Uday Gaonkar

Uday Gaonkar

Kids KN ↓ Epizody: 16

ಜಗತ್ತನ್ನು ಬೆರಗು ಕಣ್ಣಿನಿಂದ ನೋಡುತ್ತಾ ಪ್ರಶ್ನೆಗಳು, ಪ್ರಯೋಗ, ವೀಕ್ಷಣೆಯ ಮೂಲಕವೇ ವಿಜ್ಞಾನವನ್ನು ಕಲಿಯುವ ದಾರಿಯನ್ನು ಆಪ್ತವಾಗಿಸುವ ಪ್ರಯತ್ನವಿದು. ವಿಜ್ಞಾನದ ಪರಿಕಲ್ಪನೆಗಳನ್ನು ಅರ್ಥಮಾಡಿಕೊಳ್ಳಲು , ಹೇಗೆ, ಏಕೆ ಮುಂತಾದ ಪ್ರಶ್ನೆಗಳನ್ನು ಕಟ್ಟಿಕೊಳ್ಳಲು, ಅಂತಹ ಪ್ರಶ್ನೆಗಳನ್ನು ಕೇಳಲು ಅನುಕೂಲವಾಗುವಂತೆ ಶ್ರವ್ಯಾನುಭವವನ್ನು‌ ಒದಗಿಸುವ ಪುಟ್ಟ ಪುಟ್ಟ ಧ್ವನಿ ಮುದ್ರಿಕೆಗಳು ಇಲ್ಲಿವೆ.

Určitě navštivte web podcastu a podpořte jeho tvůrce: udayagaonkar.blogspot.com

Autor

Uday Gaonkar

Kategorie

Kids

Nejnovější epizoda

25. led 2024

Kde poslouchat?

Podcasty v aplikaci Replaio Radio Už brzy

Podcasty míří do aplikace už brzy. Nainstaluj si ji teď a jako první uvidíš úplně nový pohled na podcasty

Stáhnout z Google Play Nainstaluj zdarma Android téměř 10 mil. stažení · hodnocení 4,8 iOS už brzy

Epizody

ಗ್ರಂಥಾಲಯಕ್ಕೆ ಗೋಡೆಗಳಿಲ್ಲ 25.01.2024

ಗ್ರಂಥಾಲಯಕ್ಕೆ ಗೋಡೆಗಳಿಲ್ಲ.. ಇಲ್ಲ ಇಲ್ಲ ಇಲ್ಲವೇ ಇಲ್ಲ ಗ್ರಂಥಾಲಯಕ್ಕೆ ಗೋಡೆಗಳಿಲ್ಲ.. ಅಕಾಶಕ್ಕೆ ಅಂಚುಗಳಿಲ್ಲ ಕನಸು ಕಪಾಟಿಗೆ ಬಾಗಿಲೇ ಇಲ್ಲ ಓದುವೆ ನಾನು ಈ ಜಗವನ್ನು ತೆರೆಯುವೆ ಈಗಲೆ ಹೊಸ ಪುಟವನ್ನು ಹಾಳೆಯ ತುಂಬಾ ಹರಡಿದೆ ನೋಡು ನೀಲಿ ಬಾನು, ಹಸುರಿನ ಕಾನು ಇಲ್ಲ ಇಲ್ಲ ಇಲ್ಲವೇ ಇಲ್ಲ ಗ್ರಂಥಾಲಯಕ್ಕೆ ಗೋಡೆಗಳಿಲ್ಲ.. ಕಟ್ಟುವೆ ನಾನು ಪುಸ್ತಕ ಸೇತುವೆ, ಪ್ರೀತಿ ಪದಗಳ ಮನೆಯನ್ನು ಅಜ್ಜನು ಅಜ್ಜಿಯು ಅಮ್ಮ, ಅಪ್ಪನು ತೆರೆಯುತ ಹೋಗುವೆ ಬದುಕನ್ನು ಇಲ್ಲ ಇಲ್ಲ ಇಲ್ಲವೇ ಇಲ್ಲ ಗ್ರಂಥಾಲಯಕ್ಕೆ ಗೋ...

