Shwetha Initiative

ಸಿರಿದನಿ SIRIdani

Business KN ↓ 185 episodes

SIRIdani, A passion broadcast channel, set up by equal minded team In Bangalore. Channel addresses education, culture, social issues and youth Designs in depth subject discussion with the experts of relevant area. Light entertainment, talk shows also focusing area. Subjects we choose non controversy and factual issues and which is out of regular platforms. Files Uploaded once in 15 days. and will come online with special episodes too.

Author

Shwetha Initiative

Category

Business

Podcast website

www.shwethainitiative.com

Latest episode

Jul 21, 2024

Where to listen?

Podcasts in the app Replaio Radio Coming soon

Podcasts are coming to the app soon. Install now and be the first to see a whole new take on podcasts

Get it on Google Play Install for free Android 5M+ downloads · 4.8 rating iOS soon

Episodes

ಯುಗಾದಿ– ಹೊಸತಾಗುವ ಹೊತ್ತು– ಸ್ಮಿತಾ ಶೆಣೈ ಮಂಗಳೂರು 31.03.2022

ಬೇಕೋ ಬೇಡವೋ ಒಂದಿಷ್ಟು ಕೊಳ್ಳುವ, ಸಂಗ್ರಹಿಸುವ ಮನಸ್ಥಿತಿಯಿಂದ ಹೊರ ಬನ್ನಿ. ಹೆಚ್ಚೆನಿಸಿದ್ದನ್ನು ಹೊರ ಹಾಕಿ, ಬೇಡವೆನಿಸಿದ್ದನ್ನು ಸ್ವಚ್ಛಗೊಳಿಸಿ. ಹಾಗೆಯೇ ಮನಸ್ಸನ್ನೂ ತಿಳಿಗೊಳಿಸಿ ಎಂದು ಲಘುವಾಗಿ ಹೇಳಿದ್ದಾರೆ ಸ್ಮಿತಾ ಶೆಣೈ. ಯುಗಾದಿಯ ನೆಪದಲ್ಲಿ ಒಂದು ಲಹರಿ ಸಂಚಿಕೆ ನಿರ್ಮಾಣ: ದೀಪಾ ಪಾವಂಜೆ ಪ್ರತಿಕ್ರಿಯಿಸಿ: siridanipodcast@gmail.com

ಧ್ವನಿಯೇ ಬದುಕು– ಅನಿತಾ ರಂಗಸ್ವಾಮಿ– ಕಂಠದಾನ ಕಲಾವಿದೆ 31.03.2022

ಅನಿತಾ ರಂಗಸ್ವಾಮಿ ಬೆಂಗಳೂರಿನವರು. ಸುಮಾರು 20 ವರ್ಷಗಳಿಂದ ಕಂಠದಾನ ಕ್ಷೇತ್ರದಲ್ಲಿದ್ದಾರೆ. ಸಂಗೀತ ಸಂಯೋಜನೆ, ಸಾಹಿತ್ಯ ಬರಹ, ಮಾತು, ರೇಡಿಯೋ ಜಾಹೀರಾತು ಕ್ಷೇತ್ರದಲ್ಲಿ ಸಕ್ರಿಯರು.  ಕಂಠದಾನ ಕ್ಷೇತ್ರ ಹೇಗಿದೆ? ಆ ಬದುಕು ಎಂಥದ್ದು ಎಂದು ತಿಳಿಯುವ ಪುಟ್ಟ ಪ್ರಯತ್ನ ಇಲ್ಲಿಯದು.  ಅನಿತಾ ರಂಗಸ್ವಾಮಿ #anitharangaswamy ಹಾಡುಗಳನ್ನು ಕೇಳಲು ಯುಟ್ಯೂಬ್‌ ಲಿಂಕ್‌ https://www.youtube.com/watch?v=RYJ4-HuRiHo ಅನಿತಾ ಅವರ ಸಾಹಿತ್ಯದ #puneethrajkumar ‍ಪುನೀತ್‌ ರಾಜ್‌ಕುಮಾರ್‌ ಅವ...

