UVLISTEN

UV Listen

Kids KN ↓ 238 avsnitt

Recharge: Kick start your day by tuning in to "Recharge” Podcast by Mr. Badekkila Pradeep. Relax: Stay relaxed with joy, music, comfort with the podcast "Relax" by Mr. Badekkila Pradeep.

Skapare

UVLISTEN

Kategori

Kids

Poddens webbplats

podcasters.spotify.com

Senaste avsnittet

11 aug 2024

Var kan du lyssna?

Poddar i appen Replaio Radio Kommer snart

Poddar kommer snart till appen. Installera nu och bli först med att uppleva ett helt nytt sätt att lyssna på poddar

Ladda ned på Google Play Installera gratis Android nästan 10 mn nedladdningar · betyg 4,8 iOS snart

Avsnitt

S1EP 46 ಭಗವದ್ಗೀತೆ : ಹಲವು ವಿಚಾರ ಒಂದೇ ಮೂಲತತ್ವ 08.08.2022

ಭಗವದ್ಗೀತೆಯನ್ನು ಕೇಳಿದಾಗ ನಾವು ಗೊಂದಲಕ್ಕೆ ಬೀಳೋದು ಸಾಮಾನ್ಯ. ಯಾಕಂದ್ರೆ ಎಲ್ಲಾ ವಿಚಾರಗಳನ್ನು ಕೇವಲ 18 ಅಧ್ಯಾಯಗಳಲ್ಲಿ ಹೇಳಿದ್ದಾನೆ ಭಗವಾನ್ ಶ್ರೀಕೃಷ್ಣ. ಈ ಸಂಚಿಕೆಯಲ್ಲಿ ಪೂರ್ತಿ ಭಗವದ್ಗೀತೆಯ ಸಾರ ತಿಳಿದು Relax ಆಗಿ ಬಡೆಕ್ಕಿಲ ಪ್ರದೀಪ ಧ್ವನಿಯಲ್ಲಿ. www.uvlisten.com ಟೈಪ್ ಮಾಡಿ ಅಥವಾ QR ಕೋಡ್ ಸ್ಕ್ಯಾನ್ ಮಾಡಿ.

S1EP 45 ಗೀತೆಯನ್ನು ಶ್ರವಣ ಮಾಡುವವನು ಪುಣ್ಯ ಪಡೆಯುತ್ತಾನೆ 01.08.2022

ಈ ಜಗತ್ತಿನಲ್ಲಿ ಪ್ರಕೃತಿ ಜನ್ಯಗಳಾದ ತ್ರಿಗುಣಗಳಿಗೆ ಸಂಬಂಧಪಡದ ಜೀವಿಗಳು ಯಾವುದೂ ಇಲ್ಲ ಅಂದ ಶ್ರೀ ಕೃಷ್ಣ ಇಲ್ಲಿಯವೆರೆಗೆ ಜ್ಞಾನ, ಕರ್ಮ, ಕರ್ತಾ, ಕರ್ತ್ರ್, ಬುದ್ಧಿ, ಧೃತಿ, ಸುಖಗಳಲ್ಲಿನ ಭೇದಗಳನ್ನು ತಿಳಿಸುತ್ತಾನೆ. ಈ ಸಂಚಿಕೆಯಲ್ಲೂ ಭಗವದ್ಗೀತೆಯೊಂದಿಗೆ ಬದುಕನ್ನರಿಯಿರಿ ಬಡೆಕ್ಕಿಲ ಪ್ರದೀಪ ಧ್ವನಿಯಲ್ಲಿ. ಈ .. ಕೋಡ್ ಸ್ಕ್ಯಾನ್ ಮಾಡಿ. 

