IT for Change

ಕಥೆ ಖಜಾನೆ - ಕನ್ನಡದ

2023-24ರ ಅವಧಿಯಲ್ಲಿ ಕರ್ನಾಟಕ ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆ (ಡಿಎಸ್‌ಇಆರ್‌ಟಿ), ಐಟಿ ಫಾರ್ ಚೇಂಜ್ ಸಹಯೋಗದೊಂದಿಗೆ ಪ್ರಾಯೋಗಿಕವಾಗಿ ನಡೆಸಿದ 'ಭಾಷಾ ಶಿಕ್ಷಣದಲ್ಲಿ ಡಿಜಿಟಲ್ ಕಥೆ-ಆಧಾರಿತ ಬೋಧನ ವಿಧಾನದ ಅಳವಡಿಕೆ' ಕರ್ಯಕ್ರಮದ ಅಡಿಯಲ್ಲಿ ನಡೆಸಿದ ಕಾರ್ಯಾಗಾರಗಳ ಭಾಗವಾಗಿ ಈ ಆಡಿಯೋ ಕಥೆಗಳನ್ನು ಕರ್ನಾಟಕದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಶಿಕ್ಷಕರು ತಯಾರಿಸಿದ್ದಾರೆ. ಕಥೆ ಹೇಳುವಿಕೆಯ ಶಕ್ತಿಯ ಜೊತೆಗೆ ಡಿಜಿಟಲ್ ಮಾಧ್ಯಮವು ನೀಡುವ ಹೊಸ ಸಾಧ್ಯತೆಗಳ ಮೂಲಕ ಮಕ್ಕಳ ಭಾಷಾ ಕಲಿಕೆಯನ್ನು ಉತ್ತೇಜಿಸುವುದು ಈ ಕಾರ್ಯಕ್ರಮದ ಗುರಿಯಾಗಿದೆ. ಎಲ್ಲಾ ಕಥೆಗಳು ಮುಕ್ತ ಶೈಕ್ಷಣಿಕ ಸಂಪನ್ಮೂಲಗಳಾಗಿದ್ದು (OER) ಮುಕ್ತವಾಗಿ ಬಳಸಬಹುದು ಮತ್ತು ಹಂಚಿಕೊಳ್ಳಬಹುದು.

Husk å besøke podkastens nettsted og støtte skaperen: kathe-khajane.teacher-network.in

Forfatter

IT for Change

Kategori

Uncategorized

Podkastens nettsted

kathe-khajane.teacher-network.in

Siste episode

10. sep 2025

Hvor kan du lytte?

Podkaster i appen Replaio Radio Kommer snart

Podkaster kommer snart til appen. Installer nå, og bli den første som ser en helt ny tilnærming til podkaster

Last ned på Google Play Installer gratis Android nesten 10 mill. nedlastinger · 4,8 i vurdering iOS snart

Episoder

ಅಜ್ಜಿಯೊಂದಿಗೆ ವಿಹಾರ 10.09.2025

Writer : ದೀಪಾ ಬಲ್ಸಾವರ್ Narrator : ರಾಧಾ, ರೋಹಿಣಿ, ಶಹನಾಜ್ ಬೇಗಂ Editor : ಭಾಗ್ಯಶ್ರೀ ತನ್ನ ಆಸುಪಾಸಿನ ಜನರೊಡನೆ ವೆಂಕಿಯ ಅಜ್ಜಿ ಹೊಂದಿರುವ ಸಂಬಂಧ ಬಹಳ ವಿಶೇಷವಾದುದು. ಒಂದು ದಿನ ಸಂಜೆ ವೆಂಕಿ ಕೂಡ ಅಜ್ಜಿಯ ಜೊತೆ ಉದ್ಯಾನಕ್ಕೆ ಹೋಗುತ್ತಾನೆ. ಅವರ ವಿಹಾರ ಒಂದು ರೋಮಾಂಚಕ ಪಯಣವಾಗಿ ಪರಿವರ್ತನೆಗೊಳ್ಳುತ್ತದೆ. ೧. ಅಜ್ಜಿಯ ಜೊತೆಗೆ ಕಳೆದ ಸಮಯವನ್ನು ಹಂಚಿಕೊಳ್ಳುವುದು.  ೨. ಅಜ್ಜಿಯ ಬಗ್ಗೆ "ಅಜ್ಜಿ ಅಜ್ಜಿ ನಮ್ಮಜ್ಜಿ" ಎಂಬ ಹಾಡನ್ನು ಹೇಳಿಕೊಡುವುದು.  ೩. ಉದ್ಯಾನವದಲ್ಲಿ ಕಾ...

ಅಜ್ಜಿಯ ತೋಟದಲ್ಲಿ ಒಂದು ದಿನ 10.09.2025

Writer : ಡಿಎಸ್‌ಇಆರ್‌ಟಿ ಪಠ್ಯಪುಸ್ತಕ Narrator : ನೀಲರಾಜ್ ಎನ್ Editor : ಪ್ರದೀಪ್ ವಿ ಮಕ್ಕಳು ಮಾತನಾಡುತ್ತಾ ಅಜ್ಜಿಯ ಅಡಿಕೆ ತೋಟಕ್ಕೆ ಬಂದರು. ಅಜ್ಜಿಯು ಒಂದೊಂದು ಗಿಡವನ್ನು ನೆಡುವಂತೆ ಮಕ್ಕಳಿಗೆ ತಿಳಿಸುವರು. ಮುಂದೇನು ಮಾಡುವರು? ಯಾವ ಯಾವ ವಿಚಾರವನ್ನು ತಿಳಿಯುವರು? ೧. ವಿವಿಧ ರೀತಿಯ ಮಣ್ಣು (ಕಪ್ಪುಮಣ್ಣು, ಕೆಂಪುಮಣ್ಣು, ಮರಳುಮಣ್ಣು) ತಂದು, ಮಕ್ಕಳಿಗೆ ಸ್ಪರ್ಶಿಸಿ, ವಾಸನೆ ನೋಡಿ, ವ್ಯತ್ಯಾಸ ತಿಳಿಸುವ ಚಟುವಟಿಕೆ.  ೨. ತೋಟದ ಬಗ್ಗೆ ಅನುಭವಗಳನ್ನು ಬರೆಯಲು ತಿಳಿಸುವುದು.&nb...

