Udayavani

Sandhyavani | ಸಂಧ್ಯಾವಾಣಿ

A very unique podcast series comprising children stories, moral stories, lifestyle, human interest, health, wellbeing, excerpts & stories from the famous Ramayana by Dr. Sandhya S. Pai, Managing Editor of Taranga - Karnataka's favorite Kannada weekly lifestyle magazine.

Auteur

Udayavani

Categorie

Kids

Website van de podcast

www.udayavani.com

Nieuwste aflevering

10 jul. 2026

Waar luisteren?

Podcasts in de app Replaio Radio Binnenkort beschikbaar

Podcasts komen binnenkort naar de app. Installeer nu en zie als eerste een compleet nieuwe kijk op podcasts

Download het op Google Play Gratis installeren Android bijna 10 mln downloads · beoordeling 4,8 iOS binnenkort

Afleveringen

S1EP - 410 : ಬುದ್ಧ ಕೇಳಿದ ಏಳು ಪ್ರಶ್ನೆಗಳು | Seven Questions Asked by the Buddha 20.01.2024

ಬುದ್ಧ ಒಮ್ಮೆ ಆಸಕ್ತರಿಗೆ ಪ್ರವಚನ ನೀಡುತ್ತಿದ್ದ. ಈ ಪ್ರವಚನ ಬುದ್ಧ ಕೇಳಿದ ಏಳು ಓಗಟುಗಳು ಎಂದು ಪ್ರಸಿದ್ಧಿ ಪಡೆದಿವೆ. ಮೊದಲ ಒಗಟಾಗಿ ಬುದ್ಧ ಈ ಪ್ರಶ್ನೆ ಕೇಳಿದ ಜಗತ್ತಿನಲ್ಲಿ ಅತ್ಯಂತ ಹರಿತವಾದದ್ದು ಯಾವುದು? ಶಿಷ್ಯ ವೃಂದದಲ್ಲಿ ಒಕ್ಕೊರಲಿನಿಂದ ಕೇಳಿಬಂತು ಕತ್ತಿ ಖಡ್ಗಗಳೆಂದು ಆದರೆ ಬುದ್ಧ ನಕ್ಕ ...ಯಾಕೆ? ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ.  ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - sandhyavanipodcast@gmail.com

S3 : EP - 49 : ದುರ್ಯೋಧನನ ಕುತಂತ್ರದ ಕಥೆ | The story of Duryodhana 19.01.2024

In this episode, Dr. Sandhya S. Pai narrates very famous Mahabharata S3 : EP - 49 : ದುರ್ಯೋಧನನ ಕುತಂತ್ರದ ಕಥೆ | The story of Duryodhana ವನವಾಸದಲ್ಲಿರುವ ಪಾಂಡವರಿಗೆ ಸಮಸ್ಯೆ ನೀಡುವ ಉದ್ದೇಶದಿಂದ ದುರ್ಯೋಧನನು ತನ್ನ ಆಸ್ಥಾನಕ್ಕೆ ಬಂದ ದೂರ್ವಾಸ ಮುನಿ ಹಾಗೂ ಅವರ ಸಾವಿರ ಶಿಶ್ಯರನ್ನು ಸತ್ಕಾರ ಮಾಡಿ, ಬಳಿಕ ಪಾಂಡವರಿಂದಲೂ ಸತ್ಕಾರ ಸ್ವೀಕರಿಸುವಂತೆ ಕೇಳಿಕೊಳ್ಳುತ್ತಾನೆ. ಹೀಗೆ ಬಂದ ಇಷ್ಟು ಜನರಿಗೆ ಆಹಾರವನ್ನು ಹೇಗೆ ತಯಾರಿಸುವುದು ಎಂಬುದು ಅರ್ಥವಾಗದೆ ಇದ್ದಾಗ ಶ್ರೀ ಕೃ...

S1EP - 409 :ಆತ್ಮಹತ್ಯೆ ಒಂದೇ ಪರಿಹಾರವಲ್ಲ|Suicide is not the ultimate solution 18.01.2024

ಜೀವನದಲ್ಲಿ ಹತಾಶನಾದ ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಳ್ಳುವ ನಿರ್ಧಾರ ಮಾಡಿದ. ಸಾಯಲು ತುಂಬಾ ಇಷ್ಟ ನೋವಾಗದಂತಹ ಸುಲಭ ಉಪಾಯ ಯಾವುದಿರಬಹುದು ಅಂತ ತಿಳಿದುಕೊಳ್ಳೋದಿಕ್ಕೆ ಕೆಲವು ಸಮಯ ಹಿಡಿಯಿತು. ವಿಚಾರಿಸಿದ್ರೆ ರೈಲಿನ ಹಳಿಯ ಮೇಲಿನ ಸಾವು ಕಡಿಮೆ ತ್ರಾಸದಾಯಕ ಎಂದು ತಿಳಿಯಿತು. ರೈಲು ನಿಲ್ದಾಣಕ್ಕೆ ಬಂದ ಅಲ್ಲಿ ಜನರು ಕಿಕ್ಕಿರಿದು ನೆರೆದಿದ್ರು ಎಲ್ಲಿಗೆಹೋಗ್ತಿದ್ದಾರೆ ಅಂದ್ರೆ ಎಲ್ಲರೂ....... ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ.  ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್...

