ್ಯದ ಒಂದೊಂದು ತುಕಡಿಗೆ ಒಬ್ಬೊಬ್ಬ ಸೇನಾ ನಾಯಕನನ್ನು ಆರಿಸಿ ಪಟ್ಟಕಟ್ಟಿದ. ನಂತರ .. ಅವರೆಲ್ಲರನ್ನು ಹಿಂದಿಟ್ಟುಕೊಂಡು ಭೀಷ್ಮರ ಬಳಿ ಹೋಗಿ ಎರಡೂ ಕೈಗಳನ್ನು ಜೋಡಿಸಿ ನಮಸ್ಕಾರ ಮಾಡ್ತಾ.. ಪಿತಾಮಹ, ಸೈನ್ಯ ಎಷ್ಟೇ ದೊಡ್ಡದಾಗಿರಲಿ ಸಮರ್ಥವಾಗಿರಲಿ ಅದಕ್ಕೆ ಯೋಗ್ಯನಾದ ನಾಯಕ ಇಲ್ಲದೆ ಹೋದರೆ ಅದರ ಸಾಮರ್ಥ್ಯ ವ್ಯರ್ಥವಾಗುತ್ತದೆ! ನೀವು ನೀತಿಯಲ್ಲಿ ಶುಕ್ರಾಚಾರ್ಯರಿಗೆ ಸಮ, ಧರ್ಮದಲ್ಲಿ ಪ್ರತಿಷ್ಠಿತನಾಗಿರುವೆ, ತೇಜಸ್ಸಿನಲ್ಲಿ ಸೂರ್ಯ ಸಮಾನ ಧರ್ಮದಲ್ಲಿ ಪ್ರ...
S3 : EP - 65 : ಮಹಾಭಾರತದ ಮಹಾಯುದ್ಧ ನಿಶ್ಚಯ | The Great War of Mahabharata 26.07.2024 13:46
S3 : EP - 65 : ಮಹಾಭಾರತದ ಮಹಾಯುದ್ಧ ನಿಶ್ಚಯ | The Great War of Mahabharata ಇದು ಮಹಾಭಾರತದ ಸುಂದರ ಕಥೆಗಳಲ್ಲಿ ಒಂದು. ಇದೀಗ ಮಹಾಭಾರತದ ಮಹಾ ಯುದ್ಧ ನಿಶ್ಚಯವಾಗಿದೆ. ಕೌರವರ ಬಳಿ ಸಂಧಾನಕ್ಕಾಗಿ ಬಂದ ಕೃಷ್ಣನ ಸಂಧಾನ ವಿಫಲವಾಯಿತು. ಬಳಿಕ ವಿಷಯ ತಿಳಿಸಲು ಪಾಂಡವರ ಬಳಿ ಬಂದ. ಆಗ ಪಾಂಡವರು ಏನೆಂದರು. ಯುದ್ದಕ್ಕೆ ಪಾಂಡವರ ತಯಾರಿ ಹೇಗಿತ್ತು ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - sandhyavanipodcast@g...
S1EP - 450: ಯುದ್ಧದ ಭೀತಿ| Fear of war 25.07.2024 6:47
ಒಂದು ರಾಜ್ಯದ ಮೇಲೆ ಯುದ್ಧದ ಕಾರ್ಮೋಡ ಕವಿದಿತ್ತು, ಸೈನಿಕರ ಮನಸ್ಸು ಭಯದಿಂದ ಕೂಡಿತ್ತು, ಶತ್ರು ಬಲಾಢ್ಯನಾಗಿದ್ದ, ಸಾವಿರ ಸಾವಿರ ಸೈನ್ಯದ ಬಲ ಹೊಂದಿದ್ದ. ಎದುರು ಬಂದವರ ಸೋಲಿಸುವ ಶಕ್ತಿ ಅವನಿಗಿತ್ತು. ಅಷ್ಟೇ ಅಲ್ಲದೆ ಅವನು ತನ್ನೆದುರು ಸೋತವರ ರಾಜ್ಯದ ಜನರನ್ನ ಅವರ ಕುಟುಂಬವನ್ನ ಕ್ರೂರ ರೀತಿಯಲ್ಲಿ ನಡೆಸಿಕೊಂಡ ಇತಿಹಾಸವಿತ್ತು. ಆಗ.. ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ. ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - sandhyavanipodcast@gmail.c...