S1EP 67 ಯಶಸ್ಸು ನಮ್ಮದಾಗೋದು ಯಾವಾಗ ಗೊತ್ತೇ? 31.07.2022

ನಾವೊಂದು ನದಿಯಲ್ಲಿರೋವಾಗ ನಮ್ಮ ಗುರಿ ದಡ ಸೇರೋದಾಗಿರುತ್ತೆ. ದಡ ಸೇರೋದು ಕಷ್ಟ ಆದ್ರೆ ಹೋಗೋ ದಿಕ್ಕು ಬದಲಾಯಿಸಬೇಕು ಹೊರತು ದೋಣಿಯನ್ನಲ್ಲ. ಅದೇ ರೀತಿ ಗೆಲುವು ಕೂಡ. ಗೆಲುವಿನ ದಡ ಸೇರೋ ಯಶಸ್ಸಿನ ಸೂತ್ರಗಳನ್ನು ತಿಳಿಯಿರಿ ಯಶಸ್ಸಿನ ದಾರಿಯಲ್ಲಿ ವಿಹರಿಸಿ ಬಡೆಕ್ಕಿಲ ಪ್ರದೀಪ ಜೊತೆ. QR ಕೋಡ್ ಸ್ಕ್ಯಾನ್ ಮಾಡಿ.

S1EP 44 ಸನ್ಯಾಸದ ಮೌಲ್ಯ ಮತ್ತು ತ್ಯಾಗದ ಮಹತ್ವ ಏನು ? 25.07.2022

ಭಗವದ್ಗೀತೆಯ ಆರಂಭದ ಅಧ್ಯಾಯದಲ್ಲಿ ಅರ್ಜುನನ ಹತಾಶೆಯನ್ನು ಕಂಡಿದ್ದೇವೆ. ಈ ಸಂಚಿಕೆಯಲ್ಲಿ ಗೀತೆಯ ಹಿಂದಿನೆಲ್ಲಾ ಅಧ್ಯಾಯಗಳ ಸಾರಾಂಶದ ಜೊತೆಗೆ ಅರ್ಜುನನ ಕೆಲ ಪ್ರಶ್ನೆಗಳಿಗೆ ಉತ್ತರ ನೀಡಿದ್ದಾನೆ ಶ್ರೀ ಕೃಷ್ಣ. ಭಗವದ್ಗೀತೆಯೊಂದಿಗೆ ಬದುಕನ್ನರಿತು Relax ಆಗಿ ಬಡೆಕ್ಕಿಲ ಪ್ರದೀಪ ಧ್ವನಿಯಲ್ಲಿ. QR ಕೋಡ್ ಸ್ಕ್ಯಾನ್ ಮಾಡಿ.

S1EP 66 : ನಿರಾಕರಣೆಯೇ ಪ್ರೇರಣೆಯಾದಾಗ | Use Rejection as Motivation Edit 24.07.2022

ಗೆದ್ದವರೆಲ್ಲರೂ ಸೋತಿರಲಿಲ್ವಾ ? ಶಿಲೆಗೆ ಉಳಿಪೆಟ್ಟು ಬಿದ್ದಾಗ ಮಾತ್ರ ಸುಂದರ ಮೂರ್ತಿಯಾಗಲು ಸಾಧ್ಯ. ಜೀವನದಲ್ಲಿ ಸೋಲಿನ ಅನುಭವ ಆಗದಾಗ ಗೆಲುವು ಸಂಭ್ರಮಿಸಲು ಹೇಗೆ ಸಾಧ್ಯ ? ಕೆಲಹೊತ್ತು ಈ ಹಾದಿಯಲ್ಲಿ ವಿಹರಿಸಿ Recharge ಆಗಿ ಬಡೆಕ್ಕಿಲ ಪ್ರದೀಪ ಧ್ವನಿಯಲ್ಲಿ

S1EP 43 ಆ 3 ಶ್ರದ್ಧೆಗಳ ವಿಸ್ತಾರತೆ ಎಷ್ಟಿದೆಯೆಂದ್ರೆ.. 18.07.2022

ಈ ಸಂಚಿಕೆಯಲ್ಲಿ ಶ್ರೀ ಕೃಷ್ಣ ತಪಸ್ಸು, ದಾನ, ಚಿಂತನೆ ಕುರಿತ ವ್ಯಾಖ್ಯಾನ ಇದೆ. ಸರಿ, ತಪ್ಪುಗಳ ಚಿಂತನೆಯಲ್ಲಿ ನಮ್ಮನ್ನು ಆತ ದೂಡುತ್ತಾನೆ. ನಮ್ಮಲ್ಲಿರೋ ಸಂದೇಹ ಮತ್ತು ಗೊಂದಲಗಳನ್ನು ಶ್ರೀಕೃಷ್ಣ ಹೇಳೋ ಪಾಠದ ಮೂಲಕ ತಿಳಿದು .. ಆಗಿ .. ಬಡೆಕ್ಕಿಲ ಪ್ರದೀಪ ಧ್ವನಿಯಲ್ಲಿ. ... ಟೈಪ್ ಮಾಡಿ ಅಥವಾ .. ಕೋಡ್ ಸ್ಕ್ಯಾನ್ ಮಾಡಿ