ಅಜ್ಜಿಯ ಕನ್ನಡಕ 10.09.2025

Writer : ರೋಹಿಣಿ ನಿಲೇಕಣಿ Narrator : ಲಲಿತಾ, ಲಕ್ಷ್ಮಿ Editor : ಅಕ್ಕಮಹಾದೇವಿ ಅಜ್ಜಿ ಯಾವಾಗಲೂ ತಮ್ಮ ಕನ್ನಡಕವನ್ನು ಮರೆಯುತ್ತಿರುತ್ತಾರೆ. ಕೆಲವೊಮ್ಮೆ ಅದನ್ನು ಹುಡುಕಿ ಕೊಡಲು ಅವರಿಗೆ ಚಾಣಾಕ್ಷ ಪತ್ತೇದಾರಳ ಅಗತ್ಯವಿದೆ! ೧. ಮಕ್ಕಳು ತಮ್ಮದೇ ಶೈಲಿಯಲ್ಲಿ ಕಥೆಯನ್ನು ಹೇಳುವುದು.  ೨. ತರಗತಿಯಲ್ಲಿ ಚಿಕ್ಕ ಕನ್ನಡಕ ಮಾದರಿಯನ್ನು ಮರೆಮಾಡಿ ಹುಡುಕುವ ಆಟ ಆಡುವುದು. ಇವರಿಗೆ ಸೂಕ್ತ : ಪ್ರಾಥಮಿಕ ಹಂತ ಕಥಾವಸ್ತು : ಕುಟುಂಬ,ಬುದ್ಧಿವಂತಿಕೆ ಮತ್ತು ಚತುರತೆ ಗುರುತು ಪಟ್ಟಿ : ತರಗತಿ ೧,...

ಹುಲಿ ಬಂತು ಹುಲಿ 15.07.2024

ಲೇಖಕರು : ಸ್ಟೋರಿವೀವರ್ರಿಗಾಗಿ ಸೆಜಲ್ ಮೆಹ್ತಾ ನಿರೂಪಕರು : ವಸಂತ್ ಕುಮಾರ್ ಡಿ ಸಂಪಾದಕರು : ಪ್ರಸಾದ್ ಕೆ.ವಿ ಹುಲಿರಾಯ ಕಾಡಿಗೆ ಬಂದಿದ್ದು ಅದು ಹೇಗೋ ಎಲ್ಲ ಪ್ರಾಣಿ-ಪಕ್ಷಿಗಳಿಗೂ ಗೊತ್ತಾಯಿತು! ಆಗ ಅವೆಲ್ಲವೂ ಹೇಗೆ ಮಾತ್ನಾಡಿದ್ವು ಅಂಥಾ ತಿಳ್ಕೋಬೇಕಾ ಹಾಗಿದ್ರೆ ಈ ಕಥೆ ಕೇಳಿ. ಈ ಕಥೆಯ ಮೂಲಕ ಮಕ್ಕಳಿಗೆ ಕಾಡಿನ ವಿವಿಧ ರೀತಿಯ ಪ್ರಾಣಿಗಳ ಗುಣಲಕ್ಷಣಗಳನ್ನು ತಿಳಿಸಿಕೊಡಬಹುದು ಅಲ್ಲದೇ ಕಾಡಿನಲ್ಲಿ ಪ್ರಾಣಿಗಳಿಗೆ ಆಪತ್ತು ಎದುರಾದ ಸಂದರ್ಭದಲ್ಲಿ ಅವುಗಳ ನಡವಳಿಕೆಯಲ್ಲಿ ಆಗುವ ಬದಲಾವಣೆಗಳ ಹಾಗೂ ಇ...

ಸಿಟ್ಟಿನ ಅಕ್ಕು 15.07.2024

ಲೇಖಕರು : ಸ್ಟೋರಿವೀವರ್ರಿಗಾಗಿ ವಿನಾಯಕ ವರ್ಮ ನಿರೂಪಕರು : ಪ್ರಶಾಂತ್ ಸಂಪಾದಕರು : ಬಾಲಾಜಿ ಅಕ್ಕುವಿಗೆ ಈ ದಿನವೇಕೋ ಬೇಸರವಾಗಿದೆ, ಅವಳಿಗೆ ಕೋಪ ಬಂದಿದೆ. ಅಕ್ಕುವಿನ ಕೋಪ ಕಡಿಮೆಯಾಗಿದ್ದು ಹೇಗೆ? ನಿಮಗೂ ಕೋಪ ಬಂದಾಗ ಏನು ಮಾಡಬೇಕು ಎಂಬುದನ್ನು ತಿಳಿದುಕೊಳ್ಳಿ.. ಈ ಕಥೆಯ ಮೂಲಕ ಮಕ್ಕಳಿಗೆ ನವರಸಭಾವಗಳ ಕುರಿತು ತಿಳಿಸಿ ಆ ಭಾವಕ್ಕೆ ತಕ್ಕಂತೆ ಧ್ವನಿ ಏರಿಳಿತ ಹಾಗೂ ಮುಖಭಾವ ಬದಲಾವಣೆ ಮಾಡುವುದನ್ನು ಕಲಿಸಿವುದರ ಮೂಲಕ ಮಕ್ಕಳಿಗೆ ಅಭಿನಯದಲ್ಲಿ ಆಸಕ್ತಿ ಮೂಡುವಂತೆ ಮಾಡಬಹುದು. ಅಲ್ಲದೇ ಭಾವನೆಗಳನ್ನ...