S1EP - 408 : ಕಾಡಿನಲ್ಲಿ ನೀರು ಹುಡುಕ ಹೊರಟ ಕವಿರತ್ನ ಕಾಳಿದಾಸ | The story of Kalidasa 13.01.2024

ಕವಿರತ್ನ ಕಾಳಿದಾಸ ಒಂದು ಕಾಡಿನ ಮೂಲಕ ಪ್ರಯಾಣ ಮಾಡ್ತಾ ಇದ್ದ, ಬಹಳಾ ದೂರ ಕ್ರಮಿಸಿದ ನಂತರ ಅವನಿಗೆ ಬಾಯಾರಿಕೆ ಆಯ್ತು.. ಅತ್ತಿತ್ತ ಹುಡುಕಾಡಿದ ನೀರು ಕಾಣಲಿಲ್ಲ .. ಬಾವಿ, ಕೊಳ, ತೊರೆ ಏನೂ ಕಾಣಲಿಲ್ಲ ಆಗ .. ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ.  ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - sandhyavanipodcast@gmail.com

S3 : EP - 48 : ಚಿತ್ರಸೇನನಿಂದ ಪರಾಜಿತನಾದ ದುರ್ಯೋಧನ | Duryodhana defeated by Chitrasena 12.01.2024

In this episode, Dr. Sandhya S. Pai narrates very famous Mahabharata S3 : EP - 48 : ಮಹಾಭಾರತದ ಸುಂದರ ಕಥೆಗಳಲ್ಲಿ ಇದೂ ಒಂದು. ಚಿತ್ರಸೇನನಿಂದ ಪರಾಜಿತನಾದ ದುರ್ಯೋಧನ. ದ್ವೈತ ವನದಲ್ಲಿದ್ದ ಪಾಂಡವರ ಎದುರು ಅಹಂಕಾರ ತೋರಿಸಲು ದುರ್ಯೋಧನ  ಬಂದಾಗ ಗಂಧರ್ವನೋರ್ವನ ಜೊತೆ ಕಲಹವಾಯಿತು. ಮುಂದೇನಾಯ್ತು ಎಂಬ ಸುಂದರ ಕಥೆ  ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - sandhyavanipodcast@gmail.com

S1EP- 347 : ಚೀನಾ ದೇಶದ ಕಥೆ; ಫೆಂಗ್ ತಂಡ ಅಪರೂಪದ ವಸ್ತು | Story of feng 11.01.2024

ಚೀನಾ ದೇಶದಲ್ಲಿ ಅಂತರ್ಯುದ್ಧಗಳು ನಡೀತಾ ಇದ್ದ ಕಾಲ ಫೆಂಗ್ ಎಂಬ ಹೆಸರಿನ ಯುವಕನೊಬ್ಬನಿದ್ದ, ಕಾಡು ಬಡತನದಲ್ಲಿದ್ದ , ಯಾವುದೇ ರೀತಿಯ ಸಾಂಪ್ರದಾಯಿಕ ವಿದ್ಯಾಭ್ಯಾಸ ಇಲ್ಲದ್ದರಿಂದ ಎಲ್ಲೂ ಕೆಲಸ ಸಿಕ್ತಾ ಇರಲಿಲ್ಲ.. ತುಂಬಾ ಯೋಚಿಸಿ ಪ್ರಾಂತ್ಯದ ಪಾಳೇಗಾರನ ಅರಮನೆಗೆ ಹೋದ ಅವನ ಮಿತ್ರ ಒಬ್ಬ ಈ ಪಾಳೇಗಾರನ ಅಂಗರಕ್ಷಕರಲ್ಲೊಬ್ಬನಾಗಿದ್ದ.. ಆಮೇಲೇನಾಯ್ತು ಕೇಳಿ.. ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ.  ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - sandhyavani...