ಒಂದೊಳ್ಳೇ ಕಥೆ– ಆರ್‌ಜೆ ನಯನಾ 03.03.2022

ಸಮಾಜ ಸೇವೆಯನ್ನು ಹೀಗೂ ಮಾಡಬಹುದು ಎಂದು ಒಂದೊಳ್ಳೆ ದೃಷ್ಟಾಂತ ಕಥೆಯ ಮೂಲಕ ಹೇಳಿದ್ದಾರೆ ಆರ್‌.ಜೆ. ನಯನಾ. ನಯನಾ ಅವರು ರೇಡಿಯೋ ನಿರೂಪಕಿ, ಸೃಜನಾತ್ಮಕ ಕಾರ್ಯಕ್ರಮಗಳ ಮೂಲಕ ಗುರುತಿಸಿಕೊಂಡವರು. ಪ್ರತಿಕ್ರಿಯಿಸಿ: siridanipodcast@gmail.com

13ನೇ ಬೆಂಗಳೂರು ಅಂತರರಾಷ್ಟ್ರೀಯ ಚಿತ್ರೋತ್ಸವ– ಒಂದು ನೋಟ– ಬಾನಾಸು 28.02.2022

13ನೇ ಬೆಂಗಳೂರು ಅಂತರರಾಷ್ಟ್ರೀಯ ಚಿತ್ರೋತ್ಸವ– ಒಂದು ನೋಟ– ಬಾನಾಸು ಬಾ.ನಾ. ಸುಬ್ರಹ್ಮಣ್ಯ, ಹಿರಿಯ ಚಲನಚಿತ್ರ ಪತ್ರಕರ್ತರು. ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವದ ಬಗ್ಗೆ ವಿಶ್ಲೇಷಿಸಿದ್ದಾರೆ. ಕೇಳಿ, ಪ್ರತಿಕ್ರಿಯಿಸಿ: siridanipodcast@gmail.com

ಸಿರಿದನಿ 37ನೇ ಸಂಚಿಕೆ: ಇರುವುದೆಲ್ಲವ ಬಿಟ್ಟು: ವಿದ್ಯಾ ಎಸ್‌. ಮಂಗಳೂರು 15.02.2022

ಇರುವುದೆಲ್ಲವ ಬಿಟ್ಟು... ಕಾಲದ ಸ್ಥಿತ್ಯಂತರವನ್ನು ಲಹರಿಯಲ್ಲಿ ಕಟ್ಟಿಕೊಟ್ಟಿದ್ದಾರೆ ವಿದ್ಯಾ ಎಸ್‌.  ವಿದ್ಯಾ ಅವರು ಪುತ್ತೂರಿನ ಇವೇಕಾನಂದ ಕಾಲೇಜಿನಲ್ಲಿ ಸಮಾಜಶಾಸ್ತ್ರ ಉಪನ್ಯಾಸಕಿ. ಆಕಾಶವಾಣಿಯಲ್ಲಿ ಅರೆಕಾಲಿಕ ನಿರೂಪಕಿಯಾಗಿದ್ದಾರೆ. ಕಲೆ, ಸಾಹಿತ್ಯ, ಮಾತು, ಸಾಂಸ್ಕೃತಿಕ ಸಂಘಟನೆ ಅವರ ಆಸಕ್ತಿಯ ಕ್ಷೇತ್ರಗಳು ಪ್ರತಿಕ್ರಿಯಿಸಿ: siridanipodcast@gmail.com

ಕಥೆ: ಅಪರಾಧಿ – ಅರುಣಾ ಶ್ರೀನಿವಾಸ್‌ ಉಜಿರೆ 31.01.2022

ಅರುಣಾ ಶ್ರೀನಿವಾಸ್‌, ಬರಹಗಾರ್ತಿ, ಕಥೆಗಾರ್ತಿ. ಸಿರಿದನಿಯಲ್ಲಿ ಈ ಬಾರಿ ಹೊಸ ಕಥೆ ‘ಅಪರಾಧಿ’ಯೊಂದಿಗೆ ಬಂದಿದ್ದಾರೆ.  ಕೇಳಿ ಪ್ರತಿಕ್ರಿಯಿಸಿ: siridanipodcast@gmail.com ಸಂಚಿಕೆ ನಿರ್ಮಾಣ: ದೀಪಾ ಪಾವಂಜೆ

ಕಥೆ: ಗ್ರಹಣ – ದೀಪಾ ಪಾವಂಜೆ 31.01.2022

ದೀಪಾ ಪಾವಂಜೆ ಮಂಗಳೂರಿನವರು. ಉಪನ್ಯಾಸಕಿ, ಆಕಾಶವಾಣಿಯಲ್ಲಿ ಹವ್ಯಾಸಿ ನಿರೂಪಕಿ. ಗಝಲ್‌, ಕಥೆ ಬರವಣಿಗೆ ಅವರ ಆಸಕ್ತಿ.  ಸಿರಿದನಿಯಲ್ಲಿ ಅವರ ಕಥೆ: ಗ್ರಹಣ. ಕೇಳಿ ಪ್ರತಿಕ್ರಿಯಿಸಿ: siridanipodcast@gmail.com