ಭಿನ್ನ ಸಾಮರ್ಥ್ಯದ ನನ್ನ ಮಗ 27.11.2023

ಕಲಿಕೆಯ ನ್ಯೂನತೆಯನ್ನು ಗುರುತಿಸಲಾಗದ ಕಾರಣಕ್ಕೆ ಅಂತ‌ ಮಕ್ಕಳು ಪೋಷಕರು ಮತ್ತು ಶಿಕ್ಷಕರರಿಂದ ಬೈಗುಳು ಪಡೆಯುತ್ತಾರೆ. ಕೆಲವು ಸಲ ಹೆತ್ತವರೂ ಮಕ್ಕಳಿಂದಾಗಿ ಶಿಕ್ಷಕರ ಕೋಪಕ್ಕೆ ತುತ್ತಾಗಬೇಕಾಗುತ್ತದೆ. ಜೈವಿಕ ಕಾರಣಕ್ಕಾಗಿ ನಿರ್ದಿಷ್ಟ ಕಲಿಕೆಯಲ್ಲಿ ತೊಂದರೆ ಅನುಭವಿಸುವ ಮಕ್ಕಳು ಸುಖಾಸುಮ್ಮನೆ ಅವಮಾನಕ್ಕೊಳಗಾಗುವುದು ತೀರಾ ಸಾಮಾನ್ಯ ಎಂಬಂತಾಗಿದೆ. ಇದು ಅಂತಹ ಮಗುವಿನ ತಾಯಿಯೊಬ್ಬರ ಮಾತು.

ಕನ್ನಡದೋಳ್ ಭಾವಿಸಿದ ಜನಪದಂ- ಹವ್ಯಕ ಕನ್ನಡ 23.10.2023

ಕನ್ನಡದ ನುಡಿಯೆಂಬುದು ಪಡಿಯಚ್ಚಿನಲ್ಲಿ ಒಡಮೂಡಿದ ಏಕಶಿಲೆಯಂತಹ ಭಾಷೆಯಲ್ಲ. ಹಾಗೆ ನೋಡಿದರೆ, ಕನ್ನಡವೆಂಬುದು ಒಂದೇ ಒಂದು ಭಾಷೆಯೂ ಅಲ್ಲ. ಈ ಮಾತನ್ನು ಎಲ್ಲ ಭಾಷೆಗಳಿಗೂ ಅನ್ವಯಿಸಬಹುದು. ಹಲವು ಆಡುರೂಪುಗಳು, ಹತ್ತಾರು ಭಾಷೆಗಳಿಂದ ಎರವಲು ಪಡೆದ ಪದಗಳು, ಹಲವು ಬಗೆಯ ಧ್ವನಿ ಸಂಚಾರಗಳು, ಭಿನ್ನ ದೇಹಭಾಷೆಗಳು ಹೀಗೆ, ಕನ್ನಡಕ್ಕೆ ದಕ್ಕಿರುವ ಬಹು ಆಯಾಮಗಳ ಚೆಂದವನ್ನು ಕನ್ನಡ ಮಾಸ ನವೆಂಬರಿನಲ್ಲಿ ಟೀಚರ್ ಪತ್ರಿಕೆ ಸಂಭ್ರಮಿಸುತ್ತದೆ. ಕವಿಯತ್ರಿ ಸುಧಾ ಆಡುಕಳ ಅವರ ಹವ್ಯಕ ಕನ್ನಡದ ಬರೆಹಕ್ಕೆ ಶಿಕ್ಷಕಿ,...

