Parameshwarappa Kudari

ಎಂಥಾ ಮೋಜಿನ ಕುದರಿ.......!! By ಪರಮೇಶ್ವರಪ್ಪ ಕುದರಿ

Comedy KN ↓ 165 epizód

ಜೀವನಕ್ಕಿಂತ ಜೀವನಾನುಭವ ದೊಡ್ಡದು.ಜೀವನದಲ್ಲಿ ಬಂದು ಹೋಗುವ ಕೆಲವು ಪಾತ್ರಗಳು ಸದಾ ನೆನಪಿನಲ್ಲಿ ಉಳಿದು, ಕಾಡುತ್ತವೆ....ಮಾತಾಗಿ,ಹಾಡಾಗಿ ಹೊಮ್ಮುತ್ತವೆ!!

Mindenképp látogasd meg a podcast oldalát, és támogasd a készítőjét: youtube.com

Szerző

Parameshwarappa Kudari

Kategória

Comedy

A podcast weboldala

youtube.com

Legutóbbi epizód

2023. dec. 20.

Hol hallgathatod?

Podcastok az alkalmazásban Replaio Radio Hamarosan

A podcastok hamarosan megérkeznek az alkalmazásba. Telepítsd most, és láss elsőként egy teljesen új megközelítést a podcastokhoz

Letöltés a Google Play-ről Telepítsd ingyen Android közel 10 M letöltés · 4,8-as értékelés iOS hamarosan

Epizódok

ಎರಡು ಹಾಸ್ಯ ಪ್ರಸಂಗಗಳು.....!! 15.09.2021

ಜೀವನದಲ್ಲಿ ಹಾಸ್ಯ ಪ್ರಸಂಗಗಳಿಗೇನೂ ಕೊರತೆಯಿಲ್ಲ. ನೋಡುವ ಕಣ್ಣಿರಬೇಕು....ಆಸ್ವಾದಿಸುವ ಮನಸಿರಬೇಕು! ಬನ್ನಿ ಇಲ್ಲಿ ನಾನು ಎರಡು ಹಾಸ್ಯ ಪ್ರಸಂಗಗಳನ್ನು ಹಂಚಿಕೊಂಡಿದ್ದೇನೆ, ಆಲಿಸಿ....ಇಷ್ಟವಾದರೆ ಕಮೆಂಟ್ ಮಾಡಿ ಪ್ರೋತ್ಸಾಹಿಸಿ. # ಪರಮೇಶ್ವರಪ್ಪ ಕುದರಿ, ಚಿತ್ರದುರ್ಗ

ಪ್ರಶ್ನೆ ಪೆಟ್ಟಿಗೆ : ಒಂದು ಉತ್ತಮ ಪ್ರಯತ್ನ 14.09.2021

ಪ್ರತೀ ತರಗತಿಗೊಂದು ಪ್ರಶ್ನೆ ಪೆಟ್ಟಿಗೆಯನ್ನು ಅಳವಡಿಸುವುದರಿಂದ , ಮಕ್ಕಳಲ್ಲಿ ಪ್ರಶ್ನಿಸುವ ಮನೋಭಾವ ಬೆಳೆಸಬಹುದು.ನೀವೂ ಶಿಕ್ಷಕ/ ಶಿಕ್ಷಕಿಯಾಗಿದ್ದಲ್ಲಿ ಪ್ರಯತ್ನಿಸಿ ನೋಡಿ.ಅದರ ಆನಂದವೇ ಬೇರೆ!! # ಪರಮೇಶ್ವರಪ್ಪ ಕುದರಿ , ಚಿತ್ರದುರ್ಗ