S1EP - 449: ಸಾತ್ವಿಕ ಹಾಗು ದೈವಭಕ್ತ ಬರ್ಬರಿ | Story from Mahabharata 20.07.2024 6:05
ಅರ್ಜುನನ ಮೊಮ್ಮಗ, ಅಂದ್ರೆ .. ಅರ್ಜುನನ ಮಗ ಘಟೋದ್ಗಜನ ಮಗ 'ಬರ್ಬರಿ' ಮಹಾನ್ ಸಾತ್ವಿಕ ಹಾಗು ದೈವ ಭಕ್ತ.. ಅವನ ಬದುಕಿನ ಘಟನೆ ಇದು. ಒಂದು ಬಾರಿ ಋಷಿ ಮುನಿಗಳು ಅಪೂರ್ವವಾದ ಯಾಗದ ಸಂಕಲ್ಪವೊಂದನ್ನು ಮಾಡಿದರು. ಲೋಕಹಿತಕ್ಕಾಗಿ ಮಾಡುವ ಈ ಯಜ್ಞಕ್ಕೆ ಯಾವುದೇ ವಿಗ್ನವಾಗದಂತೆ ಕಾಯುವ ವೀರ ಧೀರನ ಅಗತ್ಯ ಇತ್ತು. ಬರ್ಬರಿಯೇ ಈ ಕೆಲಸಕ್ಕೆ ಯೋಗ್ಯ ಎಂದು ಅವನಲ್ಲಿ ವಿನಂತಿ ಮಾಡಿದರು.. ಆಗ .. ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ. ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವ...
S3 : EP - 64 : ಕರ್ಣನ ನೆನೆದ ಕುಂತಿ | Story of Karna 19.07.2024 12:41
S3 : EP - 64 : ಕರ್ಣನ ನೆನೆದ ಕುಂತಿ Story of Karna ಯುದ್ಧದ ತಯಾರಿ ಆಗ್ತಾ ಇದೆ ಎಲ್ಲರೂ ಯುದ್ಧದ ಕುರಿತೇ ಮಾತಾಡ್ತಾರೆ, ಮುಂದೆ .. ಶ್ರೀ ಕೃಷ್ಣ ವಾಸುದೇವ ಉಪಪ್ಲಾವ್ಯಕ್ಕೆ ಹೊರಟು ಹೋದ ನಂತರ ಕುಂತಿ, ಮುಂದೆ ಬರುವಂತಹಾ ಘೋರ ವಿನಾಶವನ್ನು ನೆನೆದು ಬೇಸರಗೊಂಡಳು.. ಅವಳಿಗೆ ಭಯವಿತ್ತು.. ತನ್ನ ಮಕ್ಕಳು ಐದು ಮಂದಿ ಅವರು ನೂರು ಮಂದಿ ! ಮುಂದೇನಾಗ್ತದೋ ಎಂದು ಯೋಚಿಸಿ ಭಯಭೀತಳಾಗಿದ್ದಾಗ.. ಸುಂದರ ಕಥೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇ...
S1EP - 448: ವೇದಗಳನ್ನು ಲೂಟ ಹೊರಟ ಅಲೆಕ್ಸಾಂಡರ್| Alexander the Great 18.07.2024 5:47
ಅಲೆಕ್ಸಾಂಡರ್ ಭಾರತದ ಮೇಲೆ ದಂಡೆತ್ತಿ ಬಂದ ವಿಷಯವನ್ನ ನಾವೆಲ್ಲ ಚರಿತ್ರೆಗಳಲ್ಲಿ ಓದಿದ್ದೇವೆ. ದೇಶದ ಗಡಿ ದಾಟಿ ಹೊರಗೂ ಇದರ ಕೀರ್ತಿ ವ್ಯಾಪಿಸಿತ್ತು. ಧರ್ಮ ಲುಪ್ತವಾಗದಂತೆ, ಅಯೋಗ್ಯರ ಕೈಗೆ ಸಿಗದಂತೆ ಕಾಯುವವರಿದ್ದರು. ಅದರ ಹಿಂದಿನ ಮನೋಜ್ಞ ಕತೆ ಇಂದಿನ ಸಂಚಿಕೆಯಲ್ಲಿ. ಅಲೆಕ್ಸಾಂಡರ್ ನ ಗುರು ಅರಿಸ್ಟಾಟಲ್ ಅವರು ಪ್ಲಾಟೊರ ಶಿಷ್ಯರು, ಅವರ ಪರಮ ಗುರು ಸಾಕ್ರೆಟೀಸ್. ಅಲೆಕ್ಸಾಂಡರ್ ಭಾರತದ ಮೇಲೆ ದಂಡೆತ್ತಿ ಬರುವಾಗ ಗುರುವಿನ ಬಳಿ ಭಾರತದಿಂದ ಬರುವಾಗ ತಮಗಾಗಿ ಏನು ತರಲಿ ಎಂದು ಕೇಳಿದ. ಆಗ... ಕೇಳ...
