Shwetha Initiative

ಸಿರಿದನಿ SIRIdani

SIRIdani, A passion broadcast channel, set up by equal minded team In Bangalore. Channel addresses education, culture, social issues and youth Designs in depth subject discussion with the experts of relevant area. Light entertainment, talk shows also focusing area. Subjects we choose non controversy and factual issues and which is out of regular platforms. Files Uploaded once in 15 days. and will come online with special episodes too.

Não deixe de visitar o site do podcast e apoiar quem o produz: www.shwethainitiative.com

Autor

Shwetha Initiative

Categoria

Business

Site do podcast

www.shwethainitiative.com

Último episódio

21 de jul de 2024

Onde ouvir?

Podcasts no app Replaio Radio Em breve

Os podcasts estão chegando ao app. Instale agora e seja o primeiro a descobrir um jeito totalmente novo de curtir podcasts

Baixe no Google Play Instale grátis Android 5 mi+ downloads · nota 4,8 iOS em breve

Episódios

ಕಾಣದ ಪ್ರೀತಿ- ಕಥೆ: ಜ್ಯೋತಿ ಸಾಲಿಗ್ರಾಮ 15.03.2021

ಕಾಣದ ಪ್ರೀತಿ- ಕಥೆ: ಜ್ಯೋತಿ ಸಾಲಿಗ್ರಾಮ

ಸೇವ್‌ ತುರಹಳ್ಳಿ- ಇದು ಕಾಡಿನ ಕೂಗು 28.02.2021

ತುರಹಳ್ಳಿಯಲ್ಲಿ ವೃಕ್ಷ ಉದ್ಯಾನ ಮಾಡಲು ಸರ್ಕಾರ ಮುಂದಾಗಿತ್ತು. ಸ್ಥಳೀಯರು, ಪರಿಸರಾಸಕ್ತರು ಸೇರಿ ರೂಪಿಸಿದ ಹೋರಾಟವೊಂದು ಚಳವಳಿಯ ರೂಪ ತಾಳಿತು. ಪರಿಸರಪ್ರಿಯರ ಒತ್ತಡಕ್ಕೆ ಮಣಿದ ಸರ್ಕಾರ ಆ ಯೋಜನೆಯನ್ನು ತಡೆಹಿಡಿದಿದೆ.  ಈ ಹೋರಾಟ ರೂಪುಗೊಂಡು, ಯಶಸ್ಸಿನತ್ತ ಸಾಗಿ ಕೊನೆಗೂ ಕಾಡನ್ನು ಉಳಿಸಿದ ಪರಿಯನ್ನು ಆ ಚಳವಳಿಯ ಮುಂಚೂಣಿಯಲ್ಲಿದ್ದವರು ಹಂಚಿಕೊಂಡಿದ್ದಾರೆ. ಮಾತುಕತೆಯಲ್ಲಿ ಡಾ.ಎ. ಭಾನು, ಮುಖ್ಯ ತಾಂತ್ರಿಕ ಅಧಿಕಾರಿ ಭಾರತೀಯ ತೋಟಗಾರಿಕೆ ಸಂಶೋಧನಾ ಸಂಸ್ಥೆ ಹೆಸರಘಟ್ಟ ಬೆಂಗಳೂರು ಅಲೀಂ,...

ರಿಶಿ ಸಾಧನೆ- ರಿಶಿ ಶಿವ ಪ್ರಸನ್ನ ಜೊತೆ ಸಮನ್ವಿಯ ಮಾತುಕತೆ 28.02.2021

ರಿಶಿ ಶಿವ ಪ್ರಸನ್ನ ಅತಿ ಚಿಕ್ಕ ವಯಸ್ಸಿನಲ್ಲೇ ಅಸಾಧಾರಣ ಬುದ್ಧಿಮತ್ತೆ, ಪ್ರತಿಭೆ ಪ್ರದರ್ಶಿಸಿದ ಬಾಲಕ.  ಬೆಂಗಳೂರಿನ ಪ್ರಸನ್ನ ಕುಮಾರ್‌ ಎಂ - ರೇಚೇಶ್ವರಿ ಎಸ್‌. ದಂಪತಿಯ ಪುತ್ರ.  2ನೇ ವಯಸ್ಸಿಗೆ ಓದು ಕಲಿತ, 5ನೇ ವಯಸ್ಸಿಗೆ ಹ್ಯಾರಿಪಾಟರ್‌ ಸರಣಿ ಮೇಲೆ ಪುಸ್ತಕ ಬರೆದ, ಮೊಬೈಲ್‌ ಅಪ್ಲಿಕೇಷನ್‌ ರೂಪಿಸಿದ, ಕಂಪ್ಯೂಟರ್‌ ಕೋಡಿಂಗ್‌ ಬಲ್ಲ... ಹೀಗೆ ರಿಶಿಯ ಪ್ರತಿಭೆಗೆ ಹಲವು ಮುಖಗಳು. ಅವು ಏನೇನು ಎಂಬುದನ್ನು ಮಾತನಾಡಿಸಿದ್ದಾಳೆ ಪುಟಾಣಿ ಸಮನ್ವಿ ಎಂ. ಆರ್‌. ಭಟ್‌.  ಹೆಚ್ಚಿ...