S1EP- 346 : ಸುಂದರ ಬದುಕಿಗೆ ಬೇಕು ಪ್ರಜ್ಞಾವಂತಿಕೆ | A beautiful life requires awareness 06.01.2024

ಒಂದಾನೊಂದು ಊರಿನ ರಾಜ ಬಹಳ ಬುದ್ಧಿವಂತನು ಪ್ರಜ್ಞಾವಂತನೂ ಆಗಿದ್ದ. ಬುದ್ಧಿವಂತನಾದಿದ್ದವನಿಗೆ ಪ್ರಜ್ಞವಂತಿ ಕೆಯಿಲ್ಲದಿದ್ರೆ ಬುದ್ಧಿ ಇದ್ದೂ ಪ್ರಯೋಜನವಿಲ್ಲ. ಇಂತಹ ರಾಜನ ಆಸ್ಥಾನದಲ್ಲಿದ್ದವರಿಗೆ ರಾಜನಿಗಿದ್ದ ಪ್ರಜ್ಞಾವಂತಿಕೆ ಇರಲಿಲ್ಲ. ಒಂದು ದಿನ ರಾಜನ ಆಸ್ಥಾನಕ್ಕೆ ರಾಜನಿಲ್ಲದ ಸಂದರ್ಭದಲ್ಲಿ ಒಂದು ಭೂತ ಬಂತು ಆಮೇಲೆನಾಯ್ತು.. ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ.  ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - sandhyavanipodcast@gmail.com

S3 : EP - 47 : ದುರ್ಯೋಧನನ ಘೋಷಯಾತ್ರೆ | Dhuryodhanas Proclamation 05.01.2024

In this episode, Dr. Sandhya S. Pai narrates very famous Mahabharata S3 : EP - 47 : ದುರ್ಯೋಧನನ ಘೋಷಯಾತ್ರೆ | Dhuryodhanas Proclamation ಪಾಂಡವರು ದ್ವೈತ ಸರೋವರದ ಬಳಿಯಲ್ಲಿ, ಹೆಚ್ಚು ಮನುಷ್ಯ ಸಂಚಾರವಿಲ್ಲದ ಸ್ಥಳದಲ್ಲಿ ಬಿಡಾರ ಹೂಡಿದ್ರು.. ಅವರು ಅಲ್ಲಿ ಇರುವ ವಿಚಾರ ತಿಳಿದ ತಪಸ್ವಿಗಳು.. ಅವರಲ್ಲಿಗೆ ಬರ್ತಾ ಇದ್ರು.. ಹೀಗೆ ಒಂದು ದಿನ ಒಬ್ಬ ಬ್ರಾಹ್ಮಣನನ್ನ ಆದರಪೂರ್ವಕವಾಗಿ ಸತ್ಕರಿಸಿದ್ರು.. ಅವನು ಅವರ ದುಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸಿ ದುಃಖಿತನಾದ ಇವರ ಕಷ್...

S1EP- 345 : ಶ್ರೀಕೃಷ್ಣ ಕಲಿಸಿದ ಪಾಠ | A lesson by Shri Krishna 04.01.2024

ಬಹಳ ಹಿಂದೆ ಪ್ರಾಚೀನ ಕಾಲದಲ್ಲಿ ಗಯಾ ಎಂಬ ಯಕ್ಷ ಇದ್ದ . ಒಂದು ದಿನ ಇವನು ಆಕಾಶ ಮಾರ್ಗವಾಗಿ ಹೋಗುತ್ತಿದ್ದ ಇವನ ರಥ ದ್ವಾರಕೆಯ ಮೇಲಿರುವಾಗ ಅಚಾನಕ್ಕಾಗಿ ಅವನಿಗೆ ಉಗುಳ ಬೇಕೆನಿಸಿತು ಉಗಿದೆ ಬಿಟ್ಟ. ಆಗಿನ ಕಾಲದಲ್ಲೂ ಎಲ್ಲೆಂದರಲ್ಲಿ ಉಗಿಯಬಾರದೆಂದಿತ್ತೇನೋ ಆದರೆ ಇದೊಂದು ಭಾರತೀಯರ ಕೆಟ್ಟ ಚಾಳಿ ! ಅವನ ಉಗುಳು ಬಿಸಿಲುಮಚ್ಚಿನ ಮೇಲೆ ಕುಳಿತಿದ್ದ ಕೃಷ್ಣನ ತಲೆಯಮೇಲೆ ಬಿತ್ತು ಆಮೇಲೆನಾಯ್ತು...... ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ.  ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್...

