UVLISTEN

UV Listen

Recharge: Kick start your day by tuning in to "Recharge” Podcast by Mr. Badekkila Pradeep. Relax: Stay relaxed with joy, music, comfort with the podcast "Relax" by Mr. Badekkila Pradeep.

Auteur

UVLISTEN

Categorie

Kids

Website van de podcast

podcasters.spotify.com

Nieuwste aflevering

11 aug. 2024

Waar luisteren?

Podcasts in de app Replaio Radio Binnenkort beschikbaar

Podcasts komen binnenkort naar de app. Installeer nu en zie als eerste een compleet nieuwe kijk op podcasts

Download het op Google Play Gratis installeren Android bijna 10 mln downloads · beoordeling 4,8 iOS binnenkort

Afleveringen

S1EP33 Relax ವಿಶ್ವರೂಪ ದರ್ಶನ ಯೋಗ 02.05.2022

ಜಗತ್ತಿನಲ್ಲಿರೋ ಒಳಿತು ಕೆಡುಕುಗಳನ್ನು ಅರ್ಜುನನ ಮುಂದೆ ಎಳೆಎಳೆಯಾಗಿ ಬಿಚ್ಚಿಟ್ಟ ಶ್ರೀಕೃಷ್ಣ ಕೊನೆಯಲ್ಲಿ ಅದಕ್ಕಿಂತಲೂ ಅಗಾಧವಾಗಿದ್ದೇನೆ ಅಂತ ವಿವರಿಸುತ್ತಾನೆ. ವಿಭೂತಿಯೋಗದವರೆಗೆ  ತನಗೆ ಬೇಕಾದ ಪ್ರತಿಯೊಂದು ವಿಚಾರವನ್ನು ಕೆದಕಿ ಕೆದಕಿ ಕೇಳುತ್ತಾನೆ . ಸಾವಧಾನವಾಗಿ ಶ್ರೀಕೃಷ್ಣ ವಿವರಿಸುವ ಸಂಗತಿಗಳನ್ನು ತಿಳಿದು .. ಆಗಿ ಬಡೆಕ್ಕಿಲ ಪ್ರದೀಪ ಧ್ವನಿಯಲ್ಲಿ. ... ಟೈಪ್ ಮಾಡಿ ಅಥವಾ ಈ .. ಕೋಡ್ ಸ್ಕ್ಯಾನ್ ಮಾಡಿ

S1EP55 Recharge ಲೋಹಗಳಿಂದ ಚಿನ್ನ ತಯಾರಿಸುವ ಕತೆ ಗೊತ್ತಾ? | Bharadtada Geniusgalu Acharya Nagarjuna 01.05.2022

ಸಾಮಾನ್ಯ ಲೋಹದಂತಿದ್ದ ಚಿನ್ನಕ್ಕೆ ಇಷ್ಟು ಮೌಲ್ಯ ಬರಲು ಏನು ಕಾರಣ ? ಉಳಿದ ಲೋಹಗಳಿಗಿಂತ ಇದಕ್ಕೆ ವಿಶೇಷ ಗುಣಗಳಿವೆ.ಕೆಲವು ಲೋಹ ಬಳಸಿ ಚಿನ್ನ ತಯಾರಿಸುವ ಅದ್ಬುತ ವಿಚಾರ ತಿಳಿದು recharge ಆಗಿ ಬಡೆಕ್ಕಿಲ ಪ್ರದೀಪ ಧ್ವನಿಯಲ್ಲಿ.www.uvlisten.com ಟೈಪ್ ಮಾಡಿ ಅಥವಾ ಈ QR ಕೋಡ್ ಸ್ಕ್ಯಾನ್ ಮಾಡಿ.

S1EP32 Relax ಗುರು, ಶಿಷ್ಯನಿಗೆ ಜ್ಞಾನ ಧಾರೆಯೆರೆಯುವುದು ಯಾವಾಗ ? 25.04.2022

ಅರ್ಜುನನ ಜ್ಞಾನದ ತೃಷೆಯನ್ನು ಗಮನಿಸಿದ ಶ್ರೀಕೃಷ್ಣ ಈ ಅಧ್ಯಾಯದಲ್ಲಿ ಜ್ಞಾನದ ಬಗೆಗಿನ ಮತ್ತಷ್ಟು ವಿಚಾರಗಳನ್ನು ಬೋಧಿಸುತ್ತಾನೆ. ಜ್ಞಾನ ಎಷ್ಟು ಅಮೂಲ್ಯವಾದದ್ದು ಅಂದ್ರೆ ಅದನ್ನು ಸುಲಭವಾಗಿ ಗುರುಗಳು ಯಾರಿಗೂ ಬೋಧಿಸುವುದಿಲ್ಲ. ಶ್ರೀಕೃಷ್ಣ ಬೋಧಿಸಿದ ವಿಭೂತಿಯಾಗದ ಕುರಿತು ತಿಳಿದು Relax ಆಗಿ ಬಡೆಕ್ಕಿಲ ಪ್ರದೀಪ ಧ್ವನಿಯಲ್ಲಿ. 