ನನ್ನ ಐದು ಕನ್ನಡ ಶಾಯಿರಿಗಳು : ಕೇಳಿ 12.09.2021

ಕನ್ನಡದಲ್ಲಿ ಶಾಯಿರಿ ಬರೆವವರು ವಿರಳ. ನಾನು ಮೂವತ್ತು ವರುಷಗಳಿಂದ ಬರೆಯುತ್ತ ಬಂದಿದ್ದೇನೆ.ನಾಡಿನ ಪ್ರಮುಖ ಪತ್ರಿಕೆಗಳು ಪ್ರಕಟಿಸಿ ಪುರಸ್ಕರಿಸುತ್ತ ಬರುತ್ತಿವೆ. ಇಲ್ಲಿ ನನ್ನ ಐದು ಶಾಯಿರಿಗಳಿಗೆ ಧ್ವನಿ ರೂಪ ನೀಡಿದ್ದೇನೆ. ಕೇಳಿ......ವಾವಾ ಅನ್ನಿ!! ಹೇಗನ್ನಿಸಿದವು? ತಿಳಿಸಿ. # ಪರಮೇಶ್ವರಪ್ಪ ಕುದರಿ, ಚಿತ್ರದುರ್ಗ

ಪ್ರೀತಿಯ ಹೆಬ್ಬಾಗಿಲಿಗೆ ತಾಳ್ಮೆಯೇ ಹೊಸ್ತಿಲು !! 11.09.2021

ಇಂದು ನಮ್ಮೆಲ್ಲರದೂ ಅವಸರದ ಬದುಕು. ದುಡುಕು ಬಲು ಕೆಡುಕು ಅಪಘಾತಕ್ಕೆ ಅವಸರವೇ ಕಾರಣ. ಎಂಬ ಮಾತುಗಳಿಗೆ ಅರ್ಥವೇ ಇಲ್ಲದಂತಾಗಿದೆ. ಜೀವನದಲ್ಲಿ ತಾಳ್ಮೆಗೆ ತನ್ನದೇ ಆದ ಸ್ಥಾನ ಮಾನವಿದೆ. ತಾಳ್ಮೆಯ ಫಲ ಸಿಹಿಯಾಗೇ ಇರುತ್ತದೆ. # ಪರಮೇಶ್ವರಪ್ಪ ಕುದರಿ

ಓಲ್ಡ್ ಈಸ್ ಗೋಲ್ಡ್ : ಏನಂತೀರಿ? 09.09.2021

ಅಂದಿನ ದಿನಗಳು ಅದೆಷ್ಟು ಚನ್ನ! ಅಕ್ಕ - ಪಕ್ಕದ ಮನೆಯವರೆಲ್ಲ ಒಂದೇ ಮನೆಯವರ ಥರ ಇರುತಿದ್ದರು.ನೋವು - ನಲಿವಿನಲ್ಲಿ ಜೊತೆಯಾಗುತ್ತಿದ್ದರು. ಇಡೀ ವರ್ಷ ಮನೆಗೆ ಬೇಕಾದ ಶಾಂವಿಗೆ, ಹಪ್ಪಳ, ಸಂಡಿಗೆಯನ್ನು ಎಲ್ಲರೂ ಸೇರಿ ವಠಾರದಲ್ಲಿ ಮಾಡುತ್ತ, ಮಾತನಾಡುತ್ತ, ನಲಿಯುತ್ತಿದ್ದ ದಿನಗಳನ್ನು ಇಲ್ಲಿ ನೆನಪಿಸಿದ್ದೇನೆ. ಹೇಗನ್ನಿಸಿತು? ಹೇಳಿ. # ಪರಮೇಶ್ವರಪ್ಪ ಕುದರಿ , ಚಿತ್ರದುರ್ಗ

ಜಾನಪದ ಶ್ರೀ ಎಸ್.ಕೆ.ಕರೀಂಖಾನ್ . 08.09.2021

ಕನ್ನಡ ಚಿತ್ರರಂಗದಲ್ಲಿ ಗೀತ ರಚನೆಕಾರ,ಸಾಹಿತಿ,ನಾಟಕಕಾರ, ಜಾನಪದ ಸಾಹಿತಿಯಾಗಿ ಹೆಸರು ಮಾಡಿ, 99 ವರುಷಗಳ ಕಾಲ ಬಾಳಿದವರು ಶ್ರೀ ಎಸ್.ಕೆ.ಕರೀಂಖಾನ್.ಅವರೊಂದಿಗಿನ ಮಿನಿ ಸಂದರ್ಶನ ಇಲ್ಲಿದೆ. ಕೇಳಿ....ಅಭಿಪ್ರಾಯ ತಿಳಿಸಿ. # ಪರಮೇಶ್ವರಪ್ಪ ಕುದರಿ, ಚಿತ್ರದುರ್ಗ