ಉಪ್ಪಿಟ್ಟಿನ ಉಪನ್ಯಾಸ- ಮಧುರಾ ಎಂ. ಭಟ್‌ 28.02.2021

ಉಪ್ಪಿಟ್ಟೆಂದರೆ ಬೇಸರಿಸಿಕೊಳ್ಳುತ್ತಿದ್ದ ಹುಡುಗಿಗೆ ಮುಂದೆ ಹಾಸ್ಟೆಲ್‌ ಸೇರಿದಾಗ ಅದೇ ಉಪ್ಪಿಟ್ಟಿನಲ್ಲಿ ಅಮ್ಮನ ನೆನಪು ಕಾಡಿದ್ದು ಇಲ್ಲಿದೆ.  ಪ್ರತಿಕ್ರಿಯಿಸಿ: siridanipodcast@gmail.com Background music: https://www.youtube.com/watch?v=fzuw3xKHMCw

ಮಿಂಚಿ ಮರೆಯಾದ ಕಥೆ- ದಿನೇಶ್‌ ಎಂ. ಹಳೇನೇರಂಕಿ 28.02.2021

ಬಸ್ಸಿನಲ್ಲಿ ಕಂಡ ಮುಖವೊಂದು ಸುಮ್ಮನೆ ಕಾಡಿದ್ದನ್ನು ದಿನೇಶ್‌ ಅವರು ಲಹರಿಯಂತೆ ಕಟ್ಟಿಕೊಟ್ಟಿದ್ದಾರೆ. ಪ್ರತಿಕ್ರಿಯಿಸಿ: siridanipodcast@gmail.com Background music https://www.youtube.com/watch?v=fzuw3xKHMCw

ಕರಿನೆರಳು- ಸುಮಾ ಕಂಚಿಪಾಲ್‌ 28.02.2021

ಕತ್ತಲಲ್ಲಿ ಕಂಡ ಆಕೃತಿಯೊಂದು ನಿಜಕ್ಕೂ ಏನು? ಕುತೂಹಲ ಹಾಗೆಯೇ ಉಳಿಸಿ ಕಥೆ ಹೇಳಿದ್ದಾರೆ ಸುಮಾ ಕಂಚಿಪಾಲ್‌.  ಪ್ರತಿಕ್ರಿಯಿಸಿ: siridanipodcast@gmail.com

ಸಂಧ್ಯಕ್ಕನೊಂದಿಗೆ ಸಂಭಾಷಣೆ- ಸಂಧ್ಯಾ ಶೆಣೈ ಅವರೊಂದಿಗೆ ಮಾತುಕತೆ 14.02.2021

ಸಂಧ್ಯಾ ಶೆಣೈ ನಾಡಿನ ಜನಪ್ರಿಯ ಹಾಸ್ಯ ಭಾಷಣಕಾರರಲ್ಲಿ ಒಬ್ಬರು. ದೇಶ ವಿದೇಶಗಳಲ್ಲಿ ನಗೆ ಕಂಪನ್ನು ಬೀರಿದ್ದಾರೆ. ಅವರು ಈ ಬಾರಿ ಸಿರಿದನಿಯ ವಿಶೇಷ ಅತಿಥಿ. ಅವರನ್ನು ಮಾತನಾಡಿಸಿದವರು ವೀಣಾ ನಂಚಾರ್‌. ಜೊತೆಯಾದದ್ದು ಪುಟಾಣಿ ಸಮನ್ವಿ. ಮಾತುಕತೆಯಲ್ಲಿ ಸಂಧ್ಯಾ ಅವರು ತಮ್ಮ ಬದುಕು- ಭಾವ ತೆರೆದಿಟ್ಟಿದ್ದಾರೆ. ಹಾಸ್ಯದ ಝಲಕ್‌ ತೋರಿಸಿದ್ದಾರೆ. ಅವರ ಸಹೋದರ, ಸಹೋದರಿ, ಸುಹಾಸಂ ಪದಾಧಿಕಾರಿಗಳು, ಲೇಖಕರು ಸಂಧ್ಯಾ ಅವರ ಕುರಿತು ಮಾತನಾಡಿದ್ದಾರೆ.  ಕೇಳಿ ಪ್ರತಿಕ್ರಿಯಿಸಿ: siridanipodcast@gm...