S1EP 65 : ಇಲ್ಲಿದೆ ಯಶಸ್ಸಿಗೆ ಸಾವಿರ ಸೂತ್ರಗಳು ! 17.07.2022

ಗೆಲುವಿನ ದಾರಿಯಲ್ಲಿ ಸಾಗುವಾಗ ನಮ್ಮ ಜೊತೆಗಿರುವುದು ಸಮಯ. ಸಮಯಕ್ಕೆ ಬೆಲೆ ನೀಡುವುದು ಅಂದ್ರೆ ನಮ್ಮ ಕೆಲಸ, ಚಟುವಟಿಕೆಗಳಿಗೆ ನಾವು ಬೆಲೆ ಕೊಟ್ಟ ಹಾಗೆ. ಸಮಯ ಪಾಲನೆ  ನಮ್ಮನ್ನು ಯಶಸ್ಸಿನ ದಡ ಹೇಗೆ ಸೇರಿಸುತ್ತೆ ಅನ್ನೋದನ್ನು ಮಾತಿನ ದೋಣಿಯಲ್ಲಿ ವಿಹರಿಸುತ್ತ ತಿಳಿದು Recharge ಆಗಿ ಬಡೆಕ್ಕಿಲ ಪ್ರದೀಪ ಧ್ವನಿಯಲ್ಲಿ.

S1 EP42 ಶ್ರೀಕೃಷ್ಣ ಕಲಿಸಿದ ಶ್ರದ್ಧೆಯ ಪಾಠ 11.07.2022

ಈ ಸಂಚಿಕೆ ಆರಂಭವಾಗೋದು ಅರ್ಜುನನ ಪ್ರಶ್ನೆಯಿಂದ. ಮನುಷ್ಯನ ಸ್ಥಿತಿ ಯಾವುದು ? ಅದು ಸಾತ್ವಿಕ ಶ್ರದ್ಧೆಯೋ ? ರಾಜಸಿಕವೋ ? ಎನ್ನುವುದು ಅರ್ಜುನನ ಪ್ರಶ್ನೆಯಾಗಿದೆ. ಒಂದು ಬೆಳಕಿನ ರೂಪದಲ್ಲಿ ಪರಮಾತ್ಮನನ್ನು ಸ್ಮರಿಸುತ್ತ ಈ ಪ್ರಶ್ನೆಯ ಉತ್ತರ ಕಂಡುಕೊಂಡು Relax ಆಗಿ ಬಡೆಕ್ಕಿಲ ಪ್ರದೀಪ ಧ್ವನಿಯಲ್ಲಿ.

S1EP 64 : ಯಶಸ್ಸಿನ ಸೂತ್ರಗಳು - ಇಂದಿನಿಂದ ಅಮೋಘ ಪ್ರಾರಂಭ 10.07.2022

ಮಾತು ಮತ್ತದರೊಳಗಿನ ವಸ್ತುವಿನ ಮೂಲಕ ಪ್ರೇರಣೆ ಪಡೆಯಬೇಕು. ಇದು ನೂತನ ಪ್ರಯಾಣದ ಆರಂಭದ ಸಮಯ. ಇಂದಿನಿಂದ ಪ್ರತೀ ಸೋಮವಾರ Success Secretsಗಳನ್ನು ಕೇಳಿ ಬಡೆಕ್ಕಿಲ ಪ್ರದೀಪ ಅವರ ಧ್ವನಿಯಲ್ಲಿ.

