UVLISTEN
UV Listen
Recharge: Kick start your day by tuning in to "Recharge” Podcast by Mr. Badekkila Pradeep. Relax: Stay relaxed with joy, music, comfort with the podcast "Relax" by Mr. Badekkila Pradeep.
Où écouter ?
Les podcasts dans l'appli Replaio Radio Bientôt disponibleLes podcasts arrivent très bientôt dans l'appli. Installe-la dès maintenant et découvre en avant-première une toute nouvelle façon de vivre les podcasts
Épisodes
S1 EP 133 ನಮಗೆ ನಾವೇ ಪ್ರೇರಣೆ | Motivated by Ourselves 11.08.2024 7:38
ಗುರಿ ಸಾಧನೆಯ ಹಾದಿ ಸುದೀ ರ್ಘ ವಾಗಿದ್ದಾಗ ಮನಸ್ಸು ಒಂದಲ್ಲ ಒಂದು ಹಂತದಲ್ಲಿ ಏಕಾಗ್ರತೆ ಕಳೆದುಕೊ ಳ್ಳಬಹುದು. ನಿರಾಸಕ್ತಿ ಆವರಿಸಬಹುದು. ಇಂಥ ಸಮಯದಲ್ಲಿ ಮನಸ್ಸು ಬೇ ರೆ ವಿಚಾರಗಳತ್ತಹರಿಯದಂತೆ ಅದನ್ನು ತಡೆದು ಮತ್ತೆ ಸರಿಯಾದ ಮಾರ್ಗ ದಲ್ಲಿ ಮುನ್ನಡೆಯುವಂತೆ ಮಾಡಬೇ ಕು. ಅದಕ್ಕೆ ನಮ್ಮನ್ನು ನಾವು ಪ್ರೇರೇ ಪಿಸಿಕೊ ಳ್ಳುವುದು ಅಗತ್ಯ. ಈ ಬಗ್ಗೆ ನಾವು ವಿಚಾರ ಮಾಡುತ್ತಾ ಹೋ ಗೋ ಣ…
S1 Ep 132 ಪ್ರಯತ್ನಶೀಲನಿಗೆ ಯಶಸ್ಸು ಖಂಡಿತ 21.07.2024 7:20
ಜೀವನದಲ್ಲಿಎಲ್ಲಾವಿಧದಲ್ಲೂಗೆಲುವಿನ ನಿರೀಕ್ಷೆ ಇಟ್ಟೇ ನಾವು ಮುನ್ನುಗ್ಗುತ್ತಿರುತ್ತೇವೆ. ನಿರೀಕ್ಷಿತ ಗೆಲುವನ್ನು ಸಾಧಿಸಲು ಬೇಕಾದ ಸೀಕ್ರೆಟ್ಗಳು ಹಲವು, ಅವುಗಳಲ್ಲಿಕೆಲವನ್ನು ಹೆಕ್ಕಿ ತೆಗೆದು ಅದನ್ನು ನಿಮ್ಮೆದುರು ಬಿಚ್ಚಿಡುವ ಮೂಲಕ ನಾವೆಲ್ಲಸೇರಿ ಸಕ್ಸೆಸ್ನ ಹಾದಿಯಲ್ಲಿಜೊತೆಯಾಗಿ ಸಾಗೋ ಣ. ಇಂದಿನ ಸೀಕ್ರೇಟ್ ಏನು ಅಂತ ತಿಳಿದುಕೊಳ್ಳ ೋ ಸಮಯ ಈವಾಗ್ ಶುರು, ಶುರು ಮಾಡೋ ಣ ಇವತ್ತಿನ ಸಂಚಿಕೇನ!
S1 EP 131 : ಮನಸಿದ್ದರೆ ಮಾರ್ಗ | Where there's a will, there's a way 30.06.2024 8:01
ಸಾಮರ್ಥ್ಯ ಮತ್ತು ಪ್ರಯತ್ನಗಳು ಜೋಡೆತ್ತಿನಂತೆ ಒಟ್ಟಿಗೆ ಸಾಗಿದರೆ , ಯಶಸ್ಸೆoಬುದು ಕಟ್ಟಿಟ್ಟ ಬುತ್ತಿ. ಕೆಲಸದ ಬಗ್ಗೆ ಆಸಕ್ತಿ ಇದ್ದರೆ ಮಾರ್ಗ ತನಗೆ ತಾನೇ ಲಭ್ಯ. ಸಾಮರ್ಥ್ಯ ವು ಎಷ್ಟೇ ಇದ್ದರೂ, ಸರಿಯಾದ ಪ್ರಯತ್ನವಿಲ್ಲದಿದ್ದರೆ ಗುರಿ ಸಾಧಿಸಲು ಸಾಧ್ಯವಾಗುವುದಿಲ್ಲ. ಇದೆಲ್ಲದರ ಜೊ ತೆಗೆ ಕೆಲಸ ಮಾಡುವ ಮನಸ್ಸು ಬಹು ಮುಖ್ಯ. ಈ ವಿಷಯವಾಗಿಯೇ ನಾವಿವತ್ತು ಮಾತನಾಡುತ್ತಾ ಹೋಗೋಣ.
