uk

Touch A Life Foundation

TALRadio Kannada

Business KN ↓ Епізодів: 83

TALRadio Kannada Powered by Touch A Life Foundation. Podcasts that provide your daily dose of inspiration with entertainment. welcome to our wonderland where you could find fairy tales, kindness deeds, passionate lives and everything else that's positive. LISTEN TO BELIEVE.

Обов'язково відвідайте сайт подкасту та підтримайте його автора: www.talradio.org

Автор

Touch A Life Foundation

Категорія

Business

Сайт подкасту

www.talradio.org

Останній епізод

9 лип 2026

Де слухати?

Подкасти в застосунку Replaio Radio Уже незабаром

Подкасти незабаром з'являться в застосунку. Встановіть уже зараз і першими побачте зовсім новий погляд на подкасти

Завантажити з Google Play Встановіть безкоштовно Android майже 10 млн завантажень · рейтинг 4,8 iOS незабаром

Епізоди

ಆಶೆಯ ಧ್ವನಿಗಳು: ಕ್ಯಾನ್ಸರ್ ವಿರುದ್ಧದ ಹೋರಾಟಕ್ಕೆ ಪ್ರೀತಿಯ ಆಸರೆ 18.02.2026

ಕ್ಯಾನ್ಸರ್ ಪೀಡಿತ ಮಕ್ಕಳಿಗೆ ಚಿಕಿತ್ಸೆಯ ಜೊತೆಗೆ ಪ್ರೀತಿಯ ಆಸರೆಯೂ ಅತಿ ಮುಖ್ಯ. ಅಂತರರಾಷ್ಟ್ರೀಯ ಮಕ್ಕಳ ಕ್ಯಾನ್ಸರ್ ದಿನದ ಈ ವಿಶೇಷ ಸಂವಾದದಲ್ಲಿ, TALRadio ಕನ್ನಡವು ‘ಆಕ್ಸೆಸ್ ಲೈಫ್ ಅಸಿಸ್ಟನ್ಸ್ ಫೌಂಡೇಶನ್’ನ ಮಾನವೀಯ ಪಯಣವನ್ನು ಹಂಚಿಕೊಳ್ಳುತ್ತಿದೆ. ಚಿಕಿತ್ಸೆಗಾಗಿ ದೂರದ ಊರುಗಳಿಂದ ಬರುವ ಬಡ ಕುಟುಂಬಗಳಿಗೆ ಈ ಸಂಸ್ಥೆ ಹೇಗೆ ಸುರಕ್ಷಿತ ವಸತಿ, ಪೌಷ್ಟಿಕ ಆಹಾರ ಮತ್ತು ‘ಭರವಸೆಯ ಗೂಡಾಗಿದೆ’ ಎಂಬುದನ್ನು ಇಲ್ಲಿ ವಿವರಿಸಲಾಗಿದೆ. ಈ ವಿಶೇಷ ಸಂವಾದದಲ್ಲಿ ಆಕ್ಸೆಸ್ ಲೈಫ್ ಸಂಸ್ಥೆಯ ಕವಿತಾ ಶ...

ಬೆಳವಣಿಗೆಯಲ್ಲಿ ಭಯದ ಪಾತ್ರ 13.02.2026

ಭಯ ಎನ್ನುವುದು ಅಡ್ಡಗೋಡೆಯಲ್ಲ, ಅದು ನಮ್ಮನ್ನು ಮುನ್ನಡೆಸುವ ದಿಕ್ಸೂಚಿ. ಡಾ. ಕಲ್ಪನಾ ಸಂಪತ್ ಅವರ "Keys to Social Entrepreneurship" ಪುಸ್ತಕದಿಂದ ಪ್ರೇರಿತವಾದ ಈ ಸರಣಿಯ ಎರಡನೇ ಸಂಚಿಕೆಯಲ್ಲಿ ನಾವು 'ಬೆಳವಣಿಗೆಯಲ್ಲಿ ಭಯದ ಪಾತ್ರ' ಕುರಿತು ಚರ್ಚಿಸಿದ್ದೇವೆ. ಈ ಸಂಚಿಕೆಯಲ್ಲಿ ನಿರೂಪಕಿ ಚೂಡಾಮಣಿ ಅವರು ಡಾ. ಕಲ್ಪನಾ ಸಂಪತ್ ಅವರೊಂದಿಗೆ ಸಂವಾದ ನಡೆಸಿದ್ದು, ನಮ್ಮ ನಿರ್ಧಾರಗಳ ಮೇಲೆ ಭಯ ಹೇಗೆ ಪ್ರಭಾವ ಬೀರುತ್ತದೆ ಮತ್ತು ಆ ಹಿಂಜರಿಕೆಯನ್ನು ಮೆಟ್ಟಿ ನಿಂತು ಧೈರ್ಯದ...

ಆಕಾಂಕ್ಷೆ ಕನಸು ಅಲ್ಲ. ಅದು ಒಂದು ಹೊಣೆಗಾರಿಕೆ. 05.02.2026

ಸಾಮಾಜಿಕ ಉದ್ಯಮಶೀಲತೆ ಕೇವಲ ಉದ್ಯಮವಲ್ಲ, ಅದೊಂದು ಸುಂದರ ಹೊಣೆಗಾರಿಕೆ. ವಿಷಯ ತಜ್ಞರಾದ ಡಾ. ಕಲ್ಪನಾ ಸಂಪತ್ ಅವರು ಬರೆದಿರುವ "Keys to Social Entrepreneurship" ಪುಸ್ತಕದಿಂದ ಪ್ರೇರಿತಗೊಂಡು TALRadio ಕನ್ನಡ ಈ ವಿಶೇಷ ಸರಣಿಯನ್ನು ನಿಮ್ಮ ಮುಂದೆ ತರುತ್ತಿದೆ. ಇದರ ಮೊದಲ ಸಂಚಿಕೆಯಲ್ಲಿ ನಾವು ಬದಲಾವಣೆಯ ಅಡಿಪಾಯವಾದ 'ಆಕಾಂಕ್ಷೆ' (Aspiration) ಕುರಿತು ಚರ್ಚಿಸಿದ್ದೇವೆ. ನಿರೂಪಕಿ ಚೂಡಾಮಣಿ ಅವರು ಡಾ. ಕಲ್ಪನಾ ಸಂಪತ್ ಅವರೊಂದಿಗೆ ನಡೆಸುವ ಈ ಸಂವಾದದಲ್ಲಿ, ಒಂದು...