S1EP54 Recharge 5000 ವರ್ಷಗಳ ಹಿಂದಿನ ಸಂಹಿತೆ ಇಂದಿಗೂ ಪ್ರಚಲಿತದಲ್ಲಿದೆ ! 23.04.2022

ಪುರಾತನ ವೈದ್ಯಶಾಸ್ತ್ರವಾದ ಆಯುರ್ವೇದಕ್ಕೆ 5000 ವರ್ಷಗಳ ಇತಿಹಾಸ ಇದೆ. ಈ ಪದ್ದತಿಗೆ ಅಂದಿನ 3 ಆಚಾರ್ಯರು ಭದ್ರ ಬುನಾದಿ ಹಾಕಿದರು. ಇವರ ರಚನೆಯ ಸಂಹಿತೆಯ ಬೇರಿನಿಂದ ಆಯುರ್ವೇದ ಪದ್ಧತಿ ಜನಜನಿತವಾಗಿದೆ. ಈ ಕುರಿತ ಮಹತ್ವದ ಸಂಗತಿ ತಿಳಿದು ರಿಚಾರ್ಜ್ ಆಗಿ ಬಡೆಕ್ಕಿಲ ಪ್ರದೀಪ್ ಧ್ವನಿಯಲ್ಲಿ. www.uvlisten.com ಟೈಪ್ ಮಾಡಿ ಅಥವಾ ಈ QR ಕೋಡ್ ಸ್ಕ್ಯಾನ್ ಮಾಡಿ.

S1EP31 Relax ವಿಜ್ಞಾನದ ಜೊತೆ ಜ್ಞಾನದ ಅರಿವು 18.04.2022

ನಮ್ಮಲ್ಲಿ ಬೇರೂರಿರುವ ಒಂದು ಗುಣ ಅಹಂಕಾರ. ಜ್ಞಾನ, ಅಹಂಕಾರ, ಸಂಪತ್ತು, ಸೌಂದರ್ಯ, ಯವ್ವನದ ಅಹಂಕಾರದಂತಹ  ಅನೇಕ ಸಂಗತಿಗಳು ನಮ್ಮನ್ನು ಕಾಡುತ್ತಿರುತ್ತದೆ. ಈ ಸಂಚಿಕೆಯನ್ನು ಬಡೆಕ್ಕಿಲ ಪ್ರದೀಪ ಧ್ವನಿಯಲ್ಲಿ ಕೇಳಿ ಅಹಂಕಾರದ ಪರದೆ ಕಳಚಿಕೊಳ್ಳಿ. www.uvlisten.com ಕ್ಲಿಕ್ ಮಾಡಿ ಅಥವಾ ಈ QR ಕೋಡ್ ಸ್ಕ್ಯಾನ್ ಮಾಡಿ.

S1EP53 Recharge ಭಾರತದ ಜೀನಿಯಸ್_ಗಳು - ಮಹರ್ಷಿ ಪತಂಜಲಿ 17.04.2022

ಯೋಗವನ್ನು ಇಡೀ ಜಗತ್ತಿಗೆ ಪರಿಚಯಿಸಿದವರು ಪತಂಜಲಿ ಮುನಿಗಳು. ಶ್ರೀ ವಿಷ್ಣುವಿನ ಕೃಪೆಯಿಂದ ಅವತಾರವನ್ನೆತ್ತಿದ ಪತಂಜಲಿಯವರು, ಅಷ್ಟಾಂಗ ಯೋಗವನ್ನು ತನ್ನ ಶಿಷ್ಯಂದಿರಿಗೆ, ಆ ಮೂಲಕ ಜಗತ್ತಿಗೆ ನೀಡಲು ಹೇಗೆ ಸಾಧ್ಯವಾಯಿತು? ಅದರ ಹಿಂದಿನ ಸ್ವಾರಸ್ಯಕರ ಕಥೆಯೇನು ? ಅನ್ನೋ ತಿಳಿದುಕೊಳ್ಳೋ ಕುತೂಹಲವಿದ್ಯಾ? ಹಾಗಾದ್ರೆ  ರೀಚಾರ್ಜ್‌ ವಿದ್‌ ಬಡೆಕ್ಕಿಲ ಪ್ರದೀಪ್‌ ಶೋ ನ ಇವತ್ತಿನ ಸಂಚಿಕೆಯನ್ನು ಕೇಳಿ, ರೀಚಾರ್ಜ್‌ ಆಗಿ...