S1 EP 106 ಪಂಚ ಪ್ರಾಣಗಳು | Bharata Sankhyaloka 17.06.2024 9:29
ಪ್ರಾಣ ಅಂದರೆ ವಾಯು, ಪ್ರಾಣವು ಸೂರ್ಯ ಅಥವಾ ಅಗ್ನಿಯ ಶಕ್ತಿ. ಇದೇ ಕಾರಣಕ್ಕೆ ಹನುಮಂತನನ್ನು ಮುಖ್ಯಪ್ರಾಣ ಅಂತ ಕರೆಯಲಾಗುತ್ತದೆ. ಈ ಜ್ವಾ ಲೆ ಮೇ ಲ್ಮು ಖವಾಗಿ ಹರಿಯುವಂತದ್ದು. ಪ್ರಾಣವಾಯುವಿನ ಸ್ಥಾನ ಶ್ವಾಸಕೋ ಶ. ಉಸಿರಾಟದ ಪ್ರಕ್ರಿಯೆಯನ್ನು ನಿರ್ವ ಹಿಸುವುದೇ ಈ ಪ್ರಾಣ ವಾಯು. ಚಕ್ರ ಹಾಗೂ ಪಂಚ ಪ್ರಾಣವಾಯುವಿನ ನಡುವೆ ಇರುವ ಸಂಬಂಧದ ಕುರಿತು ನಾವಿಲ್ಲಿ ತಿಳಿದುಕೊ ಳ್ಳುತ್ತಾ ಹೋ ಗೋ ಣ. ಉಸಿರಾಟದ ಅಂಗಾಂಗಗಳು, ಮತ್ತು ಇವುಗಳಿಗೆ ಸಂಬಂಧಿಸಿದ ಮಾಂಸಖಂಡಗಳನ್ನು ಇದು ನಿಯಂತ್ರಿಸುತ್ತದೆ. ಪ್ರಾಣ ವ...
S1 EP 130 ತಾಳ್ಮೆ ಯಶಸ್ಸಿನ ಕೀಲಿ ಕೈ | Patience is the key to success 03.06.2024 7:31
ಪ್ರತಿಯೊಬ್ಬನಿಗೂ ಸಾಧನೆಯ ಕನಸು ಇರುತ್ತದೆ. ಆದರೆ, ಅದರ ದಾರಿ ತಿಳಿದಿರುವುದಿಲ್ಲ. ಅಡೆತಡೆಗಳಿರುತ್ತವೆ. ಅವುಗಳಿಗೆ ಹೆದರಬಾರದು. ಕನಸು, ಹಣ ಸಂಪಾದನೆ ಮತ್ತು ಜ್ಞಾನ ಈ ಮೂರು ಹಾದಿಯಲ್ಲಿ ಏಕಕಾಲಕ್ಕೆ ಚಲಿಸಿದರೆ ಮಾತ್ರ ಚಿಕ್ಕ ವಯಸ್ಸಿನಲ್ಲೇ ಸಾಧಿಸೋ ದಕ್ಕೆ ಸಾಧ್ಯ. ಪ್ರತಿಯೊಬ್ಬ ಮನುಷ್ಯನಿಗೂ ಏನಾದರೊ ಂದು ಸಾಧಿಸಬೇಕೆಂಬ ಹಂಬಲವಿರುತ್ತದೆ. ಕೆಲವರು ಒಂದು ಡಿಗ್ರಿ ತೆಗೆದುಕೊಂಡು ಒಂದು ಸಣ್ಣಕೆಲಸಕ್ಕೆ ಕೈತುಂಬ ಸಂಬಳ ತೆಗೆದುಕೊಳ್ಳುವುದೇ ಸಾಧನೆ ಅಂದ್ಕೊ ಳ್ತಾರೆ. ಇನ್ನು ಕೆಲವರು “ಬೆಳಿಗ್ಗೆ ಒಂ...