ಸಿಂಹದ ಅಂಬಾರಿ 15.07.2024

ಲೇಖಕರು : ಸ್ಟೋರಿವೀವರ್ರಿಗಾಗಿ ಅಮರ್ ಗೋಸ್ವಾಮಿ  ನಿರೂಪಕರು : ಹಾಲೇಶ್  ಸಂಪಾದಕರು : ಸೋಮಶೇಖರ್  ಕಾಡಿನ ರಾಜನಾದ ಸಿಂಹ ನಾಡಿನ ರಾಜ ಅರಸನನ್ನು ಅನುಕರಣೆ ಮಾಡಲು ಹೊರಟ್ಟಿದ್ದಕ್ಕೆ ಏನಾಯ್ತು ಗೊತ್ತಾ? ಒಳ್ಳೆ ಕುಲುಕಾಟದ ದರ್ಬಾರ್! ಈ ತಮಾಷೆಯ ಕಥೆ ಕೇಳಿದರೆ ಸಮಾಚಾರವೇನೆಂದು ತಿಳಿಯುತ್ತದೆ. ಈ ಕಥೆಯಲ್ಲಿ ಬರುವ ಹೊಸ ಪದಗಳನ್ನ ಮಕ್ಕಳಿಗೆ ಪರಿಚಯಿಸುವುದು. ಇನ್ನೊಬ್ಬರನ್ನ ಅನವಶ್ಯಕವಾಗಿ ಅನುಸರಿಸುದಕ್ಕಿಂತ ನಮ್ಮ ಸ್ವಂತ ವ್ಯಕ್ತಿತ್ವ ನಮಗಿರಬೇಕು ಎಂಬ ನೀತಿಯನ್ನ ಮಕ್ಕಳಿಗೆ ಅರ್...

ಸಂತೆಯಲ್ಲಿ ಮಗ್ಗಿ 15.07.2024

ಲೇಖಕರು : ಸ್ಟೋರಿವೀವರ್ರಿಗಾಗಿ ಕವಿತ ಮಂದಣ್ಣ ನಿರೂಪಕರು : ಕುಮಾರ್ ಸಂಪಾದಕರು : ಸೌಮ್ಯ ಕೆ.ಎನ್ ಲೀಲು ತನ್ನ ತರಗತಿಯ 36 ವಿದ್ಯಾರ್ಥಿಗಳ ಜೊತೆಗೆ ಸಂತೆಗೆ ಹೋದಳು. ಟಿಕೆಟ್ ಖರೀದಿಸಲು ಎಷ್ಟು ಮಕ್ಕಳಿದ್ದಾರೆ ಎಂದು ಸರ್ ಆಗಾಗ ಎಣಿಸಬೇಕಾಗುತ್ತಿತ್ತು. 1, 2, 3, ಎಂದು 36ರವರೆಗೆ ಎಣಿಸುವ ಬದಲು ಇನ್ನೂ ಸುಲಭವಾಗಿ ಎಣಿಸಲು ಆಗುವುದೇ? ಜೊತೆ, ಜೊತೆಯಾಗಿ ಎಣಿಸುವುದನ್ನು ಕಥೆ ಮೂಲಕ ತಿಳಿಸುತ್ತಾ ಮಗ್ಗಿಯನ್ನು ಕತೆಯಲ್ಲಿ ಪರಿಚಯಿಸಿದೆ. ಕಥೆಯ ಮೂಲಕ ಮಕ್ಕಳಿಗೆ ಗಣಿತ ವಿಷಯಕ್ಕೆ ಸಂಬಂಧಿಸಿದ ಸಂಕಲನ,...

ಸಂತಸ 15.07.2024

ಲೇಖಕರು : ಸ್ಟೋರಿವೀವರ್ರಿಗಾಗಿ ಪಂಕಜ್ ಚತುರ್ವೇದಿ ನಿರೂಪಕರು : ಪ್ರಸಾದ್ ಕೆ.ವಿ ಸಂಪಾದಕರು : ಪ್ರಸಾದ್ ಕೆ.ವಿ ಸರಳ ವಿಚಾರಗಳಿಂದಲೇ ನಮಗೆ ಸಂತಸ ಲಭಿಸುತ್ತದೆ. ಈ ಕಥೆಯನ್ನು ಓದಿದರೆ ಅದು ಹೇಗೆಂದು ನಿಮಗೆ ಅರಿವಾಗುತ್ತದೆ. ಮಕ್ಕಳಿಗೆ ಹೊದಪದಗಳ ಪರಿಚಯ ಹಾಗೂ ವಾಕ್ಯ ರಚನೆಯ ಕುರಿತು ತಿಳಿಸಿಕೊಡಬಹುದು. ಅನುಪಯುಕ್ತ ವಸ್ತುಗಳನ್ನು ಅಲಂಕಾರಿಕ ವಸ್ತುಗಳನ್ನು ತಯಾರಿಸುವ ಬಗ್ಗೆ ಮಕ್ಕಳಿಗೆ ತಿಳಿಸಿಕೊಡುವುದು. ಕಥೆಗೆ ಸಂಬಂಧಿಸಿದಂತೆ ಕೆಲವು ತರಗತಿ ಚಟುವಟಿಕೆಗಳು. ಗಾಳಿಪಟ ಹಾರಿಸುವುದರ ಬಗ್ಗೆ ಮಕ್ಕ...

ಶ್ಯೂ... ನನ್ನ ಹೆಸರಲ್ಲ 15.07.2024

ಲೇಖಕರು : ಸ್ಟೋರಿವೀವರ್ರಿಗಾಗಿ ಕವಿತ ಪೊನ್ನಿಯಮೂರ್ತಿ ನಿರೂಪಕರು : ರೇಷ್ಮ ಸಂಪಾದಕರು : ಮನೀಶ್ ಕಂದುಬಣ್ಣದ ನಾಯಿಮರಿ ಕಣ್ಣಿಗೆ ಬಿದ್ದರೆ ಸಾಕು ಎಲ್ಲ ಹೇಳುವ ಮಾತು “ಶ್ಯೂ!” ಪುಟ್ಟ ಹುಡುಗನೊಬ್ಬ ಅದಕ್ಕೆ ತನ್ನ ಊಟದಲ್ಲಿ ಪಾಲು ಕೊಡುತ್ತಿದ್ದ. ಒಂದು ದಿನ ಅದು ಅವನ ಮನೆವರೆಗೆ ಹಿಂಬಾಲಿಸಿಕೊಂಡು ಹೋಯಿತು. “ಶ್ಯೂ!” ಎನ್ನುವುದು ತನ್ನ ಹೆಸರಲ್ಲ ಎನ್ನುವುದು ನಾಯಿಮರಿಗೆ ಆಗ ಗೊತ್ತಾಯಿತು! ಪ್ರಸ್ತುತ ಕಥೆಯ ಮೂಲಕ ಮಕ್ಕಳಿಗೆ ಸಾಕು ಪ್ರಾಣಿಗಳು ಯಾವುವು, ಮನುಷ್ಯನೊಂದಿಗೆ ಅವುಗಳ ವರ್ತನೆ ಹೇಗಿರುತ್ತ...