S1EP - 447: ಪ್ರಾಮಾಣಿಕ ಮಾಣಿಯ ಕಥೆ | Story of a boy 13.07.2024 6:56
ಸುಮಾರು ಎಂಬತ್ತು ವರ್ಷಗಳ ಹಿಂದಿನ ಸತ್ಯ ಕಥೆ ಇದು. ಆಗ ದಕ್ಷಿಣಕನ್ನಡದವರು ಮುಂಬೈಗೆ ಹೋಗಿ ಉಡುಪಿ ಅಡುಗೆಯ ರುಚಿಯನ್ನು ಮಹಾರಾಷ್ಟದವರೆಗೆ ಪರಿಚಯಿಸಿದ್ರು. ಮುಂಬೈ ಶಹರದಲ್ಲಿ ಉಡುಪಿಯ ಇಡ್ಲಿ, ದೋಸೆಗಳು ಜನಪ್ರಿಯವಾಗಿದ್ದ ಕಾಲ.. ಮುಂದೆ.... ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ. ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - sandhyavanipodcast@gmail.com
S3 : EP - 63 : ಕರ್ಣನಿಗೆ ತನ್ನ ಜನ್ಮ ರಹಸ್ಯ ತಿಳಿದಾಗ.. | The secret of Karna's birth 12.07.2024 13:02
S3 : EP - 63 :ಕರ್ಣನಿಗೆ ತನ್ನ ಜನ್ಮ ರಹಸ್ಯ ತಿಳಿದಾಗ.. | The secret of Karna's birth ಇದು ಮಹಾಭಾರತದ ಸುಂದರ ಕಥೆಗಳಲ್ಲಿ ಒಂದು. ಕರ್ಣನಿಗೆ ಕೃಷ್ಣ ಜನ್ಮ ರಹಸ್ಯವನ್ನು ತಿಳಿಸಿದ ಕಥೆ ಇದು. ಪಾಂಡವರ ಪರವಾಗಿ ಕೌರವರ ಜೊತೆ ಸಂಧಾನಕ್ಕೆ ಬಂದಿದ್ದ ಕೃಷ್ಣ ಕರ್ಣನನ್ನು ಭೇಟಿ ಮಾಡಿ ಕರ್ಣನ ಹುಟ್ಟಿನ ರಹಸ್ಯವನ್ನು ತಿಳಿಸುತ್ತಾನೆ. ಆಗ ಕರ್ಣನ ಪ್ರತಿಕ್ರಿಯೆ ಎಂಥವರಲ್ಲೂ ಆಶ್ಚರ್ಯ ಹುಟ್ಟಿಸುತ್ತದೆ ಹಾಗಾದ್ರೆ ಅಲ್ಲಿ ನಡೆದಿದ್ದೇನು ಎಂಬ ಸುಂದರ ಕಥೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವ...