S1EP52 Recharge : ವಿಶ್ವದ ಹುಟ್ಟು ಹೇಗಾಯ್ತು ಗೊತ್ತಾ ? 09.04.2022

ಜ್ಞಾನ, ವಿದ್ಯೆಯಲ್ಲಿ ಶ್ರೀಮಂತ ದೇಶ ನಮ್ಮದು. ಅದೆಷ್ಟೋ ಅನೂಹ್ಯ ಸಂಗತಿಗಳನ್ನು ಜಗತ್ತಿಗೆ ಪರಿಚಯಿಸಿ ಸೈ ಎನಿಸಿಕೊಂಡಿದೆ. ಸೃಷ್ಟಿಯ ಹುಟ್ಟಿನ ಕುರಿತ ಪರಿಕಲ್ಪನೆಯನ್ನು ಪ್ರತಿಪಾದಿಸಿದ ನಮ್ಮ ದೇಶದ ಆ ಮಹಾನ್ ಮೇಧಾವಿ ಯಾರು ಅನ್ನೋದನ್ನು ಇಲ್ಲಿ ತಿಳಿಯಿರಿ. 

S1EP30 Relax ಮನಸಿನ ಗೊಂದಲಗಳಿಗೆ ಪರಿಹಾರ ಭಗವದ್ಗೀತೆಯಲ್ಲಿದೆ 04.04.2022

ಓಂಕಾರ. ಸೃಷ್ಟಿಯ ಮೊದಲ ಬೀಜಾಕ್ಷರ. ಓಂಕಾರದಿಂದಲೇ ವೇದಗಳು ಹುಟ್ಟಿಕೊಂಡಿವೆ ಎಂದು ಹೇಳಿದ ಶ್ರೀಕೃಷ್ಣ ಕುರುಕ್ಷೇತ್ರದಲ್ಲಿ ಅರ್ಜುನನಿಗೆ ಓಂಕಾರದ ಮಹತ್ವವನ್ನು ತಿಳಿಸುತ್ತಾನೆ. ಓಂಕಾರವನ್ನು ಉಚ್ಚರಿಸುತ್ತಾ ಮತ್ತೆಂದೂ ಬಾರದ ಲೋಕಕ್ಕೆ ಹೋಗೋದು ಹೇಗೆ ಎಂದು ಕೇಳಿ ಬಡೆಕ್ಕಿಲ ಪ್ರದೀಪ ಧ್ವನಿಯಲ್ಲಿ. ... ಟೈಪ್ ಮಾಡಿ ಅಥವಾ .. ಕೋಡ್ ಸ್ಕ್ಯಾನ್ ಮಾಡಿ.

S1EP51 Recharge : ವಿಮಾನಗಳ ಪರಿಕಲ್ಪನೆ ಕೊಟ್ಟಿದ್ದು ಯಾರು ಗೊತ್ತಾ? | concept of airplanes 03.04.2022

S1EP51 Recharge : ವಿಮಾನಗಳ ಪರಿಕಲ್ಪನೆ ಕೊಟ್ಟಿದ್ದು ಯಾರು ಗೊತ್ತಾ? | concept of airplanes ವಿಮಾನವನ್ನು ಕಂಡು ಹಿಡಿದದ್ದು ಯಾರು ಅಂತ ಕೇಳಿದಾಗ ಥಟ್ ಅಂತ ನಾವು ಹೇಳೋದು ರೈಟ್ ಬ್ರದರ್ಸ್.ಆದ್ರೆ ಅದಕ್ಕೂ ಮೊದಲು ಈ ಪರಿಕಲ್ಪನೆಯನ್ನು ಕಂಡದ್ದು ನಮ್ಮ ಭಾರತೀಯರೊಬ್ಬರು ಅಂದ್ರೆ ನೀವು ನಂಬಬೇಕು. ಈ ಸ್ಪೂರ್ತಿ ಕತೆ ಕೇಳಿ ಬಡೆಕ್ಕಿಲ ಪ್ರದೀಪ ಧ್ವನಿಯಲ್ಲಿ. 

S1EP29 Relax : 6 steps to bring clarity into your life | ಈ 6 ಮೆಟ್ಟಿಲುಗಳನ್ನೇರಿದರೆ .. 29.03.2022

ಕೃಷ್ಣ ಅರ್ಜುನನಿಗೆ ಗೆಲುವಿನ ಭರವಸೆಯನ್ನು ನೆಡೋದಿಲ್ಲ. ಪ್ರಾಯಶಃ ಇದೇ ಕಾರಣಕ್ಕೆ ಸಾವಿನ ವಿಚಾರ ಆತನಿಗೆ ಕಾಡೋದಕ್ಕೆ ಪ್ರಾರಂಭ ಆಗುತ್ತೆ. ಕೃಷ್ಣ ಹೇಳಿದ 6 ಸಂಗತಿಗಳು ಮತ್ತು ಅದನ್ನರಿಯುವ ವಿಧಾನವನ್ನು ತಿಳಿದು ರೆಲಕ್ಷ ಆಗಿ ಬಡೆಕ್ಕಿಲ ಪ್ರದೀಪ ಧ್ವನಿಯಲ್ಲಿ. 