S1EP41 ಈ ಮೂರು ಗುಣಗಳೇ ನಾವು ವಾಸಿಸುತ್ತಿರುವ ಸಮಾಜದಲ್ಲಿ ತಾಂಡವಾಡುತ್ತಿವೆ! 04.07.2022

ದೈವೀ ಸಂಪತ್ತು ಅಂದ್ರೆ ದೇವತೆಗಳ ಸಂಪತ್ತು ಅಂತಲ್ಲ. ಅದು ದಿವ್ಯ ಮತ್ತು ಅಮೋಘವಾದ ಸಂಪತ್ತು. ಮೋಕ್ಷ ಸಂಪತ್ತನ್ನು ಪಡೆಯುವುದಕ್ಕಾಗಿಯೇ ಹುಟ್ಟಿರುವವರಿಗೆ ಯಾವ ಗುಣಗಳಿರುತ್ತವೆ ? ಮತ್ತು ದೈವೀ ಸಂಪತ್ತಿಗೆ ವಿರುದ್ಧವಾದ ಪುರುಷನ ಲಕ್ಷಣಗಳು ಯಾವುವು ಎಂದು ತಿಳಿದು Relax ಆಗಿ ಬಡೆಕ್ಕಿಲ ಪ್ರದೀಪ ಅವರ ಧ್ವನಿಯಲ್ಲಿ.

S1EP 63 ಅನೇಕ ಜಟಿಲ ವಿಚಾರಗಳನ್ನು ಸುಲಭವಾಗಿ ತಿಳಿಸಿದವರಿವರು.. 03.07.2022

ಜ್ಯೋತಿಷ್ಯ ಮತ್ತು ಖಗೋಳಶಾಸ್ತ್ರ ನಮ್ಮ ಜೀವನದ ಭಾಗವಾಗಿದೆ. ಯಾವುದೇ ಶುಭ ಸಮಾರಂಭಕ್ಕೂ ಮೊದಲು ಅಥವಾ ಹಬ್ಬ ಹರಿದಿನಗಳನ್ನು ಆಚರಿಸಲು ನಾವು ಜ್ಯೋತಿಷ್ಯ, ಪಂಚಾಂಗದ ಮೊರೆ ಹೋಗುವುದು ಸಾಮಾನ್ಯ. ಈ ಸಂಚಿಕೆಯಲ್ಲಿ ಜ್ಯೋತಿಷ್ಯ, ಗಣಿತ ಶಾಸ್ತ್ರಕ್ಕೆ ಅಮೋಘ ಕೊಡುಗೆ ನೀಡಿದ ಮೇಧಾವಿ ಕುರಿತು ತಿಳಿದು Recharge ಆಗಿ ಬಡೆಕ್ಕಿಲ ಪ್ರದೀಪ ಧ್ವನಿಯಲ್ಲಿ.

S1EP 40 ಕೃಷ್ಣವಾಣಿಯ ತಾತ್ಪರ್ಯ ಕೇಳಲು ಸಿದ್ಧರಾಗಿ 27.06.2022

ಪ್ರತಿ ಧರ್ಮಶಾಸ್ತ್ರದಲ್ಲೂ ಮನುಷ್ಯರಲ್ಲಿರೋ ಒಳ್ಳೇದು ಮತ್ತು ಕೆಟ್ಟ ಗುಣಗಳ ವಿವರಣೆ ಬರುತ್ತೆ. ಒಳ್ಳೆ ಗುಣಗಳಿಗೆ ದೈವೀ ಸಂಪತ್ತು ಎಂದರೆ ಕೆಟ್ಟ ಗುಣಗಳನ್ನು ಅಸುರೀ ಸಂಪತ್ತು ಎಂದು ವಿವರಿಸಲಾಗಿದೆ. ಈ ವಿಂಗಡಣೆ ಯಾಕೆ ? ತಿಳಿದು Relax ಆಗಿ ಬಡೆಕ್ಕಿಲ ಪ್ರದೀಪ ಧ್ವನಿಯಲ್ಲಿ. 