ಶಾಲೆಗೆ ಬಂದ ತರಕಾರಿಗಳು 15.07.2024

ಲೇಖಕರು : ಸ್ಟೋರಿವೀವರ್ರಿಗಾಗಿ ವೆಂಕಟರಮಣ ಗೌಡ ನಿರೂಪಕರು : ಗಂಗ ನಾಯಕ್ ಸಂಪಾದಕರು : ಬಸವರಾಜಪ್ಪ ಎನ್ ಶಾಲೆಗೆ ಹೊರಟ ಪುಟಾಣಿಗೆ ದಾರಿಯಲ್ಲಿ ಜೊತೆಯಾದ ಅಪೂರ್ವ ಜೀವಿಗಳು ಯಾರು? ತಿಂದು ಹೊಟ್ಟೆ ಸೇರಬೇಕಾದ ಸೊಪ್ಪು ತರಕಾರಿಗಳು ಶಾಲೆಗೇ ಬಂದು ಪಾಠ ಮಾಡಿದರೆ? ಅದುವೇ ಶಾಲೆಗೆ ಬಂದ ತರಕಾರಿಗಳು. ತರಕಾರಿ ಮತ್ತು ಸೊಪ್ಪುಗಳ ಪ್ರಾಮುಖ್ಯತೆ ಕುರಿತು ಮಕ್ಕಳಿಗೆ ತಿಳಿಸಿಕೊಡುವುದು. ಕಥೆಗೆ ಸಂಬಂಧಿಸಿದಂತೆ ಕೆಲವು ತರಗತಿಯ ಚಟುವಟಿಕೆಗಳು.  ಮಕ್ಕಳಿಗೆ ತಿಳಿದಿರುವ ತರಕಾರಿ ಹಾಗೂ ಸೊಪ್ಪುಗಳನ್ನು ಪ...

ಶಾಲೆಗೆ ಬಂದ ತರಕಾರಿಗಳು 15.07.2024

ಲೇಖಕರು : ಸ್ಟೋರಿವೀವರ್ರಿಗಾಗಿ ವೆಂಕಟರಮಣ ಗೌಡ ನಿರೂಪಕರು : ಗಂಗ ನಾಯಕ್ ಸಂಪಾದಕರು : ಬಸವರಾಜಪ್ಪ ಎನ್ ಶಾಲೆಗೆ ಹೊರಟ ಪುಟಾಣಿಗೆ ದಾರಿಯಲ್ಲಿ ಜೊತೆಯಾದ ಅಪೂರ್ವ ಜೀವಿಗಳು ಯಾರು? ತಿಂದು ಹೊಟ್ಟೆ ಸೇರಬೇಕಾದ ಸೊಪ್ಪು ತರಕಾರಿಗಳು ಶಾಲೆಗೇ ಬಂದು ಪಾಠ ಮಾಡಿದರೆ? ಅದುವೇ ಶಾಲೆಗೆ ಬಂದ ತರಕಾರಿಗಳು. ತರಕಾರಿ ಮತ್ತು ಸೊಪ್ಪುಗಳ ಪ್ರಾಮುಖ್ಯತೆ ಕುರಿತು ಮಕ್ಕಳಿಗೆ ತಿಳಿಸಿಕೊಡುವುದು. ಕಥೆಗೆ ಸಂಬಂಧಿಸಿದಂತೆ ಕೆಲವು ತರಗತಿಯ ಚಟುವಟಿಕೆಗಳು. ಮಕ್ಕಳಿಗೆ ತಿಳಿದಿರುವ ತರಕಾರಿ ಹಾಗೂ ಸೊಪ್ಪುಗಳನ್ನು ಪಟ್ಟಿ ಮ...

ರೊಟ್ಟಿ ಸುರುಳಿ 15.07.2024

ಲೇಖಕರು : ಸ್ಟೋರಿವೀವರ್ರಿಗಾಗಿ ಅಮರ್ ಗೋಸ್ವಾಮಿ ನಿರೂಪಕರು : ಕೆ.ಜಿ ಬಸವರಾಜ್ ಸಂಪಾದಕರು : ವೀರಭದ್ರಯ್ಯ ಎಂ.ಬಿ ಭೋಂಕು ನಾಯಿಯ ರೊಟ್ಟಿ ಕಿತ್ತುಕೊಂಡವರು ಯಾರು? ಆ ರೊಟ್ಟಿ ಕೊನೆಗೂ ಭೋಂಕು ಬಾಯಿ ಸೇರಿತಾ? ತಿಳಿಯಿರಿ. ಪರಿಸರದಲ್ಲಿ ಕಂಡುಬರುವ ಪ್ರಾಣಿ-ಪಕ್ಷಿಗಳು ಉಂಟುಮಾಡುವ ಶಬ್ದಗಳು ಹಾಗೂ ಅವುಗಳು ತಮ್ಮ ಆಹಾರಕ್ಕಾಗಿ ಪಡುವ ಸಂಕಷ್ಟಗಳ ಕುರಿತು ತಿಳಿಸಿಕೊಡಬಹುದು. ಅಲ್ಲದೇ ಈ ಕಥೆಯಿಂದ ಸರಳ ವಾಕ್ಯ ರಚನೆ ಮಾಡುವುದನ್ನು ಮಕ್ಕಳಿಗೆ ತಿಳಿಸಿಕೊಡಬಹುದು. ಕಥೆಗೆ ಸಂಬಂದಿಸಿದಂತೆ ಮಾಡಬಹುದಾದ ಕೆಲವು...