S1EP50 Recharge : Inspiring thoughts that changed the Nation | Sir. M. Visvesvaraya | ಅವು ಇಡೀ ದೇಶವೇ ನಿಬ್ಬೆರಗಾಗುವಂತಹ ಯೋಜನೆಗಳಾಗಿದ್ದವು! 28.03.2022

1908 / 1909 ರ ಸಂದರ್ಭ. ಅತ್ಯಂತ ಕೆಟ್ಟ ಪ್ರವಾಹ. ಹೆದೆರಾಬಾದ್, ವಿಶಾಖಪಟ್ಟಣಂ ಗೆ ಎಲ್ಲಿಲ್ಲದ ಹಾನಿ. ಪ್ರವಾಹದಿಂದ ರಕ್ಷಿಸಿಕೊಡುವ ಯೋಜನೆಗಳನ್ನು ರೂಪಿಸಿಕೊಡುವಂತೆ ವಿದೇಶ ಪ್ರವಾಸದಲ್ಲಿದ್ದ ಕರ್ನಾಟಕದ ಶ್ರೇಷ್ಠ ಇಂಜಿನಿಯರ್ ಗೆ ತುರ್ತು ಕರೆ ಹೋಗುತ್ತೆ. ಈ ಕತೆ ಕೇಳಿ ರಿಚಾರ್ಜ್ ಆಗಿ ಬಡೆಕ್ಕಿಲ ಪ್ರದೀಪ ಧ್ವನಿಯಲ್ಲಿ. ಈ QR ಕೋಡ್ ಸ್ಕ್ಯಾನ್ ಮಾಡಿ.

S1EP49 Recharge : ವಿಜ್ಞಾನ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದ ಸರದಾರನ ಕಥೆ ನಿಮ್ಮ ಮುಂದೆ 27.03.2022

ಪರಮಾಣು ಸಿದ್ಧಾತ ಅಂದ್ರೆ ನಮ್ಮ ನೆನಪಿಗೆ ಬರೋದು ಜಾನ್‌ ಡೆಲ್ಟಾನ್‌... ಆದ್ರೆ ಜಾನ್‌ ಡೆಲ್ಟಾನ್‌ಗೂ ಸುಮಾರು ೨೫೦೦ ವರ್ಷಗಳ ಹಿಂದೆಯೇ ನಮ್ಮ ಭಾರತೀಯ ಮಹರ್ಷಿಯೊಬ್ಬರು ಪ್ರತಿಪಾದಿಸಿದ್ದಾರೆ.... ಅವರು ಯಾರು ಅಂತ ಯೋಚನೆ ಮಾಡ್ತಾ ಇದೀರಾ? ಅವರು ಬೇರ್ಯಾರೂ ಅಲ್ಲ ಆಚಾರ್ಯ ಕಣಾದರು.. ಇವರ ಹೆಸರನ್ನ ಕೇಳಿದ್ರು ವ್ಯಕ್ತಿತ್ವ ನಮಗ್ಯಾರಿಗೂ ಗೊತ್ತಿಲ್ಲ...  ಕಣಾದರ ವ್ಯಕ್ತಿತ್ವವನ್ನ, ಜೀವನಗಾಥೆಯನ್ನ ಕೇಳಿ ಬಡೆಕ್ಕಿಲ ಪ್ರದೀಪ್‌ ಅವರ ಧ್ವನಿಯಲ್ಲಿ

S1EP28 Relax ಮನಸ್ಸನ್ನು ನಿಗ್ರಹಿಸುವ ಒಂದೇ ಒಂದು ಅಸ್ತ್ರ ಯಾವುದು ಗೊತ್ತಾ ? 22.03.2022

ಹತ್ತಾರು ಕಡೆ ಹಳ್ಳ ತೋಡಿ ನೀರು ಹುಡುಕೋ ಬದಲು ಒಂದೇ ಕಡೆ ಹಳ್ಳ ತೋಡಿ ಜಲಧಾರೆ ಹರಿಸಬಹುದು ಅಂದವರು ರಾಮಕೃಷ್ಣ ಪರಮಹಂಸರು. ಹೌದು ಮನಸ್ಸು ಚಂಚಲ. ಹಾಗಾದ್ರೆ ಅದನ್ನು ನಿಗ್ರಹಿಸಲು ಸಾಧ್ಯ ಇಲ್ವಾ ?ಬಡೆಕ್ಕಿಲ ಪ್ರದೀಪ ಧ್ವನಿಯಲ್ಲಿ ಕೇಳಿ Relax ಆಗಿ. www.uvlisten.com ಟೈಪ್ ಮಾಡಿ ಅಥವಾ ಈ QR ಕೋಡ್ ಸ್ಕ್ಯಾನ್ ಮಾಡಿ.