ಕನ್ನಡದೋಳ್ ಭಾವಿಸಿದ ಜನಪದಂ- ಹೊಸಪೇಟೆ ಕನ್ನಡ 23.10.2023

ಕನ್ನಡದ ನುಡಿಯೆಂಬುದು ಪಡಿಯಚ್ಚಿನಲ್ಲಿ ಒಡಮೂಡಿದ ಏಕಶಿಲೆಯಂತಹ ಭಾಷೆಯಲ್ಲ. ಹಾಗೆ ನೋಡಿದರೆ, ಕನ್ನಡವೆಂಬುದು ಒಂದೇ ಒಂದು ಭಾಷೆಯೂ ಅಲ್ಲ. ಈ ಮಾತನ್ನು ಎಲ್ಲ ಭಾಷೆಗಳಿಗೂ ಅನ್ವಯಿಸಬಹುದು. ಹಲವು ಆಡುರೂಪುಗಳು, ಹತ್ತಾರು ಭಾಷೆಗಳಿಂದ ಎರವಲು ಪಡೆದ ಪದಗಳು, ಹಲವು ಬಗೆಯ ಧ್ವನಿ ಸಂಚಾರಗಳು, ಭಿನ್ನ ದೇಹಭಾಷೆಗಳು ಹೀಗೆ, ಕನ್ನಡಕ್ಕೆ ದಕ್ಕಿರುವ ಬಹು ಆಯಾಮಗಳ ಚೆಂದವನ್ನು ಕನ್ನಡ ಮಾಸ ನವೆಂಬರಿನಲ್ಲಿ *ಟೀಚರ್ ಪತ್ರಿಕೆ* ಸಂಭ್ರಮಿಸುತ್ತದೆ. ಹಾವೇರಿಯವರಾದ ಸುಜಾತಾ ಗಿಡ್ಡಪ್ಪಗೌಡ್ರು ಕಲಿತದ್ದು ಧಾರವಾಡದಲ್...

ಕನ್ನಡದೋಳ್ ಭಾವಿಸಿದ ಜನಪದಂ-ಕುಂದಾಪ್ರ ಕನ್ನಡ 23.10.2023

ಕನ್ನಡದ ಬದುಕೆಂದರೆ ಒಂದು ಭಾಷಿಕ ಸಮುದಾಯವಷ್ಟೇ ಅಲ್ಲ. ಕನ್ನಡವೆಂಬುದು ಪಡಿಯಚ್ಚಿನಲ್ಲಿ ಒಡಮೂಡಿದ ಒಂದೇ ಒಂದು ಭಾಷೆಯಲ್ಲ. ಕನ್ನಡದ ಅನುಭವದಲ್ಲಿ ಹಲವು ಆಡುರೂಪಗಳಿವೆ. ಎಲ್ಲ ಆಡುರೂಪಗಳೂ ಮುಖ್ಯ. ಕೃಷ್ಣ ಡಿ.ಎಸ್ ಕುಂದಾಪ್ರ ಕನ್ನಡದ ತಮ್ಮದೇ ಬರೆಹವನ್ನು ವಾಚಿಸಿದ್ದಾರೆ. ಈ ಬರೆಹ ಹೇಗೆ ಮಕ್ಕಳ ಮೇಲೆ ಸಮಾಜವು ಮೇಲು- ಕೀಳೆಂಬ ಜಾತಿಪ್ರಜ್ಞೆಯನ್ನು ತುಂಬಿಸುತ್ತದೆ ಎಂಬುದನ್ನು ಪುಟ್ಟ ಪ್ರಸಂಗದ ಮೂಲಕ ಕಟ್ಟಿಕೊಡುತ್ತದೆ.

ಕನ್ನಡದೋಳ್ ಭಾವಿಸಿದ ಜನಪದಂ- ಮಂಗಳೂರು ಕನ್ನಡ 22.10.2023

ಕನ್ನಡದ ಬದುಕೆಂದರೆ ಒಂದು ಭಾಷಿಕ ಸಮುದಾಯವಷ್ಟೇ ಅಲ್ಲ. ಕನ್ನಡವೆಂಬುದು ಪಡಿಯಚ್ಚಿನಲ್ಲಿ ಒಡಮೂಡಿದ ಒಂದೇ ಒಂದು ಭಾಷೆಯಲ್ಲ. ಕನ್ನಡದ ಅನುಭವದಲ್ಲಿ ಹಲವು ಆಡುರೂಪಗಳಿವೆ. ಎಲ್ಲ ಆಡುರೂಪಗಳೂ ಮುಖ್ಯ. ಮಂಗಳೂರು ಕನ್ನಡದ ಪ್ರೇಮನಾಥ‌ ಮರ್ಣೆಯವರ ಬರೆಹವನ್ನು ಅಕ್ಷತಾ ಕುಡ್ಲ ಸೊಗಸಾಗಿ ವಾಚಿಸಿದ್ದಾರೆ.