ನೇತಾಜಿ ಸುಭಾಷ್ ಚಂದ್ರ ಬೋಸ್: ಭಾರತದ ಅಪ್ರತಿಮ ಸೇನಾನಿ 23.01.2026

"ನನಗೆ ರಕ್ತ ಕೊಡಿ, ನಾನು ನಿಮಗೆ ಸ್ವಾತಂತ್ರ್ಯ ಕೊಡುತ್ತೇನೆ!" – ಈ ಸಿಂಹಗರ್ಜನೆಯ ಮೂಲಕ ದೇಶಪ್ರೇಮದ ಕಿಚ್ಚು ಹಚ್ಚಿದ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಜನ್ಮದಿನ ಇಂದು. ಐಸಿಎಸ್ (ICS) ಹುದ್ದೆಯನ್ನು ತ್ಯಜಿಸಿ, 'ಆಜಾದ್ ಹಿಂದ್ ಫೌಜ್' ಕಟ್ಟಿ ಬ್ರಿಟಿಷರ ನಿದ್ದೆಗೆಡಿಸಿದ ಅವರ ಸಾಹಸಮಯ ಬದುಕು ಇಂದಿಗೂ ರೋಮಾಂಚನಕಾರಿ. ಮಹಿಳೆಯರಿಗಾಗಿ 'ಝಾಂಸಿ ರಾಣಿ ರೆಜಿಮೆಂಟ್' ಸ್ಥಾಪಿಸಿದ ಅವರ ದೂರದೃಷ್ಟಿ ಇಂದಿಗೂ ಮಾದರಿ. TALRadio ಕನ್ನಡದ ಈ ವಿಶೇಷ ಸಂಚಿಕೆಯಲ್ಲಿ, ಹೋಸ...

ವಿದ್ಯಾರ್ಥಿ ಕೇಂದ್ರಿತ ಕಲಿಕೆಯ ಬಲ 10.12.2025

ಶಿಕ್ಷಣದ ಭವಿಷ್ಯ ಹೇಗಿರಬಹುದು? ಮಕ್ಕಳು ಸ್ವತಃ ಕಲಿಕೆ, ನಾಯಕತ್ವ ಮತ್ತು ನಿರ್ಧಾರಗಳಲ್ಲಿ ಭಾಗಿಯಾದಾಗ, ತರಗತಿಯ ಗತಿ ಸಂಪೂರ್ಣ ಬದಲಾಗುತ್ತದೆ. TALRadio ಕನ್ನಡದ ಈ ವಿಶೇಷ ಸಂಚಿಕೆಯಲ್ಲಿ, Involve Learning Solutions Foundation‌ನ ಆಶಾ ಶಾನಭಾಗ ಅವರು ಸಂಸ್ಥೆಯ ಪ್ರಮುಖ ತತ್ವವಾದ Student Agency—ಅಂದರೆ ‘Dream–Design–Do’ ಸಂಸ್ಕೃತಿ—ವಿದ್ಯಾರ್ಥಿಗಳ ವಿದ್ಯಾಭ್ಯಾಸವನ್ನು ಹೇಗೆ ಬಲಪಡಿಸಿದೆ ಎಂಬುದನ್ನು ಹಂಚಿಕೊಳ್ಳುತ್ತಾರೆ. ಪೀರ್‌ ಟೀಚಿಂಗ್‌, ‘ಮಕ್ಕಳ ಗ್ರಾಮ ಸಭೆ’, ಗ್ರಾಮೀಣ ಜಿ...

ಪ್ರತಿಭಾನ್ವಿತೆ ಆಶ್ರಿತಾ: ಸಾಹಿತ್ಯ ಮತ್ತು ಕನಸಿನ ಪಯಣ 17.11.2025

ಸಾಹಿತ್ಯ ಲೋಕದ ಹೊಸ ಭರವಸೆ, ಬಾಲ್ಯದಿಂದಲೇ ಅಕ್ಷರಗಳೊಂದಿಗೆ ಒಡನಾಟ ಬೆಳೆಸಿಕೊಂಡ ಪ್ರತಿಭಾನ್ವಿತೆ ಆಶ್ರಿತಾ ಸೂರ್ಯಪ್ರಕಾಶ್ ಅವರ ವಿಶೇಷ ಸಂದರ್ಶನ. ಯುವ ಬರಹಗಾರ್ತಿ ಮತ್ತು ಬಾಲ ಸಾಧಕಿ ಆಶ್ರಿತಾ ಈಗ ೯ನೇ ತರಗತಿಯಲ್ಲಿ ಓದುತ್ತಿದ್ದು, ತಮ್ಮ ಸಾಹಿತ್ಯ ಪಯಣದ ಅನುಭವಗಳನ್ನು ಮತ್ತು ತಮ್ಮ ಮುಂದಿನ ಕನಸುಗಳನ್ನು TALRadio ಕನ್ನಡ ಕೇಳುಗರೊಂದಿಗೆ ಹಂಚಿಕೊಳ್ಳಲಿದ್ದಾರೆ. ಈ ಸಂದರ್ಶನವನ್ನು RJ ವಾಣಿ ಅವರು ನಡೆಸಿ ಕೊಟ್ಟಿದ್ದಾರೆ. ಈಗಲೇ ಕೇಳಿ ಮತ್ತು ಬಾಲ ಸಾಧಕಿಯ ಸಾಧನೆಯಿಂದ ಸ್ಫೂರ್ತಿ ಪಡೆಯಿರಿ. A...