ಕಥೆ: ಚಸ್ಕಿ– ಸುಹಾನಾ ಸೈಯದ್‌ 31.01.2022

ಕು|ಸುಹಾನ ಸಯ್ಯದ್ ಎಂ. , ಬಹು ಭಾಷಾ ಬರಹಗಾರ್ತಿ ಇವರು ಕನ್ನಡ, ಹಿಂದಿ, ಇಂಗ್ಲೀಷ್ ಹೀಗೇ ಸುಮಾರು ಎಂಟು ಭಾಷೆ ಮಾತಾಡಬಲ್ಲರು. ಹದಿಮೂರನೇ ವರ್ಷದಲ್ಲೇ ಬರೆಯಲು ಆರಂಭಿಸಿದ ಇವರು ಮೂರು ಭಾಷೆಗಳಲ್ಲಿ ಕಥೆ, ಕವನ, ನಗೆಹನಿ, ಹಾಯ್ಕು, ಅಬಾಬಿ ,ಚುಟುಕು ಮುಂತಾದವುಗಳನ್ನು ಬರೆಯುತ್ತಾರೆ.  ಶಿಕ್ಷಣ ಮತ್ತು ವೃತ್ತಿ ಜೀವನ: 2001ರಿಂದ 2004ರವರೆಗೆ ತಮ್ಮ ಪ್ರೌಢ ಮತ್ತು ಕಾಲೇಜು ವಿದ್ಯಾಭ್ಯಾಸವನ್ನು ಬಂಟ್ವಾಳ ತಾಲೂಕಿನ ವಿಟ್ಲದ ಪದವಿ ಪೂರ್ವ ಕಾಲೇಜಿನಲ್ಲಿ ಮಾಡಿದ ಸುಹಾನರು, ತಮ್ಮ ಮೂರು ವರ್ಷದ ಪದ...

ಇಂಜೆಕ್ಷನ್‌ ತಕಣಿ ಮಾರ್ರೆ – ಕುಂದಗನ್ನಡದಲ್ಲೊಂದು ಚಂದದ ಮಾತುಕತೆ 31.01.2022

ಇಂಜೆಕ್ಷನ್‌ ತಕಣಿ ಮಾರ್ರೆ... ಕುಂದಗನ್ನಡದಲ್ಲೊಂದು ಚೆಂದದ ಮಾತುಕತೆ ಮೇಘನಾ ದೇವಾಡಿಗ, ಶ್ರೀರಕ್ಷಾ, ಶ್ರೀಲಕ್ಷ್ಮೀ ಸ್ಕ್ರಿಪ್ಟ್‌: ಪೂಜಿತಾ ಪ್ರತಿಕ್ರಿಯಿಸಿ: siridanipodcast@gmail.com

ರಂಗ ಅಂತರಂಗ – ಹಾರಾಡಿ ಬಿ.ಎಸ್‌.ರಾಮಶೆಟ್ಟಿ ಅವರೊಂದಿಗೆ ಸ್ಮಿತಾ ಶೆಣೈ ಮಂಗಳೂರು ಅವರ ಮಾತುಕತೆ 15.01.2022

ಹಾರಾಡಿ ಬಿ.ಎಸ್‌.ರಾಮಶೆಟ್ಟಿ ರಂಗಭೂಮಿ, ಶಿಕ್ಷಣ ಕ್ಷೇತ್ರದಲ್ಲಿ ಸಕ್ರಿಯರಾಗಿರುವವರು. ಸದ್ಯದ ರಂಗಭೂಮಿ ಹೇಗಿದೆ? ರಂಗಕರ್ಮಿಯ ಬದುಕು ಹೇಗಿದೆ? ಶಿಕ್ಷಣದಲ್ಲಿ ರಂಗ ಪ್ರಯೋಗ ಅಳವಡಿಸಿದ್ದು ಹೇಗೆ? ಇಂಥ ಹತ್ತಾರು ವಿಷಯಗಳನ್ನು ಈ ಮಾತುಕತೆಯಲ್ಲಿ ತೆರೆದಿಟ್ಟಿದ್ದಾರೆ ರಾಮಶೆಟ್ಟಿ ಅವರು. ಮಾತನಾಡಿಸಿದವರು: ಸ್ಮಿತಾ ಶೆಣೈ ಮಂಗಳೂರು. ಪ್ರತಿಕ್ರಿಯಿಸಿ: siridanipodcast@gmail.com ಕಾರ್ಯಕ್ರಮ ನಿರ್ಮಾಣ: ದೀಪಾ ಪಾವಂಜೆ