S1 EP 105 ಪಂಚ ಮಹಾಭೂತಗಳು ಮತ್ತು ನಾವು | Pancha Mahabhutas and us 20.05.2024 8:48
ಸಂಖ್ಯೆ ಗಳಿಗೂ ನಮ್ಮ ಜೀ ವನಶೈ ಲಿಗೂ ಇರುವ ಅವಿನಾಭಾವ ಸಂಬಂಧಗಳನ್ನು ಅವಲೋ ಕಿಸುತ್ತಾ ಸಾಗೋ ಣ. ಒಂದೋ ನವರಾತ್ರಿಯ ಮಾತಾದರೆ, ದಶಕಂಠನೂ ನಮ್ಮ ಸಂಸ್ಕೃತಿಯ ಭಾಗವೇ . ಚತುರ್ಭು ಜದ ಮಹತ್ವವನ್ನೂ ಕೇ ಳಿದವರೇ , ನಾವು ಸಪ್ತಸಾಗರವನ್ನೂ ನೋ ಡಿದವರೇ . ಇವುಗಳಲ್ಲಿ ಕೆಲವೊಂದು, ತಿಳಿದ, ತಿಳಿಯದ ಸಂಖ್ಯೆ ಗಳ ಜೊ ತೆಗೆ ಅವಿನಾಭಾವ ಸಂಬಂಧ ಇರುವ ಭಾರತೀ ಯ ಪರಂಪರೆಯನ್ನುಅವಲೋ ಕಿಸೋ ಣ. ಇಂದಿನ ಸಂಚಿಕೆ ಶುರು ಮಾಡೋ ಣ. --------- ಇಂದಿನ ನಮ್ಮ ರಿಲಾಕ್ಸ್ ವಿತ್ ಬಡೆಕ್ಕಿ ಲ ಪ್ರದೀ ಪ್ ಪಾಡ್ಕಾಸ್ಟ್ ಶೋ ನಲ್...
S1 EP 129 ಹಾಯಾಗಿದ್ದರೆ ಗೆಲುವಲ್ಲಿ .. ? | Get out from the Comfort zone 12.05.2024 8:47
ಒಬ್ಬ ಬಡವನಿದ್ದನಂತೆ. ಅವನು ಪ್ರತಿದಿನ ಅಚಂಚಲ ಭಕ್ತಿಯಿಂದ ದೇವಸ್ಥಾನಕ್ಕೆ ಹೋಗಿ ನಮಸ್ಕರಿಸಿ ಕಾರ್ಯಪ್ರವೃತ್ತನಾಗುತ್ತಿದ್ದ. ಆತನ ಭಕ್ತಿಗೆ ಒಲಿದ ದೇವರು ಪ್ರತ್ಯಕ್ಷನಾಗಿ ನಿನಗೇನು ವರ ಬೇಕು, ಕೇಳು ಅಂತ ಹೇಳ್ತಾನೆ. ಆ ಬಡವ ನನಗೆ ಆನೆ ಬೇಕು ಅಂತ ಹೇಳ್ತಾನೆ. ಇದನ್ನ ಕೇಳಿದ ದೇವರಿಗೆ ಆಶ್ಚರ್ಯ ಆಗತ್ತೆ, ಅಲ್ಲಾ, ನಿನ್ನನ್ನು ನೀನೇ ಸಾಕಲು ನಿನಗಾಗುತ್ತಿಲ್ಲ. ಇನ್ನು ಆನೆಯನ್ನು ಎಲ್ಲಿಂದ ಸಾಕ್ತೀಯಾ? ಬೇರೆ ಏನಾದ್ರು ವರ ಕೇಳು ಅಂತ ಹೇಳ್ತಾನೆ. ಆದರೆ ಆ ಬಡವ ತನಗೆ ಅನೆಯೇ ಬೇಕೆಂದಾಗ, ಬಹುಶ: ಚಿನ್...