S1EP48 Recharge : ಆರ್ಯಭಟರು ಇವೆರಡರ ಬೃಹತ್ ಪ್ರತಿಮೆಯಾಗಿ ಕಾಣಿಸುತ್ತಾರೆ 21.03.2022

ಆರ್ಯಭಟ ಅಂದ ತಕ್ಷಣ ನಮಗೆ ನೆನಪಾಗೋದು ' ಸೊನ್ನೆ' ಕಂಡು ಹಿಡಿದವರು ಅನ್ನೋ ವಿಚಾರ. ಅದಕ್ಕೂ ಮೀರಿದ ಅವರ ಸಾಧನೆ, ಬದುಕನ್ನು ಈ ಸಂಚಿಕೆಯಲ್ಲಿ ಮೆಲುಕು ಹಾಕೋಣ. www.uvlisten.com ಟೈಪ್ ಮಾಡಿ ಅಥವಾ ಈ QR ಕೋಡ್ ಸ್ಕ್ಯಾನ್ ಮಾಡಿ.

S1EP47 Recharge : ಜಗಕ್ಕೆ ಬೆಳಕಿನ ಬಣ್ಣ ತೋರಿದ ವಿಜ್ಞಾನಿ ಸಿ. ವಿ ರಾಮನ್‌ 20.03.2022

ನಾವಿವತ್ತು ಪರಿಚಯಸಲಿರೋ ಮೇಧಾವಿಗೆ ತನ್ನ ಜ್ಞಾನದ ಮೇಲೆ, ತನ್ನ ಸಂಶೋಧನೆಯ ಮೇಲೆ ಎಷ್ಟರಮಟ್ಟಿಗೆ ನಂಬಿಕೆ, ಧೈರ್ಯಯಿತ್ತೆಂದರೆ, ಮುಂದಿನ ಕೆಲವು ವರ್ಷಗಳಲ್ಲಿ ಭಾರತಕ್ಕೆ ನೊಬೆಲ್‌ ಪ್ರಶಸ್ತಿಯನ್ನ ಬಂದೇ ಬರತ್ತೆ ಅಂತ ಹೇಳಿ, ಸಾಧಿಸಿ ತೋರಿಸ್ತಾರೆ… ಆ ಜೀನಿಯಸ್‌ ಬೇರ್ಯಾರು ಅಲ್ಲ, ಜಗತ್ತು ಕಂಡ ಅದ್ಭುತ ವಿಜ್ಞಾನಿ ಸಿ. ವಿ. ರಾಮನ್‌… ಇವರ ಬಗ್ಗೆ ಸಂಕ್ಷಿಪ್ತವಾಗಿ ತಿಳಿದುಕೊಳ್ಳೋಣ ಬಡೆಕ್ಕಿಲ ಪ್ರದೀಪ್‌ ಧ್ವನಿಯಲ್ಲಿ...

S1EP27 Relax ಆತ್ಮಸಂಯಮ ಯೋಗ 15.03.2022

ಮೊದಲೇ ಗೊಂದಲದಲ್ಲಿದ್ದ ಅರ್ಜುನನ ಮನಸ್ಸಿನಲ್ಲಿ ಜ್ಞಾನ ಯೋಗ, ಕರ್ಮಯೋಗ ಅದರೊಳಗೆ ಅಡಗಿರುವ ಸಂನ್ಯಾಸತ್ವದಂತಹ ಸಂಗತಿಗಳು ಇನಷ್ಟು ಗೊಂದಲಗಳನ್ನ ಮೂಡಿಸುತ್ತವೆ. ಆದ್ದರಿಂದ ಇದನ್ನ ಪರಿಹರಿಸಲು ಕೃಷ್ಣ ಆಯ್ದುಕೊಂಡ ದಾರಿ ಅಂದರೆ ಅದು ಧ್ಯಾನ ಅಥವಾ ಆತ್ಮ ಸಂಯಮ ಯೋಗ… ಇದು ಕುರುಕ್ಷೇತ್ರದಲ್ಲಿ ಅರ್ಜುನನಿಗೆ ಅವಶ್ಯಕವಾಗಿತ್ತು. ಧ್ಯಾನ ಎಂದರೇನು? ಆತ್ಮ ಸಂಯಮ ಯೋಗವನ್ನ ಪಡೆದುಕೊಳ್ಳುವುದು ಹೇಗೆ ಅನ್ನೋದನ್ನ ಕೇಳಿ ಬಡೆಕ್ಕಿಲ ಪ್ರದೀಪ್‌ ಧ್ವನಿಯಲ್ಲಿ, ಮತ್ತು ರಿಲಾಕ್ಸ್‌ ಆಗಿ.