S1EP 62 ಇವರನ್ನು ' Bird man of India' ಅಂತ ಕರೀತಾರೆ ! 26.06.2022

ಒಂದಿನ ಅವರು ಚಿಕ್ಕಪ್ಪನ ಜತೆಗೂಡಿ ಗಾಳಿಯ ಗನ್ ಬಳಸಿ ಪಕ್ಷಿಯೊಂದನ್ನು ಹೊಡೆದಿದ್ರಂತೆ. ಅದರಲ್ಲಿರೋ ವಿಶಿಷ್ಟ ಗುಣಗಳನ್ನು ಕಂಡು ಪಕ್ಷಿಗಳ ಕುರಿತು ಅಧ್ಯಯನ ಮಾಡಿ ಇಡೀ ವಿಶ್ವ ಗುರುತಿಸುವ ಪಕ್ಷಿತಜ್ಞರಾದ ಇವರ ಕುರಿತ ಸ್ಪೂರ್ತಿದಾಯಕ ಕತೆ ಕೇಳಿ Recharge ಆಗಿ ಬಡೆಕ್ಕಿಲ ಪ್ರದೀಪ ಧ್ವನಿಯಲ್ಲಿ. www.uvlisten.com ಟೈಪ್ ಮಾಡಿ ಅಥವಾ QR  ಕೋಡ್ ಸ್ಕ್ಯಾನ್ ಮಾಡಿ.

S1EP 39 ಕಣ್ಣು ತೆರೆದ ನಂತ್ರ ಸ್ವಪ್ನದ ಸಂಸಾರ ಕಂಡು ಬರೋದಿಲ್ಲ ! 20.06.2022

ಅತ್ತಂದಿತ್ತ ಓಡುವ ಮನಸಿಗೆ ಸ್ವಲ್ಪ ವಿರಾಮ ನೀಡಿ ಸಮಾಧಾನಪಡಿಸಿ. ಈ ಸಂಚಿಕೆಯಲ್ಲಿ  ಪರುಷೋತ್ತಮ ಅಂದ್ರೆ ಭಗವಂತನ ಪ್ರಾಪ್ತಿ ಹೇಗೆ ಸಾಧ್ಯ ಅನ್ನೋದನ್ನು ತಿಳಿದು .. ಆಗಿ ಬಡೆಕ್ಕಿಲ ಪ್ರದೀಪ ಧ್ವನಿಯಲ್ಲಿ. .... 

S1EP61 ವಿಶ್ವ ವಿಜ್ಞಾನದ ಮೇರು ಸಾಧಕ - ಹೋಮಿ ಬಾಬಾ | World Science Achiever - Homi Baba 19.06.2022

ವಿಜ್ಞಾನ ನಮ್ಮ ಜೀವನದಲ್ಲಿ ಹಾಸುಹೊಕ್ಕಾಗಿದೆ. ಈಗಂತೂ ಅದಿಲ್ಲದೆ ಬದುಕು ಸಾಧ್ಯವೇ ಇಲ್ಲ ಎಂಬಂತಾಗಿದೆ.ನಮ್ಮ ಬದುಕು ಬದಲಿಸಿದ ವಿಜ್ಞಾನ, ಅದರ ಹಿನ್ನೆಲೆ ಜೊತೆ ಈ ಕ್ಷೇತ್ರಕ್ಕೆ ಭಾರತದ ಕೊಡುಗೆ ಕುರಿತು ತಿಳಿದು Recharge ಆಗಿ ಬಡೆಕ್ಕಿಲ ಪ್ರದೀಪ ಧ್ವನಿಯಲ್ಲಿ. ಈ QR ಕೋಡ್ ಸ್ಕ್ಯಾನ್ ಮಾಡಿ.

S1EP 38 ದೀಪ ಬೆಳಗುವಾಗ ಅದರೊಂದಿಗೆ ಜೂಜಾಟ ಆಡಿದ್ರೆ.. 13.06.2022

ಸೃಷ್ಟಿ, ಸ್ಥಿತಿ, ಆಲಯಗಳು ದಿನನಿತ್ಯ ನಡೆಯುತ್ತಿರುತ್ತದೆ. ಆದ್ರೆ ಎಲ್ಲಾ ಗುಣಗಳು ಒಂದೇ ಹದದಲ್ಲಿರಬೇಕು. ಈ ಎಲ್ಲಾ ಗುಣಗಳ ಕುರಿತು ತಿಳಿದು .. ಆಗಿ ಬಡೆಕ್ಕಿಲ ಪ್ರದೀಪ ಅವರ ಧ್ವನಿಯಲ್ಲಿ. ಈ .. ಕೋಡ್ ಸ್ಕ್ಯಾನ್ ಮಾಡಿ.