ರಾಜನ ಕಿರೀಟ 15.07.2024

ಲೇಖಕರು : ಸ್ಟೋರಿವೀವರ್ರಿಗಾಗಿ ರಿಚಾ ಭಾಸ್ಕರ್ ನಿರೂಪಕರು : ಬಸವರಾಜಪ್ಪ ಎನ್ ಸಂಪಾದಕರು : ನಾಗವೇಣಿ ರಾಜ 'ಅನವ್ರತ' ಎತ್ತರದ ದೇಗುಲವನ್ನು ಕತ್ತೆತ್ತಿ ನೋಡುವಾಗ ಆತನ ಕಿರೀಟ ಕೆಳಗೆ ಬಿತ್ತು. ರಾಜ ತನ್ನ ಕಿರೀಟ ಬೀಳದಂತೆ ಗೋಪುರ ನೋಡಲು ಏನು ಮಾಡಿದ ಎಂಬುದನ್ನು ತಿಳಿಯಲು ಮಯಾನ್ಮಾರ್‌ ಈ ಕಥೆ ಓದಿ. ಕಥೆಯ ಮೂಲಕ ಮಕ್ಕಳಿಗೆ ವಿಜ್ಞಾನಕ್ಕೆ ಸಂಬಂಧಿಸಿದ ಪ್ರತಿಬಿಂಬದ ಕುರಿತಾಗಿ ಮಕ್ಕಳಿಗೆ ತಿಳಿಸಿಕೊಡಬಹುದು ಅಲ್ಲದೇ ಇತಿಹಾಸದಲ್ಲಿ ರಾಜರುಗಳು ನಿರ್ಮಿಸಿದ ದೇವಾಲಯಗಳ ಕುರಿತು ಚರ್ಚಿಸುತ್ತಾ ಹೊಸ ಪದಗ...

ಯಾರದು 15.07.2024

ಲೇಖಕರು : ಸ್ಟೋರಿವೀವರ್ರಿಗಾಗಿ ಕಾಂಚನ್ ಬ್ಯಾನರ್ಜಿ ನಿರೂಪಕರು : ಸಿ ಎಂ ಸುಂದರ್ ರಾಜ ಸಂಪಾದಕರು : ನಾಗವೇಣಿ ಸೊರ್….ಸೊರ್….ಈ ಶಬ್ದ ಮಾಡುತ್ತಿರುವವರು ಯಾರು ಅಂದುಕೊಂಡಿರಿ? ಈ ಕಥೆಯಲ್ಲಿ ಪ್ರಿಯಾ ಇದನ್ನು ಪತ್ತೆ ಹಚ್ಚುತ್ತಾಳೆ. ಈ ಕಥೆಯಿಂದ ಮಕ್ಕಳಿಗೆ ಪ್ರಾಣಿಗಳು ಉಂಟು ಮಾಡುವ ಶಬ್ದವನ್ನು, ಹೊಸ ಪದಗಳನ್ನು ಹಾಗೂ ಸರಳ ವಾಕ್ಯಗಳ ರಚನೆಯನ್ನು ತಿಳಿಸಬಹುದು. ಕಥೆಗೆ ಸಂಬಂದಿಸಿದಂತೆ ಮಾಡಬಹುದಾದ ಕೆಲವು ತರಗತಿಯ ಚಟುವಟಿಕೆಗಳು : ಮಕ್ಕಳಿಗೆ ಕೆಲವು ಪ್ರಾಣಿಗಳ ಶಬ್ದವನ್ನು ಕೇಳಿಸಿ ಆ ಶಬ್ದ ಯಾವ ಪ್...

ಮೊಸಳೆ ಮತ್ತು ಪಾತರಗಿತ್ತಿ 15.07.2024

ಲೇಖಕರು : ಸ್ಟೋರಿವೀವರ್ರಿಗಾಗಿ ಹರ್ಮೀಂಧರ್ ಓಹ್ರಿ ನಿರೂಪಕರು : ಸುಂದರ್ ರಾಜ್ ಸಂಪಾದಕರು : ಬಾಲಾಜಿ ಮೊಸಳೆ ಹಾಗೂ ಪಾತಾರಗಿತ್ತಿ ಈ ಇಬ್ಬರು ಸ್ನೇಹಿತರು ಬುದ್ದಿವಂತಿಕೆಯಿಂದ ಬೇಟೆಗಾರರನ್ನ ಓಡಿಸಿದ ಕಥೆ. ಸ್ನೇಹಿತರಿಗೆ ಸಂಕಷ್ಟ ಬಂದಾಗ ಒಬ್ಬರು ಇನ್ನೊಬ್ಬರ ಸಹಾಯಕ್ಕೆ ಹೇಗೆ ನಿಂತರೆಂಬುದನ್ನ ಈ ಕಥೆಯ ಮೂಲಕ ತಿಳಿಯೋಣ. ಈ ಕಥೆಯ ಮೂಲಕ ಮಕ್ಕಳಿಗೆ ಹೊಸಪದಗಳ ಪರಿಚಯ ಮಾಡಿಕೊಡಬಹುದಲ್ಲದೇ ಆಗಿನ ಕಾಲದ ಬೇಟೆ ಪದ್ದತಿ, ವಿಧಾನಗಳು, ಕಾರಣಗಳನ್ನು ತಿಳಿಸಿ ಪ್ರಸ್ತುತ ಬೇಟೆ ನಿಷೇದ ಕಾಯಿದೆ ಹಾಗೂ ಕಾರಣಗಳ...