ಚಿಗುರಿದ ನಂಟು- ದೀಪಾ ಪಾವಂಜೆ 14.02.2021

ಚಿಗುರಿದ ನಂಟು- ದೀಪಾ ಪಾವಂಜೆ ಅವರ ಸಣ್ಣ ಕಥೆ. ದೀಪಾ ಅವರು ಮಂಗಳೂರು ವಾಮಂಜೂರಿನ ಸಂತ ಜೋಸೆಫ್‌ ತಾಂತ್ರಿಕ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕಿ. ಆಕಾಶವಾಣಿಯಲ್ಲಿ ನಿರೂಪಕಿ. ನಾಟಕ, ಗಝಲ್‌, ಕವಿತೆ ಅವರ ಅಭಿರುಚಿ ಮತ್ತು ಆಸಕ್ತಿಯ ಕ್ಷೇತ್ರಗಳು. ಈ ಬಾರಿ ಅಣ್ಣ - ತಂಗಿಯ ಬಾಂಧವ್ಯದ ಗಾಢತೆ ಕಟ್ಟಿಕೊಡುವ ಪುಟ್ಟ ಕಥೆ ʼಚಿಗುರಿದ ನಂಟುʼ ಸಿರಿದನಿಯಲ್ಲಿ. ಪ್ರತಿಕ್ರಿಯಿಸಿ: siridanipodcast@gmail.com Background music:  https://youtube.com/c/djshahmoneybeatz https://faceb...

ತ್ಯಾಗಮಯಿ ಹೆಣ್ಣು- ವಾಣಿ ರಾಜ್‌ 14.02.2021

ವಾಣಿ ರಾಜ್‌- ಕಥೆ ಬರಹ, ಯೋಗ ಇತ್ಯಾದಿ ವಾಣಿ ರಾಜ್‌ ಅವರ ಆಸಕ್ತಿಯ ಕ್ಷೇತ್ರಗಳು. ಹೆಣ್ಣಿನ ಇಡೀ ಬದುಕಿನ ತ್ಯಾಗದ ಹಲವು ಮುಖಗಳನ್ನು ತ್ಯಾಗಮಯಿ ಹೆಣ್ಣು ಕಥೆಯಲ್ಲಿ ತೆರೆದಿಟ್ಟಿದ್ದಾರೆ ವಾಣಿ ರಾಜ್. ಪ್ರತಿಕ್ರಿಯಿಸಿ: siridanipodcast@gmail.com Background music: https://youtube.com/c/djshahmoneybeatz https://facebook.com/beatbyshahed https://soundcloud.com/djshahmoneybeatz https://instagram.com/imshahed https://www.youtube.com/watch?v=GmN...

ಬದಲಾವಣೆ- ಮಧುರಾ ಲಕ್ಷ್ಮೀಶ ಭಟ್‌ 14.02.2021

ಬದಲಾವಣೆ ಹೇಗಿರಬೇಕು ಎಂದು ತಮ್ಮದೇ ಲಹರಿಯಲ್ಲಿ ಹೇಳಿದ್ದಾರೆ ಮಧುರಾ ಲಕ್ಷ್ಮೀಶ ಭಟ್‌. ಮಧುರಾ ಅವರು ಉಜಿರೆಯ ಎಸ್‌ಡಿಎಂ ಕಾಲೇಜಿನಲ್ಲಿ ಪತ್ರಿಕೋದ್ಯಮ ವಿದ್ಯಾರ್ಥಿನಿ. ಕಥೆ, ಲಹರಿಯ ಬರಹ ಅವರ ಆಸಕ್ತಿಯ ಕ್ಷೇತ್ರಗಳು. ಪ್ರತಿಕ್ರಿಯಿಸಿ: siridanipodcast@gmail.com Background music: https://youtube.com/c/djshahmoneybeatz https://facebook.com/beatbyshahed https://soundcloud.com/djshahmoneybeatz https://instagram.com/imshahed https://www.youtube.c...