S1EP 60 ಸಂಸ್ಕೃತದ ವ್ಯಾಕರಣವನ್ನು ಪ್ರಪಂಚಕ್ಕೆ ಪರಿಚಯಿಸಿದ್ದು ಯಾರು ಗೊತ್ತೇ? 12.06.2022

ಸಂಸ್ಕೃತ ದೇವ ಭಾಷೆ ಮತ್ತು ಅತ್ಯಂತ ಪ್ರಾಚೀನ ಭಾಷೆಯಾಗಿದೆ. ವೇದಗಳು ಕೂಡ ಇದೇ ಭಾಷೆಯಲ್ಲಿ ರಚಿತವಾಗಿದೆ. ಭಾಷೆಗೆ ಮೂಲವಾಗಿ ಬೇಕಿರುವುದು ವ್ಯಾಕರಣ. ಆ ವ್ಯಾಕರಣದ ಕರ್ತೃವಿನ ಕುರಿತು ತಿಳಿದು Recharge ಆಗಿ ಬಡೆಕ್ಕಿಲ ಪ್ರದೀಪ ಧ್ವನಿಯಲ್ಲಿ. ಈ qr ಕೋಡ್ ಸ್ಕ್ಯಾನ್ ಮಾಡಿ.

S1EP 59 ಇವರು ಯಾರೊಂದಿಗೂ ಪ್ರತಿಸ್ಪರ್ಧಿಯಾಗದೆ ಅಜಾತಶತ್ರುವಾಗಿ ಬದುಕಿದರು 05.06.2022

ಅವರು ಎಲ್ಲಾ ಮಿತಿಗಳನ್ನು ಮೀರಿ ಯಾರ ಸಹಾಯವೂ ಇಲ್ಲದೆ ಅತ್ಯುನ್ನತ ಸ್ಥಾನಕ್ಕೇರಿದವರು. ಯಾವುದೇ ರಾಜಕೀಯ ವ್ಯಕ್ತಿಯಾಗಿರಲಿಲ್ಲ ಆದ್ರೆ ಎಲ್ಲಾ ಪಕ್ಷದವರು ಇವರಲ್ಲಿ ಸಲಹೆ ಕೇಳುತ್ತಿದ್ರು. ದೇಶದ ಪ್ರತಿಯೊಬ್ಬ ಪ್ರಜೆ ಇವರನ್ನು ಗೌರವಿಸುತ್ತಿದ್ರು. ಇಂತಹ ಮಹಾನ್ ಸಾಧಕನ ಕುರಿತು ತಿಳಿದು Recharge ಆಗಿ ಬಡೆಕ್ಕಿಲ ಪ್ರದೀಪ ಧ್ವನಿಯಲ್ಲಿ. ಈ QR ಕೋಡ್ ಸ್ಕ್ಯಾನ್ ಮಾಡಿ.

S1EP 37 ಮನುಷ್ಯ ಪರಮಾನಂದ ಬಯಸಲು ಬೇಕಾದದ್ದು ಏನು ಗೊತ್ತೇ ? 30.05.2022

ಜ್ಞಾನದ ಮೂಲಕ ತಿಳಿಯಬೇಕಾದದ್ದನ್ನು, ಶ್ರೇಷ್ಠ ಜ್ಞಾನವನ್ನು ಜಗತ್ತಿಗೆ ತಿಳಿಸಲು ಕ್ಷೇತ್ರಜ್ಞ ಬಯಸಿದ್ದಾನೆ. ನಿಮ್ಮೆಲ್ಲಾ ಸಮಸ್ಯೆಗಳಿಗೆ ಪರಿಹಾರ ಹೇಳಲು ಶ್ರೀಕೃಷ್ಣ ಅವತರಿಸಿದ್ದಾನೆ ಅಂತ ಭಾವಿಸಿ ಈ ಸಂಚಿಕೆ ಕೇಳಿ .. ಆಗಿ ಬಡೆಕ್ಕಿಲ ಪ್ರದೀಪ ಧ್ವನಿಯಲ್ಲಿ. ಈ .. ಕೋಡ್ ಸ್ಕ್ಯಾನ್ ಮಾಡಿ.