ಸರ್ ಸಿ ವಿ ರಾಮನ್: ತಿಳಿ ನೀಲಿ ಬಾನು ಮತ್ತು ಸಾಗರದ ನಡುವಿನ ಕೊಂಡಿ 07.11.2025

ನವೆಂಬರ್ 7 - ಈ ದಿನದಂದು, ನಮ್ಮ ಭಾರತಕ್ಕೆ ಭೌತಶಾಸ್ತ್ರದಲ್ಲಿ ಮೊಟ್ಟಮೊದಲ ನೋಬಲ್ ಪ್ರಶಸ್ತಿಯನ್ನು ತಂದುಕೊಟ್ಟ ಮಹಾನ್ ವಿಜ್ಞಾನಿ, ಸರ್ ಸಿ.ವಿ. ರಾಮನ್ ಅವರ ಜನ್ಮದಿನ. ನಮ್ಮ ಸುತ್ತಲಿನ ಬೆಳಕು, ಬಣ್ಣಗಳ ಹಿಂದಿನ ರಹಸ್ಯಗಳ ಬಗ್ಗೆ ಎಂದಿಗೂ ಪ್ರಶ್ನಿಸದ ನಮಗೆ, ಕೌತುಕವೇ ಸತ್ಯದ ದಾರಿ ಎಂದು ತೋರಿಸಿಕೊಟ್ಟವರು ರಾಮನ್. ಅವರ ಪ್ರಯೋಗಗಳು ಕೇವಲ ಪ್ರಯೋಗಾಲಯಗಳಿಗೆ ಸೀಮಿತವಾಗಿರಲಿಲ್ಲ; ವೀಣೆಯ ನಾದ, ವಿಜ್ಞಾನದ ಆಳ ಹೀಗೆ ಎಲ್ಲವನ್ನೂ ವಿಶ್ಲೇಷಿಸಿ, 'ರಾಮನ್ ಎಫೆಕ್ಟ್' ನಂತಹ ಅದ್ಭುತ ಆವಿಷ್ಕ...

ಅಂಬಿಕಾತನಯದತ್ತರ ಕಾವ್ಯಧಾರೆ : ಪುಣ್ಯತಿಥಿ ಸ್ಮರಣೆ 26.10.2025

ಕನ್ನಡದ ಅಪ್ರತಿಮ ಕವಿ ದ.ರಾ. ಬೇಂದ್ರೆ ಅವರ ಪುಣ್ಯತಿಥಿಯಂದು ಅವರನ್ನು ಸ್ಮರಿಸೋಣ. ಧಾರವಾಡದಲ್ಲಿ 1896ರಲ್ಲಿ ಜನಿಸಿದ ದ. ರಾ. ಬೇಂದ್ರೆ, ತಮ್ಮ ಕಾವ್ಯದಲ್ಲಿ ಪ್ರಕೃತಿ, ಪ್ರೇಮ, ಆಧ್ಯಾತ್ಮಗಳನ್ನು ಅನಾವರಣಗೊಳಿಸಿದರು. 'ಗರಿ', 'ನಾಕುತಂತಿ' ಅವರ ಪ್ರಮುಖ ಕೃತಿಗಳು. 'ನಾಕುತಂತಿ'ಗೆ ಜ್ಞಾನಪೀಠ ಪ್ರಶಸ್ತಿ ಲಭಿಸಿತು. ಕನ್ನಡ ಸಾಹಿತ್ಯಕ್ಕೆ ಅವರ ಕೊಡುಗೆ ಅನನ್ಯ. 1981 ಅಕ್ಟೋಬರ್ 26 ರಂದು ನಿಧನರಾದರೂ, ಅವರ ಕಾವ್ಯ ಇಂದಿಗೂ ಅಮರ. ಅವರ ಪುಣ್ಯ ತಿಥಿಯ ನಿಮಿತ್ತ ಅವರ ಸ...

ಪು.ತಿ. ನರಸಿಂಹಚಾರ್ : ಸೌಂದರ್ಯ ಸೃಷ್ಟಿಯ ಕವಿ 23.10.2025

ಪು.ತಿ.ನರಸಿಂಹಾಚಾರ್ ಅವರ ಪುಣ್ಯತಿಥಿಯಂದು TALRadio ಕನ್ನಡ, ಅವರ ಬದುಕು-ಸಾಹಿತ್ಯ ಸ್ಮರಿಸಿದೆ. ಗೀತಮಯ ಕಾವ್ಯ, ಆಧ್ಯಾತ್ಮಿಕ ಚಿಂತನೆಗಳ ಮೂಲಕ 'ಹಂಸದಮಯಂತಿ', 'ಗೋಕುಲ ನಿರ್ಗಮನ'ದಂತಹ ಅಮೂಲ್ಯ ಕೃತಿಗಳನ್ನು ನೀಡಿದ ಪು.ತಿ.ನ. ಕನ್ನಡ ಸಂಸ್ಕೃತಿಯ ಹಿರಿಯ ಆರಾಧಕರು. ಸರಳ ಭಾಷೆಯಲ್ಲಿ ಆಳವಾದ ಚಿಂತನೆಗಳನ್ನು ನೀಡಿದ ಅವರಿಗೆ ಪಂಪ, ನಾಡೋಜ, ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಗಳು ಸಂದಿವೆ. ಅವರ ಸಾಹಿತ್ಯ ಸದಾ ಸ್ಫೂರ್ತಿಯ ಚಿಲುಮೆ. ಅವರ ಪುಣ್ಯತಿಥಿ ನಿಮಿತ್ತ TALRadio ಕನ...