S1 EP 104 ದಿಕ್ಕುಗಳು | Direction 06.05.2024 9:21
ಹಿಂದೆ ಕಣ್ಣಿಗೆ ಕಾಣುವ ಸೂರ್ಯನ ಚಲನೆಯ ಆಧಾರದ ಮೇಲೆ ದಿಕ್ಕುಗಳನ್ನು ಮನುಷ್ಯ ಗುರುತಿಸುತ್ತಿದ್ದ. ಪ್ರತಿದಿನ ಬೆಳಿಗ್ಗೆ ಸೂರ್ಯ ಮೂಡುವ ದಿಕ್ಕಿಗೆ ಒಂದು ಹೆಸರಿಟ್ಟ, ಮುಳುಗುವ ದಿಕ್ಕಿಗೆ ಇನ್ನೊಂದು ಹೀಗೆ ದಿಕ್ಕುಗಳನ್ನು ಹೆಸರಿಸುತ್ತಾ ಬಂದ ಮನುಷ್ಯನು ದಿಕ್ಕುಗಳನ್ನು ಗುರುತಿಸಿದ್ದಾನೆ, ಇದೇ ದಿಕ್ಕುಗಳ ಬಗ್ಗೆ ನಾವು ಇಂದಿನ ಸಂಚಿಕೆಯಲ್ಲಿ ತಿಳಿದುಕೊಳ್ಳೋಣ. ಸಂಖ್ಯೆಗಳಿಗೂ ನಮ್ಮ ಜೀವನಶೈಲಿಗೂ ಇರುವ ಅವಿನಾಭಾವ ಸಂಬಂಧಗಳನ್ನು ಅವಲೋಕಿಸುತ್ತಾ ಸಾಗೋಣ. ಒಂದೋ ನವರಾತ್ರಿಯ ಮಾತಾದರೆ, ದಶಕಂಠನೂ ನಮ್ಮ...
S1 EP128 ಆತ್ಮವಿಶ್ವಾಸವೆಂಬ ಮಂತ್ರ | Confidence Mantra 28.04.2024 8:44
ಗೆಲುವಿನ ಗುಟ್ಟನ್ನು ಬೆನ್ನಟ್ಟುವುದು ಹೇಗೆ ? ಜೀವನದಲ್ಲಿ ಎಲ್ಲ ವಿಧದಲ್ಲೂ ಗೆಲುವಿನ ನಿರೀಕ್ಷೆ ಇಟ್ಟೇ ನಾವು ಮುನ್ನುಗ್ಗುತ್ತಿರುತ್ತೇವೆ ನಿರೀಕ್ಷಿತ ಗೆಲುವನ್ನು ಸಾಧಿಸಲು ಬೇಕಿರುವ ಸಿಕ್ಕ್ರೆಟ್ಗಳು ಕೆಲವು ....ಗುರಿ ತಲುಪಲು ಏನುಮಾಡಬೇಕು ? ಕೇಳಿ ಇಂದಿನಸಂಚಿಕೆಯಲ್ಲಿ
S1 ep 103 ಗುಣಗಳೆಂದರೆ ಏನು ಮತ್ತು ಅವು ಏಕೆ ಮುಖ್ಯ 01.04.2024 6:53
ಪುರಾತನವಾದ ಹಿಂದೂ ಧರ್ಮ ತನ್ನನ್ನು ತಾನು ಬದಲಾವಣೆಗಳಿಗೆ ಒಡ್ಡಿಕೊಂಡಿದೆ. ಇಲ್ಲಿ ಮನುಷ್ಯ ಹೇಗೆ ಬದುಕಬೇಕು ಎಂಬುದನ್ನು ಪ್ರತೀ ಹಂತದಲ್ಲೂ ಹೇಳಿಕೊಡಲಾಗುತ್ತದೆ. ಅವುಗಳಲ್ಲಿ ಗುಣಗಳೂ ಒಂದು. ಈ ಗುಣಗಳಲ್ಲಿ ಎಷ್ಟು ವಿಧ ಹಾಗೂ ಯಾವುವು. ಇವುಗಳು ಮನುಷ್ಯನ ವ್ಯಕ್ತಿತ್ವವನ್ನು ಹೇಗೆ ನಿರ್ಧರಿಸುತ್ತದೆ ಎಂಬುವುದನ್ನು ಕೇಳೋಣ
S1 EP 127 ಇಚ್ಛಾಶಕ್ತಿಯಿಂದ ಗೆಲುವು ನಿಶ್ಚಿತ 25.03.2024 8:02
ಇಚ್ಚಾಶಕ್ತಿ ನಮ್ಮ ಸಕ್ಸೆಸ್‌ಗೆ ಕಾರಣವಾಗಬಹುದಾ? ಇಚ್ಛಾಶಕ್ತಿಯಿಂದ ನಾವು ಏನನ್ನ ಬೇಕಾದರೂ ಸಾಧಿಸಬಹುದು ಅನ್ನೋದಕ್ಕೆ ಸಾಕ್ಷಿಯಾಗಿ ಅನೇಕ ಸಾಧಕರಿದ್ದಾರೆ. ಅವರೆಲ್ಲರೂ ನಮಗೆ Inspiration. ಬನ್ನಿ ಇಚ್ಛಾಶಕ್ತಿಯಿಂದ ಹೇಗೆ ಗೆಲುವು ಸಾಧ್ಯ ಅನ್ನೋದನ್ನ ನಾವಿವತ್ತಿನ ಸಂಚಿಕೆಯಲ್ಲಿ ತಿಳೀದುಕೊಳ್ಳೋಣ.