S1EP 35 Relax ಎರಡು ರೀತಿಯ ಭಕ್ತಿಯೂ ಶ್ರೇಷ್ಠವಾಗಿದೆ.. ಅವು ಯಾವುದಂದ್ರೆ.. 23.05.2022

ಭಗವಂತನ ವಿಶ್ವರೂಪ ದರ್ಶನ ಕಂಡ ಅರ್ಜುನ, ಭಕ್ತಿಯ ಬಗ್ಗೆ ತಿಳಿಯೋದಕ್ಕೆ ಇಚ್ಛಿಸುತ್ತಾನೆ. ಶ್ರೀ ಕೃಷ್ಣ ಅನನ್ಯ ಭಕ್ತಿ ಭಾವವನ್ನು ತಿಳಿಸಿಕೊಡುತ್ತಾನೆ. ಕೃಷ್ಣವಾಣಿಯ ಮೂಲಕ ಜಗಕೆಲ್ಲಾ ತಿಳಿಸಿದ ಭಕ್ತಿಯೋಗದ ಕುರಿತು ಬದುಕು ಭಗವದ್ಗೀತೆಯ ಈ ಸಂಚಿಕೆಯಲ್ಲಿ ತಿಳಿದು .. ಆಗಿ ಬಡೆಕ್ಕಿಲ ಪ್ರದೀಪ ಧ್ವನಿಯಲ್ಲಿ. 

S1EP 58- Recharge ಆಚಾರ್ಯ ವಾಗ್ಭಟರು - ಆಯುರ್ವೇದದ ಮಹಾನ್ ಪಂಡಿತರು ! 22.05.2022

ಆಯುರ್ವೇದ ಪ್ರಾಚೀನ ಔಷಧ ಪದ್ಧತಿಯಾಗಿದೆ. ಇದನ್ನು ವಿಶ್ವದ ಅನೇಕ ರಾಷ್ಟ್ರಗಳು ನೆಚ್ಚಿಕೊಂಡಿವೆ. ಇದು ನಮ್ಮ ದೇಶದಲ್ಲಿ ಉಗಮ ಆಗಿರೋದ್ರಿಂದ ಇಲ್ಲಿ ಹಲವು ಪಂಡಿತರನ್ನು ಕಾಣಬಹುದು. ಅಂತಹ ಮೇಧವಿಯೊಬ್ಬರ ಕುರಿತು ತಿಳಿದು recharge ಆಗಿ ಬಡೆಕ್ಕಿಲ ಪ್ರದೀಪ ಧ್ವನಿಯಲ್ಲಿ. ಈ QR ಕೋಡ್ ಸ್ಕ್ಯಾನ್ ಮಾಡಿ.

S1EP36 Relax ಕ್ಷೇತ್ರ, ಕ್ಷೇತ್ರಜ್ಞರ ತತ್ವದ ಬಗ್ಗೆ ಭಗವಾನ್ ಶ್ರೀ ಕೃಷ್ಣ ಹೇಳಿದ್ದೇನು? 16.05.2022

ಶ್ರೀಕೃಷ್ಣ ವಿವರಣೆಗಳ ಮೂಲಕ ತಿಳಿಯಪಡಿಸಿದ್ದು, ರೈತನು ಬಿತ್ತಿದ ಬೀಜ, ಗೊಬ್ಬರದಿಂದ ಫಲಗಳು ಲಭಿಸುತ್ತವೆ. ಪ್ರಾರಬ್ಧ ಕರ್ಮಗಳು ಬೀಜ ರೂಪಗಳು, ಅವುಗಳಿಗೆ ಅನುಸಾರವಾಗಿ ಫಲಗಳು ಲಭಿಸುತ್ತಿರುತ್ತವೆ. ಪರಮಾತ್ಮನ ಸಾನಿಧ್ಯ, ಶರೀರವೆಂಬ ಕ್ಷೇತ್ರದಲ್ಲಿ ಯಾವಾಗಲೂ ಇರುತ್ತದೆ.