S1EP - 446 : ಸಂಸಾರವಿದ್ದರೂ ಇಲ್ಲದವಂತಿದ್ದವನ ಕಥೆ|The story of someone who has a family but doesn't. 11.07.2024 14:36
ಭವ ತ್ಯಜಿಸಿದವನೊಬ್ಬನಿದ್ದ, ಅಂದ್ರೆ ತನ್ನೆಲ್ಲವನ್ನು ಬಿಟ್ಟು ಖಾವಿ ವಸ್ತ್ರವನ್ನೋ ಬಿಳಿ ವಸ್ತ್ರವನ್ನೋ ಧರಿಸಿ ಮನೆ ಬಿಟ್ಟು ಕಾಡು ಮೇಡು ತಿರುಗುತ್ತಿದ್ದವ ಎಂಬ ಅರ್ಥ ಅಲ್ಲ. ಅವ ಸಂಸಾರದಲ್ಲಿ ಇದ್ದ ..ಇದ್ದರೂ ಇಲ್ಲದಂತಿದ್ದ. ಕಮಲದ ಎಲೆಯ ಮೇಲಿನ ಬೆಳ್ಳಂಬೆಳಗಿನ ಅಮೃತದ ಬಿಂದುವಿನ ಹಾಗೆ ಇದ್ದ. ಅಂದ್ರೆ.. ಚೂರು ಅಲ್ಲದಿದ್ದರೂ ಕೂಡ ಅವನು ನೀರಿನಲ್ಲಿ .... ಆಗ ..ಕೇಳಿ.. ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ. ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - san...
S1EP - 445 : ಚಿಂತೆಯಿಲ್ಲದನಿಗೆ ಒಕ್ಕರಿಸಿದ ಚಿಂತೆ | Worry for the unworried 06.07.2024 7:01
ಸ್ವಾನ್ಗ್ ಸೆ ಎಂಬ ವಿರಕ್ತ ದಾರ್ಶನಿಕನಿದ್ದ, ಎಂತಾ ಜಟಿಲ ಸಮಸ್ಯೆಯನ್ನೂ ಹಸನ್ಮುಖದಿಂದ ಪರಿಹರಿಸುತ್ತಿದ್ದ.. ಇವನು ಕೋಪಗೊಂಡದ್ದನ್ನು ಕಂಡವರೇ ಇರಲಿಲ್ಲ ! ಈತ ಚಿಂತಿತನಾದವನೇ ಅಲ್ಲ ! ಇಂತಾ ಸಮ ಚಿತ್ತ ಹೊಂದಿದ್ದರೂ ಆತ ಒಂದು ದಿನ ಚಿಂತಿತನಂತೆ ಕಂಡ.. ಆಗ ..ಕೇಳಿ.. ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ. ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - sandhyavanipodcast@gmail.com
S1EP - 444 : ಸಾಮ್ರಾಟನ ಆಸ್ಥಾನದಲ್ಲಿ ಮುಖ್ಯಮಂತ್ರಿ ಗಾದಿಗಾಗಿ ಸ್ಪರ್ಧೆ |Competition for the chief ministerial seat in the emperor's court 04.07.2024 5:04
ಒಬ್ಬ ಸಾಮ್ರಾಟನ ಆಸ್ಥಾನದಲ್ಲಿ ಮುಖ್ಯಮಂತ್ರಿಯ ಸ್ಥಾನ ತೆರವಾಗಿತ್ತು, ಮುಖ್ಯಮಂತ್ರಿಯಾಗಲು ಅನೇಕ ಅರ್ಹತೆಗಳು ಬೇಕು, ಅದರಲ್ಲಿ ತಾಳ್ಮೆ, ಸಮಯಪ್ರಜ್ಞೆ, ಮುತ್ಸದ್ದಿತನ, ಬುದ್ದಿವಂತಿಕೆ ಮುಖ್ಯವಾದವು. ಇದಕ್ಕಂತಲೇ ಅನೇಕ ಪರೀಕ್ಷೆಗಳನ್ನು ರೂಪಿಸಲಾಯಿತು. ಕಡೆಗೂ ಕೊನೆಯ ಸುತ್ತಿನ ಪರೀಕ್ಷೆಗೆ ಮೂರು ಮಂದಿ ಆಯ್ಕೆಯಾದರು.. ಆಗ.. ಕೇಳಿ.. ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ. ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - sandhyavanipodcast@gmail.com
S1EP - 443: ಮಹಾ ಮಠದ ಉತ್ತರಾಧಿಕಾರಿ | Successor to Maha Mata 29.06.2024 6:09
ಮಹಾ ಮಠದ ಪರಮಾಚಾರ್ಯ ಪೀಠಕ್ಕೆ ಆಯ್ಕೆ ನಡೀತಾ ಇತ್ತು ಪರಮಾಚಾರ್ಯರು ಹರಯದವನೊಬ್ಬನನ್ನ ಆಯ್ಕೆ ಮಾಡಿದ್ರು, ನೆರೆದವರಿಗೆ ಒಂದು ತರಹದ ನಿರಾಸೆ ಆಯ್ತು ಬಹಳಷ್ಟು ಅನುಭವ ಇದ್ದವನ ಹಾಗೆ ಕಾಣ್ತಾ ಇಲ್ಲ, ಗುರುಗಳು ಇವನನ್ನ ಹೇಗೆ ಆಯ್ಕೆ ಮಾಡಿದ್ರು ? ವಿದ್ಯೆಯಿಂದ, ಅನುಭವದಿಂದ , ವಯಸ್ಸಿನಿಂದ ಕೂಡ ಮಾಗಿದವರು ಇದ್ದಾಗಲೂ ಕೂಡ ಈ ಹುಡುಗ ಹೇಗೆ ಆಯ್ಕೆಯಾದ ? ಆಗ ... ಕೇಳಿ.. ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ. ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - sandhyav...