S1EP- 344 : ಭಾರದ್ವಾಜ ಋಷಿಯ ಕತೆ | Story of Bharadhvaja Muni 30.12.2023

ವೇದಕಾಲದಲ್ಲಿ ಭಾರದ್ವಾಜ ಎಂಬ ಋಷಿ ಇದ್ರು, ಇವರು ಬ್ರಹಸ್ಪತಿಗೆ ತಾರೆಯಲ್ಲಿ ಜನಿಸಿದ ಶಂಯು ಎನ್ನುವ ಅಗ್ನಿಯ ಮಗ.. ಅಂದಿನ ಪದ್ದತಿಯಂತೆ ಉಪನಯನಾದಿ ಕರ್ಮಗಳ ನಂತರ ವಿದ್ಯಾಭ್ಯಾಸಕ್ಕಾಗಿ ಗುರುಕುಲಕ್ಕೆ ಕಳಿಸಿದರು.. ಸಾಮಾನ್ಯವಾಗಿ ಮೊದಲ ಹಂತದ ಶಿಕ್ಷಣ ಹದಿಮೂರು ವರ್ಷಗಳ ತನಕ ನಡೆದು ವಿದ್ಯಾರ್ಥಿ ಮನೆಗೆ ವಾಪಾಸ್ ಹೋಗ್ಬೇಕು ಇದು ಸಾಮಾನ್ಯ ಕ್ರಮ.. ಆದ್ರೆ ಭಾರಧ್ವಾಜರ ಮಟ್ಟಿಗೆ ಅದು ಹೀಗೆ ನಡೀಲಿಲ್ಲ, ಆಮೇಲೇನಾಯ್ತು ... ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ.  ನಿಮ್ಮ ಸಲಹೆ ಹಾಗೂ ಅಭಿಪ...

S3 : EP - 46 : ಕೌಶಿಕ ಬ್ರಾಹ್ಮಣನ ಕಥೆ | The story of Kausika 29.12.2023

In this episode, Dr. Sandhya S. Pai narrates very famous Mahabharata S3 : EP - 46 : ಕೌಶಿಕ ಬ್ರಾಹ್ಮಣನ ಕಥೆ | The story of Kausika ಮಹಾಭಾರತ ಮನೋಹರ ಕಥಾಮಾಲಿಕೆಯ ಸುಂದರ ಕಥೆಗಳಲ್ಲಿ ಇದೂ ಒಂದು. ಕೌಶಿಕ ಎಂಬ ಬ್ರಾಹ್ಮಣ ತಪೋಧನನೂ , ಧರ್ಮಶೀಲನೂ ಆಗಿದ್ದ. ಒಮ್ಮೆ ಆತ ಮರದ ಕೆಳಗೆ ಕೂತು ವೇದ ಪಾರಾಯಣ ಮಾಡುವಾಗ ಪಕ್ಷಿಯೊಂದು ಹಿಕ್ಕೆ ಹಾಕಿತು ಇದರಿಂದ ಕೋಪಗೊಂಡ ಕೌಶಿಕ ಬ್ರಾಹ್ಮಣ ಏನು ಮಾಡಿದ ಮುಂದೇನಾಯ್ತು ಎಂಬ ಸುಂದರ ಕಥೆ  ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ...

S1EP- 343 : ಪ್ರಕೃತಿಯ ನಡುವಿದ್ದ ಸುಂದರ ಮನೆ ಮಾರ ಹೊರಟವನಿಗೆ ಏನಾಯ್ತು ? Story of a rich man 28.12.2023

ಒಬ್ಬಾನೊಬ್ಬ ಶ್ರೀಮಂತನಿದ್ದ, ವಂಶಪಾರಂಪರ್ಯವಾಗಿ ಬಂದ ಸುಂದರವಾದ ದೊಡ್ಡ ಮನೆಯಲ್ಲಿ ವಾಸವಾಗಿದ್ದ, ಮನೆ ಇದ್ದದ್ದು ದೊಡ್ಡದೊಂದು ತೋಟದಲ್ಲಿ.. ತೋಟದ ತುಂಬಾ ಹಣ್ಣಿನ ಮರಗಳಿದ್ದವು ಪ್ರತಿಯೊಂದು ಋತುವಿನಲ್ಲಿಯೂ ಸ್ವಾದಿಷ್ಟ ಹಾಗು ರಸಭರಿತ ಹಣ್ಣುಗಳು ಅವರ ಉಪಯೋಗಕ್ಕೆ ಸಿಗ್ತಾ ಇತ್ತು.. ಹಾಗೆಯೇ ಮನೆಯ ಎದುರು ಭಾಗದಲ್ಲಿ ಹೂ ಬಿಡುವ ಗಿಡ ಮರ ಬಳ್ಳಿಗಳಿದ್ದವು.. ಇದೊಂದು ಸ್ವರ ಇರ್ಬೋದಾ ಅನ್ನಿಸುವಷ್ಟುಸುಂದರ ಮನೆ ಹಾಗು ವಾತಾವರಣ.. ಆದ್ರೆ ಮನೆ ಯಜಮಾನನಿಗೆ ಅದು ಸ್ವರ್ಗವಾಗಿರಲಿಲ್ಲ ಅದನ್ನು ಮಾರಬೇಕು...