S1EP 57- Recharge : ಅನಕ್ಷರಸ್ಥ, ಅವಿದ್ಯಾವಂತ ಭಾರತದ genius ಆದ!! ... |Epi 57. Bharatada Geniusgalu Kaviratna Kalidasa 15.05.2022

ಭಾರತದ ಸಾಹಿತ್ಯ ಜಗತ್ತಿಗೆ ಅಪಾರವಾದ ಕೊಡುಗೆ ನೀಡಿದೆ. ನಮ್ಮಲ್ಲಿನ ಪಂಡಿತರು , ವಿದ್ವಾಂಸರು ಸಾಹಿತ್ಯ ಕ್ಷೇತ್ರಕ್ಕೆ ಅನೇಕ ಆಯಾಮ ನೀಡಿದ್ದಾರೆ. ಅಂತಹ ಮಹಾನ್ ಮೇಧಾವಿಯೊಬ್ಬರ ಕೊಡುಗೆ ಮತ್ತು ಸಾಧನೆ ತಿಳಿದು recharge ಆಗಿ ಬಡೆಕ್ಕಿಲ ಪ್ರದೀಪ ಧ್ವನಿಯಲ್ಲಿ

S1EP34 Relax ನೀನಿಲ್ಲದೆ ಬೇರೆ ಯಾರೂ ನನ್ನ ರೂಪವನ್ನು ನೋಡಲು ಸಾಧ್ಯವಿಲ್ಲ 09.05.2022

ಅರ್ಜುನ ಕೃಷ್ಣನನ್ನು ಕುರಿತು ' ನೀನು ಯಾರು? ನಿನ್ನನ್ನು ನಾನು ವಿಶೇಷ ರೂಪದಲ್ಲಿ ತಿಳಿಯಬಯಸುತ್ತೇನೆ' ಎನ್ನುತ್ತಾನೆ. ಆಗ ಭಗವಾನ್ ಶ್ರೀ ಕೃಷ್ಣ ತನ್ನ ವೈಶಿಷ್ಟ್ಯವನ್ನು ವಿವರಿಸುತ್ತಾನೆ. ಕೃಷ್ಣ ತನ್ನನ್ನು ತಾನು ಯಾವ ರೀತಿ ವಿವರಿಸುತ್ತಾನೆ ಅನ್ನೋದನ್ನು ತಿಳಿದು .. ಆಗಿ ಬಡೆಕ್ಕಿಲ ಪ್ರದೀಪ ಧ್ವನಿಯಲ್ಲಿ. .... ಟೈಪ್ ಮಾಡಿ ಅಥವಾ ಈ .. ಕೋಡ್ ಸ್ಕ್ಯಾನ್ ಮಾಡಿ

S1EP 56- Recharge :ಶಾಂತ ಚಿತ್ತದಿಂದ ಸಾಧಿಸಿದವರಿವರು ... |Epi 56. Bharatada Geniusgalu Chanakya 08.05.2022

ಇವರು ರಾಜನೀತಿಯಲ್ಲಿ ಎತ್ತಿದ ಕೈ. ನೀತಿ ಸೂತ್ರಗಳು ಅಂದ್ರೆ ನಮಗೆ ನೆನಪಾಗೋದು ಇವರು. ಒಂದೊಳ್ಳೆ ಆರ್ಥಿಕತೆ ಹಾಗೂ ಕಾನೂನು ಸುವ್ಯವಸ್ಥೆ ದೇಶದ ಅಭಿವೃದ್ಧಿಗೆ ಕಾರಣ. ಇದನ್ನು ಸಮರ್ಥವಾಗಿ ಪ್ರತಿಪಾದಿಸಿದ ಇವರ ಅದ್ಬುತ ಸಾಧನೆ ಕುರಿತು ತಿಳಿದು recharge ಆಗಿ ಬಡೆಕ್ಕಿಲ ಪ್ರದೀಪ ಧ್ವನಿಯಲ್ಲಿ.

Lyssna på podden UV Listen i Replaio

Radio och poddar i en och samma app - gratis och utan konto. Installera redan idag och missa inte premiären

Ladda ned på Google Play

Replaio är ingen poddutgivare; programnamn, omslag och ljud tillhör sina upphovspersoner och distribueras via offentliga RSS-flöden