S3 : EP - 62 : ಶ್ರೀ ಕೃಷ್ಣನ ವಿಶ್ವರೂಪ | Vishwarupa of Shri Krishna 28.06.2024 14:21
S3 : EP - 62 : ಶ್ರೀ ಕೃಷ್ಣನ ವಿಶ್ವರೂಪ | Vishwarupa of Shri Krishna ದುರ್ಯೋಧನ ಸಭಾ ಸದರ ಅದೂ ಮುಖ್ಯವಾಗಿ ಬೀಷ್ಮ, ದ್ರೋಣ, ಕರ್ಣಾದಿಗಳ ಹಾಗೂ ಶ್ರೀ ಕೃಷ್ಣನ ಮಾತುಗಳನ್ನು ದಿಕ್ಕರಿಸಿ ಸಭಾ ತ್ಯಾಗ ಮಾಡಲು ಎದ್ದು ನಿಂತಾಗ ವಿದುರನೂ ಇದ್ದು ನಿಂತ ಕೋಪ ಕ್ರೋಧಗಳನ್ನು ನಿಯಂತ್ರಿಸಲಾಗದೇ ನಡುಗುತ್ತಿದ್ದ ಧುರ್ಯೋಧನನ್ನ ನೋಡ್ತಾ.. ಮುಂದೇನಾಯ್ತು ಎಂಬ ಸುಂದರ ಕಥೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - sand...
S1EP - 442 : ಚೀನಾ ದೇಶದ ಅಪರೂಪದ ಕಥೆ | Story of a feng 27.06.2024 6:32
ಚೀನಾ ದೇಶದಲ್ಲಿ ಅಂತರ್ಯುದ್ಧಗಳು ನಡೀತಾ ಇದ್ದ ಕಾಲ ಫೆಂಗ್ ಎಂಬ ಹೆಸರಿನ ಯುವಕನೊಬ್ಬನಿದ್ದ, ಕಾಡು ಬಡತನದಲ್ಲಿದ್ದ , ಯಾವುದೇ ರೀತಿಯ ಸಾಂಪ್ರದಾಯಿಕ ವಿದ್ಯಾಭ್ಯಾಸ ಇಲ್ಲದ್ದರಿಂದ ಎಲ್ಲೂ ಕೆಲಸ ಸಿಕ್ತಾ ಇರಲಿಲ್ಲ.. ತುಂಬಾ ಯೋಚಿಸಿ ಪ್ರಾಂತ್ಯದ ಪಾಳೇಗಾರನ ಅರಮನೆಗೆ ಹೋದ ಅವನ ಮಿತ್ರ ಒಬ್ಬ ಈ ಪಾಳೇಗಾರನ ಅಂಗರಕ್ಷಕರಲ್ಲೊಬ್ಬನಾಗಿದ್ದ.. ಆಮೇಲೇನಾಯ್ತು ಕೇಳಿ.. ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ. ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - sandhyavanipodca...