ಅನಿಲ್ ಕುಂಬ್ಳೆ ಜನ್ಮದಿನ: ಸ್ಪಿನ್ ಮಾಂತ್ರಿಕನ ಸ್ಫೂರ್ತಿದಾಯಕ ಪಯಣ 17.10.2025

ಇಂದು ನಾವು ಭಾರತದ ಹೆಮ್ಮೆಯ 'ಜಂಬೋ' ಅನಿಲ್ ಕುಂಬ್ಳೆ ಅವರ ಜನ್ಮದಿನವನ್ನು ಆಚರಿಸುತ್ತಿದ್ದೇವೆ. 1970ರ ಅಕ್ಟೋಬರ್ 17ರಂದು ಜನಿಸಿದ ಇವರು, ದೃಢ ಸಂಕಲ್ಪ ಮತ್ತು ಕಠಿಣ ಪರಿಶ್ರಮದ ಪ್ರತೀಕ. ಟೆಸ್ಟ್ ಕ್ರಿಕೆಟ್‌ನಲ್ಲಿ 619 ವಿಕೆಟ್‌ಗಳು ಮತ್ತು ಏಕದಿನದಲ್ಲಿ 337 ವಿಕೆಟ್‌ಗಳೊಂದಿಗೆ ಭಾರತದ ಅಗ್ರ ಬೌಲರ್‌ಗಳಲ್ಲಿ ಒಬ್ಬರು. 1999ರಲ್ಲಿ ಪಾಕಿಸ್ತಾನ ವಿರುದ್ಧ ಒಂದೇ ಇನ್ನಿಂಗ್ಸ್‌ನಲ್ಲಿ 10 ವಿಕೆಟ್ ಪಡೆದಿದ್ದು ಅವರ ವೃತ್ತಿಜೀವನದ ಮೈಲಿಗಲ್ಲು. ಕುಂಬ್ಳೆ ಕೇವಲ ಸ್ಪಿನ್ ಮಾಂತ್ರಿಕರಲ್ಲ, ಯ...

ಮಿಸೈಲ್ ಮ್ಯಾನ್‌ನಿಂದ ಜನರ ರಾಷ್ಟ್ರಪತಿಯವರೆಗೆ: ಅಬ್ದುಲ್ ಕಲಾಂ ಸ್ಮರಣೆ 15.10.2025

ಇಂದು ಅಕ್ಟೋಬರ್ 15, ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ಅವರ ಜನ್ಮದಿನ. ರಾಮೇಶ್ವರಂನಿಂದ ರಾಷ್ಟ್ರಪತಿ ಭವನದವರೆಗಿನ ಅವರ ಪಯಣ ಅದ್ಭುತ. 'ಮಿಸೈಲ್ ಮ್ಯಾನ್' ಎಂದೇ ಖ್ಯಾತರಾದ ಇವರು, ಭಾರತದ ಕ್ಷಿಪಣಿ ಕಾರ್ಯಕ್ರಮಕ್ಕೆ ಅಪಾರ ಕೊಡುಗೆ ನೀಡಿದರು. 'ಜನರ ರಾಷ್ಟ್ರಪತಿ'ಯಾಗಿ ಯುವಕರಿಗೆ ದೊಡ್ಡ ಕನಸು ಕಾಣಲು ಪ್ರೇರೇಪಿಸಿದರು. ಅವರ ಆದರ್ಶಗಳು ಸದಾ ನಮಗೆ ದಾರಿದೀಪ. ಅವರ ಜನ್ಮ ವಾರ್ಷಿಕೋತ್ಸವದ ಸವಿನೆನಪಿನಲ್ಲಿ TALRadio ಕನ್ನಡ ವಿಶೇಷ Podcast ಒಂದನ್ನು ಪ್ರಸ್ತುತಪಡಿಸಲಿದೆ. RJ ಗು...

ಕಡಲ ತೀರದಿಂದ ಜ್ಞಾನ ಸಾಗರಕ್ಕೆ: ಕಾರಂತರ ಅದ್ಭುತ ಸಾಹಿತ್ಯ ಲೋಕ 10.10.2025

ಡಾ. ಕೋಟ ಶಿವರಾಮ ಕಾರಂತರ ಜನ್ಮದಿನದಂದು, ಕನ್ನಡದ ಈ ಮಹಾನ್ ಸಾಹಿತಿ ಮತ್ತು ಜ್ಞಾನಪೀಠ ಪುರಸ್ಕೃತರನ್ನು ಸ್ಮರಿಸೋಣ. ಕಾದಂಬರಿಕಾರ, ನಾಟಕಕಾರ, ಯಕ್ಷಗಾನ ಕಲಾವಿದ, ವಿಜ್ಞಾನ ಲೇಖಕ, ಪರಿಸರವಾದಿ, ಶಿಕ್ಷಣ ತಜ್ಞರಾಗಿ ಅವರದ್ದು ಬಹುಮುಖ ಪ್ರತಿಭೆ. 'ಕಡಲ ತೀರದ ಭಾರ್ಗವ' ಎಂದೇ ಖ್ಯಾತರಾದ ಕಾರಂತರು, ತಮ್ಮ 'ಮೂಕಜ್ಜಿಯ ಕನಸುಗಳು' ಕಾದಂಬರಿಗೆ ಜ್ಞಾನಪೀಠ ಪಡೆದರು. ಅವರ ಬದುಕು-ಬರಹಗಳು ಸಮಾಜಕ್ಕೆ ಸದಾ ದಾರಿದೀಪ. ಅವರ ಜನ್ಮ ವಾರ್ಷಿಕೋತ್ಸವದ ಸವಿನೆನಪಿನಲ್ಲಿ TALRadio ಕನ್ನಡ ವಿಶ...