ಫೋಟೋಗ್ರಾಫರ್‌ ಫಜೀತಿಗಳು- ಅಮರದೀಪ್‌ ಪಿ.ಎಸ್‌. ಕೊಪ್ಪಳ 31.01.2021

ಹವ್ಯಾಸಿಯೇ ಇರಲಿ ವೃತ್ತಿಪರನೇ ಇರಲಿ ಛಾಯಾಗ್ರಾಹಕರು ತಮ್ಮ ಕಾಯಕದಲ್ಲಿ ಹಲವಾರು ಬಾರಿ ಫಜೀತಿಗೊಳಗಾಗುವುದು ಇದ್ದೇ ಇದೆ. ಛಾಯಾಗ್ರಾಹಕರ ಕಷ್ಟಸುಖವನ್ನು ತಮ್ಮದೇ ಆದ ಲಹರಿಯಲ್ಲಿ ಹೇಳಿದ್ದಾರೆ ಅಮರದೀಪ್‌ ಪಿ.ಎಸ್‌. ಕೊಪ್ಪಳ.  ಅಮರದೀಪ್‌ ಅವರು ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ನ್ಯಾಯಾಲಯದಲ್ಲಿ ಸಹಾಯಕ ನೋಂದಣಾಧಿಕಾರಿ. ಹವ್ಯಾಸಿ ಛಾಯಾಗ್ರಾಹಕ, ನಟ, ಬರಹಗಾರರೂ ಹೌದು. ಅವರ ಮಾತಿನಲ್ಲೇ ಫೋಟೋಗ್ರಾಫರ್‌ಗಳ ಫಜೀತಿ ಸಿರಿದನಿಯಲ್ಲಿ.  ಪ್ರತಿಕ್ರಿಯಿಸಿ: siridanipodcast@gmail.com ...

ಕನ್ನಡದ ಗಝಲ್‌ ಗಮ್ಮತ್ತು- ದೀಪಾ ಪಾವಂಜೆ 31.01.2021

ಉರ್ದು ಮೂಲದ ಸಾಹಿತ್ಯ- ಗಾಯನ ಪ್ರಕಾರ ಕನ್ನಡಕ್ಕೆ ಪರಿಚಯವಾಗಿ ಬಹಳ ಕಾಲವಾಯಿತು. ಅಂಥ ಗಝಲ್‌ಗಳನ್ನು ಬರೆಯುತ್ತಾ ಕೃಷ್ಣನ ಬಣ್ಣನೆಯಲ್ಲಿ ಖುಷಿಪಟ್ಟಿದ್ದಾರೆ ದೀಪಾ ಪಾವಂಜೆ. ದೀಪಾ ಪಾವಂಜೆ ಅವರು ಮಂಗಳೂರು ವಾಮಂಜೂರಿನ ಸಂತ ಜೋಸೆಫ್‌ ಎಂಜಿನಿಯರಿಂಗ್‌ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕಿ. ಆಕಾಶವಾಣಿಯಲ್ಲಿ ನಿರೂಪಣೆ, ರಂಗಭೂಮಿ, ಕಥೆ ಬರವಣಿಗೆ ಅವರ ಆಸಕ್ತಿಯ ಕ್ಷೇತ್ರಗಳು.  ದೀಪಾ ಅವರ ಗಝಲ್‌ಗೆ ಧ್ವನಿ ನೀಡಿದವರು ಶಿಕ್ಷಕಿ, ರಂಗ ಕಲಾವಿದೆ ಮಂಜುಳಾ ಜನಾರ್ದನ್‌ ಮತ್ತು ಸುಮಿತಾ ಪ್ರಶಾಂತ್‌ ಅವ...