S1EP- 342 : ಸಾಮ್ರಾಟ್ ಮಿಲಿಂದ ಹಾಗು ಹುಚ್ಚನಂತೆ ಕಾಣುವ ನಾಗಾರ್ಜುನ | Story of a saint 23.12.2023

In this episode, Dr. Sandhya S. Pai recites her very famous editorial Priya Odugare- S1EP- 341 :ಸೂಫಿ ಸಂತನ ಕೊನೆ ಕ್ಷಣ | Last days of Sufi Saint ಸಾಮ್ರಾಟ್ ಮಿಲಿಂದ ಸಾಧು ನಾಗಾರ್ಜುನರನ್ನ ಆಹ್ವಾನಿಸಬೇಕು ಅಂದುಕೊಂಡ ಹಾಗೆ ಒಬ್ಬ ಧೂತನನ್ನ ಆಹ್ವಾನದೊಂದಿಗೆ ಆಶ್ರಮಕ್ಕೆ ಕಳಿಸಿದ, ನಾಗಾರ್ಜುನ ಗಹಗಹಿಸಿ ನಗ್ತಾ.. ಹೌದೇನು ಆದ್ರೆ ನಾಗರ್ಜುನ ಎಂಬುದೊಂದು ವ್ಯವಹಾರಕ್ಕಾಗಿ ಯಾರೋ ಕೊಟ್ಟ ಹೆಸರು ಮಾತ್ರ.. ಅಂತದ್ದೊಂದು ಇಲ್ವೆ ಇಲ್ವಲ್ಲ ಅಂದ ಧೂತನಿಗೆ ಕಕ್ಕಾಬಿಕ್ಕಿ ಆಯ್ತು...

S3 : EP - 45 : ಶಿಬಿ ಮಹಾರಾಜನ ಕಥೆ | The story of Shibi Maharaja 22.12.2023

In this episode, Dr. Sandhya S. Pai narrates very famous Mahabharata S3 : EP - 45 : ಶಿಬಿ ಮಹಾರಾಜನ ಕಥೆ | The story of Shibi Maharaja ಇದೊಂದು ಮಹಾಭಾರತ ಕಥಾ ಮಾಲಿಕೆಯ ಸುಂದರ ಕಥೆ. ಶಿಬಿ ಮಹಾರಾಜನ ಕಥೆ. ದೇವತೆಗಳು ಶಿಬಿಯನ್ನು ಪರೀಕ್ಷೆ ಮಾಡಲು ಪಾರಿವಾಳ ಮತ್ತು ಗಿಡುಗಗಳಾಗಿ ರಾಜನ ಬಳಿ ಬಂದರು. ಪಾರಿವಾಳ ತನ್ನನ್ನು ರಕ್ಷಿಸುವಂತೆ ಶಿಬಿಯಲ್ಲಿ ಕೇಳಿದಾಗ ಶಿಬಿ ಪಾರಿವಾಳದ ಬದಲು ತನ್ನನ್ನೇ ಗಿಡುಗನಿಗೆ ಅರ್ಪಿಸಬೇಕಾದ ಸನ್ನಿವೇಷ ಎದುರಾಯಿತು. ಮುಂದೆನಾಯ್ತು ಕೇಳಿ ಡಾ. ಸ...

S1EP- 341 :ಸೂಫಿ ಸಂತನ ಕೊನೆ ಕ್ಷಣ | Last days of Sufi Saint 21.12.2023

In this episode, Dr. Sandhya S. Pai recites her very famous editorial Priya Odugare- S1EP- 341 :ಸೂಫಿ ಸಂತನ ಕೊನೆ ಕ್ಷಣ | Last days of Sufi Saint ಸೂಫಿ ಸಂತ ಹಸನ್ ಇನ್ನು ಕೆಲವೇ ಗಂಟೆಗಳಲ್ಲಿ ದೇಹ ತ್ಯಾಗ ಮಾಡುವವನಿದ್ದ ನೆರೆದವರು ಅವನ ವಿಯೋಗದ ದುಃಖದಿಂದ ಕಣ್ಣೇರು ಹಾಕ್ತಾ ಇದ್ರು, ವಿಲಾಪಿಸ್ತಾಯಿದ್ರು ಆದ್ರೆ ಹಸನ್ ಹಸನ್ಮುಖನಾಗಿ ಒರಗಿದ್ದ ಕೆಲವು ಸಮಯದನಂತರ ಮೆಲ್ಲನೆ ಕಣ್ಣು ತೆರೆದು ಒಮ್ಮೆ ಸುತ್ತ ನೋಡಿದ.. ನಿಮ್ಮಲ್ಲಿ ಯಾರಿಗಾದ್ರೂ ಏನಾದ್ರೂ ಕೇಳೋದಿದ್ಯಾ ? ಇದ...