ಎಸ್.ಪಿ. ಬಾಲಸುಬ್ರಮಣ್ಯಂ: ಸಂಗೀತ ಲೋಕದ ಅಚ್ಚಳಿಯದ ಧ್ವನಿ 25.09.2025

ಸೆಪ್ಟೆಂಬರ್ 25, ಗಾನಗಂಧರ್ವ ಎಸ್.ಪಿ.ಬಾಲಸುಬ್ರಹ್ಮಣ್ಯಂ ಅವರ ಐದನೇ ಪುಣ್ಯಸ್ಮರಣೆ. ಸಂಗೀತ ಲೋಕಕ್ಕೆ ಅವರ ಕೊಡುಗೆ ಅಪಾರ. ಔಪಚಾರಿಕ ತರಬೇತಿ ಇಲ್ಲದೆ, 16 ಭಾಷೆಗಳಲ್ಲಿ 40,000ಕ್ಕೂ ಹೆಚ್ಚು ಹಾಡುಗಳನ್ನು ಹಾಡಿ ಗಿನ್ನಿಸ್ ದಾಖಲೆ ನಿರ್ಮಿಸಿದರು. 'ಎದೆ ತುಂಬಿ ಹಾಡುವೆನು' ಕಾರ್ಯಕ್ರಮದ ಮೂಲಕ ಕನ್ನಡಿಗರ ಮನೆ ಮಗನಾದ ಎಸ್.ಪಿ.ಬಿ ಸರಳತೆ, ವಿನಮ್ರತೆಗೆ ಹೆಸರಾಗಿದ್ದರು. ಅವರ ಸಂಗೀತ, ಜೀವನ ನಮಗೆ ಸದಾ ಸ್ಫೂರ್ತಿ. ಈ ಮಹಾನ್ ಗಾಯಕನಿಗೆ ನಮ್ಮ ಪ್ರೀತಿಯ ಶ್ರದ್ಧಾಂಜಲಿ. ಅವರ ಈ ಪುಣ್ಯಸ್ಮರಣ...

ಕಲೆ ಮತ್ತು ಮನೋವಿಜ್ಞಾನದ ಸಮಾಗಮ : ಮೇಧಾ ದೀಕ್ಷಿತ್ ಅವರ ನೃತ್ಯ ಪಯಣ 23.09.2025

ನೃತ್ಯವು ಕೇವಲ ಒಂದು ಕಲೆಯಾಗಿರದೆ, ಮನಸ್ಸಿನ ಆಳವನ್ನು ತಲುಪುವ ಮತ್ತು ಪ್ರಶಾಂತತೆಯನ್ನು ನೀಡುವ ಒಂದು ಅದ್ಭುತ ಸಾಧನವಾಗಿದೆ. ನೃತ್ಯದ ಅಂತರಾಳದ ಶಕ್ತಿಯನ್ನ ವೃದ್ಧಿಸಿ ಸಕಾರಾತ್ಮಕ ಪರಿಣಾಮಗಳನ್ನು ನೀಡುವಲ್ಲಿ ಮಹತ್ವದ ಪಾತ್ರವಹಿಸುತ್ತದೆ. ಮೇಧಾ ದೀಕ್ಷಿತ್ ಎಂಬ ಅಪರೂಪದ ಕಲಾವಿದೆ ನೃತ್ಯದ ತಾಳಗಳ ಮೂಲಕ ಮನಸ್ಸಿನ ಮೇಳವನ್ನು ಶಾಂತಗೊಳಿಸುವ ವಿನೂತನ ಪ್ರಯತ್ನದಲ್ಲಿ ತೊಡಗಿಕೊಂಡಿದ್ದಾರೆ. TALRadio ಕನ್ನಡ ಪ್ರಸ್ತುತಪಡಿಸುತ್ತಿರುವ ವಿಶೇಷ ಸಂದರ್ಶನದಲ್ಲಿ, ಭರತನಾಟ್ಯ ಕಲಾವಿದೆ, ನೃತ್ಯ ಸಂಯೋಜಕಿ...

ಸಾಹಸ ಸಿಂಹ ಡಾ. ವಿಷ್ಣುವರ್ಧನ್: ಪರದೆಗೂ ಮೀರಿದ ವ್ಯಕ್ತಿತ್ವ 18.09.2025

ಡಾ. ವಿಷ್ಣುವರ್ಧನ್, ಕನ್ನಡದ "ಸಾಹಸ ಸಿಂಹ", "ಅಭಿನವ ಭಾರ್ಗವ", ಅಭಿಮಾನಿಗಳ ಹೃದಯದ ದಾದಾ. 1950ರಲ್ಲಿ ಮೈಸೂರಿನಲ್ಲಿ ಜನಿಸಿ, 'ನಾಗರಹಾವು' ಮೂಲಕ ಸಿನಿಪಯಣ ಆರಂಭಿಸಿ 200ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿ ಅಚ್ಚಳಿಯದ ಗುರುತು ಬಿಟ್ಟವರು. ಅವರ ನಟನೆ, ವಿನಯ, ಅಭಿಮಾನಿಗಳ ಮೇಲಿನ ಪ್ರೀತಿ ಎಲ್ಲವೂ ವಿಶೇಷ. ರಾಷ್ಟ್ರೀಯ, ರಾಜ್ಯ, ಫಿಲ್ಮ್‌ಫೇರ್ ಸೇರಿ ಅನೇಕ ಪ್ರಶಸ್ತಿಗಳ ಜೊತೆ "ಕರ್ನಾಟಕ ರತ್ನ" ಗೌರವ ಪಡೆದವರು. ತೆರೆ ಮೇಲೆ ಗಾಂಭೀರ್ಯ, ತೆರೆ ಹಿಂ...