S1EP46 Recharge: ಶ್ರೀನಿವಾಸ ರಾಮಾನುಜನ್‌: ಗಣಿತ ಲೋಕದ ಗಣಿ 14.03.2022

ಭಾರತೀಯರು ಗಣಿತವನ್ನ ಸರಳ ರೀತಿಯಲ್ಲಿ ಪರಿಚಯಿಸಿ, ಗಣಿತ ಲೋಕಕ್ಕೆ ಅಪಾರ ಕೊಡುಗೆಗಳನ್ನ ಕೊಟ್ಟಿದ್ದಾರೆ.ಭಾರತ ಕಂಡ ಶ್ರೇಷ್ಠ ಗಣಿತಜ್ಞರ ಸಾಲಿನಲ್ಲಿ ಶ್ರೀನಿವಾಸ ರಾಮಾನುಜನ್‌ ಹೆಸರೂ ಇದೆ ಅನ್ನೋದನ್ನ ನಾವು ಮರೆಯಬಾರದು.ಇವರನ್ನ ಇವತ್ತು ಇಡೀ ವಿಶ್ವವೇ ನೆನಪಿನಲ್ಲಿಟ್ಟುಕೊಂಡಿದೆ. ಅವರು ಹುಟ್ಟಿದ ದಿನವನ್ನು ಗಣಿತ ದಿನವನ್ನಾಗಿ ಆಚರಿಸುತ್ತಾರೆ. ಈ ಮೇಧಾವಿಯ ಕುರಿತು ತಿಳಿದು .. ಆಗಿ ಬಡೆಕ್ಕಿಲ ಪ್ರದೀಪ್ ಧ್ವನಿಯಲ್ಲಿ. www.uvlisten.com ಟೈಪ್ ಮಾಡಿ. 

S1EP45 Recharge: ಭಾರತೀಯ ವಿಜ್ಞಾನಿಯೊಬ್ಬರ ಸಾಧನೆ ಯಾರೂ ಗುರುತಿಸಿಲ್ಲ?! 13.03.2022

1896ರಲ್ಲಿ ಮಾರ್ಕೋನಿ ಎಂಬ ಮೇಧಾವಿ ರೇಡಿಯೋ ಕಂಡು ಹಿಡಿಯುತ್ತಾರೆ. ಗಮನಾರ್ಹ ವಿಷಯ ಅಂದ್ರೆ ರೇಡಿಯೋ ಅನ್ವೇಷಣೆಯ 2 ವರ್ಷಗಳ ಹಿಂದೆಯೇ ರೇಡಿಯೋ ತರಂಗಗಳನ್ನು ಭಾರತೀಯ ವಿಜ್ಞಾನಯೊಬ್ಬರು ಕಂಡು ಹಿಡಿಯುತ್ತಾರೆ. ದುರದೃಷ್ಟ ಅದು ವಿಶ್ವದ ಗಮನಕ್ಕೆ ಬರಲಿಲ್ಲ. ಈ ಕುತೂಹಲಕಾರಿ ಸಂಗತಿ ತಿಳಿದು Recharge ಆಗಿ ಬಡೆಕ್ಕಿಲ ಪ್ರದೀಪ ಧ್ವನಿಯಲ್ಲಿ. 

S1EP26 Relax ಸಮರಸದ ಜೀವನ ನಡೆಸಲು ಬದುಕು ಭಗವದ್ಗೀತೆ 08.03.2022

ನಮ್ಮ ಜೀವನವೇ ಒಂದು ಹೋರಾಟವಾಗಿರೋದ್ರಿಂದ ನಾವು ಕರ್ಮಸಂನ್ಯಾಸದಿಂದ ಹೋರಾಡಬೇಕು ಅಂತ ಮನದಟ್ಟಾಗಿಸುತ್ತಾನೆ ಶ್ರೀಕೃಷ್ಣ ಪರಮಾತ್ಮ. ಭಗವದ್ಗೀತೆಯೊಂದಿಗೆ ಬದುಕನ್ನರಿತು Relax ಆಗಿ ಬಡೆಕ್ಕಿಲ ಪ್ರದೀಪ ಜೊತೆ.

S1EP44 Recharge: ಈ ಮೇಧಾವಿ ಹುಟ್ಟಿದ ನೆಲದಲ್ಲಿ ನಾವೂ ಹುಟ್ಟಿದ್ದೇವೆ 07.03.2022

ಸಾಧನೆಯ ಹಾದಿಯಲ್ಲಿ ಅದೇನೇ ಬಂದ್ರೂ ತಾವಂದುಕೊಂಡ ಗಮ್ಯವನ್ನು ಸಾಧಿಸುವತ್ತ ಸಾಗಿದ ಆ ಮಹಾನ್ ಕಲಿಗಳು ನಮಗೆ ಸ್ಫೂರ್ತಿ ನೀಡಬಲ್ಲರು. ಭರತ ಭೂಮಿ ಕಂಡ ಶ್ರೇಷ್ಠ ವಿಜ್ಞಾನಿ, ಖಗೋಳ ಶಾಸ್ತ್ರಜ್ಞ, ಗಣಿತಜ್ಞ, ಜ್ಯೋತಿಷ್ಯ ಶಾಸ್ತ್ರ  ಪಾರಂಗತ ವರಾಹಮಿಹಿರರ ಕುರಿತು ತಿಳಿದು ರಿಚಾರ್ಜ್ ಆಗಿ ಬಡೆಕ್ಕಿಲ ಪ್ರದೀಪ ಧ್ವನಿಯಲ್ಲಿ.