S1EP- 340 :ಕ್ರಿಯೆ ಇಲ್ಲದೆ ಪ್ರತಿಕ್ರಿಯೆ ಇಲ್ಲ | There is no reaction without action 16.12.2023

ಬಿರುಬಿಸಿಲಿನ ಬೇಗೆಗೆ ಬಳಲಿದ ಒಬ್ಬ ಪಯಣಿಗ ಒಂದಿಷ್ಟು ವಿಶ್ರಾಂತಿ ಪಡೆಯಲು ಒಂದು ಮರದ ನೆರಳನ್ನು ಆಶ್ರಯಿಸಿದನಂತೆ. ಅಷ್ಟು ದೂರದಲ್ಲಿ ದೊಡ್ಡ ಮರವೊಂದು ನೆರಳು ಹರಡಿ ನಿಂತಿತ್ತು. ತನ್ನ ಕುದುರೆಯನ್ನು ಆ ಮರಕ್ಕೆ ಕಟ್ಟುತ್ತಿರುವಾಗ ಮರದ ಆಚೆ ಬದಿಯಿಂದ ಗೋರಕೆಯ ಶಬ್ದ ಕೇಳಿಸಿತು ಕುತೂಹಲ ದಿಂದ ಇಣುಕಿದರೆ ಯಾರೋ ಗಾಢನಿದ್ರೆಯಲ್ಲಿದ್ದಾರೆ. ಅವರ ಮೈಮೇಲೆ ಕಾಳ ಸರ್ಪದ ಮರಿ ಹರಿದಾಡುತ್ತಿತ್ತು... ಮುಂದೇನಾಯ್ತುಕೇಳಿ .... ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ.  ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳ...

S1EP- 399 : ಪ್ರಾಚೀನ ಸಂಸ್ಕ್ರತಿ ಜಗತ್ತಿಗೆ ಮಾದರಿ | Importance of ancient culture 14.12.2023

ಬಹಳ ಕಾಲದಿಂದ ನಿರ್ಲಕ್ಷ್ಯಕ್ಕೆ ಒಳಗಾಗಿದ್ದ ಒಂದು ಪ್ರಾಚೀನ ಬುದ್ಧಾಲಯ ಚೀನಾ ದೇಶದಲ್ಲಿತ್ತು. ಒಂದುಕಾಲದಲ್ಲಿ ಆಸ್ತಿಕರಿಂದ ಭಕ್ತಿ ಗೌರವ ಪಡೆಯುತ್ತಿದ್ದ ಈ ದೇವಾಲಯ ಇವತ್ತು ಕಸ ಕೊಲೆ ತುಂಬಿ ಬಾವಲಿಗಳಿಗೆ ವಾಸಸ್ಥಾನವಾಗಿತ್ತು. ಇದನ್ನು ಕೇಳಿದ ಚಕ್ರವರ್ತಿಗೆ ಇದನ್ನು ಜೀರ್ಣೋದ್ಧಾರ ಮಾಡುವ ಆಶಯ ಉಂಟಾಯ್ತು... ಪೂರ್ತಿ ಕಥೆ ಕೇಳಿ ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - sandhyavanipodcast@gmail.com

S1EP- 398 : ದ್ರೌಪಾದಿಯ ಸಿಟ್ಟು, ಮರ ಮುನಿಗಳಿಗಾಗಿ ಮೀಸಲಿಟ್ಟ ಹಣ್ಣು | Draupadi Story 09.12.2023

In this episode, Dr. Sandhya S. Pai recites her very famous editorial Priya Odugare- S1EP- 398 : ದ್ರೌಪಾದಿಯ ಸಿಟ್ಟು, ಮರ ಮುನಿಗಳಿಗಾಗಿ ಮೀಸಲಿಟ್ಟ ಹಣ್ಣು | Draupadi Story ಹನ್ನೆರಡು ವರ್ಷಗಳ ವನವಾಸ ಕೊನೆಯ ಘಟ್ಟದಲ್ಲಿತ್ತು, ಕಳೆದ ವರುಷಗಳಲ್ಲಿ ಭೀಮ ಅರ್ಜುನರು.. ತಮ್ಮ ಕೋಪವನ್ನು ಹಿಡಿತದಲ್ಲಿಡಲು ಕಲಿತಿದ್ದರು. ಯುಧಿಷ್ಠಿರ ಬದುಕನ್ನು ನಿಷ್ಪ್ರಹಿತೆಯಿಂದ ನೋಡುವತ್ತ ವಾಲಿದ್ದ, ದ್ರೌಪದಿಗೆ ಮಾತ್ರ ತನಗಾದ ಅವಮಾನವನ್ನ ಮರಿಯಲಿಕ್ಕೆ ಸಾದ್ಯವಾಗಿರಲೇ ಇಲ್ಲ. ರಾಜಕುಮಾರಿ...