ಓಟ್‌ ಹಾಕಲೂ ಬ್ಲಾಕ್‌ಚೈನ್‌– ವಿಜ್ಞಾನಿ ನಟ ತೇಜ್‌ 14.01.2022

ಭಾರತದ ಚುನಾವಣಾ ವ್ಯವಸ್ಥೆಯಲ್ಲಿ ಕ್ರಾಂತಿಕಾರಕ ಬದಲಾವಣೆ ತರಬಲ್ಲ ಬ್ಲಾಕ್‌ಚೈನ್‌ ತಂತ್ರಜ್ಞಾನದ ಬಗ್ಗೆ ವಿಜ್ಞಾನಿ, ನಟ ತೇಜ್‌ ಮಾತನಾಡಿದ್ದಾರೆ.  ಚುನಾವಣೆಯಲ್ಲಿ ಈ ತಂತ್ರಜ್ಞಾನ ಬಂದರೆ ಮತದಾರರ ಪಾಲ್ಗೊಳ್ಳುವಿಕೆ ಮತ್ತು ಚುನಾವಣೆಯ ವಿಶ್ವಾಸಾರ್ಹತೆ ಹೆಚ್ಚುತ್ತದೆ. ಫಲಿತಾಂಶದಲ್ಲಿ ನಿಖರತೆ ತರಲು ಸಾಧ್ಯ ಎನ್ನುವ ವಿಶ್ವಾಸ ತೇಜ್‌ ಅವರದ್ದು. ಪ್ರತಿಕ್ರಿಯಿಸಿ:siridanipodcast@gmail.com BACKGROUND MUSIC USED WITH THANKS https://twitter.com/SiridaniP/status/148203...

ಜೀವನಖುಷಿಯ ನಿರ್ವಹಣೆ – ಭುವನೇಶ್ವರಿ ಹೆಗಡೆ 31.12.2021

ನಿತ್ಯ ನೂತನ ಜೀವನೋತ್ಸಾಹ, ಖುಷಿ ಹೇಗಿರಬೇಕು ಅನ್ನವ ಟಿಪ್ಸ್ ಕೊಟ್ಟಿದ್ದಾರೆ, ನಾಡಿನ ಖ್ಯಾತ ಹಾಸ್ಯ ಲೇಖಕಿ ಭುವನೇಶ್ವರಿ ಹೆಗಡೆ ಅವರು. ಆತ್ಮೀಯ ಮಾತುಕತೆಯಲ್ಲಿ ಭುವನೇಶ್ವರಿ ಹೆಗಡೆ ಅವರು ಮನಸ್ಸು ತೆರೆದಿಟ್ಟಿದ್ದಾರೆ. ಹೊಸ ವರ್ಷದ ಮೊದಲ ದಿನ ಹಾಗೂ ಮೊದಲ ಸಂಚಿಕೆಯಲ್ಲಿ ಭುವನೇಶ್ವರಿ ಹೆಗಡೆ ಅವರ ಮಾತುಗಳನ್ನು ಕೇಳೋಣ. ನಿಮ್ಮ ಪ್ರತಿಕ್ರಿಯೆಗೆ: siridanipodcast@gmail.com   BACKGROUND MUSIC USED WITH THANKS New Vibes - Relaxing Music : https://www.youtube.com/...

ಜೀವನ – ಜೀವಂತಿಕೆ: ವಾಣಿ ರಾಜ್‌ ಬೆಂಗಳೂರು 31.12.2021

ಜೀವನ ಮತ್ತು ಜೀವನೋತ್ಸಾಹದ ಬಗ್ಗೆ ಸುಮಾರು ಎರಡು ತಲೆಮಾರುಗಳ ತುಲನೆ ಮಾಡಿದ್ದಾರೆ ವಾಣಿರಾಜ್‌. ಹೊಸ ವರ್ಷದ ಹೊತ್ತಿನಲ್ಲಿ ಒಂದಿಷ್ಟು ನೆನಪುಗಳ ಮೆಲುಕು ಇದೆ. ವಾಣಿರಾಜ್‌ ಅವರು ಲೇಖಕಿ, ಯೋಗ, ಕಲೆ, ಸಂಸ್ಕೃತಿ ಆಸಕ್ತರು. ಸಂಚಿಕೆ ನಿರ್ಮಾಣ: ದೀಪಾ ಪಾವಂಜೆ ಪ್ರತಿಕ್ರಿಯಿಸಿ: siridanipodcast@gmail.com