ಮೀನು ಕೇಳಿದ ವಾರ್ತೆ 15.07.2024

ಲೇಖಕರು : ಸ್ಟೋರಿವೀವರ್ರಿಗಾಗಿ ವೆಂಕಟರಮಣ ಗೌಡ ನಿರೂಪಕರು : ರೇಷ್ಮ ಸಂಪಾದಕರು : ನಟೇಶ್ ಕುಮಾರ್ ಆರ್.ಜಿ ಇದು ಅಂತಿಂಥ ಮೀನಲ್ಲ ಮನೆಯಲ್ಲಿ ರೇಡಿಯೋ ಇರುವ ಘನತೆವೆತ್ತ ಮೀನು. ವಾರ್ತಾ ಪ್ರಸಾರ ಕೇಳಿ ತನ್ನ ಕುಟುಂಬ ಮಾತ್ರವಲ್ಲದೇ, ಸಮಸ್ತ ಜಲಚರಗಳನ್ನೂ ರಕ್ಷಿಸಿದ ಅಪೂರ್ವ ಕಥೆಯೇ ಈ ‘ಮೀನು ಕೇಳಿದ ವಾರ್ತೆ.’ ಈ ಕಥೆಯ ಮೂಲಕ ಮಕ್ಕಳಿಗೆ ಸುದ್ದಿ ಮಾಧ್ಯಮದ ಪ್ರಾಮುಖ್ಯತೆಯ ತಿಳುವಳಿಕೆ ನೀಡಿ ಪ್ರಚಲಿತ ವಿದ್ಯಮಾನಗಳನ್ನು ತಿಳಿದುಕೊಳ್ಳುವಂತೆ ಪ್ರೇರೇಪಿಸುವುದು. ಕಥೆಗೆ ಸಂಬಂದಿಸಿದಂತೆ ಕೆಲವು ತರಗತಿಯ...

ಮೀನಿನ ಮಳೆ 15.07.2024

ಲೇಖಕರು : ಸ್ಟೋರಿವೀವರ್ರಿಗಾಗಿ ರಾಮೇಂದ್ರ ಕುಮಾರ್ ನಿರೂಪಕರು : ಮಧು ಹೆಚ್.ಸಿ ಸಂಪಾದಕರು : ಪ್ರದೀಪ್ ಪಿಟಾರಾ ಝೂನಲ್ಲಿ ಅನೇಕ ಪ್ರಾಣಿಗಳಿವೆ. ಕಂದುಬಣ್ಣದ ಬಲಶಾಲಿ ಕರಡಿ ಬಲ್ಲೂನ ನಾಲ್ಕನೇ ವರ್ಷದ ಹುಟ್ಟುಹಬ್ಬದ ಪ್ರಯುಕ್ತ ಝೂನಲ್ಲಿ ಒಂದು ಸಣ್ಣ ಪಾರ್ಟಿ ಏರ್ಪಡಿಸಲಾಗಿದೆ. ಮುಂದೆನಾಯ್ತು? ಈ ಕಥೆಯಲ್ಲಿ ಬರುವ ಪದಗಳನ್ನು ಮಕ್ಕಳಿಗೆ ಪರಿಚಯಿಸುವುದು ಹಾಗೂ ಮಕ್ಕಳಿಗೆ ವಾಕ್ಯ ರಚನೆ ಮಾಡುವ ಕೌಶಲ್ಯಮೂಡಿಸುವುದು. ಕಥೆಗೆ ಸಂಬಂಧಿಸಿದಂತೆ ಕೆಲವು ತರಗತಿ ಚಟುವಟಿಕೆಗಳು. ಪ್ರಾಣಿ ಸಂಗ್ರಹಾಲಯದಲ್ಲಿ ಕಾಣ...

ಮಳೆರಾಯ 15.07.2024

ಲೇಖಕರು : ಸ್ಟೋರಿವೀವರ್ರಿಗಾಗಿ ಸಂಜೀವ್ ಜೈಸ್ವಾಲ್ ನಿರೂಪಕರು : ಬಸವರಾಜು ಟಿ.ಡಿ ಸಂಪಾದಕರು : ನಫೀಸಾ ಬಾನು ಮೋಡವನ್ನ ಪ್ರಾರ್ಥಿಸಿದ ಕೂಡಲೇ ಅದು ಮಳೆ ಸುರಿಸುವುದರೊಂದಿಗೆ ಹರುಷ ಹರಿಸಿದ್ದು ಹೇಗೆ ಎಂಬುದನ್ನ ತಿಳಿಯಿರಿ. ಈ ಕಥೆಯ ಮೂಲಕ ಮಕ್ಕಳಿಗೆ ಋತುಗಳು ಹಾಗು ಆ ಋತುಗಳ ಗುಣಲಕ್ಷಣಗಳನ್ನು ತಿಳಿಸಿಕೊಡುವುದು. ಕಥೆಗೆ ಸಂಬಂಧಿಸಿದಂತೆ ಕೆಲವು ತರಗತಿಯ ಚಟುವಟಿಕೆಗಳು : ಮಕ್ಕಳೊಂದಿಗೆ ಕಾಲಗಳ ಕುರಿತು ಚರ್ಚಿಸಿ ಅವರಿಗೆ ಇಷ್ಟವಾದ ಕಾಲ ಯಾವುದು ಮತ್ತು ಯಾಕೆ ಎಂಬುದನ್ನ ತಿಳಿಸಲು ಹೇಳಬಹುದು. ಮಳೆಯಿ...

ಮರೆಗುಳಿ ಅಜ್ಜ 15.07.2024

ಲೇಖಕರು : ಸ್ಟೋರಿವೀವರ್ರಿಗಾಗಿ ಅರುಂಧತಿ ವೆಂಕಟೇಶ್ ನಿರೂಪಕರು : ನಟೇಶ್ ಕುಮಾರ್ ಆರ್.ಜಿ ಸಂಪಾದಕರು : ನಾಗವೇಣಿ ಅಜ್ಜ ಹಾಗೇ ಸುಮ್ಮನೆ ಸಂಜೆ ಅಡ್ಡಾಡಲು ಸಿದ್ಧವಾಗುತ್ತಿದ್ದರು. ಆದರೆ, ಕೈ ಚೀಲದಲ್ಲಿ ಏನೆಲ್ಲಾ ಎಂದು ನೆನಪೇ ಇರುತ್ತಿರಲಿಲ್ಲ. ಸದ್ಯ, ಅವರಿಗೆ ಸಹಾಯ ಮಾಡಲು ಸುಜ್ಜು ಇದ್ದಾನಲ್ಲ. ಈ ಪುಸ್ತಕ ವಿರುದ್ಧಾರ್ಥ ಕಲ್ಪನೆಗಳ ಬಗ್ಗೆ ತಿಳಿಸುತ್ತದೆ. ಕಥೆಯ ಮೂಲಕ ಮಕ್ಕಳಿಗೆ ಹೊಸಪದಗಳ ಪರಿಚಯ ಹಾಗೂ ವಾಕ್ಯ ರಚನೆಯ ಬಗ್ಗೆ ತಿಳಿಸಿಕೊಡುವುದು. ಕಥೆಗೆ ಸಂಬಂಧಿಸಿದಂತೆ ಕೆಲವು ತರಗತಿ ಚಟುವಟಿಕೆ...