S1EP43 Recharge: Father of Indian space research Dr| Vikram Sarabhai | ಭಾರತೀಯ ಬಾಹ್ಯಾಕಾಶ ವಿಜ್ಞಾನದ ಪಿತಾಮಹ ವಿಕ್ರಂ ಸಾರಾಭಾಯ್‌ 06.03.2022

ಹಿಂದಿನ ಸಂಚಿಕೆಗಳಲ್ಲಿ ಪ್ರಾಚೀನ ಮೇಧಾವಿಗಳನ್ನ ಪರಿಚಯ ಮಾಡಿಕೊಂಡಿದ್ದೇವೆ..ಜಗತ್ತು ಅಪ್‌ಡೇಟ್‌ ಆಗುತ್ತಿರುವ ಸಂದರ್ಭದಲ್ಲಿ ಮಾಡಿದಂತಹ ಆವಿಷ್ಕಾರಗಳು ಹಾಗೂ ಅದರ ಹಿಂದಿನ ಕಾರಣಕರ್ತೃವಿನ ಬಗ್ಗೆ ತಿಳಿದುಕೊಳ್ಳೋಣ...  ಭಾರತೀಯ ಬಾಹ್ಯಾಕಾಶ ವಿಜ್ಞಾನದ ಪಿತಾಮಹ ವಿಕ್ರಂ ಸಾರಾಭಾಯ್‌ ಅವರ  ಸಾಧನೆ ತಿಳಿದು Recharge ಆಗಿ ಬಡೆಕ್ಕಿಲ ಪ್ರದೀಪ ಧ್ವನಿಯಲ್ಲಿ.  www.uvlisten.com ಟೈಪ್ ಮಾಡಿ.

S1EP25 Relax Adhyaya 04 Jnana Karma Sanyasa Yoga - ಅಧ್ಯಾಯ ೦೪. ಜ್ಞಾನ ಕರ್ಮ ಸಂನ್ಯಾಸ ಯೋಗ 01.03.2022

Relax: Stay relaxed with joy, music, comfort with the podcast "Relax" by Mr. Badekkila Pradeep. ಅಧ್ಯಾಯ ೦೪. ಜ್ಞಾನ ಕರ್ಮ ಸಂನ್ಯಾಸ ಯೋಗ ಒಂದು ಕಡೆ ಜ್ಞಾನದ ಬಗ್ಗೆ ವಿವರಿಸಿದ ಕೃಷ್ಣ, ಇನ್ನೊಂದು ಕಡೆ ಜ್ಞಾನಕ್ಕಿಂತ ಕರ್ಮವೇ ಶ್ರೇಷ್ಠ ಎನ್ನುತ್ತಾನೆ. ಅರ್ಜುನನ ಮನದಲ್ಲಿ ಇವೆರಡರ ಬಗ್ಗೆ ಇನ್ನಷ್ಟು ಗೊಂದಲ ಮೂಡುತ್ತದೆ. ಆದ್ದರಿಂದ ಜ್ಞಾನದ ಮೂಲವನ್ನು ಹಾಗೂ ಕರ್ಮದ ತತ್ವವನ್ನು ಈ ಅಧ್ಯಾಯ ಅಂದರೆ ಜ್ಞಾನ ಕರ್ಮ ಸನ್ಯಾಸ ಯೋಗದಲ್ಲಿ ಕೃಷ್ಣ ಅರ್ಜುನನಿಗೆ ಧಾರೆಯೆರೆಯುತ್ತಾನೆ. ಇ...