ಆರೋಗ್ಯಯುತ– ಔಷಧಮುಕ್ತ ಹೊಸ ವರ್ಷ: ಪಿ. ಗಣೇಶ್ 31.12.2021

ಪಿ.ಗಣೇಶ್‌ ಅವರು ಜೀವನ ಕ್ಷೇಮ ನಿರ್ದೇಶಕ. wellness director ಆಗಿ ಹಲವಾರು ವರ್ಷಗಳಿಂದ ಬೆಂಗಳೂರಿನಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಮಾರುಕಟ್ಟೆ, ಮಾನವ ಸಂಪನ್ಮೂಲ ನಿರ್ವಹಣೆ ಕ್ಷೇತ್ರದಲ್ಲೂ ಪರಿಣತರು. ಆರೋಗ್ಯ ಕ್ಷೇತ್ರದಲ್ಲಾಗುತ್ತಿರುವ ಬೆಳವಣಿಗೆ, ಅದೇ ವೇಳೆ ಜೀವನ ಶೈಲಿಯಲ್ಲಾದ ಬದಲಾವಣೆಗಳನ್ನು ಹತ್ತಿರದಿಂದ ಗಮನಿಸಿರುವ ಅವರು, ಔಷಧಮುಕ್ತ ಜೀವನ ಸಾಧ್ಯವೇ ಎಂಬ ಬಗ್ಗೆ ಅಧ್ಯಯನ ನಡೆಸಿ, ಪರಿಣತರ ತಂಡವನ್ನು ಕಟ್ಟಿಕೊಂಡು ನಾಡಿನಾದ್ಯಂತ ಜಾಗೃತಿ ಮೂಡಿಸುತ್ತಿದ್ದಾರೆ. ಶಾಲಾ, ಕಾಲೇಜು,...

ರಾಧೆ ಎಂಬ ಗಾಥೆ– ಏನಿದು ಒಳಕಥೆ: ಸ್ಮಿತಾ ಶೆಣೈ ಮಂಗಳೂರು 31.12.2021

ಉದ್ಯಾವರ ಮಾಧವ ಆಚಾರ್ಯ ಅವರ ಕವನಸಂಕಲನವನ್ನು ರಾಧೆ ಎಂಬ ಗಾಥೆಯನ್ನು ಪರಿಚಯಿಸಿದ್ದಾರೆ ಸ್ಮಿತಾ ಶೆಣೈ. ಕೃತಿಕಾರರ ಕೃಷ್ಣಪ್ರೀತಿ, ರಾಧೆಯ ಪ್ರೇಮದ ಆಯಾಮ, ಗಾಢತೆಯನ್ನು ಸ್ಮಿತಾ ಅವರು ಮಾತಿನಲ್ಲಿ ಕಟ್ಟಿಕೊಟ್ಟಿದ್ದಾರೆ. ಪ್ರತಿಕ್ರಿಯಿಸಿ: siridanipodcast@gmail.com Background music used with thanks: Preeti Kotta Radhege- SINGER: Shreelata Gururaj Shreelata Gururaj https://www.youtube.com/watch?v=5U1o7GNFvUw Flute: https://www.youtube.com/watch...

ಅಭಿಯೋಜಕ ಮತ್ತು ನ್ಯಾಯದಾನ – ಬಿ.ಎಸ್‌.ಪಾಟೀಲ್‌ 14.12.2021

ಸರ್ಕಾರಿ ಅಭಿಯೋಜಕ ಎಂದರೆ ಯಾರು? ಮತ್ತು ಅವರ ಜವಾಬ್ದಾರಿಗಳೇನು?  ಈ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ ಸರ್ಕಾರಿ ಅಭಿಯೋಜಕರ ಸಂಘದ ಅಧ್ಯಕ್ಷ ಬಿ.ಎಸ್‌.ಪಾಟೀಲ್‌ ಅವರು.  ಸೂಕ್ಷ್ಮ, ಅತಿಸೂಕ್ಷ್ಮ ಪ್ರಕರಣಗಳನ್ನು ನಿಭಾಯಿಸಿ, ಯಶಸ್ವಿಯಾದ ಅವರ ಯಶೋಗಾಥೆಗಳನ್ನು ನೀವು ಕೇಳಬಹುದು. ಕೇಳಿ, ನಿಮ್ಮ ಆಪಪ್ತರಿಗೂ ಕೇಳಿಸಿ. ಪ್ರತಿಕ್ರಿಯಿಸಿ: siridanipodcast@gmail.com ಸಂಚಿಕೆ ನಿರ್ಮಾಣ: ದೀಪಾ ಪಾವಂಜೆ