ಮಕ್ಕಳಿಗೆ ಸೋಲಲು ಕಲಿಸಿ - ಮಧುಸೂದನ ಸುಣ್ಣಂಬಳ 31.01.2021

ಮಕ್ಕಳಿಗೆ ಸೋಲಲು ಕಲಿಸಬೇಕು ಎನ್ನುತ್ತಾರೆ ಮನಃಶಾಸ್ತ್ರಜ್ಞ ಮಧುಸೂದನ ಸುಣ್ಣಂಬಳ. ಸೋಲು ಅನುಭವ ಆದರೆ ಮಕ್ಕಳು ಬದುಕಿನಲ್ಲಿ ಬರುವ ಸಮಸ್ಯೆಗಳನ್ನು ಎದುರಿಸುವ ಕೌಶಲ ಮತ್ತು ಸಾಮರ್ಥ್ಯವನ್ನು ಬೆಳೆಸಿಕೊಳ್ಳುತ್ತಾರೆ ಅನ್ನುವುದು ಅವರ ಅನುಭವ. ಹೀಗಾಗಿ ಶಿಕ್ಷಣ ವ್ಯವಸ್ಥೆಯಲ್ಲಿ ಸೋಲಲು ಕಲಿಸುವ ಪಠ್ಯ ಪರಿಕಲ್ಪನೆಯೂ ಇದೆ. ಅದು ಹೇಗಿದೆ ಎಂಬುದನ್ನು ಅವರ ಮಾತುಗಳಲ್ಲೇ ಕೇಳಿ.  ಮಧುಸೂದನ್‌ ಅವರು ಕರ್ನಾಟಕ, ಶ್ರೀಲಂಕಾದಲ್ಲಿ ಮನಃಶಾಸ್ತ್ರಜ್ಞರಾಗಿ, ಆಪ್ತ ಸಮಾಲೋಚಕರಾಗಿ ದಶಕಕ್ಕೂ ಹೆಚ್ಚು ಕಾಲದ ಅ...

ಮಜ್ಜಿಗೆ ಗುತ್ತಿ - ಲೀಲಾ ದಾಮೋದರ 31.01.2021

ಹಳೆಯ ಕಾಲದ ಮಜ್ಜಿಗೆ ಕಡೆಯುವ ಕಡೆಗೋಲಿನೊಂದಿಗೆ ಮನೆ ಮಗಳು ಹೊಂದಿರುವ ಭಾವನಾತ್ಮಕ ಬಾಂಧವ್ಯವನ್ನು ಅಪ್ಪಟ ಮಜ್ಜಿಗೆಯೊಳಗಿಂದ ಬೆಣ್ಣೆ ತೆಗೆದಂತೆ ಕಟ್ಟಿಕೊಟ್ಟಿದ್ದಾರೆ ಲೀಲಾ ದಾಮೋದರ ಅವರು.  ಲೀಲಾ ದಾಮೋದರ ಅವರು ನಿವೃತ್ತ ಉಪನ್ಯಾಸಕಿ. ಸುಳ್ಯದಲ್ಲಿ ನೆಲೆಸಿದ್ದಾರೆ. ಕಥೆ, ಬರಹ, ವಿಚಾರ ಮಂಡನೆ ಅವರ ಆಸಕ್ತಿಯ ಕ್ಷೇತ್ರಗಳು. ಪ್ರತಿಕ್ರಿಯಿಸಿ: siridanipodcast@gmail.com Background music used with thanks: https://www.youtube.com/watch?v=GmNxHUq6gnw&list=RDMM...

ರಾಮ ಮತ್ತು ಮೂಗುತಿ ಸುಂದರಿ ‌- ಪಾಡ್ಕಥೆ: ಮಧುರಾ ಲಕ್ಷೀಶ ಭಟ್ 31.01.2021

ಕಾಯುವಿಕೆಗಿಂತ ಬೇರೆ ತಪಸ್ಸು ಇಲ್ಲ ಎಂದು ರಾಮ ಮತ್ತು ಮೂಗುತಿ ಸುಂದರಿಯ ಕಥೆಯಲ್ಲಿ ಹೇಳಿದ್ದಾರೆ ಮಧುರಾ ಲಕ್ಷೀಶ ಭಟ್. ಮಧುರಾ ಉಜಿರೆ ಎಸ್‌ಡಿಎಂ ಕಾಲೇಜಿನ ಪತ್ರಿಕೋದ್ಯಮ ವಿದ್ಯಾರ್ಥಿನಿ. ಕಥೆ, ಬರಹ, ಮಾತು ಅವರ ಅಭಿರುಚಿ. ಕೇಳಿ ರಾಮ ಮತ್ತು ಮೂಗುತಿ ಸುಂದರಿಯ ಕಥೆ. ಪ್ರತಿಕ್ರಿಯಿಸಿ: siridanipodcast@gmail.com Background music used with thanks: https://www.youtube.com/watch?v=GmNxHUq6gnw&list=RDMM&start_radio=1 https://www.youtube.com/watch?v=...