S3 : EP - 61 : ಮಹಾ ಪರಾಕ್ರಮಿ ದಂಬೊಧ್ಭವನ ಕಥೆ | Story of Dambodhbhava 21.06.2024 15:29
ಶ್ರೀ ಕೃಷ್ಣ ತನ್ನ ಮೃದು ವಚನಗಳಿಂದಲೇ ದೃತರಾಷ್ಟ್ರ ಪುತ್ರನ ಕೃತಿಮಾಗಳೆಲ್ಲವನ್ನೂ ಸಭೆಯ ಎದುರು ತೆರೆದಿಟ್ಟರೂ ನೆರೆದವರಲ್ಲಿ ಒಬ್ಬರೂ ಅವನನ್ನು ಸಮರ್ಥಿಸಲಿಲ್ಲ, ಆದರೆ ಜಮದಗ್ನಿ ಋಷಿಗಳ ಪುತ್ರ ಪರಶುರಾಮರು ಎದ್ದು ನಿಂತರು.. ಅವರು ಹೀಗಂದ್ರು, ಮಹಾರಾಜ ನಾನೀಗ ಉದಾಹರಣೆಯೊಂದಿಗೆ ಹೇಳುವ ಸತ್ಯವಾದ ಮಾತನ್ನು ಕೇಳು.. ಅನಂತರ ಈ ಮಾತಿನ ಹಿಂದಿರುವ ಸತ್ಯ ಪಾಲನೆ ಮಾಡಬೇಕೋ ಬೇಡವೋ ಅದು ನಿನಗೆ ಬಿಟ್ಟದ್ದು ನೀನು ನಿರ್ಧರಿಸು ಅಂದ.. ಮುಂದೇನಾಯ್ತು ಎಂಬ ಸುಂದರ ಕಥೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್...
S1EP - 441 : ರಾಜಕುಮಾರಿ ದ್ರೌಪದಿ | Story from Mahabharatha 20.06.2024 7:39
ಹನ್ನೆರಡು ವರ್ಷಗಳ ವನವಾಸ ಕೊನೆಯ ಘಟ್ಟದಲ್ಲಿತ್ತು,ಕಳೆದ ವರುಷಗಳಲ್ಲಿ ಭೀಮ ಅರ್ಜುನರು.. ತಮ್ಮ ಕೋಪವನ್ನು ಹಿಡಿತದಲ್ಲಿಡಲು ಕಲಿತಿದ್ದರು ಯುಧಿಷ್ಠಿರ ಬದುಕನ್ನು ನಿಷ್ಪ್ರಹಿತೆಯಿಂದ ನೋಡುವತ್ತ ವಾಲಿದ್ದ, ದ್ರೌಪದಿಗೆ ಮಾತ್ರ ತನಗಾದ ಅವಮಾನವನ್ನ ಮರಿಯಲಿಕ್ಕೆ ಸಾದ್ಯವಾಗಿರಲೇ ಇಲ್ಲ ರಾಜಕುಮಾರಿಯಾಗಿ ಹುಟ್ಟಿ ಬೆಳದು ಮಹಾ ವೀರರಾದ ಪಂಚ ಪಾಂಡವರ ಪ್ರೇಮದ ಪತ್ನಿಯನ್ನ ತುಂಬಿದ ಸಭೆಯಲ್ಲಿ ಎಳೆದು ತಂದು ತೊಡೆ ತತ್ತಿ ದಾಸಿ ಬಾ ಎಂದಿದ್ದ ಕೌರವರಮೇಲೆ ಸಿಟ್ಟು ದಿನದಿಂದ ದಿನಕ್ಕೆ ಜಾಸ್ತಿಯಾಗುತ್ತಲೇ ಇತ್ತು...
S1EP - 440 :ಹಾವಿನ ಸಾವಿಗೆ ಕಾರಣ ಯಾರು ? Story on a snake 15.06.2024 6:36
ಒಂದಾನೊಂದು ಊರಿನಲ್ಲಿ ಒಬ್ಬ ಪಾದರಕ್ಷೆ ತಯಾರಿಸುವವನಿದ್ದ, ಒಂದು ಸಂಜೆ ಕೆಲಸ ಮುಗಿಸಿ ಅಂಗಡಿಯ ಬಾಗಿಲು ಮುಚ್ಚಿ ಮನೆಗೆ ಹೋದ.. ಅವನು ಅತ್ತ ಹೋಗುತ್ತಿದ್ದ ಹಾಗೆ ವಿಷ ತುಂಬಿದ ಹಾವೊಂದು ಒಳಗೆ ಬಂತು ಹಾವಿಗೆ ತುಂಬಾ ಹಸಿವಾಗಿತ್ತು.. ಅತ್ತಿತ್ತ ಹರಿದಾಡಿ ತಿನ್ನಲಿಕ್ಕೆ ಏನಾದ್ರೂ ಸಿಗಬಹುದೇ ಅಂತ ಹುಡುಕಾಡಿದಾಗ ಅದಕ್ಕೆ ಒಪ್ಪಿಯಾಗುವಂತದ್ದು ಏನೂ ಸಿಗಲಿಲ್ಲ.. ಆಗ ... ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ. ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - sand...