ಕವಿಸಿರಿ – ಮಾತುಕತೆ: ವಿಜಯಲಕ್ಷ್ಮೀ ಕೊಟಗಿ 14.12.2021

ಕೊಪ್ಪಳದ ಕವಯಿತ್ರಿ, ಸಾಹಿತಿ, ರಂಗಭೂಮಿ ಹಾಗೂ ಚಲನಚಿತ್ರ ಕಲಾವಿದೆ ವಿಜಯಲಕ್ಷ್ಮೀ ಕೊಟಗಿ ಅವರು ಮಾತುಕತೆಗೆ ಸಿಕ್ಕಿದ್ದಾರೆ.  ಅರಳದ ಅಲರು ಮತ್ತು ಶ್ರೀವಿಜಯ ಸ್ವಗತ ಎಂಬ ಎರಡು ಕೃತಿಗಳು ಇತ್ತೀಚೆಗೆ ಬಿಡುಗಡೆಯಾಗಿವೆ. ಆ ನೆಪದಲ್ಲಿ ಕೊಟಗಿ ಅವರ ಕವಿಮನಸ್ಸನ್ನು ಅರಿಯುವ ಪುಟ್ಟ ಪ್ರಯತ್ನ ಸಿರಿದನಿಯದ್ದು. ಮಾತುಕತೆ ಕೇಳಿ ನಿಮ್ಮ ಆಪ್ತರಿಗೂ ಕೇಳಿಸಿ ಕಾರ್ಯಕ್ರಮ ಹೇಗಿತ್ತು ಎಂದು ಪ್ರತಿಕ್ರಿಯಿಸಿ: siridanipodcast@gmail.com

ಪತ್ರದಿ ಬರೆದ ಪದಗಳಿವಷ್ಟೇ ಅಲ್ಲ– ಒಂದು ಭಾವಕೋಶ– ವಾಣಿ ರಾಜ್‌ 14.12.2021

ಪತ್ರದಲ್ಲಿ ಬರೆದ ಪದಗಳಿವಷ್ಟೇ ಅಲ್ಲ– ಒಂದು ಭಾವಕೋಶ– ವಾಣಿ ರಾಜ್‌ ಪತ್ರ ಬರೆಯುವ ಕಾಲವೊಂದನ್ನು ನೆನಪಿಸಿಕೊಂಡು ಅಂದಿನ ನವಿರು ಭಾವವನ್ನು ಹಂಚಿಕೊಂಡಿದ್ದಾರೆ ವಾಣಿ ರಾಜ್‌ ಅವರು.  ಒಂದು ಭಾವ ವಿನಿಮಯವನ್ನು ಕಟ್ಟಿಕೊಟ್ಟಿದ್ದಾರೆ. ನಿಮ್ಮ ಪ್ರೀತಿಪಾತ್ರರಿಗೂ ಕೇಳಿಸಿ ಕೇಳಿ ಪ್ರತಿಕ್ರಿಯಿಸಿ: siridanipodcast@gmail.com ಸಂಚಿಕೆ ನಿರ್ಮಾಣ: ದೀಪಾ ಪಾವಂಜೆ

ಮಾರ್ಗರೇಟ್‌ ಆದ ಇಂಚರಾ– ಚಿತ್ರನಟಿ ಕೌಸ್ತುಭಮಣಿ ಎಸ್‌. 14.12.2021

ನನ್ನರಸಿ ರಾಧೆ ಧಾರಾವಾಹಿಯ ಇಂಚರಾ ಪಾತ್ರಧಾರಿ ಈಗ ಹಿರಿತೆರೆಗೆ ಭಡ್ತಿ ಪಡೆದಿದ್ದಾರೆ. ಉನ್ನತ ಶಿಕ್ಷಣದ ಬಳಿಕ ಅವರು ಕಲಾ ಕ್ಷೇತ್ರಕ್ಕೆ ಹೊರಳಿದ ಬಗೆಯನ್ನು ಸಿರಿದನಿಯಲ್ಲಿ ಹಂಚಿಕೊಂಡಿದ್ದಾರೆ. ಕೇಳಿ ನಿಮ್ಮ ಆಆಪ್ತರಿಗೂ ಕೇಳಿಸಿ.  ಸಂದರ್ಶನ: ಶರತ್‌ ಪ್ರತಿಕ್ರಿಯಿಸಿ: siridanipodcast@gmail.com ಸಂಚಿಕೆ ನಿರ್ಮಾಣ: ದೀಪಾ ಪಾವಂಜೆ  