S1EP42 Recharge. Bharatada Geniusgalu Bhaskaracharya - ಭಾರತದ ಜೀನಿಯಸ್_ಗಳು - ಭಾಸ್ಕರಾಚಾರ್ಯ 28.02.2022

ಭಾರತ ಅನೇಕ ಮೇಧಾವಿಗಳನ್ನ ಹುಟ್ಟು ಹಾಕಿದೆ. ಅವರನ್ನು ಪರಿಚಯ ಮಾಡಿಕೊಳ್ಳುವುದು ನಮ್ಮೆಲ್ಲರ ಆದ್ಯ ಕರ್ತವ್ಯ. "ಭಾರತದ ಜೀನಿಯಸ್‌ಗಳು" ಎಂಬ ಈ ಸಿರೀಸ್‌ನ ಎರಡನೇ ಸಂಚಿಕೆಯಲ್ಲಿ ನಾವಿಂದು ಭಾರತೀಯ ಗಣಿತಜ್ಞ, ಖಗೋಳ ಶಾಸ್ತ್ರಜ್ಞ ಭಾಸ್ಕರಾಚಾರ್ಯರ ಬಗ್ಗೆ ತಿಳಿದುಕೊಳ್ಳೋಣ. ಅವರ ವ್ಯಕ್ತಿತ್ವ ನಮಗೆಲ್ಲರಿಗೂ ಸ್ಫೂರ್ತಿ. ಕೇಳಿ ರೀಚಾರ್ಜ್‌ ಆಗಿ ಬಡೆಕ್ಕಿಲ ಪ್ರದೀಪ್‌ಅವರ ಧ್ವನಿಯಲ್ಲಿ.  uvlisten.com ಅಂತ ಟೈಪ್‌ ಮಾಡಿ.

S1EP41 Recharge. Bharatada Geniusgalu Sushrutha - ಭಾರತದ ಜೀನಿಯಸ್_ಗಳು - ಸುಶ್ರುತ 27.02.2022

ಭಾರತ ಅಂದರೆ ಸಾಧಕರ ನಾಡು. ಇಲ್ಲಿ ಬಂದು ಹೋದ ಒಬ್ಬೊಬ್ಬ ಸಾಧಕರ ಬಗ್ಗೆ ತಿಳಿಯುತ್ತಾ ಸಾಗಿದರೆ ರೋಮಾಂಚನವಾಗುತ್ತದೆ. ಅಷ್ಟೇ ಏಕೆ, ಈ ರೀತಿಯ ಸಾಧನೆ ನಮ್ಮೂರಿನವರೇ ಮಾಡಿದ್ದಾ ಅನ್ನುವ ಉದ್ಗಾರ ಮೂಡುವುದೂ ಸಾಧ್ಯ. ಅಂತಹಾ ʼಭಾರತದ ಜೀನಿಯಸ್‌ʼಗಳ ಸರಣಿ ಇಂದಿನಿಂದ ಕೇಳಿ. ಮೊದಲ ಸಂಚಿಕೆಯಲ್ಲಿ ಸರ್ಜರಿಗಳ ಪಿತಾಮಹನ ಕಥೆ, ಅವರು ಮಾಡಿದ ಸಾಧನೆಗಳೇ ನಮ್ಮ ಜೀವನಕ್ಕೆ ಸ್ಪೂರ್ತಿಯಾಗುತ್ತದೆ. ಕೇಳಿ ರೀಚಾರ್ಜ್‌ ಆಗಿ, ಬಡೆಕ್ಕಿಲ ಪ್ರದೀಪ್‌ ಧ್ವನಿಯಲ್ಲಿ,

S1EP24 Relax - Adhyaya 03 Karma Yoga - ಅಧ್ಯಾಯ 03 ಕರ್ಮಯೋಗ 22.02.2022

Relax: Stay relaxed with joy, music, comfort with the podcast "Relax" by Mr. Badekkila Pradeep. ಅಧ್ಯಾಯ ೦೩. ಕರ್ಮಯೋಗ ಕರ್ಮದ ಮಹತ್ವವೇನು? ನಾವಿಲ್ಲಿ ಭಗವದ್ಗೀತೆಯ ಜೊತೆಗೆ ಬದುಕನ್ನರಿಯುವ ಪ್ರಯತ್ನದಲ್ಲಿದ್ದೇವೆ... ಕವಲುದಾರಿಯಲ್ಲಿದ್ದಾಗ ನಾವು ಅನೇಕ ಮಾರ್ಗಗಳು ನಮ್ಮ ಮುಂದಿರುತ್ತವೆ... ಅದರಲ್ಲಿ ಒಂದಾದ ಕರ್ಮಮಾರ್ಗದ ಶ್ರೇಷ್ಠತೆ ಮತ್ತು ಅದರ ವೈಶಿಷ್ಠ್ಯತೆಯನ್ನ ಶ್ರೀಕೃಷ್ಣ ಇಲ್ಲಿ ವಿವರಿಸಿದ್ದನ್ನು ಕೇಳಿ ರಿಲಾಕ್ಸ್‌ ಆಗಿ ಬಡೆಕ್ಕಿಲ ಪ್ರದೀಪ್‌ ಧ್ವನಿಯಲ್ಲಿ.

Luister naar de podcast UV Listen in Replaio

Radio en podcasts in één app - gratis en zonder account. Installeer vandaag nog en mis de lancering niet

Download het op Google Play

Replaio is geen uitgever van podcasts; namen van shows, covers en audio zijn eigendom van hun makers en worden verspreid via openbare RSS-feeds