S3 : EP - 60 :ದುರ್ಯೋಧನನ ಆಸ್ಥಾನದಲ್ಲಿ ಶ್ರೀ ಕೃಷ್ಣ. | Lord Krishna in Duryodhana's court. 14.06.2024 13:25
S3 : EP - 60 :ದುರ್ಯೋಧನನ ಆಸ್ಥಾನದಲ್ಲಿ ಶ್ರೀ ಕೃಷ್ಣ. | Lord Krishna in Duryodhana's court. ಕೃಷ್ಣ.. ಸಂಧಾನಕ್ಕಾಗಿ ದುರ್ಯೋಧನನ ಅರಮನೆಗೆ ಬರ್ತಾನೆ, ಕುರು ಸಭೆಯಲ್ಲಿ.. ಕುಂತಿಗೆ ನಮಸ್ಕರಿಸಿ ಅನುಮತಿ ಪಡೆದು ದುರ್ಯೋಧನನ ಅರಮನೆಗೆ ಬಂದ. ಅರಮನೆಯ ಮೂರೂ ಮಹಾದ್ವಾರವನ್ನು ದಾಟಿ ಪ್ರಸಾದವನ್ನು ಪ್ರವೇಶಿಸಿದ.. ಅಲ್ಲಿ ದುರ್ಯೋಧನ ತನ್ನೋವರೊಡಗೂಡಿ ಆಸೀನನಾಗಿದ್ದ.. ದುರ್ಯೋಧನ ಶ್ರೀಕೃಷ್ಣ ಆಗಮಿಸುವುದನ್ನು ಕಂಡು .. ಮುಂದೇನಾಯ್ತು ಎಂಬ ಸುಂದರ ಕಥೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವ...
S1EP - 439 : ಅಪ್ಪ ನೆಟ್ಟ ಆಲದಮರ | story on blind belief 08.06.2024 7:58
ಗುರುಕುಲದಲ್ಲಿ ಒಂದು ಪದ್ಧತಿ ಇತ್ತಂತೆ, ಗುರುಗಳು ಪಾಠ ಶುರುಮಾಡುವ ಮುನ್ನ ಒಂದು ಬೆಕ್ಕನ್ನು ಹಿಡಿದು ಚೀಲದಲ್ಲಿ ಹಾಕಿ ಬಾಯಿಕಟ್ಟಿ ಗುರುಗಳ ಕಣ್ಣಳತೆಯಷ್ಟು ದೂರದಲ್ಲಿಡಬೇಕು ಪಾಠ ಮುಗಿದ ಮೇಲೆ ಅದನ್ನು ಬಿಡಬೇಕು. ಬಹಳದಿನಗಳಕಾಲ ಇದು ನಡೆಯಿತು. ಒಂದು ದಿನ ಗುರುಕುಲಾಧಿಪತಿಗಳು ಅಲ್ಲಿ ಬಂದ್ರು , ಅವರ ಕಣ್ಣಿಗೆ ಈ ಪದ್ಧತಿ ಬಿತ್ತು ಆಮೇಲೇನಾಯ್ತು.... ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ. ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - sandhyavanipodca...