ಮಿತ್ರ ಜ್ಯೋತಿ: ವಿಕಲಚೇತನರ ಸಬಲೀಕರಣಕ್ಕೆ ತಂತ್ರಜ್ಞಾನದ ಸೇತುವೆ 16.09.2025

ತಂತ್ರಜ್ಞಾನದ ಸದುಪಯೋಗದ ಮೂಲಕ ವಿಕಲಚೇತನರ ಜೀವನದಲ್ಲಿ ಆಶಾಕಿರಣ ಮೂಡಿಸುವ 'ಮಿತ್ರ ಜ್ಯೋತಿ' ಸಂಸ್ಥೆ. ಸಮಾನ ಮನಸ್ಕರ ಜೊತೆಗೂಡಿ, ಅವರಲ್ಲಿ ಅಡಗಿರುವ ಪ್ರತಿಭೆಯನ್ನು ಅನಾವರಣಗೊಳಿಸಿ, ಸಮಾಜದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಲು ಅಗತ್ಯ ತರಬೇತಿ ಹಾಗೂ ನೆರವು ನೀಡುವ ಪ್ರೇರಕ ಶಕ್ತಿಯ ಮೂಲಕ ಪ್ರತಿಯೊಬ್ಬರಿಗೂ ಉಜ್ವಲ ಭವಿಷ್ಯವನ್ನು ಕಲ್ಪಿಸಲು ಮಹತ್ವಾಕಾಂಕ್ಷೆಯಿಂದ ಕಾರ್ಯನಿರ್ವಹಿಸುತ್ತಿರುವ ಸಂಸ್ಥೆ. TALRadio ಕನ್ನಡ ಪ್ರಸ್ತುತಪಡಿಸುತ್ತಿರುವ ವಿಶೇಷ ಸಂದರ್ಶನದಲ್ಲಿ, ಬೆಂಗಳೂರಿನ ಮಿತ್...

ತಮಹರ್: ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಶ್ರಮಿಸುವ ವಿಶೇಷ ಸಂಸ್ಥೆ 10.09.2025

ವಿಜ್ಞಾನ-ಆಧಾರಿತ ಒಳನೋಟಗಳೊಂದಿಗೆ ಮಕ್ಕಳ ಸುಭದ್ರ ಭವಿಷ್ಯವನ್ನು ರೂಪಿಸುವ ತಮಹರ್, ವಿಶೇಷ ಮಕ್ಕಳ ಸಮಗ್ರ ಅಭಿವೃದ್ಧಿಗೆ ಸಮರ್ಪಿತವಾದ ಸಂಸ್ಥೆಯಾಗಿದೆ. ಮಕ್ಕಳ ವೈಯಕ್ತಿಕ ಅಗತ್ಯಗಳಿಗೆ ಅನುಗುಣವಾಗಿ ವಿನ್ಯಾಸಗೊಳಿಸಲಾದ ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸುತ್ತ ಬಂದಿದೆ. ಪ್ರತಿಯೊಬ್ಬ ಮಗುವಿನ ಸಾಮರ್ಥ್ಯವನ್ನು ಪೋಷಿಸುತ್ತ ಸಮಗ್ರ ಆರೈಕೆಯನ್ನು ಒದಗಿಸುವ ಮೂಲಕ, ವಿಶೇಷ ಮಕ್ಕಳ ಸಬಲೀಕರಣ ಮತ್ತು ಉಜ್ವಲ ಭವಿಷ್ಯಕ್ಕಾಗಿ ಶ್ರಮಿಸುತ್ತದೆ. TALRadio ಕನ್ನಡ ಪ್ರಸ್ತುತಪಡಿಸುತ್ತಿರುವ ವಿಶೇಷ ಸಂದರ್ಶನದ...

ತೇಜಸ್ವಿ ಎಂಬ ಕನ್ನಡ ಸಾಹಿತ್ಯದ ವಿಸ್ಮಯ ಲೋಕ 09.09.2025

ಕನ್ನಡ ಸಾರಸ್ವತ ಲೋಕದ ಮೇರು ಪ್ರತಿಭೆ, ಅಕ್ಷರಗಳ ಮಾಂತ್ರಿಕ ಕೆ.ಪಿ. ಪೂರ್ಣಚಂದ್ರ ತೇಜಸ್ವಿ ಅವರ ಜನ್ಮ ವಾರ್ಷಿಕೋತ್ಸವ. ಚಿದಂಬರ ರಹಸ್ಯ, ಕರ್ವಾಲೋ, ಅಬಚೂರಿನ ಪೋಸ್ಟ್ ಆಫೀಸ್ ಮುಂತಾದ ಕೃತಿಗಳ ಮೂಲಕ ಅವರು ಕನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸಿದರು. ಬರಹಗಾರರಾಗಿ, ಚಿಂತಕರಾಗಿ, ಪರಿಸರವಾದಿಯಾಗಿ, ಕೃಷಿಕರಾಗಿ, ಛಾಯಾಗ್ರಾಹಕರಾಗಿ ಅವರ ಕೊಡುಗೆ ಅಪಾರ. ಮಲೆನಾಡಿನ ಸೊಗಡನ್ನು, ಪ್ರಕೃತಿಯ ಅಂತರಂಗವನ್ನು ತಮ್ಮ ಸರಳ, ನೇರ ಶೈಲಿಯಲ್ಲಿ ಪರಿಚಯಿಸಿದ ತೇಜಸ್ವಿ, ಕನ್ನಡ ಸಾಹಿತ್ಯಕ್ಕೆ ಹೊಸ ದೃಷ್ಟಿಕೋನ...

ಬದುಕು ಬೆಳಗುವ ಶಿಕ್ಷಕರಿಗೊಂದು ನಮನ 08.09.2025

ಶಿಕ್ಷಕರು ನಮ್ಮ ಬದುಕಿನ ದಾರಿದೀಪ. ಅವರು ಜ್ಞಾನದ ಜೊತೆ ಬದುಕಿನ ಮೌಲ್ಯಗಳನ್ನು ಕಲಿಸಿ, ಸವಾಲುಗಳನ್ನು ಎದುರಿಸುವ ಶಕ್ತಿಯನ್ನು ತುಂಬುತ್ತಾರೆ. ನಮ್ಮೆಲ್ಲರ ಭವಿಷ್ಯವನ್ನು ರೂಪಿಸುವ ಶಿಕ್ಷಕರಿಗೆ ಅವರ ನಿಸ್ವಾರ್ಥ ಸೇವೆ, ತಾಳ್ಮೆ ಮತ್ತು ಪ್ರೀತಿಗೆ ನಾವು ಕೃತಜ್ಞತೆ ಸಲ್ಲಿಸಬೇಕು. ನಮ್ಮ ಭವಿಷ್ಯದ ರೂವಾರಿಗಳಾದ ಶಿಕ್ಷಕರ ತ್ಯಾಗ, ಪ್ರೀತಿ ಮತ್ತು ಸಮರ್ಪಣಾ ಮನೋಭಾವಕ್ಕೆ ನಾವು ಸದಾ ಚಿರಋಣಿ. TALRadio ಕನ್ನಡ ಪ್ರಸ್ತುತಪಡಿಸುತ್ತಿರುವ ವಿಶೇಷ ಸಂದರ್ಶನದಲ್ಲಿ, ಬೆಂಗಳೂರಿನ ಬ್ರೈಟ್ ಕಿಡ್ಜ್ ಪ್ರಿಸ...