ನೀಲಿ ಚುಕ್ಕಿಯ ನೆರಳು 05.04.2022

‘ಈ ಹೊತ್ತಿಗೆ ಕಾವ್ಯ ಪ್ರಶಸ್ತಿ’ಗೆ ಭಾಜನರಾಗಿರುವ ಶ್ರೀಮತಿ. ಮಧುರಾಣಿ ಹೆಚ್.ಎಸ್ ಅವರು ಮೂಲತಃ ದಾವಣಗೆರೆ ಸೀಮೆಯವರಾಗಿದ್ದು ಪ್ರಸ್ತುತ ಮೈಸೂರಿನಲ್ಲಿ ಇಂಗ್ಲಿಷ್ ಅಧ್ಯಾಪಕರಾಗಿ ಕೆಲಸ ಮಾಡುತ್ತಿದ್ದಾರೆ. ನಮ್ಮ ಕನ್ನಡದ ಹೆಮ್ಮೆಯ ಕವಿ ಡಾ. ಎಚ್. ಎಸ್ ಶಿವಪ್ರಕಾಶ್ ಅವರು ಈ ಹೊತ್ತಿಗೆಯ ಕಾವ್ಯ ಪ್ರಶಸ್ತಿಯ ತೀರ್ಪುರಗಾರರಾಗಿದ್ದರು. ಇದು ಈ ಹೊತ್ತಿಗೆಯ ಮೊದಲ ಕಾವ್ಯ ಪ್ರಶಸ್ತಿಯಾಗಿದೆ.

Makkaligagi Mahatma ಮಕ್ಕಳಿಗಾಗಿ ಮಹಾತ್ಮ 11.02.2022

ಮಕ್ಕಳು ಗಾಂಧಿ ಓದಿಗೆ ಹೊರಳುವಂತೆ ಪ್ರೇರೇಪಿಸುವ ಸಲುವಾಗಿ ರಚಿಸಿದ ಪುಸ್ತಕ- ಮಕ್ಕಳಿಗಾಗಿ ಮಹಾತ್ಮ. ಇದರಲ್ಲಿ 51 ಅಧ್ಯಾಯಗಳಿವೆ. ಅನೇಕ ವಿದ್ಯಾರ್ಥಿಗಳು ತಮ್ಮ ಧ್ವನಿಯಲ್ಲಿ‌ ಈ ಅಧ್ಯಾಯಗಳನ್ನು ಮರುಕಟ್ಟಿದ್ದಾರೆ. ಇಲ್ಲಿ ಅದನ್ನು ಕೇಳಬಹುದು..

ಶೇಖರಣೆಯಾಗುತ್ತಾ ಹೋದಂತೆ ಸಂಪತ್ತು .. 09.10.2021

ಹಣ ಹೇಗೆ ನಮ್ಮ ಸಂವೇದನೆಗಳ ಮೇಲೆ ದಾಳಿಯಿಡುತ್ತಾ ನಮ್ಮನ್ನು ಅಸೂಕ್ಷ್ಮಗೊಳಿಸುತ್ತಾ ಹೋಗುತ್ತದೆ ಎಂಬುದನ್ನು ಕವಿ ವಸಂತ ಬನ್ನಾಡಿ ಚೆಂದದಲ್ಲಿ ಕಟ್ಟಿದ್ದಾರೆ

ಗಾಂಧಿ ಓದು ಮಾಲಿಕೆ 26.09.2021

ಓದು: ರವೀಂದ್ರ ಕೋಡಿ

ಬುರ್ಕಾ- ರಮೇಶ ಗುಲ್ವಾಡಿ 18.07.2021

ಬುರ್ಕಾ ಎಂಬ ಕಪ್ಪು ಬಟ್ಟೆ ಗಂಡಾಳಿಕೆಯ ಮನಸ್ಥಿತಿಯನ್ನು ಬಯಲು ಮಾಡುವುದು ಮಾತ್ರವಲ್ಲ. ಅದು ರುಖಿಯಾಳ ಬಡತನವನ್ನೂ ಮುಚ್ಚುತ್ತದೆ. ನಮ್ಮ ದೃಷ್ತಿಗೆ ಅನೇಕ ಕೋನಗಳ ನೋಟವನ್ನು ಒದಗಿಸುವ ಇಂತಹ ಕತೆಗಳು ನಮ್ಮನ್ನು ಸೂಕ್ಷ್ಮಗೊಳಿಸುತ್ತಾ ಅದೇ ಕಾಲಕ್ಕೆ ಸ್ಪಷ್ಟಗೊಳಿಸುತ್ತಾ ಹೋಗುತ್ತವೆ.