S1 EP 126 ಪ್ರಯತ್ನಿಸಿದವನಿಗೆಂದಿಗೂ ಸೋಲಿಲ್ಲ 24.02.2024 8:15
ಗೆಲುವಿನ ಶಿಖರವನ್ನೇರಲು ಪ್ರಯತ್ನ ಅನಿವಾರ್ಯವೇ? ಪ್ರಯತ್ನಿಸದೇ ಗೆಲುವು ಅನ್ನೋದು ಸಾಧ್ಯವೇ? ಇಂತಹ ಅನೇಕ ಪ್ರಶ್ನೆಗಳು ನಮ್ಮ ತಲೆಯಲ್ಲಿ ಓಡುತ್ತಲೇ ಇರುತ್ತದೆ. ಈ ಪ್ರಶ್ನೆಗಳಿಗೆ ಉತ್ತರವನ್ನು ಹುಡುಕುತ್ತಾ, ಸಕ್ಸೆಸ್‌ನ ಸಿಕ್ರೆಟ್ ಒಂದರ ಬಗ್ಗೆ ತಿಳಿಯುವ ಸಂಚಿಕೆ ಇವತ್ತಿನದು..
S1 EP 102 ಭಕ್ತಿಯ ಒಂಬತ್ತು ರೂಪಗಳು ಯಾವುವು? | What are the nine forms of devotion? 12.02.2024 9:18
ಭಕ್ತಿ ಮರದಂತೆ.. ನಾವು ಮರಕ್ಕೆ ನೀರು ಹಾಕಿದಾಗ ಅದು ಹೇಗೆ ಫಲ ನೀಡುತ್ತದೆಯೋ ಅದೇ ರೀತಿ ಭಕ್ತಿಗೆ ನಾವು ಪ್ರಾಮುಖ್ಯತೆಯನ್ನು ನೀಡಿದಷ್ಟು ಆಳವಾದ ಚಿಂತನೆಗಳು ಬೆಳೆಯುತ್ತಾ ಹೋಗುತ್ತವೆ. ಹಾಗಾದರೆ ನಿಜವಾಗಿಯೂ ಭಕ್ತಿಯೆಂದರೇನು..? ಭಕ್ತಿಯ 9 ರೂಪಗಳಾವುವು..? ಪುರಾಣದಲ್ಲಿ, ಪ್ರಹ್ಲಾದನು ತನ್ನ ಗುರುಗಳು ತನಗೆ ಕಲಿಸಿದ ಭಕ್ತಿಯ ಒಂಬತ್ತು ರೂಪಗಳನ್ನು ಅಂದರೆ ನವವಿಧ ಭಕ್ತಿಗಳನ್ನು ತನ್ನ ತಂದೆ ಹಿರಣ್ಯ ಕಶ್ಯಪುವಿಗೆ ವಿವರಿಸುತ್ತಾನೆ. ಅವುಗಳೆಂದರೆ ಶ್ರವಣ, ಕೀರ್ತನ, ಸ್ಮರಣೆ, ಪಾದ-ಸೇವೆ, ಅರ್ಚನೆ,...