ಮಗಳು ದೊಡ್ಡವಳಾದಳು- ವಾಣಿ ರಾಜ್‌ 31.01.2021

ಪುಟ್ಟ ಶಿಶುವಾಗಿದ್ದವಳು ದೊಡ್ಡವಳಾಗುವವರೆಗಿನ ಪರಿಯನ್ನು ಬಣ್ಣಿಸುತ್ತಾ, ಮಗಳು ಎಷ್ಟೇ ಬೆಳೆದರೂ ತಾಯಿಯ ಪಾಲಿಗೆ ಅವಳಿನ್ನೂ ಪುಟ್ಟ ಮಗುವೇ ಎಂದು ಭಾವುಕ ಸನ್ನಿವೇಶವನ್ನು ʼಮಗಳು ದೊಡ್ಡವಳಾದಳು ಕಥೆಯಲ್ಲಿ ಹೇಳಿದ್ದಾರೆ ವಾಣಿ ರಾಜ್‌.  ಚಿಂತನೆ, ಬರಹ, ಯೋಗ ಇತ್ಯಾದಿ ವಾಣಿ ರಾಜ್‌ ಅವರ ಆಸಕ್ತಿಯ ಕ್ಷೇತ್ರಗಳು.  ಪ್ರತಿಕ್ರಿಯಿಸಿ: siridanipodcast@gmail.com Background music used with thanks: https://www.youtube.com/watch?v=GmNxHUq6gnw&list=RDMM&s...

ಹೊಸ ರಾಷ್ಟ್ರೀಯ ಶಿಕ್ಷಣ ನೀತಿ -2020 14.01.2021

ಹೊಸ ರಾಷ್ಟ್ರೀಯ ಶಿಕ್ಷಣ ನೀತಿ -2020 ಹೊಸ ರಾಷ್ಟ್ರೀಯ ಶಿಕ್ಷಣ ನೀತಿ ಸಮಿತಿಯ ಸದಸ್ಯ,  ಆಂಧ್ರಪ್ರದೇಶದ ಕೇಂದ್ರೀಯ ಬುಡಕಟ್ಟು ವಿಶ್ವವಿದ್ಯಾಲಯದ ಕುಲಪತಿ ಡಾ.ತೇಜಸ್ವಿ ವಿ. ಕಟ್ಟಿಮನಿ ಅವರೊಂದಿಗೆ ಮೈ ಅಂತರಾತ್ಮ ಸಂಸ್ಥೆಯ ಸಂಸ್ಥಾಪಕ ವೇಣು ಶರ್ಮ ಮಂಗಳೂರು ಅವರು ನಡೆಸಿದ ಮಾತುಕತೆ.  MUSIC USED WITH THANKS https://www.youtube.com/watch?v=x3O9OXjK7pA https://www.youtube.com/watch?v=GmNxHUq6gnw

ಕಲಾಶೃಂಗ: ಪ್ರಸ್ತುತಿ: ಪ್ರೆಸ್ಟೀಜ್‌ ಫಾಲ್ಕನ್‌ ಸಿಟಿ ಕೋಣನಕುಂಟೆ ಬೆಂಗಳೂರು 14.01.2021

ಪ್ರೆಸ್ಟೀಜ್‌ ಫಾಲ್ಕನ್‌ ಸಿಟಿ ಕೋಣನಕುಂಟೆ ಬೆಂಗಳೂರು ಅರ್ಪಿಸುವ ಕಲಾಶೃಂಗ. ಸುಗಮ ಸಂಗೀತ ಕಾರ್ಯಕ್ರಮ. ಗಾಯನ: ಬಿ.ಎಸ್‌.ರವಿಶಂಕರ್‌, ವೈಶಾಲಿ ಹೆಗಡೆ, ಭಾವನಾ  ತಬಲಾ:  ಅಭಯ್‌ ಕುಲಕರ್ಣಿ ಹಾರ್ಮೋನಿಯಂ:  ಸೂರ್ಯ ಉಪಾಧ್ಯಾಯ ಕಾರ್ಯಕ್ರಮ ಸಂಯೋಜನೆ: ಡಾ.ಎ. ಭಾನು, ಹಿರಿಯ ತಾಂತ್ರಿಕ ಅಧಿಕಾರಿ ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆ, ಹೆಸರಘಟ್ಟ ಬೆಂಗಳೂರು. ನಿರೂಪಣೆ:  ವೈ.ವಿ. ಗುಂಡೂರಾವ್ ಸಂಚಿಕೆ ನಿರೂಪಣೆ:  ವೀಣಾ ನಂಚಾರ್ MUSIC USED WITH THANKS https://w...