ರಂಗಭೂಮಿ ದಿನದ ಸಂದೇಶ- ಹೆಲೆನ್ ಮಿರ್ರೆನ್ 27.03.2021

“This has been such a very difficult time for live performance and many artists, technicians, and craftsmen and women have struggled in a profession that is already fraught with insecurity. Maybe that always present insecurity has made them more able to survive this pandemic with wit and courage. Their imagination has already translated itself, in these new circumstances, into inventive, entertain...

ದಾಸವಾಳದ ಸ್ವಗತ 07.08.2020

ಹೂವೇ ತನ್ನ ಭಾಗಗಳನ್ನು ಪರಿಚಯಿಸುತ್ತಿರುವಂತೆ ನಿರೂಪಿಸಲಾದ ಧ್ವನಿಮುದ್ರಿಕೆ.

ನಾನು, ನಿಮ್ಮ ಹೃದಯ.. 02.08.2020

This episode gives lucid and vivid explanations about our heart and how it work. The heart is a muscular organ about the size of a fist, located just behind and slightly left of the breastbone. I'm sure you will enjoy listening the audio and know the human body in an unforgettable way.

ಎಲೆ: ನಮ್ಮೆಲ್ಲರ ಅಡುಗೆಮನೆ 02.08.2020

ಜೀವದ ರಚನೆ ಮತ್ತು ಕಾರ್ಯವಿಧಾನಗಳನ್ನು ಶ್ರವ್ಯಾನುಭವದ ಮೂಲಕ ಅರಿಯುವ ಪ್ರಯತ್ನವಿದು. ಪ್ರಥಮ ಪುರುಷ ನಿರೂಪಣೆಯ ಕೆಲವು ಮುದ್ರಿಕೆಗಳೂ ಸೇರಿದಂತೆ ಭಾಷೆಯ ವಿವಿಧ ಸಾಧ್ಯತೆಗಳ ಮೂಲಕ ಮಕ್ಕಳಿಗೆ ಆಪ್ತವಾಗುವ ಹಾಗೆ ಜೀವ ಜಗತ್ತನ್ನು ಪರಿಚಯಿಸುವ ಯೋಚನೆ ಇದೆ. ಎಲೆಯ ರಚನೆ ಮತ್ತು ಕಾರ್ಯವಿಧಾನದ ಕುರಿತು ಎಲೆಯೇ ಹೇಳಿಕೊಂಡಿದೆ ಇಲ್ಲಿ..

ಕಿವಿಗಳಿಗೊಂದು ಕೋರಿಕೆ 01.08.2020

ಬೆರಗಿನ ಕಣ್ಣುಗಳಿಂದ, ನಿತ್ಯದ ಅನುಭವಗಳಿಂದ, ಒಡನಾಟದಿಂದ; ಪ್ರಶ್ನೆಗಳು,ಪ್ರಯೋಗಗಳು, ನಿಖರಊಹೆಗಳನ್ನು ತರ್ಕದ ಮೂಸೆಯಲ್ಲಿ ಪರಿಕ್ಷಿಸಿ ನೋಡುವುದರಿಂದ ನಾವು ಜಗತ್ತನ್ನು ಅರಿಯುತ್ತೇವೆ. ಹೀಗೆ ಪಡೆದ ಅರಿವನ್ನು ಭಾಷೆಯ ಹಂದರದಲ್ಲಿ ಸಂರಚಿಸಿಕೊಳ್ಳುತ್ತೇವೆ. ಆಪ್ತವಾದ ಶ್ರವ್ಯಾನುಭವದ ಮೂಲಕ ಈ ಕೌತುಕಕ್ಕೆ ಕಿವಿಯರಳಿಸುವಂತೆ ಮಾಡುವುದಷ್ಟೇ ಈ ಧ್ವನಿಮುದ್ರಿಕೆಗಳ ಕೆಲಸ.. ಉಳಿದಿದ್ದು ನಿಮ್ಮ ಬುದ್ಢಿಗೆ..ನಿಮ್ಮ ಭಾವಕ್ಕೆ

Poslouchej podcast Uday Gaonkar v Replaio

Rádio a podcasty v jedné aplikaci - zdarma a bez registrace. Nainstaluj si ji ještě dnes a nepropásni premiéru

Stáhnout z Google Play

Replaio není vydavatelem podcastů; názvy pořadů, obálky a audio patří jejich autorům a šíří se přes veřejné RSS kanály