ಅಕ್ಷರ ಸಂತನ ಅಂತರಂಗ – ಪದ್ಮಶ್ರೀ ಹರೇಕಳ ಹಾಜಬ್ಬ 30.11.2021

ಮಂಗಳೂರು ತಾಲ್ಲೂಕು ಹರೇಕಳದ ನ್ಯೂಪಡ್ಪುವಿನಲ್ಲಿ ಸತತ ಹೋರಾಟದ ಮೂಲಕ ಶಾಲೆ ಸ್ಥಾಪನೆಗೆ ಕಾರಣರಾದ ಕಿತ್ತಳೆ ವ್ಯಾಪಾರಿ ಹರೇಕಳ ಹಾಜಬ್ಬ ಅವರು ದೇಶದ ಗಮನ ಸೆಳೆದಿದ್ದಾರೆ.  ಅನಕ್ಷರಸ್ಥನೊಬ್ಬ ಕಿತ್ತಳೆ ಹಣ್ಣು ಮಾರುತ್ತಾ ಅಕ್ಷರ ಬಿತ್ತುವ ಕನಸು ಕಂಡು ಅದರಲ್ಲಿ ಯಶಸ್ವಿಯಾದದ್ದು ಒಂದು ವಿಶೇಷವೇ ಸರಿ. ಅಕ್ಷರ ಸಂತ ಹಾಜಬ್ಬ ಅವರಿಗೆ ದೇಶದ ಪ್ರತಿಷ್ಠಿತ ಪ್ರಶಸ್ತಿ ಪದ್ಮಶ್ರೀ ಒಲಿದಿದೆ. ಮಂಗಳೂರಿನ ಮೀಡಿಯಾ ಅಲೂಮ್ನಿ ಅಸೋಸಿಯೇಷನ್‌ ಮಂಗಳ ಗಂಗೋತ್ರಿಯ ಮಾಮ್‌ ಇನ್‌ಸ್ಪೈರ್‌ ಅವಾರ್ಡ್‌ ಕಾರ್ಯಕ್ರಮ...

ಮುಳಿಯ– ಮನೆ ಮನದಲ್ಲಿ ಕನ್ನಡ 30.11.2021

ಮುಳಿಯ ಪ್ರತಿಷ್ಠಾನ, ಮುಳಿಯ ಜುವೆಲ್ಸ್‌ ಹಾಗೂ ಕರ್ನಾಟಕ ಲೇಖಕಿಯರ ಸಂಘದ ಆಶ್ರಯದಲ್ಲಿ ಮನೆ ಮನದಲ್ಲಿ ಕನ್ನಡ. ಕನ್ನಡದ ಭಾವ– ಬದುಕು ಬಂಗಾರ ಎಂಬ ಚಿಂತನ ಮಂಥನ ಇತ್ತೀಚೆಗೆ ಬೆಂಗಳೂರಿನ ಮುಳಿಯ ಆಭರಣ ಮಳಿಗೆಯಲ್ಲಿ ನಡೆಯಿತು.  ಕಾರ್ಯಕ್ರಮದ ಝಲಕ್‌ ಸಿರಿದನಿಯಲ್ಲಿ ಕೇಳಿ ಉದ್ಘಾಟನೆ: ವಿ. ಸುನಿಲ್‌ ಕುಮಾರ್‌, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರು ಅತಿಥಿಗಳು: ಡಾ. ನೀರಜ್‌ ಪಾಟೀಲ್‌, ಮಾಜಿ ಮೇಯರ್‌ ಲಂಡನ್‌– ಲ್ಯಾಂಬೆತ್‌ ಡಾ.ಕಮಲಾ ಹಂಪನಾ, ಸಾಹಿತಿ, ಸಂಶೋಧಕಿ ಪ್ರೊ. ಭುವನೇಶ್ವರಿ ಹೆಗಡೆ...

ಅಜ್ಜಿ ಕಥೆ– ಹರ್ಷಿತಾ ಹೆಬ್ಬಾರ್‌ 30.11.2021

ಅಜ್ಜಿಕಥೆಯಲ್ಲಿ ಅಳಿಯ ಮಾಡಿದ ಉಪಾಯ ಹೇಳುತ್ತಾ ಹೋಳಿಗೆ ತಿಂದ ಕಥೆ ಹೇಳಿದ್ದಾರೆ ಹರ್ಷಿತಾ ಹೆಬ್ಬಾರ್‌.  ಹರ್ಷಿತಾ ಅವರು ಎಸ್‌ಡಿಎಂ ಕಾಲೇಜಿನ ಪತ್ರಿಕೋದ್ಯಮ ವಿದ್ಯಾರ್ಥಿನಿ. ಇಲ್ಲಿ ಹೇಳಿರುವುದು ಸಣ್ಣ ಕಥೆಯಾದರೂ ಅವರ ಮಧುರ ಧ್ವನಿ ನವಿರು ನಿರೂಪಣೆಯಿಂದಾಗಿ ಅಜ್ಜಿಕಥೆ ಕಣ್ಣ ಮುಂದೆಯೇ ನಡೆದಂತೆ ಅನಿಸುತ್ತದೆ. ಪ್ರತಿಕ್ರಿಯಿಸಿ: siridanipodcast@gmail.com