ಬೆಂಗಳೂರಿನ ಮಿಮಿಕ್ರಿ ಹರಿಸಿಂಗ್...!! 07.09.2021

ಸಂಬಂಧಗಳೇ ಅರ್ಥ ಕಳೆದು ಕೊಳ್ಳುತ್ತಿರುವ ಈ ದಿನಗಳಲ್ಲಿ ಸ್ನೇಹದ ಮಾತೆಲ್ಲಿ! ಮುಖ ಪರಿಚಯವೇ ಇಲ್ಲದ ನನಗೆ ಬೆಂಗಳೂರಿನ ಮಿಮಿಕ್ರಿ ಹರಿಸಿಂಗ್ ತೋರಿದ ಸ್ನೇಹ - ಪ್ರೀತಿಯ ಪ್ರಸಂಗ ಇಲ್ಲಿದೆ. ಕೇಳಿ..... # ಪರಮೇಶ್ವರಪ್ಪ ಕುದರಿ , ಚಿತ್ರದುರ್ಗ

ನಟ ದೊಡ್ಡಣ್ಣ ಜೊತೆ ; ಮಾತು ಕತೆ 03.09.2021

ಕನ್ನಡ ಚಿತ್ರರಂಗದಲ್ಲಿ ಖಳ ನಟ, ಹಾಸ್ಯ ನಟ,ಪೋಷಕ ನಟರಾಗಿ ಪ್ರಸಿದ್ದರಾದವರು ದೊಡ್ಡಣ್ಣ. ಅವರೊಂದಿಗೆ ನನ್ನ ಮಾತು ಕತೆ. ಕೇಳಿ ಆನಂದಿಸಿ......ಅಭಿಪ್ರಾಯ ತಿಳಿಸಿ. # ಪರಮೇಶ್ವರಪ್ಪ ಕುದರಿ , ಚಿತ್ರದುರ್ಗ

" ಕಲಾ ಕೇಸರಿ " ಉದಯಕುಮಾರ 02.09.2021

ಕನ್ನಡ ಚಿತ್ರರಂಗ ಕಂಡ ಕುಮಾರತ್ರಯರಲ್ಲಿ ದಿ.ಉದಯಕುಮಾರ ಕೂಡ ಒಬ್ಬರು.ನಾಯಕ ನಟರಾಗಿ,ಖಳನಟರಾಗಿ ,ಪೋಷಕ ನಟರಾಗಿ ತಮ್ಮ ವಿಶಿಷ್ಟ ಶೈಲಿಯ ಅಭಿನಯ/ ವಾಕ್ ಚಾತುರ್ಯದಿಂದ ಎಲ್ಲರ ಮನಗೆದ್ದಿದ್ದರು. ಇಲ್ಲಿ ಅವರ ನೆನಪು ಮಾಡಲಾಗಿದೆ. # ಪರಮೇಶ್ವರಪ್ಪ ಕುದರಿ , ಚಿತ್ರದುರ್ಗ

CGK- ಒಂದು ಆತ್ಮೀಯ ನೆನಪು!! 01.09.2021

CGK ಎಂದೇ ಹೆಸರಾದ ಶ್ರೀ ಸಿ.ಜಿ.ಕೃಷ್ಣಸ್ವಾಮಿ ಒಬ್ಬ ರಂಗಕರ್ಮಿ. ಒಡಲಾಳ ದಂತಹ ನಾಟಕ ನಿರ್ದೇಶಿಸಿ, ನಟಿ ಉಮಾಶ್ರೀ ಯವರಿಗೆ ಒಂದು ನೆಲೆ ನೀಡಿದವರು. ಬಯಲು ಸೀಮೆಗೆ ನೀರು ತರಲು ಶಪಥ ಮಾಡಿದ್ದರು. ಆದರೆ..........!! # ಪರಮೇಶ್ವರಪ್ಪ ಕುದರಿ, ಚಿತ್ರದುರ್ಗ