S3 : EP - 44 : ಕಪ್ಪೆಯೊಂದು ರಾಜ್ಯದ ಮಹಾರಾಣಿಯಾದಾಗ ! | Mahabharat 08.12.2023

In this episode, Dr. Sandhya S. Pai narrates very famous Mahabharata S3 : EP - 44 : ಕಪ್ಪೆಯೊಂದು ರಾಜ್ಯದ ಮಹಾರಾಣಿಯಾದಾಗ ! | Mahabharat ಪರೀಕ್ಷಿತ ಎಂಬ ರಾಜ ಅಯೋಧ್ಯೆಯನ್ನು ಆಳುತ್ತಿದ್ದ. ಒಮ್ಮೆ ಈತ ಬೇಟೆಗೆಂದು ಕಾಡಿಗೆ ಹೋದ ಅಲ್ಲಿ ಸಿಕ್ಕ ಜಿಂಕೆ ಬೆನ್ನಟ್ಟಿ ಹೋದ ಆತನಿಗೆ ದಾರಿ ತಪ್ಪಿತು. ಆಗ ಒಂದು ಸರೋವರದ ಬಳಿ ಸುಂದರ ಯುವತಿಯನ್ನು ಕಂಡು ಮರುಳಾದ. ತನ್ನ ರಾಣಿಯಾಗುವೆಯಾ ಎಂದು ಕೇಳಿದ. ಆಗ ಆಕೆ ತನ್ನನ್ನು ಎಂದಿಗೂ ನೀರಿರುವ ಸ್ಥಳಕ್ಕೆ ಕರೆದುಕೊಂಡು ಹೋಗಬಾರದು ಎಂದು ಹ...

S1EP- 397 : ಈಜಿಪ್ಟ್ ಚಕ್ರವರ್ತಿಗೆ ಬಿದ್ದ ಕನಸು | A dream that fell to the emperor of Egypt 07.12.2023

In this episode, Dr. Sandhya S. Pai recites her very famous editorial Priya Odugare- S1EP- 397 : ಈಜಿಪ್ಟ್ ಚಕ್ರವರ್ತಿಗೆ ಬಿದ್ದ ಕನಸು | A dream that fell to the emperor of Egypt ಈಜಿಪ್ಟ್ ಚಕ್ರವರ್ತಿಗೆ ಒಂದು ಕನಸು ಬಿತ್ತು. ಈ ಕನಸಿನಲ್ಲಿ ನದಿಯಿಂದ 7 ಸುಂದರ ಆರೋಗ್ಯವಂತ ಹಸುಗಳು ಮತ್ತು 7 ರೋಗಗ್ರಸ್ತ ಹಸುಗಳ ಹೊರಬಂದವು. ಚಕ್ರವರ್ತಿಗೆ ಬಿದ್ದ ಈ ಕನಸಿನ ಅರ್ಥ ಏನು. ಮುಂದೇನಾಯ್ತು ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ.  ನಿಮ್ಮ ಸಲಹೆ ಹಾಗೂ ಅಭಿಪ್...

S1EP- 396 : ಸಮುರಾಯಿ ಕಲಿಸಿದ ಜೀವನ ಪಾಠ | Life lesson by Samurayi 02.12.2023

ಜಪಾನಿನ ಸಮುರಾಯಿ ಎಂಬ ಜನಾಂಗದವರು ಕ್ಷತ್ರಿಯರು, ಯೋಧರು, ಖಡ್ಗವಿದ್ಯಾ ಪ್ರವೀಣರಾಗಿದ್ರು. ಇವರ ನಿರ್ಭಿತಿ, ಸಾವಿಗೆ ಅಂಜದ ಸ್ವಭಾವ ಜಗದ್ಪ್ರಸಿದ್ಧಿಯಾಗಿತ್ತು. ಅಂತಹ ಸಮುರಾಯಿ ಒಬ್ರಿಗೆ ಹೊಸದಾಗಿ ಮಾಡುವೆ ಆಗಿತ್ತು. ತನ್ನ ವಧುವಿನೊಂದಿಗೆ ಮನೆಗೆ ಮರಳುವಾಗ ಒಂದು ಹೊಳೆ ಎದುರಾಯ್ತು ..ಮುಂದೆ ಕೇಳಿ