ಹೊಸ ರಾಷ್ಟ್ರೀಯ ಶಿಕ್ಷಣ ನೀತಿ -2020 - ಮುನ್ನೋಟ 12.01.2021

ಹೊಸ ರಾಷ್ಟ್ರೀಯ ಶಿಕ್ಷಣ ನೀತಿ -2020  ಹೊಸ ರಾಷ್ಟ್ರೀಯ ಶಿಕ್ಷಣ ನೀತಿ ಸಮಿತಿಯ ಸದಸ್ಯ,  ಆಂಧ್ರಪ್ರದೇಶದ ಕೇಂದ್ರೀಯ ಬುಡಕಟ್ಟು ವಿಶ್ವವಿದ್ಯಾಲಯದ ಕುಲಪತಿ ಡಾ.ತೇಜಸ್ವಿ ವಿ. ಕಟ್ಟಿಮನಿ ಅವರೊಂದಿಗೆ ಮೈ ಅಂತರಾತ್ಮ ಸಂಸ್ಥೆಯ ಸಂಸ್ಥಾಪಕ ವೇಣು ಶರ್ಮ ಮಂಗಳೂರು ಅವರು ನಡೆಸಿದ ಮಾತುಕತೆ. ಸಿರಿದನಿ ಪಾಡ್‌ಕಾಸ್ಟ್‌ನಲ್ಲಿ ಜನವರಿ 15, 2020ರಂದು ಪ್ರಸಾರ. ಪ್ರತಿಕ್ರಿಯಿಸಿ: siridanipodcast@gmail.com ಭೇಟಿ ನೀಡಿ: SIRIdani@facebook.com

ರಾಮಜನ್ಮವಾಯ್ತು ಸಖಿ...: ಡಾ.ವಿನಯ ಶ್ರೀನಿವಾಸ್ 31.12.2020

ಡಾ.ವಿನಯ ಶ್ರೀನಿವಾಸ್ ಶಿವಮೊಗ್ಗದಿಂದ ಹಾಡಿದ್ದಾರೆ ರಾಮಜನ್ಮವಾಯ್ತು ಸಖಿ... ರಾಮಜನ್ಮವು.  ಡಾ ವಿನಯ ಶ್ರೀನಿವಾಸ್ ವೃತ್ತಿಯಲ್ಲಿ ರೋಗ ಲಕ್ಷಣ ಶಾಸ್ತ್ರಜ್ಞೆ ಪ್ರವೃತ್ತಿಯಲ್ಲಿ ಬರಹಗಾರ್ತಿ. ಶಿವಮೊಗ್ಗದ ಸುಬ್ಬಯ್ಯ ವೈದ್ಯಕೀಯ ಕಾಲೇಜಿನ ಟ್ರಸ್ಟಿಯೂ ಹೌದು. ನೂರಕ್ಕೂ ಹೆಚ್ಚು ವೈದ್ಯಕೀಯ ಲೇಖನಗಳು, ಮಕ್ಕಳ ಕತೆಗಳು, ವ್ಯಕ್ತಿತ್ವ ವಿಕಸನ ಲೇಖನಗಳು, ಲಲಿತ ಪ್ರಬಂಧಗಳು ಇವರ ಈವರೆಗಿನ ಬರಹಗಳು. ಸಂಗೀತ ಹಾಗೂ ನಾಟಕಗಳ ಬಗೆಗೂ ಆಸಕ್ತಿ ಹೊಂದಿದ್ದಾರೆ. ಸಾಹಿತ್ಯ ಸಮ್ಮೇಳನಗಳಲ್ಲಿ ಉಪನ್ಯಾಸ ಮಾಡಿರುವ ಹೆಗ...

ವಚನ ಸಾರ: ದಿನೇಶ್‌ ಪೂಜಾರಿ ಹಳೆ ನೇರಂಕಿ. ಗಾಯನ: ತೋಟಪ್ಪ ಉತ್ತಂಗಿ 31.12.2020

ಹಳೆ ನೇರಂಕಿಯ ದಿನೇಶ್‌ ಪೂಜಾರಿ ಅವರು ವಚನ ಸಾಲುಗಳ ಮಹತ್ವ ಸಾರಿದ್ದಾರೆ. ಅವರ ಮಾತುಗಳಿಗೆ ಪೂರಕವಾಗಿ ತೋಟಪ್ಪ ಉತ್ತಂಗಿ ಅವರು ಕೆಲವು ವಚನಗಳನ್ನು ಹಾಡಿದ್ದಾರೆ.  ಮಾತು, ಗಾಯನ ಎರಡೂ ಚೆನ್ನಾಗಿವೆ. ಆಲಿಸಿ.  ವಚನಗಾಯನಗಳ ಕೊಡುಗೆ: ಶ್ರೀ ಮುರುಘಾಮಠ ಚಿತ್ರದುರ್ಗ ಸಂಚಿಕೆ ನಿರೂಪಣೆ: ರಾಮ್‌ಕಿಶನ್‌ ಪುತ್ತೂರು MUSIC USED WITH THANKS: https://www.youtube.com/watch?v=GmNxHUq6gnw