ಬನ್ನಿ ಪತ್ರ ಬರೆಯೋಣ...! 31.08.2021

ಇಂದಿನ ಫೋನು, ಮೊಬೈಲು, ವಾಟ್ಸಪ್, ಫೇಸ್ ಬುಕ್ ಗಳಂತ ನೂತನ ಆವಿಷ್ಕಾರಗಳ ನಡುವೆ, ಪತ್ರಗಳ ಬರವಣಿಗೆ ಅಪರೂಪವಾಗುತ್ತಿದೆ. ಪತ್ರಗಳು ಹೃದಯದಿಂದ ಹೃದಯಕ್ಕೆ ಬಿಟ್ಟ ಹೂ ಬಾಣಗಳು.ಬನ್ನಿ ಪತ್ರ ಸಂಸ್ಕೃತಿಯನ್ನು ಉಳಿಸೋಣ. # ಪರಮೇಶ್ವರಪ್ಪ ಕುದರಿ, ಚಿತ್ರದುರ್ಗ

ಬನ್ನಿ ಓದೋಣ : ಹೊಸ ನಾಡಿನತ್ತ ಸಾಗೋಣ!! 30.08.2021

ಓದುಗಾರಿಕೆ ಇತ್ತೀಚಿಗೆ ಕಡಿಮೆಯಾಗತ್ತಿದೆ.ಇದು ದುರದೃಷ್ಟಕರ! ಓದುವುದರಿಂದ ಸಿಗುವ ಆನಂದವೇ ಬೇರೆ.ಬನ್ನಿ ಓದುಗಾರಿಕೆಯನ್ನು ರೂಢಿಸಿಕೊಳ್ಳೋಣ.ಹೊಸ ನಾಡಿನತ್ತ ನಡೆಯೋಣ. # ಪರಮೇಶ್ವರಪ್ಪ ಕುದರಿ , ಚಿತ್ರದುರ್ಗ

ನಟ ಸುರೇಶ್ ಹೆಬ್ಳೀಕರ್ ಜೊತೆ ಮಕ್ಕಳ ಮಾತು-ಕತೆ. 29.08.2021

ಶಾಲಾ ಮಕ್ಕಳೊಂದಿಗೆ ನಟ, ನಿರ್ದೇಶಕ ಶ್ರೀ ಸುರೇಶ್ ಹೆಬ್ಳೀಕರ್ ಮಾತು- ಕತೆ ನಡೆಸಿದ ಮರೆಯಲಾರದ ಕ್ಷಣಗಳು ಇಲ್ಲಿ ಧ್ವನಿರೂಪ ಪಡೆದಿವೆ. ಒಂದು ಅವಿಸ್ಮರಣೀಯ ಪ್ರಸಂಗ. ಕೇಳಿ ಆನಂದಿಸಿ. # ಪರಮೇಶ್ವರಪ್ಪ ಕುದರಿ

ನಮ್ಮತ್ತೆ..... ನನ್ನ ಹೆಂಡತಿ..!! 29.08.2021

ಕರೋನಾ ನೆಪ ಹೇಳಿಕೊಂಡು ಅಳಿಯನ ಮನೆಯಲ್ಲೇ ಝಂಡಾ ಊರಿದ್ದ ಅತ್ತೆ, ಊರಿಗೆ ಹೋಗುವಾಗ ಬಸ್ ನಲ್ಲಿ ಮಾಡಿಕೊಂಡ ಯಡವಟ್ಟು!! ಕೇಳಿ ನಕ್ಕು ಹಗುರಾಗಿ..............ಹೇಗಿತ್ತು ತಿಳಿಸಿ. # ಪರಮೇಶ್ವರಪ್ಪ ಕುದರಿ

ಚಿನ್ನಿ ಲವ್ ಯು 29.08.2021

ಪ್ರಾಣಿಗಳೇ ಗುಣದಲಿ ಮೇಲು ಮಾನವನದಕಿಂತ ಕೀಳು.........!!

Hallgasd a(z) ಎಂಥಾ ಮೋಜಿನ ಕುದರಿ.......!! By ಪರಮೇಶ್ವರಪ್ಪ ಕುದರಿ podcastot a Replaióban

Rádió és podcastok egy alkalmazásban - ingyen és regisztráció nélkül. Telepítsd még ma, és ne maradj le a premierről

Letöltés a Google Play-ről

A Replaio nem podcastkiadó; a műsorok nevei, borítóképei és hanganyagai a szerzőiket illetik, és nyilvános RSS-csatornákon keresztül terjednek.