ಹಸಿವು ಮುಕ್ತ ಬೆಂಗಳೂರಿನತ್ತ ಮಹತ್ವದ ಹೆಜ್ಜೆ 08.09.2025

ಬೆಂಗಳೂರಿನಂತಹ ಮಹಾನಗರ, ಒಂದು ಕಡೆ ಅಭಿವೃದ್ಧಿಯತ್ತ ದಾಪುಗಾಲಿಡುತ್ತಿದ್ದರೆ, ಇನ್ನೊಂದು ಕಡೆ ಒಂದು ಹೊತ್ತಿನ ಊಟಕ್ಕೂ ಪರದಾಡುವ ಅಸಂಖ್ಯಾತ ಜನರಿದ್ದಾರೆ. ಈ ಗಂಭೀರ ಸಮಸ್ಯೆಯನ್ನು ಪರಿಹರಿಸಲು ಶ್ರಮಿಸುತ್ತಿರುವ ವಿಶಿಷ್ಟವಾದ ಸಂಸ್ಥೆಯೇ 'ಬೆಂಗಳೂರು ಫುಡ್ ಬ್ಯಾಂಕ್'. ಹಸಿವನ್ನು ನೀಗಿಸುವ ಮುಖ್ಯ ಉದ್ದೇಶದೊಂದಿಗೆ ಕಾರ್ಯನಿರ್ವಹಿಸುತ್ತಿರುವ ಈ ಸಂಸ್ಥೆ, ಹೆಚ್ಚುವರಿ ಆಹಾರವನ್ನು ಸಂಗ್ರಹಿಸಿ, ಅದನ್ನು ಸುರಕ್ಷಿತವಾಗಿ ಸಂರಕ್ಷಿಸಿ, ಅಗತ್ಯವಿರುವ ವ್ಯಕ್ತಿಗಳಿಗೆ, ಸಮುದಾಯ ಮತ್ತು ಆಶ್ರಮಗ...

ದೃಷ್ಟಿಹೀನರ ಸರ್ವತೋಮುಖ ಬೆಳವಣಿಗೆ: ಕ್ರೀಡೆ ಮತ್ತು ಕಲಿಕೆಯ ಪಾತ್ರ 28.08.2025

ದೃಷ್ಟಿ ಸವಾಲುಗಳನ್ನು ಎದುರಿಸುತ್ತಿರುವವರಿಗೆ ಕ್ರೀಡೆ ಮತ್ತು ಕಲಿಕೆ ಎರಡೂ ಮಹತ್ವವಾದದ್ದು. ಕ್ರೀಡೆಯು ದೈಹಿಕ ಸಾಮರ್ಥ್ಯ, ಸಮನ್ವಯತೆ, ಮತ್ತು ಆತ್ಮವಿಶ್ವಾಸವನ್ನು ಹೆಚ್ಚಿಸುತ್ತ ಸಾಮಾಜಿಕ ಕೌಶಲ್ಯಗಳನ್ನು ಬೆಳೆಸಿದರೆ, ಕಲಿಕೆಯು ಜ್ಞಾನ, ಅರಿವು ಮತ್ತು ಸೃಜನಶೀಲತೆಯನ್ನು ವೃದ್ಧಿಸುತ್ತದೆ. ವಿಕಲಚೇತನರಿಗೆ ಸವಾಲುಗಳನ್ನು ಎದುರಿಸಲು ಹೊಸ ಮಾರ್ಗಗಳನ್ನು ನೀಡುತ್ತ, ವ್ಯಕ್ತಿತ್ವ ವಿಕಸನ ಮತ್ತು ಸ್ವಾವಲಂಬಿ ಜೀವನಕ್ಕೆ ದಾರಿಮಾಡಿಕೊಡುವಲ್ಲಿ ಸಮರ್ಥನಂ ಸಂಸ್ಥೆ ವಿಶೇಷವಾಗಿ ಶ್ರಮಿಸುತ್ತಿದೆ. TALRa...

ಸ್ವಾತಂತ್ರ್ಯೋತ್ಸವದ ಅರ್ಥಪೂರ್ಣ ಆಚರಣೆ 25.08.2025

"ಸ್ವಾತಂತ್ರ್ಯೋತ್ಸವ: ಕೇವಲ ಆಚರಣೆಯಲ್ಲ, ಒಂದು ಜವಾಬ್ದಾರಿ" ಸ್ವಾತಂತ್ರ್ಯ ದಿನಾಚರಣೆ ಎಂದರೆ ಕೇವಲ ಧ್ವಜಾರೋಹಣ, ಸಿಹಿ ಹಂಚುವಿಕೆ ಅಥವಾ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಸೀಮಿತವಾದ ಆಚರಣೆಯಲ್ಲ. ಇದು ನಮ್ಮ ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದ ಅಸಂಖ್ಯಾತ ಸ್ವಾತಂತ್ರ್ಯ ಹೋರಾಟಗಾರರು ಮತ್ತು ಗಡಿಯಲ್ಲಿ ದೇಶ ಕಾಯುವ ಸೈನಿಕರ ಬಲಿದಾನವನ್ನು ಸ್ಮರಿಸುವ ಪವಿತ್ರ ದಿನ. TALRadio ಕನ್ನಡ ಪ್ರಸ್ತುತಪಡಿಸುವ ಈ ವಿಶೇಷ ಸಂದರ್ಶನದಲ್ಲಿ ಅತಿಥಿಯಾಗಿ ಭಾರತೀಯ ವಾಯುಪಡೆಯ ನಿವೃತ್ತ ವಿಮಾನಯಾನ ಹವಾಮ...