S3 : EP - 43 : ಭೀಮ ಹನುಮರ ಕಥೆ | Story of Bhima Hanuman 01.12.2023

In this episode, Dr. Sandhya S. Pai narrates very famous Mahabharata S3 : EP - 43 : Story of Bhima Hanuman ಇದೊಂದು ಮಹಾಭಾರತದ ಅತ್ಯಂತ ಸುಂದರ ಕಥೆ. ದ್ರೌಪದಿಯ ಆಸೆಯಂತೆ ಸುಗಂಧದ ಹೂಗಳನ್ನು ತರಲೆಂದು ಭೀಮ ಹೊರಟ. ಹೀಗೆ ಹೊರಟಾಗ ದಾರಿಯಲ್ಲಿ ಶ್ರೀ ಹನುಮನ ದರ್ಶನವಾಯಿತು. ಮುಂದೇನಾಯ್ತು ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - sandhyavanipodcast@gmail.com

S1EP- 395 : ಪ್ರಾಮಾಣಿಕ ಮಾಣಿಯ ಕಥೆ | Story of a boy who is honest 30.11.2023

ಸುಮಾರು ಎಂಬತ್ತು ವರ್ಷಗಳ ಹಿಂದಿನ ಸತ್ಯ ಕಥೆ ಇದು. ಆಗ ದಕ್ಷಿಣಕನ್ನಡದವರು ಮುಂಬೈಗೆ ಹೋಗಿ ಉಡುಪಿ ಅಡುಗೆಯ ರುಚಿಯನ್ನು ಮಹಾರಾಷ್ಟದವರೆಗೆ ಪರಿಚಯಿಸಿದ್ರು. ಮುಂಬೈ ಶಹರದಲ್ಲಿ ಉಡುಪಿಯ ಇಡ್ಲಿ, ದೋಸೆಗಳು ಜನಪ್ರಿಯವಾಗಿದ್ದ ಕಾಲ.. ಮುಂದೆ ಕೇಳಿ .... ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ.  ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - sandhyavanipodcast@gmail.com

S1EP- 394 :ರಾಮಾಯಣದ ಕಥೆ | A story from Ramayana 25.11.2023

ರಾಮಾಯಣದ ಯುದ್ಧಕಾಂಡದಲ್ಲಿ ಬರುವ ಕಥೆ ಇದು. ಇಂದ್ರಜಿತುವಿನ ಭೀಕರ ಪ್ರಹಾರಗಳಿಂದ ಲಕ್ಷ್ಮಣ ಮೂರ್ಛೆ ಹೋಗಿದ್ದಾನೆ ಅವನ ಮೇಲೆ ಪ್ರಯೋಗಿಸಲಾದ ಆಯುಧಗಳ ಪರಿಣಾಮ ಅವನ ದೇಹ ಶಿಥಿಲವಾಗತೊಡಗಿತು....ಮುಂದೇನಾಯ್ತು ಕೇಳಿ .... ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ.  ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - sandhyavanipodcast@gmail.com

S3 : EP - 42 :ಅಷ್ಟಾವಕ್ರ  ನ ಕಥೆ | The story of Ashtavakra 24.11.2023

In this episode, Dr. Sandhya S. Pai narrates very famous Mahabharata S3 : EP - 42 : ಅಷ್ಟಾವಕ್ರ  ನ ಕಥೆ | The story of Ashtavakra ಇದೊಂದು ಮಹಾಭಾರತದ ಸುಂದರ ಕಥೆ.  ಬದುಕಿನಲ್ಲಿ ಬಹಳಷ್ಟು ತಿಳಿದುಕೊಳ್ಳಬೇಕಾದ ತತ್ವ ಈ ಕಥೆಯಲ್ಲಿದೆ. ಅದುವೇ ಅಷ್ಟಾ ವಕ್ರನ ಕಥೆ. ಯಾರೀತ ಅಷ್ಟಾವಕ್ರ ? ಆತನಿಗೆ ಈ ಹೆಸರು ಏಕೆ ಬಂತು ಎಂಬ ವಿಷಯವನ್ನು ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - sandhyavanip...

Luister naar de podcast Sandhyavani | ಸಂಧ್ಯಾವಾಣಿ in Replaio

Radio en podcasts in één app - gratis en zonder account. Installeer vandaag nog en mis de lancering niet

Download het op Google Play

Replaio is geen uitgever van podcasts; namen van shows, covers en audio zijn eigendom van hun makers en worden verspreid via openbare RSS-feeds