ಮರ ಕಡಿಯುವಾತ 15.07.2024

ಲೇಖಕರು : ಸ್ಟೋರಿವೀವರ್ರಿಗಾಗಿ ವೀಣ ಶೇಷಾದ್ರಿ ನಿರೂಪಕರು : ಕೆ.ಜಿ ಬಸವರಾಜ್ ಸಂಪಾದಕರು : ಸಿದ್ದರಾಮೇಶ್ವರ ಒಂದು ದಿನ ಬೆಳಗ್ಗೆ ಕಟ್ಟಿಗೆ ಕಡಿವ ಗುರಾ ಸ್ವಲ್ಪ ಸೌದೆಯನ್ನು ತರಲು ಕಾಡಿಗೆ ಹೊರಟ. ಒಂದು ಮರವನ್ನು ಏರಿ ಒಂದು ದೊಡ್ಡ ರೆಂಬೆಯ ಕೊನೆಯಲ್ಲಿ ಕುಳಿತುಕೊಂಡ. ನಂತರ ತಾನು ಕುಳಿತಿದ್ದ ರೆಂಬೆಯನ್ನು ಕಡಿಯಲು ಶುರು ಮಾಡಿದ. ಆ ಹಾದಿಯಲ್ಲಿ ಹೋಗುತ್ತಿದ್ದ ಗ್ರಾಮದ ಪೂಜಾರಿ, ಮರ ಗುರಾನನ್ನು ನೋಡಿ ನಿಂತು ಮಾತಾಡಿದ. ಹೀಗೆ ಮಾಡಿದರೆ ರೆಂಬೆ ಮುರಿದು, ನೀನು ಕೆಳಗೆ ಬಿದ್ದು ಸಾಯುವೆ ಎಂದು ಪೂಜಾ...

ಮನೆಯಲ್ಲಿ ಇಲಿ 15.07.2024

ಲೇಖಕರು : ಸ್ಟೋರಿವೀವರ್ರಿಗಾಗಿ ಸೌಮ್ಯ ರಾಜೇಂದ್ರನ್ ನಿರೂಪಕರು : ಶ್ರೀನಿವಾಸ್ ಕುಮಅರ್ ಸಂಪಾದಕರು : ವೀರಭದ್ರಯ್ಯ ಎಂಬಿ ಮನೆಯಲೊಂದು ಇಲಿ ಸೇರಿಕೊಂಡಿದೆ. ಇಲಿಯಿಂದ ಏನೆಲ್ಲಾ ಅವಾಂತರವಾಯಿತು ಗೊತ್ತಾ. ಪುಟಾಣಿಗಳಿಗೆ ಮುದ ನೀಡುವ ಕತೆ ಇದು. ಮನೆಯಲ್ಲಿ ಇಲಿಗಳಿರುವುದರಿಂದ ಆಗುವುದರ ಅನಾಹುತ ಹಾಗೂ ಅವುಗಳು ಮನೆಗೆ ಬಾರದಂತೆ ತಡೆಯುವ ಕ್ರಮಗಳ ಕುರಿತು ಮಕ್ಕಳಿಗೆ ತಿಳಿಸುವುದು. ಕಥೆಗೆ ಸಂಬಂಧಿಸಿದಂತೆ ಕೆಲವು ತರಗತಿ ಚಟುವಟಿಕೆಗಳು. ಮನೆಯಲ್ಲಿ ಇಲಿಯಿಂದ ಆಗಿರುವ ಅನುಭವಗಳನ್ನು ಹಂಚಿಕೊಳ್ಳುವಂತೆ ತಿ...

ಬೆದರು ಬೊಂಬೆಗಳ ಮೆರವಣಿಗೆ 15.07.2024

ಲೇಖಕರು : ಸ್ಟೋರಿವೀವರ್ರಿಗಾಗಿ ಶಾಮಿಮ್ ಪದಮ್ಸೀ ನಿರೂಪಕರು : ರೇಷ್ಮಾ ಸಂಪಾದಕರು : ನೂರ್ ಫಾತಿಮಾ ಹೊಲಗಳಲ್ಲಿ ತೆನೆ ಕಾಳುಗಳನ್ನು ತಿನ್ನಲು ಬರುವ ಪಕ್ಷಿಗಳು ಬೆದರಿ ಓಡಿ ಹೋಗುವಂತೆ ಮಾಡಲು ಬೆದರುಬೊಂಬೆಗಳನ್ನು ಕಟ್ಟಿರುತ್ತಾರೆ. ಆದರೆ ಪುಟ್ಟ ಗೌರಿ ಯೋಚಿಸುವುದೇ ಬೇರೆ! ಅದೇನೆಂದು ಓದಿ ತಿಳಿಯಿರಿ. ಈ ಕಥೆಯ ಮೂಲಕ ಮಕ್ಕಳೊಂದಿಗೆ ಕನಸುಗಳ ಕುರಿತಾಗಿ ಚರ್ಚಿಸಬಹುದು. ಮನೆಯಲ್ಲಿ ಹಿರಿಯರಿಗೆ ಮಕ್ಕಳು ಮಾಡುವ ಸಹಾಯಗಳ ಕುರಿತು ಚರ್ಚಿಸಬಹುದು. ಮಕ್ಕಳೊಂದಿಗೆ ಸಂತೋಷ, ದುಖಃ, ಭಯ ಮುಂತಾದ ಭಾವನೆಗಳ ಬಗ...