ಹಳೆ ಶೂ ಹೊಸ ಕನಸು 30.07.2025

ಕಸದ ಬುಟ್ಟಿ ಸೇರಬೇಕಿದ್ದ ನಿಮ್ಮ ಹಳೆಯ ಶೂಗಳು, ಇನ್ನೊಂದು ಮಗುವಿನ ಹೊಸ ಬದುಕಿನ ಹೆಜ್ಜೆಯಾಗಬಹುದು. ಇದೇ ರೀತಿ 'ಗ್ರೀನ್‌ಸೋಲ್' ಎಂಬ ಸಂಸ್ಥೆಯು ಹಳೆಯ ಪಾದರಕ್ಷೆಗಳಿಗೆ ಮರುಜೀವ ನೀಡಿ, ಲಕ್ಷಾಂತರ ಬಡಮಕ್ಕಳ ಕಾಲಿಗೆ ರಕ್ಷಣೆ ನೀಡುತ್ತಿದೆ. ನಿಮ್ಮ ಒಂದು ಸಣ್ಣ ದಾನ, ಅವರ ಪಾಲಿಗೆ ಸುರಕ್ಷತೆ, ಆರೋಗ್ಯ ಮತ್ತು ಗೌರವದ ಕಾಣಿಕೆಯಾಗಬಲ್ಲದು. ಈ ಮಹತ್ಕಾರ್ಯದಲ್ಲಿ ನೀವು ಭಾಗಿಯಾಗಿ. The old shoes you might discard could be the first step on a new path for a child. This...

ಕಲಿಯುವ ಮನಸ್ಸುಗಳಿಗೆ ಅಕ್ಷರದ ಆಸರೆ 30.07.2025

ಭಾರತದಲ್ಲಿ ಬಡತನವನ್ನು ಹೋಗಲಾಡಿಸಲು ಕಾರ್ಯ ನಿರ್ವಹಿಸುತ್ತಿರುವ ಪ್ರೌಡ್ ಇಂಡಿಯನ್ ಸಂಸ್ಥೆಯು ಜನರು ಸ್ವಾವಲಂಬಿಗಳಾಗಿ ತಮ್ಮ ಕಾಲ ಮೇಲೆ ತಾವು ನಿಲ್ಲುವಂತೆ ಮಾಡುವುದೇ ಇದರ ಮುಖ್ಯ ಗುರಿಯಾಗಿದೆ. ಇದಕ್ಕಾಗಿ, ಅಗತ್ಯವಿರುವವರಿಗೆ ವ್ಯಾಪಾರ ಮಾಡಲು ಬೇಕಾದ ತರಬೇತಿ, ಸಹಾಯ ಮತ್ತು ಅವಕಾಶಗಳನ್ನು ಒದಗಿಸಿ, ಅವರು ಆರ್ಥಿಕವಾಗಿ ಸದೃಢರಾಗಲು ಈ ಸಂಸ್ಥೆ ನೆರವಾಗುತ್ತದೆ. ಸಂಸ್ಥೆಯ ಸಹ ಸಂಸ್ಥಾಪಕರಾದ ಸೆಂತಿಲ್ ಕುಮಾರ್ ಅವರು ನಮ್ಮ ನಿರೂಪಕ ಗುರು ಅವರ ಜೊತೆ ಪ್ರೌಡ್ ಇಂಡಿಯನ್ ಸಂಸ್ಥೆಯು ಕಲಿಯುವ ಮನಸ್ಸುಗ...

ಪ್ರವಾಹದ ಭೀತಿಗೆ ಪರಿಹಾರ ಕಂಡುಕೊಂಡ ದೆಹಲಿ 23.07.2025

ಪ್ರವಾಹದಂತಹ ಶಾಪವನ್ನು ವರವನ್ನಾಗಿ ಪರಿವರ್ತಿಸುವ ಅದ್ಭುತ ಉಪಾಯವೊಂದನ್ನು ದೆಹಲಿಯ NDMC 'ಮಾಡ್ಯುಲರ್ ಗುಂಡಿ'ಗಳ ಮೂಲಕ ಹೊಸ ಭರವಸೆ ಮೂಡಿಸಿದೆ. ಈ ತಂತ್ರಜ್ಞಾನ ಪ್ರವಾಹ ಭೀತಿಯನ್ನು ತಡೆಯುವುದಲ್ಲದೇ, ಪ್ರತಿ ಮಳೆಹನಿಯನ್ನು ಭೂಮಿಯ ಒಡಲಿಗೆ ಸೇರಿಸಿ ಅಂತರ್ಜಲ ಮಟ್ಟವನ್ನು ಹೆಚ್ಚಿಸುತ್ತದೆ. ಇದು ಕೇವಲ ಸರ್ಕಾರದ ಯೋಜನೆಯಲ್ಲ, ನಮ್ಮೆಲ್ಲರ ಜವಾಬ್ದಾರಿ ಕೂಡ. ಬನ್ನಿ, ನಾವೂ ಇಂತಹ ಕಾರ್ಯದಲ್ಲಿ ಕೈಜೋಡಿಸಿ ನಮ್ಮ ನಗರಗಳನ್ನು ಜಲ-ಸಮೃದ್ಧವಾಗಿಸೋಣ ಮತ್ತು ಪ್ರವಾಹದ ಭಯವನ್ನು ಮೆಟ್ಟಿ ನಿಲ್ಲೋ...

Слухайте подкаст TALRadio Kannada у Replaio

Радіо та подкасти в одному застосунку - безкоштовно й без реєстрації. Встановіть уже сьогодні та не пропустіть запуск

Завантажити з Google Play

Replaio не є видавцем подкастів; назви шоу, обкладинки та аудіо належать їхнім авторам і поширюються через публічні RSS-канали