S3 : EP - 59 :ಕೃಷ್ಣ ಸಂಧಾನ | Krishna Sandhana 07.06.2024 17:48
S3 : EP - 59 :ಕೃಷ್ಣ ಸಂಧಾನ | Krishna Sandhana ಹಿಂದೆ ನಿರ್ಧರಿಸಿದಂತೆ ಕೃಷ್ಣ ಹಸ್ತಿನಾಪುರಕ್ಕೆ ಬರುವ ಸನ್ನಿವೇಶ.. ಕೃಷ್ಣ ಸಂಧಾನಕ್ಕೆ ಹೊರಡುತ್ತೇನೆ ಅಂದಾಗ ದ್ರೌಪದಿಗೆ ದುಃಖ ಉಕ್ಕಿ ಉಕ್ಕಿ ಬಂತಂತೆ.. ಕಣ್ಣೀರು ಸುರಿಯುತ್ತಿದ್ದರೂ ಸಂಯಮದಿಂದ ಹೇಳ್ತಾಳೆ.. ' ಕೇಶವಾ ನಾನು ನಿನ್ನ ಪ್ರೀತಿಗೆ ಪಾತ್ರಳಾದ ಸಖಿ, ನಿನ್ನಲ್ಲಿರುವ ಸಲುಗೆಯಿಂದ ಹೇಳುತ್ತಿದ್ದೇನೆ.. ಪ್ರಸಿದ್ಧ ಪಾಂಚಾಲ ವಂಶದ ದ್ರುಪದ ಮಹಾರಾಜನ ಮಗಳಾದರೂ ಯಜ್ಞಕುಂಡದಿಂದ ಅಯೋನಿಜೆಯಾಗಿ ಜನಿಸಿದೆ ಆದರೆ .. ಮುಂದೇನಾಯ್ತು ಎ...
S1EP - 438 : ಸಾಯುವ ಮುನ್ನ ಕಾಣುವ ಪ್ರಪಂಚ | life before the death 06.06.2024 5:30
ಒಬ್ಬನಿಗೆ ಬದುಕು ಸಾಕಾಯ್ತು ಎಲ್ಲಿ ನೋಡಿದರಲ್ಲಿ ಇಲಿಗಳ ಓಟ ಮೇಲಾಟ.. ಯಾವುದಾದರೂ ಒಂದು ದೂರದ ಪರ್ವತದ ಗುಹೆಯಲ್ಲಿ ಅಡಗಿ ಕುಳಿತು ಇವೆಲ್ಲ ತಲೆಬಿಸಿಯಿಂದ ಪಾರಾಗುವ ಅಂತ ಅನ್ಸಿದ್ರೂ ಕೂಡ.. ಸೌಕರ್ಯಗಳಿಗೆ, ಸುಖಕ್ಕೆ ಒಗ್ಗಿ ಹೋದ ದೇಹ ಕಷ್ಟಗಳಿಗೆ ಹೆದರ್ತಾ ಇತ್ತು. ಆಗ .. ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ. ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - sandhyavanipodcast@gmail.com
S1EP - 437 :ಕಗ್ಗತ್ತಿಲಿನಲ್ಲಿ ನೀರಿಗಿಳಿದು ಮಾಯವಾದ ಗುರುನಾನಕ| Story of Gurunanakರು 01.06.2024 6:58
ಒಂದು ಕಗ್ಗತ್ತಲಲ್ಲಿ ಗುರುನಾನಕರು ತಮ್ಮ ಪ್ರಿಯ ಸಖ ಮರ್ದಾನನೊಂದಿಗೆ ನದಿ ತೀರದಲ್ಲಿ ಕುಳಿತುಕೊಂಡಿದ್ದರಂತೆ ಅವರ ಅವರ ಕಣ್ಣೆರಡು ತೆರೆದುಕೊಂಡೇ ಇದ್ರೂ ಚಲನೆ ಇರಲಿಲ್ಲ ತದೇಕಚಿತ್ತರಾಗಿ ತುಂಬಿ ಹರಿಯುತ್ತಿದ್ದ ನದಿಯನ್ನೇ ದಿಟ್ಟಿಸುತ್ತಿದ್ದರು, ಇದ್ದಕ್ಕಿದಂತೆಯೇ ಮೈಮೇಲಿನ ಬಟ್ಟೆಯೆಲ್ಲಾ ಸರಸರನೆ ಕಳಚಿದರು ಆಗ .. ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ. ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - sandhyavanipodcast@gmail.com
Схожі подкасти
Replaio не є видавцем подкастів; назви шоу, обкладинки та аудіо належать їхнім авторам і поширюються через публічні RSS-канали