ಮುಳಿಯ – ಕರ್ನಾಟಕ ಲೇಖಕಿಯರ ಸಂಘ– ಮನೆ ಮನದಲ್ಲಿ ಕನ್ನಡ: ಮುನ್ನೋಟ 30.11.2021

ಮುಳಿಯ ಪ್ರತಿಷ್ಠಾನ, ಮುಳಿಯ ಜುವೆಲ್ಸ್‌ ಹಾಗೂ ಕರ್ನಾಟಕ ಲೇಖಕಿಯರ ಸಂಘದ ಆಶ್ರಯದಲ್ಲಿ ಇತ್ತೀಚೆಗೆ ಮನೆ ಮನದಲ್ಲಿ ಕನ್ನಡ. ಕನ್ನಡದ ಭಾವ– ಬದುಕು ಬಂಗಾರ ಎಂಬ ಚಿಂತನ ಮಂಥನ ಇತ್ತೀಚೆಗೆ ಬೆಂಗಳೂರಿನ ಮುಳಿಯ ಆಭರಣ ಮಳಿಗೆಯಲ್ಲಿ ನಡೆಯಿತು.  ಕಾರ್ಯಕ್ರಮದ ಡಿಸೆಂಬರ್‌ 1ರಂದು ಪ್ರಸಾರವಾಗಲಿದೆ.   ಕೇಳಿ ಸಿರಿದನಿಯಲ್ಲಿ 

ಸಿರಿ ಕನ್ನಡ- ಕನ್ನಡ ರಾಜ್ಯೋತ್ಸವ ವಿಶೇಷ ಮರುಪ್ರಸಾರ 31.10.2021

ಸಿರಿ ಕನ್ನಡದಲ್ಲಿ ನಿಮ್ಮೊಂದಿಗೆ ಕೃಷ್ಣ ಮೋಹನ ತಲೆಂಗಳ, ಡಾ.ಎಂ. ಮೋಹನ ಆಳ್ವ, ರಮೇಶ್ ಅರವಿಂದ್...

ಸಿರಿಗಿಂಡೆ– ತಾರೇಂದ್ರ ಪಿ. ಶೆಟ್ಟಿಗಾರ್‌ ರಚನೆಯ ತುಳು ಭಕ್ತಿಗೀತೆ 31.10.2021

ಕುವೈಟ್'ನ ಲೇಖಕ ತಾರೇಂದ್ರ ಪಿ. ಶೆಟ್ಟಿಗಾರ್ ಅವರ ಸಾಹಿತ್ಯ ಹಾಗೂ ನಿರ್ಮಾಣದ ತುಳು ಭಕ್ತಿಗೀತೆ ‘ಸಿರಿಗಿಂಡೆ’ ಇತ್ತೀಚೆಗೆ ಬಿಡುಗಡೆಯಾಗಿದೆ.  ಗಿರಿಧರ್ ದಿವಾನ್ ಸಂಗೀತ,  ನಕುಲ್ ಅಭ್ಯಂಕರ್ ಸಂಗೀತ ಸಂಯೋಜನೆ, ಖ್ಯಾತ ಗಾಯಕರಾದ ಅಜಯ್ ವಾರಿಯರ್, ನಕುಲ್ ಅಭ್ಯಂಕರ್, ಸಿದ್ದಾರ್ಥ ಬೆಳ್ಮಣ್, ಐರಾ ಉಡುಪಿ ಹಾಗೂ ನಿನಾದ ನಾಯಕ್ ಐರಾ ಉಡುಪಿ ಧ್ವನಿ ನೀಡಿದ್ದಾರೆ. ತಾರೇಂದ್ರ ಪಿ. ಶೆಟ್ಟಿಗಾರ್‌ ಅವರ ಯುಟ್ಯೂಬ್‌ ಚಾನೆಲ್‌ಗೆ ಸಬ್‌ಸ್ಕ್ರೈಬ್‌ ಆಗಿ. ಕನ್ನಡದ ಮನಸ್ಸೊಂದನ್ನು ಪ್ರೋತ್ಸಾಹಿಸಿ ವ...

Listen to the ಸಿರಿದನಿ SIRIdani podcast in Replaio

Radio and podcasts in one app - free, with no sign-up. Install today and do not miss the launch

Get it on Google Play

Replaio is not a podcast publisher; show names, artwork and audio belong to their authors and are distributed through public RSS feeds.