S1 EP 125 ಸಕ್ಸೆಸ್‌ಗೆ ಸೂತ್ರಗಳು ಸಾವಿರ. ಸಾವಿರದಲ್ಲಿ ಇನ್ನೊಂದಿಷ್ಟನ್ನ ನಾವು ಈ ಸೀಸನ್‌ನಲ್ಲಿ ಕೇಳೋಣ 05.02.2024 8:00
Success ಅನ್ನೋದು ಒಬ್ಬೊಬ್ಬರಿಗೆ ಒಂದೊಂದು ರೀತಿ. ನಮ್ಮ ಸಮಾಜದಲ್ಲಿ ಸೋತು ಗೆದ್ದವರು ಒಂದು ಕಡೆಯಾದರೆ, ಗೆದ್ದು ಸೋತವರ ಪಂಗಡ ಇನ್ನೊಂದು ಕಡೆ. ಎರಡು ಪಂಗಡದವರ ಕಥೆಯೂ ನಮಗೆ ಸ್ಪೂರ್ತಿದಾಯಕವೇ… ಸೋತು ಗೆದ್ದರೆ ಅದಕ್ಕೊಂದು ಬೆಲೆ ಅನ್ನೋದು ನಮ್ಗೆಲ್ಲರಿಗೂ ಗೊತ್ತಿರೋ ಸಂಗತಿ. ಅದೆಷ್ಟೋ famous ವ್ಯಕ್ತಿಗಳು ಸೋತು ಗೆದ್ದಿದ್ದಾರೆ, ಉದಾಹರಣೆಯಾಗಿ ಹೇಳ್ಬೇಕು ಅಂದ್ರೆ ಅಮಿತಾಬ್ ಬಚ್ಚನ್, ಎಷ್ಟೋ ರಿಜೆಕ್ಷನ್‌ಗಳ ನಂತರ ಅವರು ಇಷ್ಟು ಫೇಮಸ್ ಆಗೋದಕ್ಕೆ ಸಾಧ್ಯ ಆಯಿತು. ಕೇಳಿ..
S1 EP 114 ಹಿಂದೂ ಮಹಾಗ್ರಂಥಗಳು. 01.01.2024 10:24
ಹಿಂದೂ ಮಹಾಗ್ರಂಥಗಳಾದ ರಾಮಾಯಣ ಮತ್ತು ಮಹಾಭಾರತ ಜೀವನಾದರ್ಶಗಳು ಮಾರ್ಗದರ್ಶನವನ್ನ ನೀಡುತ್ತವೆ ಅನ್ನೋದನ್ನ ನಾವು ನಂಬಿಕೊಂಡು ಬಂದಿದ್ದೇವೆ. ಇವುಗಳು ಸಂಸ್ಕೃತದ ಮಹಾಕಾವ್ಯಗಳೂ ಹೌದು. ಇವುಗಳ ಬಗ್ಗೆ ಸಂಕ್ಷಿಪ್ತವಾಗಿ ತಿಳಿದುಕೊಳ್ಳುವ ಸಂಚಿಕೆ ಇದು.
S1 EP100 ವೇದ ಅಂದ್ರೆ ಏನು ? 11.12.2023 9:43
ಹಿಂದೂ ಧರ್ಮದ ಇತಿಹಾಸವು ಹಲವು ವರ್ಷಗಳಷ್ಟು ಹಳೆಯದಾಗಿದೆ ಮತ್ತು ಅದರ ಅತ್ಯಂತ ಸರಿಯಾದ ಮತ್ತು ನಿಖರವಾದ ಪುರಾವೆಗಳು ನಮ್ಮ ವೇದ ಹಾಗೆನೇ ಪುರಾಣಗಳಲ್ಲಿ ಮಾತ್ರ ಕಾಣಸಿಗುತ್ತವೆ. ಆದ್ದರಿಂದ ವೇದ ಅಂದ್ರೇನು ಅನ್ನೋದಕ್ಕೆ ಉತ್ತರವನ್ನು ಹುಡುಕ್ತಾ ಹೋಗೋಣ… ಕೇಳಿ ..
S1 EP 124 ಹಲವು ದೇಶಗಳಲ್ಲಿ ತಮ್ಮದೇ ಛಾಪು ಮೂಡಿಸಿದ ಸಮೀರ್ ಅರೋರ 03.12.2023 6:30
ಭಾರತದಲ್ಲಿ ಇಂಜಿನಿಯರಿಂಗ್ ಮಾಡಿದ ಆರೋರಾ ಲಂಡನ್ ನಲ್ಲಿ ಹೆಚ್ಚಿನ ವಿದ್ಯಾಭ್ಯಾಸ ಮುಗಿಸಿ ಆ... ಕಂಪೆನಿ ಯಿಂದ ತಮ್ಮ ವೃತ್ತಿ ಜೀವನವನ್ನು ಆರಂಭಿಸ್ತಾರೆ ಅಷ್ಟೇ ಅಲ್ಲದೆ ಅಲ್ಲಿ ಹೊಸ ಟೆಕ್ನಾಲಜಿಯನ್ನು ಕಂಡುಹಿಡಿಯುತ್ತಾರೆ. ತಂತ್ರಜ್ಞಾನ ಕ್ಷೇತ್ರದಲ್ಲಿ ಸಾಕಷ್ಟು ಆವಿಷ್ಕಾರಗಳನ್ನು ಮಾಡ್ತಾ ಅರೋರಾ ಬೇರೆ ಬೇರೆ ಪ್ರತಿಷ್ಠಿತ ಕಂಪೆನಿಗಳಲ್ಲಿ ಸಿ.ಈ.ಓ ಆಗಿ ಹಲವು ದೇಶಗಳಲ್ಲಿ ತಮ್ಮದೇ ಛಾಪು ಮೂಡಿಸಿದ....