ಬಂಟಿ ಮತ್ತು ಬಬ್ಲೂ 15.07.2024

ಲೇಖಕರು : ಸ್ಟೋರಿವೀವರ್ರಿಗಾಗಿ ಸೋರಿತ್ ಗುಪ್ತೋ  ನಿರೂಪಕರು : ಪ್ರದೀಪ್ ಸಂಪಾದಕರು : ಚಂದ್ರಶೇಖರ್ ಬಂಟಿ ಎಂಬ ಹುಡುಗಿಗೆ ಸೋಪು ಹಚ್ಚಿ ಸ್ನಾನ ಮಾಡುವುದು ಎಂದರೆ ಚೂರು ಇಷ್ಟವಿಲ್ಲ. ಬಂಟಿ ಒಂದು ರಾತ್ರಿ ಕನಸನ್ನು ನೋಡುತ್ತಾಳೆ. ಕನಸಿನಲ್ಲಿ ಅವಳು ಏನನ್ನು ನೋಡುತ್ತಾಳೆಂದು ತಿಳಿಯೋಣಾ ಬನ್ನೀ? ಮಕ್ಕಳಿಗೆ ದೈನಂದಿನ ಜೀವನದಲ್ಲಿ ಸ್ವಚ್ಛತೆಯ ಪ್ರಾಮುಖ್ಯತೆ ಮತ್ತು ಆರೋಗ್ಯದ ಬಗ್ಗೆ ಅರಿವುಂಟಾಗುವಂತೆ ಮಾಡಬಹುದು. ಕಥೆಗೆ ಸಂಬಂಧಿಸಿದಂತೆ ಕೆಲವು ತರಗತಿಯ ಚಟುವಟಿಕೆಗಳು : ನೀವು ಸ್ನೇಹಿತರೊಡನೆ...

ಫಾರೂಕಜ್ಜನ ತೋಟ 15.07.2024

ಲೇಖಕರು : ಸ್ಟೋರಿವೀವರ್ರಿಗಾಗಿ ಮ್ಯಾಥ್ಯೂ ಕಲೀಲ್ ನಿರೂಪಕರು : ನಟೇಶ್ ಕುಮಾರ್ ಆರ್.ಜಿ ಸಂಪಾದಕರು : ನಟೇಶ್ ಕುಮಾರ್ ಆರ್.ಜಿ ಅಮೀರ್‌ನಿಗೆ ಫಾರೂಕಜ್ಜನ ತೋಟ ಎಂದರೆ ತುಂಬಾ ಇಷ್ಟ. ಆದರೆ, ಯಾವುದೋ ಕೀಟಗಳು ತೋಟದ ಗಿಡಗಳನ್ನೆಲ್ಲ ತಿನ್ನುತ್ತಿವೆ. ಕೀಟಗಳಿಂದ ಗಿಡಗಳನ್ನು ರಕ್ಷಿಸಲು ಅಮೀರ್ ಏನು ಮಾಡಬಹುದು? ಪರಿಸರದ ಪ್ರಾಮುಖ್ಯತೆಯನ್ನ ಅರಿತು ಪರಿಸರದೊಂದಿಗೆ ಉತ್ತಮ ಭಾಂಧವ್ಯವನ್ನು ಹೊಂದುವ ಮೂಲಕ ಅದನ್ನ ಉಳಿಸಿ-ಬೆಳೆಸಿ ಮುಂದಿನ ಪೀಳಿಗೆಗೆ ಹಸ್ತಾಂತರ ಮಾಡುವ ಸುಸ್ಥಿರ ಅಭಿವೃದ್ಧಿಯ ಕುರಿತಾಗಿ ಮಕ...

ಪುಸ್ತಕ ಕೊಳ್ಳಲು ಹೋದೆವು ನಾವು 15.07.2024

ಲೇಖಕರು : ಸ್ಟೋರಿವೀವರ್ರಿಗಾಗಿ ರುಕ್ಮಿಣಿ ಬ್ಯಾನರ್ಜಿ ನಿರೂಪಕರು : ಪ್ರಶಾಂತ್ ಸಂಪಾದಕರು : ಸೋಮಶೇಖರ್ ಮಕ್ಕಳು ತಮ್ಮ ಅನುಭವವನ್ನು ಇತರರೊಂದಿಗೆ ಹಂಚಿಕೊಳ್ಳಲು ಬಯಸುತ್ತಾರೆ. ಪುಸ್ತಕ ಕೊಳ್ಳಲು ಹೋಗುವುದು ಅಂತಹ ಅನುಭವಗಳು ಹೇಗೆ ಮಜಾ ಕೊಡುತ್ತವೆಂದು ತಿಳಿಸುತ್ತದೆ. ಪುಸ್ತಕಗಳ ಪ್ರಾಮುಖ್ಯತೆಯನ್ನು ಚರ್ಚಿಸುವುದರ ಮೂಲಕ ಮಕ್ಕಳಿಗೆ ಪುಸ್ತಕ ಓದುವಂತೆ ಪ್ರೇರೇಪಿಸುವುದು. ಕಥೆಗೆ ಸಂಬಂಧಿಸಿದಂತೆ ಕೆಲವು ತರಗತಿ ಚಟುವಟಿಕೆಗಳು. ಕಥೆಯನ್ನು ಮಕ್ಕಳು ತಮ್ಮ ಸ್ವಂತ ಮಾತುಗಳಲ್ಲಿ ಹೇಳುವಂತೆ ತಿಳಿಸುವುದ...

Hør på podkasten ಕಥೆ ಖಜಾನೆ - ಕನ್ನಡದ i Replaio

Radio og podkaster i én app - gratis og uten registrering. Installer i dag, og ikke gå glipp av lanseringen

Last ned på Google Play

Replaio er ikke podkastutgiver; programnavn, omslag og lyd tilhører opphavspersonene og distribueres via offentlige RSS-feeder.