ಯಾರು ಈ ಒಪ್ಪಣ್ಣ? SHOW ON OPPANNA.COM 31.12.2020

ಒಪ್ಪಣ್ಣ ಡಾಟ್‌ ಕಾಂ ಸಂಸ್ಥಾಪಕ ಮಹೇಶ್‌  ಎಳ್ಯಡ್ಕ ಮತ್ತು ಉಜಿರೆ ಎಸ್‌ಡಿಎಂ ತಾಂತ್ರಿಕ ಕಾಲೇಜಿನ ವಿದ್ಯುತ್‌ ಮತ್ತು ವಿದ್ಯುನ್ಮಾನ ವಿಭಾಗದ ಸಹಪ್ರಾಧ್ಯಾಪಕ ಡಾ.ವೇಣೂರು ಸುಬ್ರಹ್ಮಣ್ಯ ಭಟ್ ‌  ಅವರ ಮಾತುಕತೆ ಮಾತಿನ ಮಧ್ಯೆ ಹವ್ಯಕ ಕನ್ನಡ ಸೊಗಡಿನ ಯಕ್ಷಗಾನ, ಗಾಯನದ ಝಲಕ್‌ ಸಂಚಿಕೆ ನಿರೂಪಣೆ: ರಾಮ್‌ ಕಿಶನ್‌ ಪುತ್ತೂರು MUSIC USED WITH THANKS https://www.youtube.com/watch?v=0Dex6szjvmI https://www.youtube.com/watch?v=x3O9OXjK7pA https://www.youtube...

ಹೊಸ ವರ್ಷದ ಆಶಯ: ಡಾ.ನಾ. ದಾಮೋದರ ಶೆಟ್ಟಿ 31.12.2020

ಹೊಸ ವರ್ಷದ ಆಶಯಗಳ ಬಗ್ಗೆ ಮನಸ್ಸು ತೆರೆದು ಮಾತನಾಡಿದ್ದಾರೆ ಮಂಗಳೂರಿನಿಂದ ರಂಗ ಕರ್ಮಿ,  ಸಾಹಿತಿ. ವಿಮರ್ಶಕ ಡಾ.ನಾ. ದಾಮೋದರ ಶೆಟ್ಟಿ ಅವರು. MUSIC USED WITH THANKS https://www.youtube.com/watch?v=x3O9OXjK7pA https://www.youtube.com/watch?v=GmNxHUq6gnw

ಹೇಗಿದೆ ಸಿರಿದನಿ? ನೀವು ಹೇಳಿದ್ದು... 31.12.2020

ಹೇಗಿದೆ? ಹೇಗಿರಬೇಕು ಸಿರಿದನಿ ಎನ್ನುವ ಕುರಿತು ತುಂಬಾ ಜನ ಪ್ರತಿಕ್ರಿಯೆ ಕಳುಹಿಸಿದ್ದಾರೆ. ಆಯ್ದ ಕೆಲವನ್ನು ಈ ಸಂಚಿಕೆಯಲ್ಲಿ ಪ್ರಸಾರ ಮಾಡುತ್ತೇವೆ.  ಪ್ರತಿಕ್ರಿಯಿಸಿದ ನಿಮಗೆ ಪ್ರೀತಿಯ ಧನ್ಯವಾದಗಳು - ಸಿರಿದನಿ ಸಂಚಿಕೆ ನಿರೂಪಣೆ: ರಾಮ್‌ ಕಿಶನ್‌ ಪುತ್ತೂರು MUSIC USED WITH THANKS https://www.youtube.com/watch?v=x3O9OXjK7pA https://www.youtube.com/watch?v=GmNxHUq6gnw

ಹೊಸ ವರ್ಷದ ಆಶಯ: ಮಧುರಾ ಭಟ್‌ 31.12.2020

ಹೊಸ ವರ್ಷದ ಆಶಯ ತೆರೆದಿಟ್ವವರು ಮಧುರಾ ಭಟ್‌ MUSIC USED WITH THANKS https://www.youtube.com/watch?v=x3O9OXjK7pA https://www.youtube.com/watch?v=GmNxHUq6gnw

Ouça o podcast ಸಿರಿದನಿ SIRIdani no Replaio

Rádio e podcasts em um só app - grátis e sem cadastro. Instale hoje e não perca o lançamento

Baixe no Google Play

O Replaio não é o publicador dos podcasts; os nomes dos programas, as capas e o áudio pertencem aos seus autores e são distribuídos por feeds RSS públicos