S1 EP 99 ಸಂಖ್ಯೆ ಗಳಿಗೂ ಭಾರತೀಯ ಪರಂಪರೆಗೂ ಇರುವ ಸಂಬಂಧ 06.11.2023 9:42
ಹಿಂದೂ ಧರ್ಮಗ್ರಂಥಗಳು ಹಾಗೂ ಪುರಾಣಗಳ ಪ್ರಕಾರ ಜಗತ್ತು ನಾಲ್ಕು ಮುಖ್ಯ ಯುಗಗಳಿಂದ ಕೂಡಿದೆ. ಅವುಗಳು ಯಾವುವು ಅವುಗಳ ಪ್ರಾಮುಖ್ಯತೆ ಏನು ಎಂಬ ಸುಂದರ ವಿಚಾರ ಕೇಳಿ
S1 EP123 ಭಾರತದ ಮಿತ್ತಲ್ ವಿಶ್ವದ ಅತೀ ಶ್ರೀಮಂತ ಉದ್ಯಮಿಯಾದ ಕಥೆ 29.10.2023 6:40
ಸಣ್ಣ ಉದ್ಯಮವಾಗಿ ಆರಂಭಿಸಿದ ಕಂಪೆನಿಯೊಂದು ವಿಶ್ವದ ಪ್ರಮುಖ ಕಂಪೆನಿಗಳಲ್ಲೊಂದಾಗುವಂತೆ ಮಾಡಿದ ಮಿತ್ತಲ್ ವಿಶ್ವದ ಅತಿ ಶ್ರೀಮಂತ ವ್ಯಕ್ತಿಗಳಲ್ಲೊಬ್ಬರು. ಭಾರತ ಮತ್ತು ಬ್ರಿಟನ್ನಿನ ಪ್ರಖ್ಯಾತ ಉದ್ಯಮಿಯಾಗಿರುವ ಲಕ್ಷ್ಮೀನಾರಾಯಣ ಮಿತ್ತಲ್ ಅವರ ಕಥೆ ಕೇಳಿ
S1 EP 98 ಸಂಖ್ಯೆಗಳಿಗೂ ನಮ್ಮ ಜೀವನಕ್ಕೂ ಇರುವ ಅವಿನಾಭಾವ ಸಂಬಂಧವೇನು ? 09.10.2023 7:40
ಸಂಖ್ಯೆಗಳಿಗೂ ನಮ್ಮ ಜೀವನಕ್ಕೂ ಇರುವ ಅವಿನಾಭಾವ ಸಂಬಂಧದ ಸುಂದರ ಅವಲೋಕನವಿದು. ನಮ್ಮ ಜೀವನದ ಆಚಾರ ವಿಚಾರ, ಸಂಪ್ರದಾದ, ಸಂಸ್ಕೃತಿಯಲ್ಲಿ ಸಂಖ್ಯೆಗಳು ಯಾವರೀತಿಯ ಪಾತ್ರವನ್ನು ವಹಿಸುತ್ತದೆ ಎಂಬ ಸುಂದರ ವಿಚಾರ ಕೇಳಿ
S1 EP 122 ಅಭಿಜಿತ್ ಬ್ಯಾನರ್ಜಿ 08.10.2023 6:46
ಕಷ್ಟ, ಪರಿಶ್ರಮ, ಸಾಧಿಸಲೇ ಬೇಕೆಂಬ ಛಲವಿದ್ದರೆ ಏನನ್ನಾದರೂ ಸಾಧಿಸಬಹುದು ಎಂಬುದಕ್ಕೆ ನೊಬೆಲ್ ಪುರಸ್ಕೃತ ಅಭಿಜಿತ್ ಬ್ಯಾನರ್ಜಿ ಯವರೇ ಸಾಕ್ಷಿ. ಕೋಲ್ಕತಾ ಮೂಲದ ಅಭಿಜಿತ್ ಅವರ ಯಶೋಗಾಥೆ ಕೇಳಿ...
S1 EP 97 ಉಪನಿಷತ್ತುಗಳು 02.10.2023 9:41
ವೇದಗಳು, ಪುರಾಣಗಳು ಮತ್ತು ಉಪನಿಷತ್ತುಗಳು ನಮ್ಮ ಆಧ್ಯಾತ್ಮಿಕ ಜೀವನ ಮತ್ತು ಸಾಧನೆಗೆ ಸಹಕಾರಿಯಾಗಿವೆ ಅನ್ನೋದನ್ನ ನಾವು ಸಹಸ್ರಾರು ವರ್ಷಗಳಿಂದ ನಂಬಿಕೊಂಡು ಬಂದಿದ್ದೇವೆ. ಉಪನಿಷತ್ತುಗಳನ್ನು ಸರಿಯಾಗಿ ಅರ್ಥಮಾಡಿಕೊಳ್ಳದೆ, ಭಾರತೀಯ ಇತಿಹಾಸ ಮತ್ತು ಸಂಸ್ಕೃತಿಯ ಒಳನೋಟವನ್ನು ಪಡೆಯುವುದು ನಿಜ್ವಾಗ್ಲು ಕಷ್ಟ. ಉಪನಿಷತ್ತುಗಳು ಮುಖ್ಯವಾಗಿ ವೇದಗಳ ಜ್ಞಾನ ಕಾಂಡ ಅಥವಾ ಜ್ಞಾನದ ಭಾಗವನ್ನು ಪ್ರತಿನಿಧಿಸುತ್ತವೆ. ಉಪನಿಷತ್ತುಗಳು, ಶ್ರುತಿಯಲ್ಲಿ ಸೇರಿವೆ. ಪ್ರಸ್ತುತ, ಅತ್ಯಂತ ಜನಪ್ರಿಯ ಮತ್ತು ವ್ಯಾಪಕವ...
S1 EP 121 : ಮನಸ್ಸಿದ್ದರೆ ಏನನ್ನಾದರೂ ಸಾಧಿಸಬಹುದು 01.10.2023 7:54
ಭಾರತದ ಸಣ್ಣ ಪಟ್ಟಣದ ಹುಡುಗ ಜಗತ್ತಿನ ತಂತ್ರಜ್ಞಾನ ಕ್ಷೇತ್ರದ ಉತ್ತುಂಗಕ್ಕೇರುವ ಸ್ಪೂರ್ತಿದಾಯಕ ಕಥೆ ಇದು. ಆ ಹುಡುಗನ ಕುರಿತಾದ ಕುತೂಹಲಕಾರಿ ಸ್ಟೋರಿ ಕೇಳಿ
S1 EP 93 : ದೇಹದಲ್ಲಿರುವ ಏಳು ಚಕ್ರಗಳ ಮಹತ್ವ 24.09.2023 10:11
ನಮ್ಮ ದೇಹದಲ್ಲಿರೋ ಏಳು ಚಕ್ರಗಳ ಬಗ್ಗೆ ಕೇಳಿದ ನಾವು ಅದರ ಮಹತ್ವದ ಬಗ್ಗೆ ಯಾವತ್ತೂ ತಿಳಿದುಕೊಂಡಿರೋ ಸಾಧ್ಯತೆ ಇರಲ್ಲ ಆ ವಿಚಾರವನ್ನ ಈವತ್ತು ತಿಳ್ಕೊಳ್ಳೋಣ ಕೇಳಿ ಬಡೆಕ್ಕಿಲ ಪ್ರದೀಪ ಅವರ ಧ್ವನಿಯಲ್ಲಿ. www.uvlisten.com ಟೈಪ್ ಮಾಡಿ
S1 EP 92 : ಭಾರತ ಸಂಖ್ಯಾ ಲೋಕ 24.09.2023 8:34
ಸಂಖ್ಯೆಗಳಿಗೂ ಜೀವನಶೈಲಿಗೂ ಇರುವ ಅವಿನಾಭಾವ ಸಂಬಂಧಗಳನ್ನ ಅವಲೋಕಿಸುತ್ತಾ ಸಾಗೋಣ.. ಒಂದು ನವ ರಾತ್ರಿಯ ಮಾತಾದರೆ ದಶಕಂಠನೂ ನಮ್ಮ ಸಂಸ್ಕೃತಿಯ ಭಾಗವೇ.. ಕೇಳಿ ಬಡೆಕ್ಕಿಲ ಪ್ರದೀಪ ಅವರ ಧ್ವನಿಯಲ್ಲಿ. www.uvlisten.com ಟೈಪ್ ಮಾಡಿ
Podcasts similaires
Replaio n'est pas éditeur de podcasts ; les noms des émissions, les visuels et l'audio appartiennent à leurs auteurs et sont diffusés via des flux RSS publics